ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಅಶ್ವಿನಿ ಗೌಡ ಅವರಿಗೆ ಕಿಚ್ಚ ಸುದೀಪ್ ಎಷ್ಟೇ ವಾರ್ನ್ ಮಾಡಿದರೂ ಬದಲಾಗುವಂತೆ ಕಾಣುತ್ತಿಲ್ಲ. ಪದೇಪದೇ ರಕ್ಷಿತಾ ಶೆಟ್ಟಿ ಅವರನ್ನು ಟಾರ್ಗೆಟ್ ಮಾಡುತ್ತಲೇ ಇದ್ದಾರೆ. ಈ ಹಿಂದೆ ಜಾನ್ವಿ ಜೊತೆ ಸೇರಿ ರಕ್ಷಿತಾಗೆ ನಾಗವಲ್ಲಿ ಎಂಬ ಪಟ್ಟ ಕಟ್ಟಿದರು. ಅಶ್ವಿನಿ ಹಾಗೂ ಜಾನ್ವಿ ಮಧ್ಯರಾತ್ರಿ ಗೆಜ್ಜೆ ಸದ್ದು ಮಾಡಿ ಅದು ರಕ್ಷಿತಾ ಮಾಡಿದ್ದು ಎಂದು ಎಲ್ಲರಿಗೂ ಹೇಳಿದರು. ವೀಕೆಂಡ್ ಬರುವ ತನಕವೂ ಅದನ್ನು ಬಾಯಿ ಬಿಡಲಿಲ್ಲ. ಬಳಿಕ ಕಿಚ್ಚ ಸುದೀಪ್ ಇವರಿಬ್ಬರಿಗೆ ಕ್ಲಾಸ್ ತೆಗೆದುಕೊಂಡ ಬಳಿಕ ಅಶ್ವಿನಿ ಗೌಡ ಅವರು ರಕ್ಷಿತಾ ಬಳಿ ಕ್ಷಮೆ ಕೇಳಿದ್ದರು.
ಅಷ್ಟೇ ಅಲ್ಲದೆ ರಕ್ಷಿತಾಗೆ ಕಾರ್ಟೂನ್, ಈಡಿಯೆಟ್ಸ್ ಎಂಬ ಪದ ಬಳಕೆ ಮಾಡಿದ್ದರು. ಇವಳು ಎಸ್ ಕೆಟಗರಿ ಎಂದು ಅಶ್ವಿನಿ ಅವರು ರಕ್ಷಿತಾಗೆ ಹೇಳಿದ್ದು ಸದ್ಯ ದೂರು ದಾಖಲಾಗಿದೆ. ಇವೆಲ್ಲದರ ಮಧ್ಯೆ ಅಶ್ವಿನಿ ಅವರು ಮತ್ತೊಮ್ಮೆ ರಕ್ಷಿತಾಗೆ ಬೈದಿದ್ದಾರೆ. ಇದರಲ್ಲಿ ರಾಶಿಕಾ ಕೂಡ ಇನ್ವಾಲ್ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎಂಬುದನ್ನು ಕಲರ್ಸ್ ಕನ್ನಡ ಚಿಕ್ಕ ಪ್ರೋಮೋ ಮೂಲಕ ತೋರಿಸಿದೆ.
ರಕ್ಷಿತಾ ಅವರು ಒಬ್ಬರೇ ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು ಮಾಡುತ್ತಾ ಇರುತ್ತಾರೆ.. ಅತ್ತ ಕ್ಯಾಪ್ಟನ್ ರಘು ಅವರು, ರಕ್ಷಿತಾ ಮೇಲೆ ಒಂದೇ ಒಂದು ಕಂಪ್ಲೆಂಟ್ ಇಲ್ಲ, ಯಾರಿಲ್ಲ ಅಂದ್ರು ಅಡುಗೆ ಮಾಡ್ತಾಳೆ.. ಮನೆ ಕೆಲಸದವಳು ಅಂತ ಅಂದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಬಳಿಕ ರಕ್ಷಿತಾ ಅವರು ಗಾರ್ಡನ್ ಏರಿಯಾಗೆ ಬಂದು, ರಾಶಿಕಾ ಅಡುಗೆ ಮಾಡಬೇಕು ಎಂದು ಹೇಳಿದ್ದಾರೆ. ಇಲ್ಲಿ ರಾಶಿಕಾ ಹಾಗೂ ಅಶ್ವಿನಿ ಗೌಡ ಮಾತನಾಡುತ್ತ ಇರುತ್ತಾರೆ.
