ಕೌನ್ ಬನೇಗಾ ಕರೋಡ್ ಪತಿ (ಕೆಬಿಸಿ) (KBC18) ಪ್ರಸ್ತುತ ತನ್ನ 18 ನೇ ಸೀಸನ್ ನಲ್ಲಿದೆ. ಆಗಸ್ಟ್ 10 ರಂದು ಪ್ರಥಮ ಪ್ರದರ್ಶನಗೊಂಡಿತು, ಅಮಿತಾಬ್ ಬಚ್ಚನ್ ನಿರೂಪಕರಾಗಿ ಮರಳಿದ್ದಾರೆ. ಇತ್ತೀಚಿನ ಸಂಚಿಕೆಯ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಯಶ್ ಅವರ ಮುಂಬರುವ ಚಿತ್ರ ಟಾಕ್ಸಿಕ್ (Toxic Movie) ಬಿಡುಗಡೆಗೆ ಮುಂಚಿತವಾಗಿ ಅವರ ಬಗ್ಗೆ ಪ್ರಶ್ನೆಯನ್ನು ಒಳಗೊಂಡಿದೆ . 'ಕೆಜಿಎಫ್' ಸರಣಿಯ ಯಶಸ್ಸಿನ ನಂತರ ಯಶ್ ಅವರ ಜನಪ್ರಿಯತೆಯು ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟಕ್ಕೆ ತಲುಪಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಯಶ್ ಬಗ್ಗೆ ಪ್ರಶ್ನೆಗಳು ವೈರಲ್
ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ ಅಮಿತಾಬ್ ಬಚ್ಚನ್ ಸ್ಪರ್ಧಿಯೊಬ್ಬರಿಗೆ ಯಶ್ ಬಗ್ಗೆ 20,000 ರೂ. ಪ್ರಶ್ನೆ ಕೇಳಿದ್ದರು. "ರಜನಿಕಾಂತ್ 'ಸೂಪರ್' ಆಗಿದ್ದರೆ, ಚಿರಂಜೀವಿ 'ಮೇಗಾ' ಆಗಿದ್ದರೆ, ಮತ್ತು ಪವನ್ ಕಲ್ಯಾಣ್ 'ಪವರ್' ಆಗಿದ್ದರೆ, ಯಶ್ ಯಾರು?" ಎಂದು ಇತ್ತು.
ಇದನ್ನೂ ಓದಿ: Bigg Boss 20: ‘ಬಿಗ್ ಬಾಸ್ 20’ ಟ್ರೇಲರ್ ಔಟ್; ಈ ಸಲ ಕೂಡ ಇರಲಿದೆ ಬಿಗ್ ಟ್ವಿಸ್ಟ್
ನೃತ್ಯ, ಫ್ಲಾಂಬೋಯಂಟ್, ರಾಕಿಂಗ್ ಮತ್ತು ಡೈನಾಮಿಕ್ ಆಪ್ಷನ್ ಕೂಡ ಇತ್ತು.
ಸ್ಪರ್ಧಿ "ರಾಕಿಂಗ್" ಅಂತ ಸರಿ ಉತ್ತರ ಕೊಟ್ಟರು. 20,000 ರೂ.ಗಳನ್ನು ಗೆದ್ದರು. ಅಮಿತಾಭ್ ಬಚ್ಚನ್ ಕೂಡ ಇದನ್ನು ಯಶ್ ಅವರ ಪಯಣವನ್ನು ಕೊಂಡಾಡಿದರು. ಕೆಬಿಸಿಯಂತಹ ರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ದಿಗ್ಗಜ ನಟರ ಸಾಲಿನಲ್ಲಿ ಯಶ್ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗಿರುವುದು ಅವರ ಅಗಾಧ ಕ್ರೇಜ್‌ಗೆ ಸಾಕ್ಷಿಯಾಗಿದೆ. ‘ಕೆಜಿಎಫ್’ ಸರಣಿಯ ಐತಿಹಾಸಿಕ ಯಶಸ್ಸಿನ ನಂತರ ಯಶ್ ಅವರ ಪ್ರತಿಯೊಂದು ನಡೆಯೂ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.
ಬಾಲಿವುಡ್‌ನ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಯಶ್ ರಾವಣನಾಗಿ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಇದೇ ಆಗಸ್ಟ್ 26ರಂದು ಹಾಗೂ ದೀಪಾವಳಿಯಲ್ಲಿ ರಾಮಾಯಣ ಸಿನಿಮಾ ತೆರೆಗೆ ಬರಲಿದೆ.
ನಟ ಯಶ್ , ಯಶ್ ಪತ್ನಿ ರಾಧಿಕಾ ಪಂಡಿತ್, ‘ಟಾಕ್ಸಿಕ್’ ತಾರೆಯರಾದ ಲೇಡಿ ಸೂಪರ್ ಸ್ಟಾರ್ ನಯನತಾರಾ(ಗಂಗಾ), ಕೀಯಾರಾ ಅಡ್ವಾಣಿ(ನಾಡಿಯಾ), ತಾರಾ ಸುತಾರಿಯಾ(ರೆಬೆಕ್ಕಾ), ಹುಮಾ ಖುರೇಷಿ(ಎಲಿಜಬೆತ್), ರುಕ್ಮಿಣಿ ವಸಂತ(ಮೆಲ್ಲಿಸಾ), ಅಕ್ಷಯ್ ಒಬೆರಾಯ್(ಟೋನಿ), ಸುದೇವ್ ನಾಯರ್(ಕರ್ಮಾಡಿ) ಟ್ರೇಲರ್ ಲಾಂಚ್‌ನಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: Shakeela: ಅತಿಯಾದ ಮೊಬೈಲ್ ಬಳಕೆ; ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಟಿ ಶಕೀಲಾ
ರಾಯ(Raya) ಮತ್ತು ರೂಮಿ(ಟಿಕೆಟ್) ಎಂಬ ಡಬಲ್ ಪಾತ್ರದಲ್ಲಿ ಯಶ್ ನಟಿಸಿದ್ದಾರೆ. ಹಿಂದೆಂದೂ ಯಾವ ಕನ್ನಡ ನಟರು ಪ್ರಯತ್ನ ಮಾಡದ ಸನ್ನಿವೇಶಗಳಲ್ಲಿ ಅಭಿನಯಿಸಿದ್ದಾರೆ.