ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಈ ವಾರ 8 ಮಂದಿ ನಾಮಿನೇಟ್: ಕ್ಯಾಪ್ಟನ್ ರಘು ನಿರ್ಧಾರಕ್ಕೆ ಬೆಚ್ಚಿಬಿದ್ದ ಸ್ಪರ್ಧಿಗಳು

ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ರಾಶಿಕಾ ಶೆಟ್ಟಿ, ರಿಷಾ ಗೌಡ, ಅಶ್ವಿನಿ ಗೌಡ, ಧ್ರುವಂತ್, ಧನುಷ್, ಗಿಲ್ಲಿ ನಟ, ಮಾಳು ನಿಪನಾಳ ಹಾಗೂ ಮಲ್ಲಮ್ಮ ನಾಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ನಾಮಿನೇಷನ್ ವಿಚಾರವಾಗಿ ಸಂಪೂರ್ಣ ಅಧಿಕಾರ ಕ್ಯಾಫ್ಟನ್ ರಘು ಅವರಿಗೆ ನೀಡಿದ್ದರು. ಇದರ ಪ್ರಕಾರ 8 ಮಂದಿ ನಾಮಿನೇಟ್ ಆಗಿದ್ದಾರೆ.

BBK 12: ಈ ವಾರ 8 ಮಂದಿ ನಾಮಿನೇಟ್

BBK 12 5th Week Nominations -

Profile Vinay Bhat Oct 29, 2025 12:00 PM

5ನೇ ವಾರಕ್ಕೆ ಕಾಳಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada season 12) ಈಗ ರೋಚಕತೆ ಪಡೆಯುತ್ತಿದೆ. ಸ್ಪರ್ಧಿಗಳು ತಮ್ಮ ಫ್ರೆಂಡ್​ಶಿಪ್ ಎಂಬ ಹಣೆಪಟ್ಟಿ ಬಿಟ್ಟು ನೈಜ್ಯ ಆಟ ಆಡಲು ಶುರುಮಾಡುತ್ತಿದ್ದಾರೆ. ನೇರ-ನೇರ ಯುದ್ಧ ಆರಂಭವಾದಂತೆ ಕಂಡುಬರುತ್ತಿದೆ. ಜಗಳಗಳು ಕೂಡ ಹೆಚ್ಚಾಗುತ್ತಿವೆ. ಇದರ ಮಧ್ಯೆ ದೊಡ್ಮನೆಯಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಹಿಂದಿನ ವಾರಗಳಿಗಿಂತ ಭಿನ್ನವಾಗಿ ಈ ವಾರ ನಾಮಿನೇಷನ್ ನಡೆದಿದೆ. ಬಿಗ್ ಬಾಸ್ ನಾಮಿನೇಷನ್ ವಿಚಾರವಾಗಿ ಸಂಪೂರ್ಣ ಅಧಿಕಾರ ಕ್ಯಾಫ್ಟನ್ ರಘು ಅವರಿಗೆ ನೀಡಿದ್ದರು. ಇದರ ಪ್ರಕಾರ 8 ಮಂದಿ ನಾಮಿನೇಟ್ ಆಗಿದ್ದಾರೆ.

ಈ ವಾರದ ಆರಂಭದಲ್ಲೇ ಬಿಗ್ ಬಾಸ್ ಮನೆ ಬಿಗ್ ಬಾಸ್ ಕಾಲೇಜ್ ಕ್ಯಾಂಪಸ್ ಆಗಿ ಬದಲಾಗಿತ್ತು. ಇದರಲ್ಲಿ ಎರಡು ಬ್ಯಾಚ್ ಮಾಡಲಾಗಿತ್ತು, ಒಂದು ನೀಲಿ ತಂಡ ಮತ್ತೊಂದು ಕೆಂಪು ತಂಡ. ಇದರಲ್ಲಿ ಬಿಗ್ ಬಾಸ್ ಸೂಚಿಸುವ ಒಂದು ತಂಡದ ಓರ್ವ ಸದಸ್ಯ ಎದುರಾಳಿ ತಂಡದ ಮತ್ತೋರ್ವ ಸದಸ್ಯ ಈ ಮನೆಯಲ್ಲಿ ಇರಲು ಯಾಕೆ ಯೋಗ್ಯರಲ್ಲ ಎಂಬುದರ ಕುರಿತು ವಾದ ಮಂಡಿಸಬೇಕಿತ್ತು.

