ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Amruthadhaare Serial: ಗೌತಮ್‌ ತಾಯಿಗೆ ಗೊತ್ತಾಗೇ ಬಿಡ್ತು ಮಹಾ ಸತ್ಯ! ಜೈದೇವ್‌ ಕಣ್ಣಿಗೆ ಬೀಳ್ತಾರಾ ಭಾಗ್ಯಮ್ಮ?

Kannada Serial: ಅಪ್ಪು ಹಾಗೂ ಮಿಂಚು ಇಬ್ಬರು ಸೇರಿ ಭೂಮಿಕಾ ಹಾಗೂ ಗೌತಮ್‌ ಅವರನ್ನು ಒಂದು ಮಾಡಲು ಪಣ ತೊಟ್ಟಿದ್ದಾರೆ. ಇವರಿಬ್ಬರದ್ದು ಮದುವೆ ಆಗಿದೆ ಎಂದು ಅಪ್ಪು ಹಾಗೂ ಮಿಂಚುಗೆ ಗೊತ್ತಾಗಿರೋ ವಿಚಾರ ಭೂಮಿಕಾ, ಗೌತಮ್‌ಗೆ ಗೊತ್ತಿಲ್ಲ. ಆದರೆ ಅಪ್ಪು ಹತ್ತಿರವಾಗುತ್ತಿರುವುದನ್ನು ನೋಡಿ, ಆಕಾಶ್‌ನಿಂದ ದೂರ ಇರುವಂತೆ ಭೂಮಿ ಹೇಳಿದ್ದಾಳೆ. ಅದೇ ರೀತಿ ಗೌತಮ್‌ ನಡೆದುಕೊಳ್ಳುತ್ತಿದ್ದಾನೆ. ಇನ್ನೊಂದು ಕಡೆ ಗೌತಮ್-ಭೂಮಿಕಾ ಒಂದೇ ವಠಾರದಲ್ಲಿದ್ದರೂ ಕೂಡ ದೂರವಾಗಿದ್ದಾರೆ ಅನ್ನೋ ಮಹಾಸತ್ಯ ಗೌತಮ್‌ ಅಮ್ಮಗೆ ಗೊತ್ತಾಗಿದೆ.

ಅಮೃತಧಾರೆ ಧಾರಾವಾಹಿ

ಅಪ್ಪು (Akash) ಹಾಗೂ ಮಿಂಚು (Minchu) ಇಬ್ಬರು ಸೇರಿ ಭೂಮಿಕಾ (Bhoomika) ಹಾಗೂ ಗೌತಮ್‌ (Goutham) ಅವರನ್ನು ಒಂದು ಮಾಡಲು ಪಣ ತೊಟ್ಟಿದ್ದಾರೆ. ಇವರಿಬ್ಬರದ್ದು ಮದುವೆ ಆಗಿದೆ ಎಂದು ಅಪ್ಪು ಹಾಗೂ ಮಿಂಚುಗೆ ಗೊತ್ತಾಗಿರೋ ವಿಚಾರ ಭೂಮಿಕಾ, ಗೌತಮ್‌ಗೆ ಗೊತ್ತಿಲ್ಲ. ಆದರೆ ಅಪ್ಪು ಹತ್ತಿರವಾಗುತ್ತಿರುವುದನ್ನು ನೋಡಿ, ಆಕಾಶ್‌ನಿಂದ ದೂರ ಇರುವಂತೆ ಭೂಮಿ ಹೇಳಿದ್ದಾಳೆ.

ಅದೇ ರೀತಿ ಗೌತಮ್‌ ನಡೆದುಕೊಳ್ಳುತ್ತಿದ್ದಾನೆ. ಇನ್ನೊಂದು ಕಡೆ ಗೌತಮ್-ಭೂಮಿಕಾ ಒಂದೇ ವಠಾರದಲ್ಲಿದ್ದರೂ ಕೂಡ ದೂರವಾಗಿದ್ದಾರೆ ಅನ್ನೋ ಮಹಾಸತ್ಯ ಗೌತಮ್‌ ಅಮ್ಮಗೆ (Bhagya) ಗೊತ್ತಾಗಿದೆ.

ಇದನ್ನೂ ಓದಿ: Amruthadhare Serial: ಗೌತಮ್ - ಭೂಮಿ ಒಂದು ಮಾಡೋಕೆ ಮಿಂಚು - ಆಕಾಶ್ ಒಂದಾದ್ರು! ಇನ್ನು ಬರೀ ಒಲವ ಅಮೃತಧಾರೆ

ಭಾಗ್ಯ ಕೇಳಿಸಿಕೊಂಡಿದ್ದೇನು?

