ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Anchor Anushree : ರೋಷನ್ ಜ್ಯೂಸ್‌ನಲ್ಲಿ ಏನಾದ್ರು ಮಿಕ್ಸ್ ಮಾಡಿ ಕೊಟ್ಟುಬಿಟ್ರೆ ಅನ್ನೋ ಭಯ ಇತ್ತು; ಅನುಶ್ರೀ

Anchor Anushree : ಅನುಶ್ರೀ ಅವರು ಕಳೆದ ವರ್ಷ ಆಗಸ್ಟ್‌ನಲ್ಲಿ ಕೂರ್ಗ್‌ ಮೂಲದ ರೋಷನ್‌ ಎಂಬುವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಪತಿ ರೋಷನ್‌ ಅವರೊಂದಿಗೆ ಹ್ಯಾಪಿ ಲೈಫ್‌ ಲೀಡ್‌ ಮಾಡ್ತಿರುವ ಅನುಶ್ರೀ ಅವರು ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ. ಪ್ರಸ್ತುತ ʻಜೀ ಕನ್ನಡʼ ವಾಹಿನಿಯ ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼ ರಿಯಾಲಿಟಿ ಶೋ ನಿರೂಪಣೆ ಮಾಡ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ರೋಷನ್‌ ಅವರನ್ನು ಹೇಗೆ ಭೇಟಿ ಮಾಡಿದ್ದೆ? ಸ್ನೇಹ ಹೇಗೆ ಶುರು ಆಯ್ತು ಎಂಬುದರ ಬಗ್ಗೆ ವಿವರಿಸಿದ್ದಾರೆ.

ಅನುಶ್ರೀ ನಿರೂಪಕಿ

ಅನುಶ್ರೀ (Anchor anushree) ಅವರು ಕಳೆದ ವರ್ಷ ಆಗಸ್ಟ್‌ನಲ್ಲಿ ಕೂರ್ಗ್‌ ಮೂಲದ ರೋಷನ್‌ ಎಂಬುವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಪತಿ ರೋಷನ್‌ (Roshan) ಅವರೊಂದಿಗೆ ಹ್ಯಾಪಿ ಲೈಫ್‌ ಲೀಡ್‌ ಮಾಡ್ತಿರುವ ಅನುಶ್ರೀ ಅವರು ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ. ಪ್ರಸ್ತುತ ʻಜೀ ಕನ್ನಡʼ ವಾಹಿನಿಯ ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼ ರಿಯಾಲಿಟಿ ಶೋ ನಿರೂಪಣೆ ಮಾಡ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ರೋಷನ್‌ ಅವರನ್ನು ಹೇಗೆ ಭೇಟಿ (First Meet) ಮಾಡಿದ್ದೆ? ಸ್ನೇಹ ಹೇಗೆ ಶುರು ಆಯ್ತು ಎಂಬುದರ ಬಗ್ಗೆ ವಿವರಿಸಿದ್ದಾರೆ.

ರೋಷನ್‌ ಭೇಟಿ ಆಗಿದ್ದು ಇಲ್ಲಿ!

ರೋಷನ್‌ ಅವರ ಭೇಟಿ ಮಾಡಿದ್ದು, ನಾನು ಮೊದಲ ಬಾರಿಗೆ ಹೊಸಪೇಟೆಯಲ್ಲಿ. ಅದು ಅಪ್ಪು ಅವರ ಮೆಚ್ಚಿನ ಜಾಗ. ರೋಷನ್‌ ಮತ್ತು ಶ್ರೀದೇವ್‌ ಫ್ರೆಂಡ್ಸ್‌. ಆಗ ಭೇಟಿ ಆದಾಗ ಹಾಯ್‌ ಬೈ ಅಷ್ಟೆ. . ನನ್ನನ್ನು ಕಾಫಿಗೆ ಕರೆದುಕೊಂಡು ಹೋಗಬೇಕು ಎಂದು ಶ್ರೀದೇವಿ ಮೂಲಕ ರೋಷನ್ ಕೇಳಿದ್ದರು. ನೀವು ನಂಬಲ್ಲ ನನ್ನನ್ನು ಆಚೆ ಕಾಫಿ ಕರೆದುಕೊಂಡು ಹೋಗಬೇಕು ಅಂತ ಯಾರೂ ನನ್ನ ಬಳಿ ಇದುವೆರೆಗೆ ಹೇಳಿಲ್ಲ.

ಇದನ್ನೂ ಓದಿ: Love Insurance Kompany: ತಮ್ಮ ಭಾಷಣವನ್ನು AI ಬಳಸಿ ಅನುವಾದ ಮಾಡಿದ ತಮಿಳು ನಟ; ಹುಬ್ಬೇರಿಸಿದ ಫ್ಯಾನ್ಸ್‌!

ಜ್ಯೂಸ್‌ನಲ್ಲಿ ಏನಾದ್ರೂ ಮಿಕ್ಸ್‌ ಮಾಡಿ ಕೊಟ್ಟರೆ?

ನನ್ನ ಫಸ್ಟ್‌ ಭೇಟಿ ಆದ ತಕ್ಷಣ ತುಂಬಾ ಅಹಂಕಾರಿ ಅಂತ ಅಂದುಕೊಳ್ತಾರೆ. ಬೇಡದೇ ಇರೋರೆಲ್ಲ ಕಾಫಿಗೆ ಕರೆದದ್ದೂ ಇದೆ. ಆಗ ಕಾಫಿಗೆ ವಿಷ ಹಾಕಬೇಕು ಅಂತ ಅನ್ನಿಸಿದ್ದುಂಟು. ಸಿಂಗಲ್‌ ಹುಡುಗ ಯಾವತ್ತೂ ಕಾಫಿಗೆ ಕರೆದಿಲ್ಲ. ಭಯ ಆಗೊಗಿತ್ತು. ರಾಜ್‌ ಬಿ ಶೆಟ್ಟಿಗೆ ವಿಚಾರ ಹೇಳಿದ್ದೆ. ಮೀಟ್‌ ಮಾಡಿದಗ ಜ್ಯೂಸ್‌ನಲ್ಲಿ ಏನಾದ್ರೂ ಮಿಕ್ಸ್‌ ಮಾಡಿ ಕೊಟ್ಟರೆ ಅಂತ ರಾಜ್‌ ಬಳಿ ಹೇಳಿದ್ದೆ.

