ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Amruthadhaare Serial: ಜೈಲಿನಿಂದ ರಿಲೀಸ್‌ ಆದ ಜೈದೇವ್‌! ಮಾಸ್ಟರ್‌ ಪ್ಲ್ಯಾನ್‌ ಏನು?

Amruthadhaare Serial:ದಿಯಾ ಜೈದೇವ್‌ನನ್ನು ಆಚೆ ಹಾಕಿದ್ದಾಳೆ. ಪೊಲೀಸರಿಗೆ ಒಪ್ಪಿಸಿದ್ದಳು. ಆದರೀಗ ಜೈದೇವ್‌ ಆಚೆ ಬಂದಿದ್ದಾನೆ. ಮಾವನ ದೆಸೆಯಿಂದ. ಅಷ್ಟೇ ಅಲ್ಲ ದಿಯಾ ಮನೆ ಮುಂದೆ ಮತ್ತೆ ರಂಪಾಟ ಮಾಡಿದ್ದಾಳೆ. ಜೈದೇವ್ ಜೈಲು ಸೇರಿರುವ ವಿಷಯ ಶಕುಂತಲಾಗೆ ತಿಳಿದಿತ್ತು. ಪೊಲೀಸರು ಕಾಲ್ ಮಾಡಿ ವಿಷಯ ತಿಳಿಸಿದ್ರೂ ಜೈದೇವ್ ಯಾರು ಎಂದು ಗೊತ್ತಿಲ್ಲ ಎಂದು ಹೇಳಿದ್ದಳು.

ಅಮೃತಧಾರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial) ಜೈಲು ಸೇರಿರುವ ಜೈದೇವ್‌ಗೆ ಜಾಮೀನು ಕೊಡಿಸಲು ಅವನ ಹಳೆ ಶತ್ರು ಶಕುನಿಮಾಮ ಲಕ್ಷ್ಮೀಕಾಂತ್ ಬಂದಿದ್ದಾನೆ. ಈ ಅನಿರೀಕ್ಷಿತ ಬೆಳವಣಿಗೆಯು, ಇದರ ಹಿಂದೆ ಶಕುಂತಲಾ ಅಥವಾ ಗೌತಮ್ (gowtham Bhoomika) ಇರಬಹುದೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದ್ದು, ಕಥೆಯು ಕುತೂಹಲಕಾರಿ ತಿರುವು ಪಡೆದಿದೆ.

ದಿಯಾ ಮನೆ ಮುಂದೆ ಮತ್ತೆ ರಂಪಾಟ

ದಿಯಾ ಜೈದೇವ್‌ನನ್ನು ಆಚೆ ಹಾಕಿದ್ದಾಳೆ. ಪೊಲೀಸರಿಗೆ ಒಪ್ಪಿಸಿದ್ದಳು. ಆದರೀಗ ಜೈದೇವ್‌ ಆಚೆ ಬಂದಿದ್ದಾನೆ. ಮಾವನ ದೆಸೆಯಿಂದ. ಅಷ್ಟೇ ಅಲ್ಲ ದಿಯಾ ಮನೆ ಮುಂದೆ ಮತ್ತೆ ರಂಪಾಟ ಮಾಡಿದ್ದಾಳೆ. ಜೈದೇವ್ ಜೈಲು ಸೇರಿರುವ ವಿಷಯ ಶಕುಂತಲಾಗೆ ತಿಳಿದಿತ್ತು. ಪೊಲೀಸರು ಕಾಲ್ ಮಾಡಿ ವಿಷಯ ತಿಳಿಸಿದ್ರೂ ಜೈದೇವ್ ಯಾರು ಎಂದು ಗೊತ್ತಿಲ್ಲ ಎಂದು ಹೇಳಿದ್ದಳು.

ಇದನ್ನೂ ಓದಿ: Priyanka Chopra: ಮಗಳ ಗಿಫ್ಟ್‌ ಕಂಡು ಭಾವುಕ ಪೋಸ್ಟ್‌ ಶೇರ್‌ ಮಾಡಿದ ಪ್ರಿಯಾಂಕಾ ಚೋಪ್ರಾ !

ಈಗ ಸೋದರ ಲಕ್ಷ್ಮೀಕಾಂತ್ ಮೂಲಕ ಕೆಡಿ ಮಗನಿಗೆ ಶಕುಂತಲಾ ಜಾಮೀನು ಕೊಡಿಸಿದಳಾ ಎಂಬ ಅನುಮಾನ ವೀಕ್ಷಕರಲ್ಲಿ ಮೂಡಿದೆ. ಮತ್ತೊಂದು ಕಡೆ ಲಕ್ಷ್ಮೀಕಾಂತ್ ಮೂಲಕ ಗೌತಮ್ ಜಾಮೀನು ಕೊಡಿಸಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಅಮೃತಧಾರೆಯ ಹೊಸ ಎಪಿಸೋಡ್‌ಗಳು ಹಲವು ಕಾರಣಕ್ಕೆ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಮೊದಲನೆಯದಾಗಿ ಗೌತಮ್ ಹಾಗೂ ಭೂಮಿಕಾ ಅವರ ಮಗಳ ಪತ್ತೆಗೆ ಅಖಿಲಾಂಡೇಶ್ವರಿ ಅವರ ಅಭಯ ಹಸ್ತ ಸಿಕ್ಕಿದೆ.



ಗೌತಮ್‌ ದಿವಾನ್‌ ಆಸ್ತಿಯನ್ನು ಮತ್ತೆ ವಶಕ್ಕೆ ಪಡೆಯೋದು ಜೈದೇವ್‌ ಗುರಿ. ಈಗ ಒಮ್ಮೆ ಪಡೆದು, ಅದನ್ನು ದಿವಾಳಿ ಮಾಡಿ ಮುಗೀತು. ಮಿಂಚುಳೇ, ಗೌತಮ್‌ ಮಗಳು ಎನ್ನೋ ಸತ್ಯದ ಜೊತೆಗೆ ಜಯದೇವ್‌ ಆಟ ಆಡಬಹುದು ಎಂಬುದು ವೀಕ್ಷರಲ್ಲಿ ಇರೋ ಕುತೂಹಲ.

ಇದನ್ನೂ ಓದಿ: Amruthadhaare Serial: ಭೂಮಿ-ಗೌತಮ್‌ಗೆ ಮಕ್ಕಳನ್ನು ಸಂಭಾಳಿಸೋದೇ ದೊಡ್ಡ ಕೆಲಸ!

ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ

Yashaswi Devadiga

View all posts by this author