ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aishwarya Shindogi: ಶ್ರೀಲಂಕಾದಲ್ಲಿ ಐಶ್ವರ್ಯಾ-ಶಿಶಿರ್ ಮಸ್ತ್ ಎಂಜಾಯ್: ಬೇಗ ಮದುವೆ ಆಗಿ ಎಂದ ಫ್ಯಾನ್ಸ್

ಐಶ್ವರ್ಯಾ ಸಿಂಧೋಗಿ, ಶಿಶಿರ್ ಶಾಸ್ತ್ರೀ ಜೊತೆಯಾಗಿ ವಿಡಿಯೋ ಶೂಟ್- ಫೋಟೋ ಶೂಟ್ ಕೂಡ ಮಾಡಿಸಿಕೊಳ್ಳುತ್ತ ಇರುತ್ತಾರೆ. ಇತ್ತೀಚೆಗಷ್ಟೆ ಐಶ್ವರ್ಯಾ ಅವರ ಹುಟ್ಟುಹಬ್ಬಕ್ಕೆ ಶಿಶಿರ್ ಸ್ಪೆಷಲ್ ಆಗಿ ವಿಶ್ ಮಾಡಿದ ಫೋಟೋ ವೈರಲ್ ಆಗಿತ್ತು. ಇದೀಗ ಈ ಜೋಡಿ ಶ್ರೀಲಂಕಾಕ್ಕೆ ಹಾರಿದೆ.

Aishwarya and Shishir

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಐಶ್ವರ್ಯಾ ಸಿಂಧೋಗಿ (Aishwarya Shindogi) ಹಾಗೂ ಶಿಶಿರ್ ಶಾಸ್ತ್ರೀ ಎಷ್ಟು ಕ್ಲೋಸ್ ಎಂಬುದು ಇಡೀ ಕರ್ನಾಟಕ ಜನತೆಗೆ ತಿಳಿದಿದೆ. ಬಿಬಿಕೆ 11 ಸೀಸನ್ ಮುಗಿದು ಸುಮಾರು 8 ತಿಂಗಳಾಗುತ್ತ ಬಂದರೂ ಇವರಿಬ್ಬರ ಸಂಬಂಧ ಗಟ್ಟಿಯಾಗಿದೆ. ದೊಡ್ಮನೆಯಲ್ಲಿದ್ದಾಗ ಇವರಿಬ್ಬರು ತುಂಬಾ ಆತ್ಮೀಯತೆಯಲ್ಲಿದ್ದರು. ಎಷ್ಟರ ಮಟ್ಟಿಗೆ ಎಂದರೆ ಒಂದೇ ಬೆಡ್ ಶೀಟ್ ಹೊದ್ದುಕೊಂಡು ಒಂದೇ ಕಾಫಿ ಕಪ್ ನಲ್ಲಿ ಜೊತೆಯಲ್ಲಿಯೇ ಕಾಫಿ ಕುಡಿದಿದ್ದರು.

ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಕೂಡ ಇವರಿಬ್ಬರು ಅನೇಕ ಬಾರಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಜೊತೆಯಾಗಿ ವಿಡಿಯೋ ಶೂಟ್- ಫೋಟೋ ಶೂಟ್ ಕೂಡ ಮಾಡಿಸಿಕೊಳ್ಳುತ್ತ ಇರುತ್ತಾರೆ. ಇತ್ತೀಚೆಗಷ್ಟೆ ಐಶ್ವರ್ಯಾ ಅವರ ಹುಟ್ಟುಹಬ್ಬಕ್ಕೆ ಶಿಶಿರ್ ಸ್ಪೆಷಲ್ ಆಗಿ ವಿಶ್ ಮಾಡಿದ ಫೋಟೋ ವೈರಲ್ ಆಗಿತ್ತು. ಇದೀಗ ಈ ಜೋಡಿ ಶ್ರೀಲಂಕಾಕ್ಕೆ ಹಾರಿದೆ.



ಹೌದು ಲಂಕಾದಲ್ಲಿ ಐಶು-ಶಿಶಿರ್ ವೆಕೇಶನ್ ಎಂಜಾಯ್ ಮಾಡುತ್ತಿದ್ದಾರೆ. ಐಶ್ವರ್ಯ ಲಂಕಾದ ಸುಂದರ ಕ್ಷಣಗಳನ್ನು, ಶಿಶಿರ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿದ್ದು, ಲಂಕನ್ ಡೈರೀಸ್ ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ಈ ಜೋಡಿಯ ಫೋಟೊಗಳನ್ನು ನೋಡಿ ಅಭಿಮಾನಿಗಳು, ನಿಮ್ಮನ್ನ ಜೊತೆ ನೋಡೋದೆ ಖುಷಿ. ಆದರೆ ಆದಷ್ಟು ಬೇಗನೆ ಮದುವೆಯಾಗಿ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಉಪೇಂದ್ರ ಅವರ ಹುಟ್ಟುಹಬ್ಬದ ಸಲುವಾಗಿ ಐಶ್ -ಶಿಶಿರ್ ಜೋಡೀ ಶ್ರೀಲಂಕಾದಿಂದಲೇ ಡ್ಯಾನ್ಸ್ ಮಾಡಿ, ವಿಡೀಯೋ ಶೇರ್ ಮಾಡಿದ್ದಾರೆ.



ಐಶ್ವರ್ಯಾ-ಶಿಶಿರ್ ಪ್ರೇಮಿಗಳು ಎಂಬ ಅನುಮಾನ ಎಲ್ಲರಿಗೂ ಇದೆ. ಆದರೆ, ಇವರು ಇದರ ಬಗ್ಗೆ ಕ್ಲಾರಿಫಿಕೇಷನ್ ಕೊಡುತ್ತಿಲ್ಲ. ಕೆಲ ಸಂದರ್ಶನದಲ್ಲಿ ಐಶ್ವರ್ಯಾ ಬಳಿ ಶಿಶಿರ್ ಬಗ್ಗೆ ಕೇಳಿದಾಗ ನಾಚಿ ನೀರಾಗಿದ್ದೂ ಉಂಟು. ಆದ್ರೆ ಇಬ್ಬರೂ ನಾವಿಬ್ರು ಒಳ್ಳೆಯ ಫ್ರೆಂಡ್ಸ್, ನಮ್ಮಿಬ್ಬರ ಮಧ್ಯೆ ಉತ್ತಮ ಸ್ನೇಹದ ಬಾಂಧವ್ಯ ಇದೆ ಎಂದಷ್ಟೆ ಹೇಳಿಕೊಂಡು ಬಂದಿದ್ದಾರೆ.

ಬಿಗ್ ​ಬಾಸ್​ನಿಂದ ಆಚೆ ಬಂದ ಮೇಲೆ ಐಶ್ವರ್ಯ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್​ನಲ್ಲಿ ನಟಿಸುತ್ತಿದ್ದಾರೆ. ಅತ್ತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಶ್ರೀ ಗಂಧದಗುಡಿ ಸೀರಿಯಲ್​ಗೆ ನಾಯಕನಾಗಿ ಶಿಶಿರ್ ಎಂಟ್ರಿ ಕೊಟ್ಟಿದ್ದಾರೆ.

Amruthadhare Serial: ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದ ಅಮೃತಧಾರೆ: ವರ್ಕ್ ಆಗಿಲ್ಲ ಟ್ವಿಸ್ಟ್