ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dog Satish: C M ಬಂದು ಹೇಳಿದ್ರು ವಿಡಿಯೋ ಡಿಲೀಟ್ ಮಾಡಲ್ಲ; ಡಾಗ್‌ ಸತೀಶ್

Sudeep: ಸತೀಶ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೌಚಾಲಯದಲ್ಲಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದಕ್ಕೆ ನಟ ಕಿಚ್ಚ ಸುದೀಪ್‌ ಅಭಿನಯದ 'ಮಾರ್ಕ್' ಚಿತ್ರದ 'ದಾದ ಯಾರ್ ಗೊತ್ತಾ?' ಹಾಡನ್ನು ಎಡಿಟ್ ಮಾಡಿ ಹಾಕಿದ್ದಾರೆ. ನಟ ಸುದೀಪ್ ಅವರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದಡಿ ಅವರ ವಿರುದ್ಧ ಪೊಲೀಸ್ ದೂರು ಕೂಡ ದಾಖಲಾಗಿದೆ. ಸುದೀಪ್ ಅಭಿಮಾನಿಗಳು ಅವಮಾನಕರ ಎಂದು ಆಕ್ಷೇಪಿಸಿದ್ದಾರೆ.

C M ಬಂದು ಹೇಳಿದ್ರು ವಿಡಿಯೋ ಡಿಲೀಟ್ ಮಾಡಲ್ಲ; ಡಾಗ್‌ ಸತೀಶ್

ಡಾಗ್‌ ಸತೀಶ್‌ -

Yashaswi Devadiga
Yashaswi Devadiga Mar 4, 2026 8:40 AM

ಸತೀಶ್ (Dog Satish) ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೌಚಾಲಯದಲ್ಲಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದಕ್ಕೆ ನಟ ಕಿಚ್ಚ ಸುದೀಪ್‌ (Sudeep) ಅಭಿನಯದ 'ಮಾರ್ಕ್' ಚಿತ್ರದ 'ದಾದ ಯಾರ್ ಗೊತ್ತಾ?' ಹಾಡನ್ನು ಎಡಿಟ್ ಮಾಡಿ ಹಾಕಿದ್ದಾರೆ. ನಟ ಸುದೀಪ್ ಅವರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದಡಿ ಅವರ ವಿರುದ್ಧ ಪೊಲೀಸ್ ದೂರು ಕೂಡ ದಾಖಲಾಗಿದೆ. ಸುದೀಪ್ ಅಭಿಮಾನಿಗಳು ಅವಮಾನಕರ ಎಂದು ಆಕ್ಷೇಪಿಸಿದ್ದಾರೆ. ಹಿರಿಯ ನಟ ಸುದೀಪ್ ಅವರನ್ನು ಅವಮಾನಿಸುವ ಉದ್ದೇಶದಿಂದಲೇ ಈ ವಿಡಿಯೋ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈಗ ಈ ಬಗ್ಗೆ ಸತೀಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಚಾಲೆಂಜ್ ಕೂಡ ಹಾಕಿದ್ದಾರೆ.

ಡಾಗ್‌ ಸತೀಶ್‌ ಹೇಳಿದ್ದೇನು?

‘ದಾದ ಯಾರ್ ಗೊತ್ತ’ ಹಾಡನ್ನು ಹಾಕಿರೋದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿ, ನಾನು ಮೂತ್ರ ಮಾಡಿದ್ರೂ ಸುದ್ದಿ ಆಗುತ್ತೆ ಅಂತ ಹೇಳಿದ್ದೆ. ಅದನ್ನ ತೋರಿಸೋಕೆ ವಿಡಿಯೋ ಮಾಡಿದ್ದು. ನಾನು ಕಮೆಂಟ್ಸ್ ನೋಡಿಲ್ಲ. ಹೀಗಾಗಿ, ಯಾರು ಏನು ಹೇಳಿದ್ರೋ ಗೊತ್ತಿಲ್ಲ. ನಾನು ಮೀಟರ್​​​ಲೆಸ್ ಆಗಿದ್ರೆ ವಿಡಿಯೋ ತೆಗೆಯುತ್ತಿದ್ದೆ. ನಾನು ಮೀಟರ್ ಇರುವವನು. ಹೀಗಾಗಿ, ವಿಡಿಯೋನ ಹಾಗೆಯೇ ಇಟ್ಟಿದ್ದೇನೆ. ಸಿಎಂ ಬಂದು ಹೇಳಿದ್ರೂ ವಿಡಿಯೋ ತೆಗೆಯಲ್ಲ’ ಎಂದಿದ್ದಾರೆ.

ಇದನ್ನೂ ಓದಿ: Saami Special Surprise: ತೆರೆಮೇಲೆ ಸತಿ-ಪತಿಯಾದ ವಿರೋಶ್; ಚಿತ್ರದ ಮೊದಲ ಹಾಡು ರಿಲೀಸ್

ಈ ವಿಡಿಯೋಗೆ ನಟ ವಿನಯ್ ಗೌಡ ಕೂಡ ಕಾಮೆಂಟ್ ಮಾಡಿ, "ಮೊದಲು ಹಾಡು ಡಿಲೀಟ್ ಮಾಡು, ಇಲ್ಲದಿದ್ದರೆ ಜನ ತೀವ್ರವಾಗಿ ಪ್ರತಿಕ್ರಿಯಿಸುತ್ತಾರೆ" ಎಂದು ಎಚ್ಚಿರಿಸಿದ್ದರು. ರಜತ್ ಸಹ ಕಾಮೆಂಟ್ ಮೂಲಕವೇ "ವಿಡಿಯೋ ತೆಗೆಯೋ, ಸಾಂಗ್ ಡಿಲೀಟ್ ಮಾಡಿ ಎಂದು ಕಮೆಂಟ್‌ ಮಾಡಿದ್ದರು.

ಇದನ್ನೂ ಓದಿ: Rakshith Shetty: ಬೇಸರದ ವಿಚಾರಕ್ಕೆ ಪೋಸ್ಟ್ ಹಾಕಿದ ರಕ್ಷಿತ್ ಶೆಟ್ಟಿ

ವಿನಯ್ ಮತ್ತು ರಜತ್ ಮಾತ್ರವೇ ಅಲ್ಲದೆ, ಮಾಜಿ ಬಿಗ್​​ಬಾಸ್ ಸ್ಪರ್ಧಿ ಧನರಾಜ್ ಇನ್ನೂ ಕೆಲವರು ಸಹ ವಿಡಿಯೋಕ್ಕೆ ಕಮೆಂಟ್ ಮಾಡಿದ್ದು, ಸತೀಶ್​​ಗೆ ಹಿಗ್ಗಾ ಮುಗ್ಗಾ ಬೈದಿದ್ದಾರೆ. ಆದರೆ ಡಾಗ್ ಸತೀಶ್ ಆ ವಿಡಿಯೋವನ್ನು ಡಿಲೀಟ್ ಮಾಡಿಲ್ಲ.