ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Agnisakshi Serial: ರಾಜು ನಾಟಕಕ್ಕೆ ಸಾಕ್ಷಿ ತೆರೆ ಎಳೆಯೋ ಸಮಯ ಬಂದೇ ಬಿಡ್ತು; ʻಅಗ್ನಿ ಸಾಕ್ಷಿʼಯಲ್ಲಿ ಬಿಗ್‌ ಟ್ವಿಸ್ಟ್‌!

Agnisakshi Serial: ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಕಲರ್ಸ್‌ ಕನ್ನಡದ ‘ಅಗ್ನಿಸಾಕ್ಷಿ’ ಧಾರಾವಾಹಿ ಇದೀಗ ಹೊಸ ತಿರುವಿನೊಂದಿಗೆ ಕುತೂಹಲ ಮೂಡಿಸುತ್ತಿದೆ. ಆರಂಭದಲ್ಲಿ ಒಬ್ಬರನ್ನೊಬ್ಬರು ಕಂಡರೆ ಆಗದಂತಹ ಪರಿಸ್ಥಿತಿಯಲ್ಲಿದ್ದ ಅಗ್ನಿ ಮತ್ತು ಸಾಕ್ಷಿ, ಇದೀಗ ನಿಧಾನವಾಗಿ ಪ್ರೀತಿಯ ಹಾದಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಇವರಿಬ್ಬರ ನಡುವಿನ ಅಹಂ, ಸ್ವಾಭಿಮಾನ, ಜಗಳ ಹಾಗೂ ಪ್ರೀತಿಯ ಭಾವನೆಗಳೇ ಧಾರಾವಾಹಿಯ ಪ್ರಮುಖ ಆಕರ್ಷಣೆಯಾಗಿವೆ. ಇದೀಗ ಸಾಕ್ಷಿಗೆ ರಾಜು ನಾಟಕ ಗೊತ್ತಾಗೋ ಸಮಯ ಬಂದಂತಿದೆ.

ಅಗ್ನಿಸಾಕ್ಷಿ ಧಾರಾವಾಹಿ

ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಕಲರ್ಸ್‌ ಕನ್ನಡದ ‘ಅಗ್ನಿಸಾಕ್ಷಿ’ (Agnisakshi serial) ಧಾರಾವಾಹಿ ಇದೀಗ ಹೊಸ ತಿರುವಿನೊಂದಿಗೆ ಕುತೂಹಲ ಮೂಡಿಸುತ್ತಿದೆ. ಆರಂಭದಲ್ಲಿ ಒಬ್ಬರನ್ನೊಬ್ಬರು ಕಂಡರೆ ಆಗದಂತಹ ಪರಿಸ್ಥಿತಿಯಲ್ಲಿದ್ದ ಅಗ್ನಿ (Agni Sakshi) ಮತ್ತು ಸಾಕ್ಷಿ, ಇದೀಗ ನಿಧಾನವಾಗಿ ಪ್ರೀತಿಯ ಹಾದಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಇವರಿಬ್ಬರ ನಡುವಿನ ಅಹಂ, ಸ್ವಾಭಿಮಾನ, ಜಗಳ ಹಾಗೂ ಪ್ರೀತಿಯ ಭಾವನೆಗಳೇ ಧಾರಾವಾಹಿಯ ಪ್ರಮುಖ ಆಕರ್ಷಣೆಯಾಗಿವೆ. ಇದೀಗ ಸಾಕ್ಷಿಗೆ ರಾಜು ನಾಟಕ ಗೊತ್ತಾಗೋ ಸಮಯ ಬಂದಂತಿದೆ.

ಸ್ವಾಭಿಮಾನವೇ ಸಾಕ್ಷಿಯ ಶಕ್ತಿ!

ಧಾರಾವಾಹಿಯ ನಾಯಕಿ ಸಾಕ್ಷಿ ಮಧ್ಯಮ ವರ್ಗದ ಹುಡುಗಿ. ತಾಯಿಯನ್ನು ಕಳೆದುಕೊಂಡು ಮಲತಾಯಿಯೊಂದಿಗೆ ಬೆಳೆಯುವ ಸಾಕ್ಷಿ, ಮನೆಯಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾಳೆ. ಎಷ್ಟೇ ನೋವು ಎದುರಾದರೂ ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುವ ಗುಣ ಆಕೆಯದ್ದು. ಆದರೆ ತನ್ನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾದಾಗ ಮಾತ್ರ ಯಾವುದೇ ಕಾರಣಕ್ಕೂ ಸುಮ್ಮನಿರದ ದಿಟ್ಟ ಸ್ವಭಾವ ಸಾಕ್ಷಿಯದು.