ರಾಶಿಕಾ ಅಡುಗೆ ಮಾಡಬೇಕು ಎಂದು ರಕ್ಷಿತಾ ಹೇಳಿದಾಗ ರಾಶಿಕಾ ಅವರು, ನಾನು ಮಾಡಲ್ಲ ಅಂತ ಹೇಳ್ತೀನಿ.. ನನ್ನ ಕೈಗೆ ಪೆಟ್ಟಾಗಿದೆ ಮಾಡೋಕೆ ಆಗಲ್ಲ ಎಂದು ಹೇಳಿದ್ದಾರೆ. ರಕ್ಷಿತಾ ಈ ವಿಚಾರವನ್ನು ಕ್ಯಾಪ್ಟನ್ ರಘು ಬಳಿ ಬಂದು ಹೇಳಿದ್ದಾರೆ. ಅವರು ಈಗ ಹೇಳ್ತಾ ಇದ್ದಾರೆ ನನ್ಗೆ ಅಡುಗೆ ಮಾಡೋಕೆ ಆಗಲ್ಲ ಅಂತ.. ನಾನು ಕೂಡ ಮಾಡಲ್ಲ ಎಂದು ಹೇಳಿದ್ದಾರೆ.
ಈ ಸಂದರ್ಭ ಅಶ್ವಿನಿ ಗೌಡ ಮಧ್ಯ ಪ್ರವೇಶಿಸಿದ್ದಾರೆ. ನಾನು ನೋಡ್ತಾ ಇದ್ದೇನೆ ಎಲ್ಲದಕ್ಕೂ ಮಾತಾಡ್ತಾ ಇದ್ದಾಳೆ.. ತುಂಬಾ ಅತಿ ಆಡಬೇಡ ನೀನು ಎಷ್ಟರಲ್ಲಿ ಇರಬೇಕು.. ಅಷ್ಟರಲ್ಲಿ ಇರಬೇಕು ನೀನು.. ಎಲ್ಲದಕ್ಕೂ ಮಧ್ಯದಲ್ಲಿ ಬಂದ್ರೆ ಎಂದು ಬೆರಳು ತೋರಿಸಿ ಮಾತನಾಡಿದ್ದಾರೆ. ಆಗ ರಘು ಅವರು, ಯಾಕೆ ಎಲ್ಲರ ಸೇರಿ ಅವಳಿಗೆ ಬೈತಾ ಇದ್ದೀರಾ ಎಂದು ಕೇಳಿದ್ದಾರೆ. ಒಟ್ಟಾರೆ ರಕ್ಷಿತಾ ಮೇಲೆ ಕೆಲವರಿಗೆ ಸಿಟ್ಟು ಇರುವುದು ನಿಜ. ಅದನ್ನು ಸಂದರ್ಭ ಸಿಕ್ಕಾಗಿ ಉಪಯೋಗಿಸಿಕೊಂಡಂತೆ ಕಾಣುತ್ತಿದೆ. ಪೂರ್ಣ ಮಾಹಿತಿಗೆ ಇಂದಿನ ಎಪಿಸೋಡ್ ನೋಡಬೇಕಿದೆ.
BBK 12: ಈ ವಾರ 8 ಮಂದಿ ನಾಮಿನೇಟ್: ಕ್ಯಾಪ್ಟನ್ ರಘು ನಿರ್ಧಾರಕ್ಕೆ ಬೆಚ್ಚಿಬಿದ್ದ ಸ್ಪರ್ಧಿಗಳು