ಹೀಗೆ ಈ ವಾದದಲ್ಲಿ ವಾಲಿಡ್ ರೀಸನ್ ಕೊಟ್ಟವರನ್ನು ರಘು ಸೇವ್ ಮಾಡಿದರು. ವಾದ ಮಾಡುವಲ್ಲಿ ವಿಫಲವಾದ ಸದಸ್ಯ ಡೈರೆಕ್ಟ್ ನಾಮಿನೇಟ್ ಆಗುತ್ತಿದ್ದರು. ಈ ಮೂಲಕ ಕ್ಯಾಪ್ಟನ್ ರಘು ಅವರೇ ನಾಮಿನೇಷನ್ ವಿಭಾಗದಲ್ಲಿ ಸಂಪೂರ್ಣ ಅಧಿಕಾರ ಹೊಂದಿದ್ದರು. ಅದರಂತೆ ಈ ವಾರ ಒಟ್ಟು 8 ಮಂದಿ ಸ್ಪರ್ಧಿಗಳು ದೊಡ್ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.

BBK 12: ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ವಿಚಾರವಾಗಿ ಗಿಲ್ಲಿ-ರಿಷಾ ನಡುವೆ ಜಗಳ

ಯಾರೆಲ್ಲ ನಾಮಿನೇಟ್?:

ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ರಾಶಿಕಾ ಶೆಟ್ಟಿ, ರಿಷಾ ಗೌಡ, ಅಶ್ವಿನಿ ಗೌಡ, ಧ್ರುವಂತ್, ಧನುಷ್, ಗಿಲ್ಲಿ ನಟ, ಮಾಳು ನಿಪನಾಳ ಹಾಗೂ ಮಲ್ಲಮ್ಮ ನಾಮಿನೇಟ್ ಆಗಿದ್ದಾರೆ. ಕಳೆದ ವಾರ ಎಲಿಮಿನೇಷನ್ ಇರಲಿಲ್ಲ. ರಾಶಿಕಾ ಶೆಟ್ಟಿ ಹಾಗೂ ಸ್ಪಂದನಾ ಸೋಮಣ್ಣಗೆ ಪ್ರಾಂಕ್ ಎಲಿಮಿನೇಷನ್ ಮಾಡಲಾಯಿತು. ಆದರೆ, ಈ ವಾರ ಎಲಿಮಿನೇಷನ್ ನಡೆಯೋದು ಖಚಿತ ಎನ್ನಲಾಗಿದೆ. ಆದರೆ, ಇದರ ಮಧ್ಯೆ ಮಲ್ಲಮ್ಮ ದೊಡ್ಮನೆಯಿಂದ ಹೊರಬಂದಿದ್ದಾರೆ.

ವೈಯಕ್ತಿಕ ಕಾರಣದಿಂದ ಮಲ್ಲಮ್ಮ ಹೊರಕ್ಕೆ:

ಸೋಶಿಯಲ್‌ ಮೀಡಿಯಾದಲ್ಲಿ ಮಲ್ಲಮ್ಮ ವೈಯಕ್ತಿಕ ಕಾರಣಗಳಿಂದಾಗಿ ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಮಲ್ಲಮ್ಮ ಕುಟುಂಬದವರೊಬ್ಬರಿಗೆ ಮಗು ಜನಿಸಿದೆ ಎನ್ನಲಾಗಿದೆ. ಈ ಖುಷಿಯ ಕ್ಷಣದಲ್ಲಿ ಅವರು ಭಾಗಿ ಆಗಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ, ಅವರು ಆಟ ತೊರೆದು ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ. ಗುರುವಾರದ ಎಪಿಸೋಡ್​ನಲ್ಲಿ ಮಲ್ಲಮ್ಮ ಬಿಗ್ ಬಾಸ್ ತೊರೆದಿರುವ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಸದ್ಯಕ್ಕೆ ಈ ಬಗ್ಗೆ ಬಿಗ್‌ ಬಾಸ್‌ ಅಥವಾ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಯಾವುದೇ ಅಧಿಕೃತ ಅಪ್ಡೇಟ್‌ ನೀಡಿಲ್ಲ. ಮೂಲಗಳ ಪ್ರಕಾರ ಇದು ನಿನ್ನೆ ರಾತ್ರಿ ನಡೆದಿರುವುದು. ಹೀಗಾಗಿ ಈ ಬಗ್ಗೆ ನಾಳಿನ (ಅ.30) ಎಪಿಸೋಡ್‌ನಲ್ಲಿ ಸತ್ಯ ಗೊತ್ತಾಗಲಿದೆ.