ಆಗ ರಾಜ್‌ ಇದ್ದವರು, ನೀನು ದೊಡ್ಡ ಮಿಸ್‌ ಯೂನಿವರ್ಸ್‌, ಐಶ್ವರ್ಯಾ ರೈ ಜ್ಯೂಸ್‌ನಲ್ಲಿ ಬೇರೆ ಮಿಕ್ಸ್‌ ಮಾಡಿ ಕೊಟ್ಟು ಬಿಡ್ತಾರಾ? ಅಂದಿದ್ರು. ಆಗ ಚೈತ್ರಾ ರಾಜ್‌ ಇಬ್ಬರೂ ಇದ್ದರು. ಚೈತ್ರಾ ಕೂಡ ಹೋಗು ಹೋಗು ಅಂತ ಪುಷ್‌ ಮಾಡ್ತಾ ಇದ್ದರು. ನನಗೆ ರಾಜ್‌ ಮೀಟ್‌ ಆಗೋ ತನಕ ನನಗೆ ಜಾಸ್ತಿ ಸ್ನೇಹಿತರು ಇರಲಿಲ್ಲ. ಕಡಿಮೆ ಇದ್ದರು ಎಂದರು.



ಎರಡು ವರ್ಷ ನಾವು ಡೇಟ್‌ ಮಾಡಿದ್ವಿ

ರಾಜ್‌ ಕೂಡ ಬಳಿಕ ಮೀಟ್‌ ಆಗು. ಒಂದು ಸಲ ಮಾತಾಡು. ಒಳ್ಳೆಯ ಸ್ನೇಹಿತ ಸಿಗಬಹುದು. ಡೈರೆಕ್ಟ್‌ ಮದುವೆಗೆ ಯಾಕೆ ಹೋಗ್ತೀಯಾ? ಅಂತ ಹೇಳಿದ್ದರು. ಬಳಿಕ ಮೀಟ್‌ ಮಾಡಿದೆ. ಆಮೇಲೆ ಶೇಕ್‌ ಹ್ಯಾಂಡ್‌ ಮಾಡಿದೆ. ಫುಲ್‌ ಬೆವರು ಬಿಟ್ಟರು. ಆಮೇಲೆ ಸಖತ್‌ ಮಾತಾಡಲು ಶುರು ಮಾಡಿದ್ರು. ಎರಡು ಗಂಟೆ ಆಗೋಗಿದೆ. ರಾಜ್‌ ಆಮೇಲೆ ಕಾಲ್‌ ಮಾಡಿದ್ದರು. 4 ಗಂಟೆ ಆದರೂ ಮಾತಾಡ್ತಾ ಇದ್ದಿವಿ. ರಾಜ್‌ ಮತ್ತೆ ಅಷ್ಟು ಏನು ಮಾಡ್ತಾ ಇದ್ದೀರಿ ಅಂತ ಕೇಳಿದ್ರು. ಬಳಿಕ ಮಾತುಕತೆ ಮುಗಿಸಿ ಹೋಗಿ ರಾಜ್ ಭೇಟಿ ಮಾಡ್ದೆ.. ಹುಡುಗ ಇಷ್ಟ ಆದ ಎಂದೆ.. ಏನು ಇಷ್ಟ ಆಯ್ತು ಅಂದಾಗ ಬಹಳ ಒಳ್ಳೆ ಹುಡುಗ, ಆಡಿನರಿ ಹುಡುಗ ಅನ್ನಿಸಿತು ಎಂದು ಹೇಳಿದ್ದೆ.. ಮುಂದೆ ಸ್ನೇಹಿತರಾದೆವು" ಎಂದು ಅನುಶ್ರೀ ವಿವರಿಸಿದ್ದಾರೆ.

ಇದನ್ನೂ ಓದಿ: Shadow Play OTT: ಇನ್ವೆಸ್ಟಿಗೇಟಿವ್ ಥ್ರಿಲ್ಲರ್‌, ರೋಚಕ ಕ್ರೈಮ್ ಡ್ರಾಮಾ ಸಿರೀಸ್‌ ಈ ಒಟಿಟಿಯಲ್ಲಿ!

ನಂತರ ಫ್ರೆಂಡ್ಸ್‌ ಆದ್ವಿ. ಎರಡು ವರ್ಷ ನಾವು ಡೇಟ್‌ ಮಾಡಿದ್ವಿ. ನಾನು ಎಲ್ಲ ಕಡೆ ಓಡಾಡೋವಾಗ ಅದು ಗೊತ್ತಾಗ್ತಾನೂ ಇರಲಿಲ್ಲ. ಬಾಡಿಗಾರ್ಡ್ ಎಂದು ಸಾಕಷ್ಟು ಜನ ಅಂದುಕೊಂಡಿದ್ರು. ಊಟಕ್ಕೆ, ಶಾಪಿಂಗ್‌ ಆರಾಮ್‌ ಹೋಗ್ತಾ ಇದ್ದೆ. ಯಾರಿಗೂ ಗೊತ್ತಾಗ್ತಾ ಇರಲಿಲ್ಲ ಎಂದಿದ್ದಾರೆ.

Yashaswi Devadiga

View all posts by this author