ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Annayya Serial Kannada: ನಾರಿ ಶಕ್ತಿ ಒಂದಾಗಾಯ್ತು! ಕೈಗೆ ಸಿಕ್ಕ ಸೀನ -ಪಿಂಕಿನಾ ಸುಮ್ನೆ ಬಿಡ್ತಾಳಾ ಪಾರು?

Annayya serial Kannada: ಒಂದು ಕಡೆ ರಶ್ಮಿ ಮಾವ ಮಾದಪ್ಪ ಕೂಡ ಮಗ ಸೊಸೆ ಸಂಸಾರ ಸರಿ ಮಾಡಲು ಪಣ ತೊಟ್ಟಿದ್ದಾನೆ. ಈಗ ಪಾರು ಗಮನಕ್ಕೆ ರಶ್ಮಿ ವಿಚಾರ ಬಂದಿದೆ. ಸೀನ ಹಾಗೂ ಪಿಂಕಿ ಕಳ್ಳಾಟವನ್ನು ರಶ್ಮಿ ತಾಯಿ ಪಾರುಗೆ ತೋರಿಸಿದ್ದಾಳೆ. ಪಾರು ಈ ಬಗ್ಗೆ ಗರಂ ಆಗಿದ್ದಾಳೆ. ಇದರ ಜೊತೆಗೆ ರಾಣಿಯೂ ರಶ್ಮಿ ಬಾಳು ಸರಿ ಮಾಡಲು ಮುಂದೆ ಬಂದಿದ್ದಾಳೆ. ರಶ್ಮಿ ಗೋಸ್ಕರ ಅಮ್ಮನ ಜೊತೆ ಕೈ ಜೋಡಿಸಿದ್ದಾಳೆ. ನಾರಿ ಶಕ್ತಿ ಈಗ ತನ್ನ ಕೈ ಚಳಕ ತೋರಿಸಲು ಮುಂದಾಗಿದೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಣ್ಣಯ್ಯ (Annayya Serial) ಧಾರಾವಾಹಿಯಲ್ಲಿ ಶಿವು ತಂಗಿಯರ ಬಾಳು ಒಂದೊಂದು ಕಥೆಯಾಗಿದೆ. ಒಂದು ಕಡೆ ರತ್ನಾ ಮಾವ ಬಳಿ ತೊಂದರೆ ಅನುಭವಿಸ್ತಾ ಇದ್ದಾರೆ, ರಶ್ಮಿ (Rashmi) ಬಾಳಲ್ಲಿ ಪಿಂಕಿನೇ ಅಡ್ಡಿಯಾಗಿದ್ದಾಳೆ. ಇಷ್ಟೂ ದಿನ ಪಿಂಕಿ ಹಾಗೂ ರಶ್ಮಿ, ಸೀನ ವಿಚಾರ ಶಾರದಮ್ಮಗೆ ಮಾತ್ರ ಸರಿಯಾಗಿ ಗೊತ್ತಿತ್ತು. ಆದರೀಗ ಪಾರುಗೂ ವಿಚಾರ ಗೊತ್ತಾಗಿದೆ. ಹೀಗಾಗಿ ರಶ್ಮಿ ಬಾಳು ಸರಿ ಮಾಡಲು, ಪಾರು (Paaru), ಶಾರದಮ್ಮ ಹಾಗೂ ರಾಣಿ ಒಂದಾಗಿದ್ದಾರೆ.

ಒಂದು ಕಡೆ ರಶ್ಮಿ ಮಾವ ಮಾದಪ್ಪ ಕೂಡ ಮಗ ಸೊಸೆ ಸಂಸಾರ ಸರಿ ಮಾಡಲು ಪಣ ತೊಟ್ಟಿದ್ದಾನೆ. ಈಗ ಪಾರು ಗಮನಕ್ಕೆ ರಶ್ಮಿ ವಿಚಾರ ಬಂದಿದೆ. ಸೀನ ಹಾಗೂ ಪಿಂಕಿ ಕಳ್ಳಾಟವನ್ನು ರಶ್ಮಿ ತಾಯಿ ಪಾರುಗೆ ತೋರಿಸಿದ್ದಾಳೆ. ಪಾರು ಈ ಬಗ್ಗೆ ಗರಂ ಆಗಿದ್ದಾಳೆ. ಇದರ ಜೊತೆಗೆ ರಾಣಿಯೂ ರಶ್ಮಿ ಬಾಳು ಸರಿ ಮಾಡಲು ಮುಂದೆ ಬಂದಿದ್ದಾಳೆ. ರಶ್ಮಿ ಗೋಸ್ಕರ ಅಮ್ಮನ ಜೊತೆ ಕೈ ಜೋಡಿಸಿದ್ದಾಳೆ. ನಾರಿ ಶಕ್ತಿ ಈಗ ತನ್ನ ಕೈ ಚಳಕ ತೋರಿಸಲು ಮುಂದಾಗಿದೆ.