ಆನಂದ್‌ ಹಾಗೂ ಪತ್ನಿ ಮಾತನಾಡಿಕೊಳ್ಳುತ್ತಿರುವದನ್ನ ಗೌತಮ್‌ ಅಮ್ಮ ಭಾಗ್ಯ ಕೇಳಿಸಿಕೊಂಡಿದ್ದಾಳೆ. ಗೌತಮ್‌ ಭೂಮಿ ವಠಾರದಲ್ಲಿ ಎದುರು ಬದುರು ಇದ್ದರೂ ಏನೂ ಮಾಡೋಕೆ ಆಗ್ತಿಲ್ಲ ಅಂದರೆ ಏನು ಅರ್ಥ. ಮಗು ನೋಡಿ ಅಪ್ಪಿ ಮುದ್ದಾಡೋಣ ಅನ್ನಿಸುತ್ತೆ. ಮಗನ ಜೊತೆ ಮಾತನಾಡಬೇಡ ಅಂದರೆ ಏನರ್ಥ? ಗೌತಮ್‌ ಬೇರೆ ಒಂದು ಹೆಣ್ಣು ಮಗವನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾನೆ ಎಂದು ಆನಂದ್‌ ಬಳಿ ಮಾತನಾಡುತ್ತಿರುವುದನ್ನ ಕೇಳಿಸಿಕೊಂಡಿದ್ದಾಳೆ ಭಾಗ್ಯ. ಅಲ್ಲಿಂದ ಭಾಗ್ಯ, ಗೌತಮ್‌ ಹಾಗೂ ಭೂಮಿ ಹುಡುಕಿಕೊಂಡು ಮನೆಯಿಂದ ಆಚೆ ಬಂದಿದ್ದಾರೆ.

ಜಯದೇವ್‌ ಕೈಗೆ ಸಿಗ್ತಾರಾ

ಗೌತಮ್‌ನಿಂದ, ಮನೆಯವರಿಂದ ದೂರ ಇದ್ದರೆ ಮಾತ್ರ ನಿನ್ನವರು ಉಳಿದುಕೊಳ್ತಾರೆ ಎಂದು ಅವನ ಮಲತಾಯಿ ಶಕುಂತಲಾ, ಭೂಮಿಗೆ ವಾರ್ನ್‌ ಮಾಡಿದ್ದಳು. ಇದಕ್ಕಾಗಿಯೇ ಅವಳು ಮನೆಯವರಿಂದ ದೂರ ಇದ್ದಾಳೆ.

ಗೌತಮ್‌-ಆಕಾಶ್‌ ಆತ್ಮೀಯತೆಯಿಂದ ಇರೋದು, ಗೌತಮ್‌ಗೆ ಮಗುವನ್ನು ದತ್ತು ತಗೊಂಡಿರೋ ವಿಚಾರ ಎಲ್ಲವೂ ಈಗ ಭಾಗ್ಯಮ್ಮನಿಗೆ ಗೊತ್ತಾಗಿದೆ. ಹೀಗಾಗಿ ಅವಳು ಮೊಮ್ಮಗು ನೋಡಬೇಕು ಎಂದು ಮನೆಯಿಂದ ಓಡಿ ಹೋಗಿದ್ದಾರೆ.



ಮನೆಯಿಂದ ಹೊರಗಡೆ ಬಂದಿರೋ ಭಾಗ್ಯಮ್ಮ ಈಗ ಎಲ್ಲಿಗೆ ಹೋಗ್ತಾರೆ? ಒಂದು ವೇಳೆ ಜಯದೇವ್‌ ಕೈಗೆ ಸಿಗ್ತಾರಾ ಎಂದು ಕಾದು ನೋಡಬೇಕಿದೆ. ಬ್ಯಾಂಕ್‌ ಅಕೌಂಟ್‌ ಪ್ರೀಜ್‌ ಆಗಿದೆ ಎಂದು ಜಯದೇವ್‌ ಸಿಟ್ಟಿನಲ್ಲಿದ್ದಾನೆ. ಈಗ ಭಾಗ್ಯಮ್ಮ ಸಿಕ್ಕಿದರೆ, ಅವಳನ್ನು ಇಟ್ಟುಕೊಂಡು ಗೌತಮ್‌ನನ್ನು ಆಟ ಆಡಿಸುತ್ತಾನಾ ಎನ್ನೋದೇ ಕುತೂಹಲ.

ಇದನ್ನೂ ಓದಿ: Bigg Boss Kannada 12: ಗೆಸ್ಟ್‌ಗಳ ಈ ನಡೆಯ ಬಗ್ಗೆ ಗಿಲ್ಲಿ ಬೇಸರ; ಧ್ರುವಂತ್‌, ಸೂರಜ್‌ ಬಳಿ ಹೇಳಿದ್ದೇನು?

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author