ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Amruthadhaare Serial: ಅಜ್ಜಿ ಮಾಸ್ಟರ್‌ ಪ್ಲ್ಯಾನ್‌! ಡಮಲ್ ಡಿಮೀಲ್ ಡಕ್ಕ ಭೂಮಿ - ಗೌತಮ್ ಒಂದಾಗೋದು ಪಕ್ಕಾ ಅಂತಿದ್ದಾರೆ ವೀಕ್ಷಕರು

Amruthadhaare: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಅಕದಕಿಯೇ ಹೈಲೈಟ್‌ ಆಗಿದ್ದಾರೆ. ಇಷ್ಟೂ ದಿನ ದೂರ ದೂರ ಇರುತ್ತಿದ್ದ ಭೂಮಿಕಾ ಹಾಗೂ ಗೌತಮ್‌ನನ್ನು ಒಂದು ಮಾಡಲು ಅಜ್ಜಿ ಮಾಸ್ಟರ್‌ಪ್ಲ್ಯಾನ್‌ ಸಖತ್‌ ಆಗಿಯೇ ಮಾಡಿದ್ದಾರೆ. ಅಜ್ಜಿಯ ಈ ಪ್ಲ್ಯಾನ್‌ ಮಕ್ಕಳಿಗೂ ಗೊತ್ತಾಗಿದೆ. ಒಂದು ಕಡೆ ಗೌತಮ್‌ ಮಾಡಿದ ಸಾಲ, ಇನ್ನೊಂದು ಕಡೆ ಅಜ್ಜಿಯ ಆಸ್ತಿಯನ್ನು ಲಪಟಾಯಿಸಿದ ಜಯದೇವ್‌ ಇದಲ್ಲಿಯೇ ಕಥೆ ಸಾಗುತ್ತಿದೆ. ಇದೀಗ ಆಶ್ರಮದಲ್ಲಿಯೂ ಅಜ್ಜಿ ಒಂದು ಸಖತ್‌ ಆಗಿ ಡ್ರಾಮ ಮಾಡಿದ್ದಾರೆ.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಅಕದಕಿಯೇ ಹೈಲೈಟ್‌ ಆಗಿದ್ದಾರೆ. ಇಷ್ಟೂ ದಿನ ದೂರ ದೂರ ಇರುತ್ತಿದ್ದ ಭೂಮಿಕಾ ಹಾಗೂ ಗೌತಮ್‌ನನ್ನು (Bhoomika Goutham) ಒಂದು ಮಾಡಲು ಅಜ್ಜಿ ಮಾಸ್ಟರ್‌ಪ್ಲ್ಯಾನ್‌ ಸಖತ್‌ ಆಗಿಯೇ ಮಾಡಿದ್ದಾರೆ. ಅಜ್ಜಿಯ ಈ ಪ್ಲ್ಯಾನ್‌ ಮಕ್ಕಳಿಗೂ ಗೊತ್ತಾಗಿದೆ.

ಒಂದು ಕಡೆ ಗೌತಮ್‌ ಮಾಡಿದ ಸಾಲ, ಇನ್ನೊಂದು ಕಡೆ ಅಜ್ಜಿಯ ಆಸ್ತಿಯನ್ನು ಲಪಟಾಯಿಸಿದ ಜಯದೇವ್‌ ಇದಲ್ಲಿಯೇ ಕಥೆ ಸಾಗುತ್ತಿದೆ. ಇದೀಗ ಆಶ್ರಮದಲ್ಲಿಯೂ ಅಜ್ಜಿ ಒಂದು ಸಖತ್‌ ಆಗಿ ಡ್ರಾಮ ಮಾಡಿದ್ದಾರೆ.

ಇದನ್ನೂ ಓದಿ: Anchor Anushree: ಜೀ ಕನ್ನಡ ವಾಹಿನಿಯಿಂದ ಮಡಿಲು ತುಂಬುವ ಶಾಸ್ತ್ರ- ತಾಳಿ ಹಿಡಿದು ಅನುಶ್ರೀ ಭಾವುಕ!