ಇದನ್ನೂ ಓದಿ: Actor Dhanush : ಬಾಡಿ ಶೇಮಿಂಗ್ ವಿಚಾರ ರಿವೀಲ್‌ ಮಾಡಿದ ನಟ ಧನುಷ್!

ಜಿಮ್ ಸೀನನನ್ನು ಶಿವಣ್ಣ ಸುಮ್ನೆ ಬಿಡೋ‌ನಲ್ಲ!

ಇದಕ್ಕೂ ಮುಂಚೆ ಹೊಸ ಪ್ರೋಮೋ ಔಟ್‌ ಆಗಿತ್ತು. ಪಾರು, ಶಿವು ಮಲಗಿದ್ದಾಗ, ಪಾರುಗೆ ಕೆಟ್ಟ ಕನಸು ಬೀಳುತ್ತದೆ. ಏನೋ ಕೆಟ್ಟದಾಗುತ್ತದೆ ಎಂದು ಗಾಬರಿ ಆಗುತ್ತಾಳೆ. ಆಗ ಶಿವು ಕೂಡ ಪಾರುಗೆ ಸಮಾಧಾನ ಮಾಡುತ್ತಾಳೆ. ಇನ್ನೇನು ದೇವಿಗೆ ಹರಕೆ ತೀರಿಸುವ ಸಮಯದಲ್ಲಿ ಸೀನು ಹಾಗೂ ಪಿಂಕಿಯ ಸೀಕ್ರೆಟ್‌ ವಿಷ್ಯ ಶಿವು ಮುಂದೆ ರಿವೀಲ್‌ ಆಗುತ್ತದೆ. ಇದು ಶಿವು ಕೋಪ ನೆತ್ತಿಗೇರಿಸಿದೆ. ಸೀನನನ್ನು ಎತ್ತಿ, ಸುಮ್ಮನೆ ಬಿಡೋದಿಲ್ಲ ಅಂತ ಶಿವು ಹೇಳಿದ್ದಾನೆ.



ಒಟ್ಟಾರೆಯಾಗಿ ಅತ್ತ ಪಾರು ಹಾಗೂ ರಾಣಿ, ರಶ್ಮಿ ಬಾಳು ಸರಿ ಮಾಡೋ ಹೊತ್ತಲ್ಲೇ ಶಿವಗೆ ಗೊತ್ತಾಗಿ ಸೀನನಿಗೆ ಗತಿ ಕಾಣಿಸ್ತಾನಾ? ತಂಗಿಯರ ಜೀವನ ಸರಿ ಹೋಗಬೇಕು ಅಂತ ಹರಕೆ ಹೊತ್ತ ಅಣ್ಣ ಇದೆಲ್ಲ ಸಹಿಸಿಕೊಳ್ಳೋದು ಹೇಗೆ? ಅನ್ನೋದು ವೀಕ್ಷಕರಲ್ಲಿ ಇರೋ ಕುತೂಹಲ.

ಇದನ್ನೂ ಓದಿ: Karna Serial: ತನ್ನ ಪ್ರೀತಿ ವಿಷಯವನ್ನು ನಿಧಿ ಎದುರು ತೆರೆದಿಟ್ಟಿದ್ದಾಳೆ ನಿತ್ಯಾ!

ಇನ್ನೂ, ತಾಯಿ, ಮಗನನ್ನು ಒಂದು ಮಾಡಲು ಪಾರ್ವತಿ ನಾನಾ ಕಸರತ್ತು ಮಾಡುತ್ತಿದ್ದರೆ, ಇತ್ತ ಶಿವು ತನಗೆ ಅರಿವಿಲ್ಲದೆ ಅಮ್ಮನಿಗೆ ಹತ್ತಿರವಾಗುತ್ತಿದ್ದಾನೆ. ಸದ್ಯ ಈ ದೃಶ್ಯವು ಪ್ರೇಕ್ಷಕರ ಗಮನ ಸೆಳೆದಿದೆ.

Yashaswi Devadiga

View all posts by this author