ಇಂತಹ ಸಾಕ್ಷಿಯ ಬದುಕಿನಲ್ಲಿ ಎದುರಾಗುವ ವ್ಯಕ್ತಿಯೇ ಅಗ್ನಿ. ಅಹಂ ಮತ್ತು ಗತ್ತು ತುಂಬಿಕೊಂಡಿರುವ ಅಗ್ನಿ ಹಾಗೂ ಸ್ವಾಭಿಮಾನಕ್ಕೆ ಹೆಚ್ಚಿನ ಬೆಲೆ ಕೊಡುವ ಸಾಕ್ಷಿ ಮುಖಾಮುಖಿಯಾದಾಗ ಇಬ್ಬರ ನಡುವೆ ಸಂಘರ್ಷ ಆರಂಭವಾಗುತ್ತದೆ. ಇವರಿಬ್ಬರ ಸ್ವಭಾವವೇ ಪರಸ್ಪರ ವಿರುದ್ಧವಾಗಿರುವುದರಿಂದ ಪ್ರತಿಯೊಂದು ಸನ್ನಿವೇಶವೂ ಹೊಸ ಜಗಳಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: Bigg Boss Kannada 13: ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್

ದ್ವೇಷದ ಹಿಂದೆ ಅಡಗಿದೆಯೇ ಪ್ರೀತಿ?

ಬೆಂಕಿಯಂತಹ ಅಗ್ನಿ ಮತ್ತು ತಂಗಾಳಿಯಂತಹ ಸಾಕ್ಷಿ ಒಂದಾಗುವ ಕಥೆಯೇ ‘ಅಗ್ನಿಸಾಕ್ಷಿ’. ಆರಂಭದಲ್ಲಿ ಪರಸ್ಪರ ದ್ವೇಷಿಸುತ್ತಿದ್ದ ಇವರಿಬ್ಬರ ನಡುವೆ ಈಗ ಪ್ರೀತಿಯ ಭಾವನೆಗಳು ಮೊಳಕೆಯೊಡೆಯುತ್ತಿವೆ. "ಇಬ್ಬರು ಕಣ್ಣೆದುರಿಗೆ ಬಂದರೆ ಸಹಿಸಿಕೊಳ್ಳಲಾಗಲ್ಲ, ಕಾಣದೇ ಹೋದರೆ ಬದುಕೋಕೇ ಆಗಲ್ಲ!" ಎನ್ನುವ ವಿಶಿಷ್ಟ ಪ್ರೇಮಬಂಧದ ಎಳೆ ವೀಕ್ಷಕರಲ್ಲಿ ಮತ್ತಷ್ಟು ಆಸಕ್ತಿ ಮೂಡಿಸಿದೆ.

ಹಸೆಮಣೆಯಲ್ಲಿ ಇವರಿಬ್ಬರ ಹಣೆಬರಹ ಹೇಗೆ ಒಂದಾಗಲಿದೆ? ಅಗ್ನಿಯ ಅಹಂ ಮತ್ತು ಸಾಕ್ಷಿಯ ಆದರ್ಶಗಳ ನಡುವಿನ ಹೋರಾಟ ಯಾವ ಹಂತಕ್ಕೆ ತಲುಪಲಿದೆ? ದ್ವೇಷ ಸಂಪೂರ್ಣವಾಗಿ ಪ್ರೀತಿಯಾಗಿ ಬದಲಾಗುತ್ತದೆಯೇ? ಎಂಬ ಪ್ರಶ್ನೆಗಳು ಕಥೆಯ ಮುಂದಿನ ಬೆಳವಣಿಗೆಯ ಬಗ್ಗೆ ಕುತೂಹಲ ಹೆಚ್ಚಿಸಿವೆ.



ಅಗ್ನಿಯ ಕುಟುಂಬದ ಸಮಸ್ಯೆಗಳೇನು?

ಕೇವಲ ಅಗ್ನಿ ಮತ್ತು ಸಾಕ್ಷಿಯ ಪ್ರೇಮಕಥೆ ಮಾತ್ರವಲ್ಲದೆ, ಅಗ್ನಿಯ ಕುಟುಂಬದಲ್ಲಿಯೂ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಆ ಸಮಸ್ಯೆಗಳನ್ನು ಅಗ್ನಿ ಹೇಗೆ ಎದುರಿಸುತ್ತಾನೆ ಎಂಬುದು ಕಥೆಯ ಮತ್ತೊಂದು ಪ್ರಮುಖ ಅಂಶವಾಗಿದೆ. ಅದರಲ್ಲೂ ತನ್ನ ತಂಗಿಯ ಮದುವೆ ಮಾಡಬೇಕು ಎಂಬ ಅಗ್ನಿಯ ಕನಸು ನನಸಾಗುತ್ತದೆಯೇ ಎಂಬ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ.ಕುಟುಂಬದ ಜವಾಬ್ದಾರಿಗಳು, ವೈಯಕ್ತಿಕ ಬದುಕಿನ ಸಂಘರ್ಷಗಳು ಹಾಗೂ ಸಾಕ್ಷಿಯೊಂದಿಗಿನ ಪ್ರೀತಿಯ ಪಯಣದ ನಡುವೆ ಅಗ್ನಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.

