ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ (Anchor Anushree) ಅವರ ವಿವಾಹ ಆಗಸ್ಟ್ 28ರಂದು ಬೆಂಗಳೂರಿನ ಹೊರವಲಯದಲ್ಲಿ ನೆರವೇರಿದೆ. ರೋಷನ್ ಜತೆ ಅನುಶ್ರೀ ಸಪ್ತಪದಿ ತುಳಿದಿದ್ದು, ಈ ಅದ್ಧೂರಿ ಸಮಾರಂಭಕ್ಕೆ ಸ್ಯಾಂಡಲ್‌ವುಡ್ ತಾರೆಯರು ಆಗಮಿಸಿ ಶುಭ ಹಾರೈಸಿದರು. ಇವರಿಬ್ಬರದ್ದು ಲವ್ ಕಮ್ ಆರೆಂಜ್ ಮ್ಯಾರೇಜ್. ನಮ್ಮದು ಸರಳ ವಿವಾಹ ಎಂದು ಅನುಶ್ರೀ ಹೇಳಿಕೊಂಡಿದ್ದರೂ ಅದ್ಧೂರಿಯಂತೆ ಕಂಡುಬಂದಿತ್ತು. ಬಳಿಕ ಮದುವೆಯ ಒಂದೊಂದೇ ವಿಡಿಯೋಗಳನ್ನ ತಮ್ಮ ಇನ್‌ಸ್ಟಾದಲ್ಲಿ ಅನು ಪೋಸ್ಟ್ ಮಾಡುತ್ತಿದ್ದಾರೆ.
ಅನುಶ್ರೀ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಸುದ್ದಿ ಸುಳ್ಳು ಸುದ್ದಿಗಳು ಹರಿದಾಡಿವೆ. ಆರಂಭದಲ್ಲಿ ಅನುಶ್ರೀ ಮದುವೆ ಆಗುತ್ತಿರುವ ಹುಡುಗ ಇಸ್ಲಾಂ ಧರ್ಮಕ್ಕೆ ಸೇರಿದವರು ಎಂಬ ಫೇಕ್ ಸುದ್ದಿ ಹಬ್ಬಿತ್ತು. ಬಳಿಕ ಸರಳ ವಿವಾಹ ಎಂದು ಹೇಳಿಕೊಂಡು 2,70,000 ರೂಪಾಯಿ ಸೀರೆ ಖರೀದಿ ಮಾಡಿದ್ದಾರೆ ಎಂಬ ಪೋಸ್ಟ್ ವೈರಲ್ ಆಗಿತ್ತು. ಇದರ ಬಗ್ಗೆ ದೊಡ್ಡ ಚರ್ಚೆ ಆಯಿತು. ಈ ಬಗ್ಗೆ ಅನುಶ್ರೀ ಅವರೇ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಉತ್ತರ ನೀಡಿದ್ದಾರೆ.
ಮದುವೆಯ ಶಾಸ್ತ್ರಕ್ಕೆ ಧರಿಸಿದ್ದ ಒಂದು ಸೀರೆ ಬಗ್ಗೆ ಹಾಗೂ ಆ ಸೀರೆಯ ಅಸಲಿ ಬೆಲೆ ಬಗ್ಗೆ ಬಹಿರಂಗವಾಗಿ ಅನುಶ್ರೀ ಮಾಹಿತಿ ಕೊಟ್ಟಿದ್ದಾರೆ. ಅನುಶ್ರೀ ಅವರು, ‘‘ನನ್ನ ಸೀರೆ ಬೆಲೆ 2,70,000 ರೂಪಾಯಿ ಎಂದು ಹೇಳುತ್ತಿದ್ದಿರಿ. ಆದರೆ ನನ್ನ ಸೀರೆ ಬೆಲೆ ಮೈಸೂರು ಸಿಲ್ಕ್ ಉದ್ಯೋಗ್‌ನಿಂದ 2700 ರೂಪಾಯಿಗೆ ಖರೀದಿ ಮಾಡಿದ್ದೇನೆ’’ ಎಂದು ಹೇಳಿದ್ದಾರೆ. ಅನುಶ್ರೀ ಅವರ ಸರಳತೆ ಅನೇಕರಿಗೆ ಇಷ್ಟ ಆಗಿದೆ. ಇಷ್ಟು ಕಡಿಮೆ ಬೆಲೆಗೆ ಸೀರೆ ಖರೀದಿ ಮಾಡಿದ್ದು ಅನೇಕರಿಗೆ ಆಶ್ಚರ್ಯ ಆಗಿದೆ.
ಮುಹೂರ್ತಕ್ಕೂ ಮುನ್ನ ನಡೆಯುವ ದೇವತಾ ಕಾರ್ಯ ಶಾಸ್ತ್ರಕ್ಕಾಗಿ ಅನುಶ್ರೀ ಸಿಲ್ವರ್ ಬಣ್ಣದ ಸೀರೆ ಧರಿಸಿದ್ದರು. ನೋಡೋದಕ್ಕೆ ಬೆಲೆ ಬಾಳುವ ಸೀರೆಯಂತೆ ಕಾಣುತ್ತಿತ್ತು. ಈ ಸೀರೆಯ ಬೆಲೆ ಎಷ್ಟು ಲಕ್ಷ ಇರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೀಗ ಇದರ ಬೆಲೆ ಕೇವಲ 2,700 ರೂ. ಎಂದು ಹೇಳುವ ಮೂಲಕ ಅಚ್ಚರಿ ಮೂಡಿದ್ದಾರೆ.
ಮೂಲತಃ ಮಂಗಳೂರಿನವರಾಗಿರುವ ಅನುಶ್ರೀ ಆ್ಯಂಕರ್ ಆಗಿ, ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರೂ ನಟನೆಗಿಂತ ಆ್ಯಂಕರ್ ಆಗಿಯೇ ಅವರು ಹೆಚ್ಚು ಜನಪ್ರಿಯ. ಕನ್ನಡದ ಬಹುತೇಕ ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
Bhagya Lakshmi Serial: ಭಾಗ್ಯ ಮನೆಯಲ್ಲಿ ಕಳ್ಳತನ: ಆದೀ ಕೊಟ್ಟ 25 ಲಕ್ಷ ಕಾಣೆ