ಪ್ರೇಮ್ ನಿರ್ದೇಶನದ (Director Prem) 'ಕೆಡಿ' ಚಿತ್ರದ (KD Cinema) ನೋರಾ ಫತೇಹಿ (Nora Fatehi) ಅವರು ನೃತ್ಯ ಮಾಡಿರುವ 'ಸರ್ಸೆ ಸರ್ಸೆ' ಹಾಡು ಬಿಡುಗಡೆಯಾಗಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರದಲ್ಲಿ ಸ್ಯಾಂಡಲ್ವುಡ್ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಕಿಚ್ಚ ಸುದೀಪ್, ರೀಷ್ಮಾ ನಾಣಯ್ಯ ಅವರಂತಹ ಖ್ಯಾತ ನಟರು ಪ್ರಮುಖ ಪಾತ್ರ ವಹಿಸಿದ್ದು, ಬಾಲಿವುಡ್ನ ಸಂಜಯ್ ದತ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಕೂಡಾ ಬಣ್ಣ ಹಚ್ಚಿದ್ದಾರೆ. ಸಂಜಯ್ ದತ್ (Sanjay Datt) ಕೂಡಾ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ: Actor Upendra: ಬೆಳಗ್ಗೆ ಲಿಂಕ್ ಪೋಸ್ಟ್ ಮಾಡ್ತೀನಿ, ತಕ್ಷಣ ಡಿಲೀಟ್ ಮಾಡ್ತೀನಿ; ಜನರ ತಲೆಗೆ ಹುಳಬಿಟ್ಟ ಉಪೇಂದ್ರ!
ಡೈರೆಕ್ಟರ್ ಪ್ರೇಮ್ ಆ್ಯಕ್ಷನ್ ಕಟ್
ಕನ್ನಡ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡುತ್ತಿರುವ ಈ ಸಿನಿಮಾಗೆ ಸ್ಟಾರ್ ಡೈರೆಕ್ಟರ್ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದಾರೆ. 'ಸರ್ಸೆ ನಿನ್ನ ಸೆರಗ ಸರ್ಸೆ' ಕನ್ನಡದ ಟೈಟಲ್ ಆಗಿದೆ. ಸಂಜಯ್ ದತ್ ಈ ಚಿತ್ರದಲ್ಲಿ ಧಕ್ ದೇವ್ ಅನ್ನುವ ರೋಲ್ ಮಾಡಿದ್ದಾರೆ.
ನೋರಾ ಫತೇಹಿ ಇಲ್ಲಿ ಸೆನೋರಿಟಾ ಅನ್ನುವ ರೋಲ್ ಮಾಡಿದ್ದಾರೆ. ಕೆಡಿ ಚಿತ್ರದ ಇದೇ ವರ್ಷ ರಿಲೀಸ್ ಆಗುತ್ತಿದೆ. ಏಪ್ರಿಲ್-30 ರಂದು ಈ ಚಿತ್ರ ಎಲ್ಲೆಡೆ ರಿಲೀಸ್ ಆಗುತ್ತಿದೆ. ಬಹು ಭಾಷೆಯಲ್ಲಿಯೇ ಈ ಸಿನಿಮಾ ರಿಲೀಸ್ ಆಗುತ್ತಿದೆ.ಪಂಚ ಭಾಷೆಗಳಲ್ಲೂ ಹಾಡು ಅನಾವರಣಗೊಳ್ಳುತ್ತಿದೆ.
ಏಕಕಾಲಕ್ಕೆ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ಟಾಕ್ಸಿಕ್, ಜನ ನಾಯಗನ್, ಲವ್ ಮಾಕ್ಟೇಲ್ 3ರಂತಹ ಚಿತ್ರಗಳ ಹಿಂದಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ನ ವೆಂಕಟ್ ಕೆ ನಾರಾಯಣ್ ನಿರ್ಮಾಣ ಮಾಡಿರುವ ಈ ಬಹುನಿರೀಕ್ಷಿತ ಚಿತ್ರಕ್ಕೆ, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ: Actor Jaggesh: ಮೊಮ್ಮಗನ ಜೊತೆ ಸಂತೋಷದ ಕ್ಷಣ ಹಂಚಿಕೊಂಡ ಜಗ್ಗೇಶ್! ತಾತನನ್ನು ನೆನದು ಭಾವುಕ
ಈ ಮುಂಚೆ ‘ಅಣ್ತಮ್ಮ ಜೋಡೆತ್ತು ಕಣೋ ಹಾಡು ರಿಲೀಸ್ ಆಗಿತ್ತು. ಬಿಎಸ್ ಮಂಜುನಾಥ್ ಲಿರಿಕ್ಸ್ ಬರೆದಿದ್ದರು. ಖ್ಯಾತ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಹಾಡು ಗಮನ ಸೆಳೆಯುವ ರೀತಿಯಲ್ಲಿ ಇತ್ತು. ಈ ಹಾಡಲ್ಲಿ ಧ್ರುವ ಸರ್ಜಾ- ರಮೇಶ್ ಅರವಿಂದ್ ಹಾಗೂ ಧ್ರುವ ಮತ್ತು ಸಂಜಯ್ ದತ್ ಕಾಣಿಸಿಕೊಳ್ಳುತ್ತಾರೆ. ಎಲ್ಲರದ್ದೂ ರೆಟ್ರೋ ಲುಕ್. ಇದು ಗೆಳೆತನದ ಬಗ್ಗೆ ಮೂಡಿ ಬಂದ ಹಾಡಾಗಿದೆ. ಹೊಸ ವರ್ಷದ ಸಂದರ್ಭದಲ್ಲೇ ಹಾಡು ಬಿಡುಗಡೆ ಆಗಿತ್ತು.