ರಾಜು ಕಳ್ಳಾಟ

ಇತ್ತ ರಾಜು ಕೂಡ ಕಳ್ಳಾಟ ಮಾಡುತ್ತಿದ್ದಾನೆ, ಈ ಹಿಂದೆ ರಾಜು ಸಾಕ್ಷಿ ಹಾಗೂ ಅದಿತಿಯನ್ನ ಆಪತ್ತಿಗೆ ಸಿಲುಕಿಸಿ ತಾನು ಹೀರೋ ಆಗಲು ಪ್ರಯತ್ನಿಸಿದ್ದ. ದಿತಿಯನ್ನ ಕಿಡ್ನಾಪ್ ಮಾಡೋದಕ್ಕೆ ನಾಟಕವಾಡಿ, ಅದನ್ನೇ ದಾಳವಾಗಿ ಬಳಸಿಕೊಂಡು ಅಗ್ನಿಗೆ ಕಾಲ್ ಮಾಡಿದ್ದ ರಾಜು. ಆದ್ರೆ ಅಗ್ನಿ ಹೇಗೋ ಅದಿತಿಯನ್ನ ರಕ್ಷಿಸಿ ಮನೆಗೆ ಕರೆತಂದಿದ್ದ. ಮತ್ತೊಂದಡೆ ಸಾಕ್ಷಿಯನ್ನ ಡ್ರಗ್ ಕೇಸ್‌ನಲ್ಲಿ ಸಿಲುಕಿಸಿ, ಅವಳು ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದ್ದ. ಇದ್ರಿಂದ ಎದರಿದ ಸಾಕ್ಷಿ ಅಗ್ನಿಗೆ ಫೋನ್ ಮಾಡಿದ್ಲು. ಆದ್ರೆ ಅಗ್ನಿ ಅದಿತಿಯ ಟೆನ್ನನ್‌ನಲ್ಲಿ ಸಾಕ್ಷಿ ಫೋನ್ ನಿರಾಕರಿಸಿದ್ದ.

ಇದ್ರಿಂದ ನೊಂದ ಸಾಕ್ಷಿ, ಎಲ್ಲದಕ್ಕೂ ಅಗ್ನಿನೇ ಕಾರಣ ಎಂದು ತಪ್ಪಾಗಿ ತಿಳಿದುಕೊಂಡು, ಕೆಲಸಕ್ಕೆ ಹೋಗದೇ ಇರೋದಕ್ಕೆ ನಿರ್ಧಾರ ಮಾಡಿದ್ಲು. ಆದ್ರೆ ಅರವಿಂದ್ ಸಾಕ್ಷಿ ಮನೆಗೆ ಬಂದು, ಕೇಳಿಕೊಂಡ ಕಾರಣ ಇದೀಗ ಸಾಕ್ಷಿ ಮತ್ತೆ ಆಫೀಸ್‌ಗೆ ಕಾಲಿಟ್ಟಿದ್ದಾಳೆ. ಅಷ್ಟೇ ಅಲ್ಲ ಸದ್ಯ ಸಾಷಿ ಡಿಗ್ರಿ ಕಂಪ್ಲೀಟ್‌ ಮಾಡಿಲ್ಲ ಅನ್ನೋದು ಅಗ್ನಿ ಗೊತ್ತಾಗಿ ಅವಳೆ ನನ್ನ ಗರ್ಲ್‌ಫ್ರೆಂಡ್‌ ಅಂತ ಮನೆಯಲ್ಲಿ ಹೇಳಿದ್ದಾನೆ. ಇತ್ತ ರಾಜು ಸಾಕ್ಷಿಗೆ ತಿಳಿಯದಂತೆ ಅದಿತಿ ಜೊತೆ ಎಂಗೇಜ್‌ ಆಗಿದ್ದಾನೆ, ಮುಂದೆ ರಾಜು ನಾಟಕಕ್ಕೆ ಸಾಕ್ಷಿ ತೆರೆ ಎಳೆಯೋ ಸಮಯ ಬಂದಿಯೇ ಅನ್ನೋದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Haiku OTT release date: ಒಟಿಟಿಗೆ ಬರ್ತಿದೆ ಒಂದೊಳ್ಳೆ ಪ್ರೇಮಕಥೆಯ ಸಿನಿಮಾ!

‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಅಗ್ನಿ ಪಾತ್ರದಲ್ಲಿ ಶಮಂತ್ ಬ್ರೋ ಗೌಡ ಅಭಿನಯಿಸುತ್ತಿದ್ದಾರೆ. ನಾಯಕಿ ಸಾಕ್ಷಿಯಾಗಿ ವರ್ಷಿಣಿ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆಗೆ ಅಕ್ಷತಾ ಗಣೇಶ್, ಮಿಥುನ್ ತೇಜಸ್ವಿ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಅಗ್ನಿಸಾಕ್ಷಿ ಪ್ರತಿ ಸಂಜೆ7 ಕ್ಕೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author