ಗೌತಮ್‌ ಜೋಡಿಗೆ ಶಾಕ್‌

ಭೂಮಿಕಾ ಹಾಗೂ ಗೌತಮ್‌ ಒಂದಾಗಬೇಕು ಅಂತ ಮಕ್ಕಳು ಒಂದು ಕಡೆ ಪಡದಾಡುತ್ತಿದ್ದರೆ, ಅಜ್ಜಿ ಕೂಡ ಏನೋ ಒಂದು ಸಾಹಸ ಮಾಡ್ತಾನೇ ಇದ್ದಾರೆ. ಆಶ್ರಮಕ್ಕೆ ಬಂದ ಭೂಮಿ ಗೌತಮ್‌ ನೋಡಿ, ಒಟ್ಟಿಗೆ ಮಲಗಲು ಹೇಳಿದ್ದಾಳೆ. ಇದು ಗೌತಮ್‌ ಜೋಡಿಗೆ ಶಾಕ್‌ ಆಗಿದೆ. ಇಬ್ಬರು ಡ್ರಾಮಾ ಮಾಡ್ತಾ ಇದ್ದಾರಾ? ಅಂತ ಸ್ವತಃ ಅಜ್ಜಿನೇ ಭೂಮಿ ಗೌತಮ್‌ ನೋಡಲು ರೂಮ್‌ಗೆ ತೆರೆಳಿದ್ದಾರೆ.

ಶಕುಂತಲಾ ಮಲತಾಯಿಯಾದ್ರೂ ಕೂಡ ಗೌತಮ್‌ಗೆ ಅವಳೆಂದರೆ ಇಷ್ಟ. ಈ ಹಿಂದೆ ಕೂಡ ಶಕುಂತಲಾ ಮಾತು ನಂಬಿ, ಅವನು ಭೂಮಿಗೆ ಕ್ಲಾಸ್‌ ತಗೊಂಡಿದ್ದನು. ಈಗ ಅವನು ವಠಾರದಲ್ಲಿದ್ದಾನೆ, ಡ್ರೈವರ್‌ ಆಗಿ ಕೆಲಸ ಮಾಡುತ್ತಿದ್ದಾನೆ.



ಗೌತಮ್‌ 600 ಕೋಟಿ ರೂಪಾಯಿ ಸಾಲವನ್ನು ಮಾಡಿದ್ದಾನೆ. ಅವನಿಗೆ ಪತ್ನಿ, ಮಗ ಕೂಡ ಇರೋದರಿಂದ ಇವನು, ತನ್ನ ಆಸ್ತಿಯನ್ನು ಜಯದೇವ್‌ ಮುಖದ ಮೇಲೆ ಬಿಸಾಕಿದರೂ ಕೂಡ ಏನೂ ಪ್ರಯೋಜನವಿಲ್ಲದಂತಾಗಿದೆ. ಆ ಆಸ್ತಿಯನ್ನು ಅವರು ಮಾರುವಂತಿಲ್ಲ, ಅಡ ಇಡುವಂತಿಲ್ಲ. ಹೀಗಾಗಿ ಅವನಿಗೆ ಗೌತಮ್‌ ಹಾಗೂ ಅವನ ಕುಟುಂಬದವರ ಸಹಿ ಬೇಕಿದೆ.

ಇದನ್ನೂ ಓದಿ: Amruthadhaare Serial: ಅಜ್ಜಿ ಆಸೆ ಈಡೇರ್ಲೇ ಬೇಕು! ಗೌತಮ್- ಭೂಮಿಕಾ ಒಂದಾಗ್ಲೇ ಬೇಕು! ಅಂತ್ಯ ಹಾಡುತ್ತಾ ಅಮೃತಧಾರೆ?

ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.

Yashaswi Devadiga

View all posts by this author