BBK 11 Final: ಬಿಗ್ ಬಾಸ್ ಫಿನಾಲೆ; ಉಗ್ರಂ ಮಂಜು ಔಟ್
ಸುಮಾರು 115 ದಿನಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ ಹಂತ ತಲುಪಿದೆ. ಕೊನೆಯ ಹಂತಕ್ಕೆ ಬಂದಿದ್ದ 5 ಸ್ಪರ್ಧಿಗಳ ಪೈಕಿ ಫಿನಾಲೆ ವೇದಿಕೆಯಿಂದ ಮೊದಲ ಸ್ಪರ್ಧಿಯಾಗಿ ಉಗ್ರಂ ಮಂಜು ಹೊರ ನಡೆದಿದ್ದಾರೆ. ಇನ್ನುಳಿದ 4 ಸ್ಪರ್ಧಿಗಳ ಪೈಕಿ ಯಾರಾಗ್ತಾರೆ ಚಾಂಪಿಯನ್ ಎನ್ನುವ ಕುತೂಹಲ ಮೂಡಿದೆ.
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಲ್ಲಿ ಪ್ರಸಾರವಾಗುತ್ತಿರುವ, ಕಿಚ್ಚ ಸುದೀಪ್ (Kichcha Sudeepa) ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ ಆರಂಭವಾಗಿದೆ (BBK 11 Final). ಕೊನೆಯ ಹಂತಕ್ಕೆ ಬಂದಿದ್ದ ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ, ರಜತ್ ಕಿಶನ್ ಹಾಗೂ ಮೋಕ್ಷಿತಾ ಪೈ ಪೈಕಿ ಇದೀಗ ಉಗ್ರಂ ಮಂಜು ಹೊರ ಬಿದ್ದಿದ್ದಾರೆ.
ಕೊನೆಯ ಹಂತಕ್ಕೆ ಒಟ್ಟು 6 ಮಂದಿ ಆಯ್ಕೆಯಾಗಿದ್ದರು. ಈ ಪೈಕಿ ಶನಿವಾರದ ಸಂಚಿಕೆಯಲ್ಲಿ ಭವ್ಯಾ ಗೌಡ ಎಲಿಮಿನೇಟ್ ಆಗಿದ್ದರು. ಇದೀಗ ಉಗ್ರಂ ಮಂಜು ತಮ್ಮ ಆಟ ಮುಗಿಸಿದ್ದಾರೆ. ಇನ್ನು ಉಳಿದಿರುವ ಸ್ಪರ್ಧಿಗಳ ಪೈಕಿ ಯಾರು ಚಾಂಪಿಯನ್ ಆಗುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಭಾನುವಾರದ ಸಂಚಿಕೆ ಸುದೀಪ್ ಅವರ ಲವಲವಿಕೆಯ ನಿರೂಪಣೆಯೊಂದಿಗೆ ಆರಂಭವಾಯಿತು. ಈ ಸೀಸನ್‌ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳೆಲ್ಲ ಆಗಮಿಸಿದ್ದರು. ಪ್ರತಿಯೊಬ್ಬರನ್ನೂ ಮಾತನಾಡಿಸಿದ ಸುದೀಪ್ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು. ಕೆಲ ಹೊತ್ತಿನಲ್ಲಿ ಡ್ಯಾನ್ಸರ್ ಆಗಮಿಸಿ ಉಗ್ರಂ ಮಂಜು ಅವರನ್ನು ಕರೆದುಕೊಂಡು ಹೋಗಿದ್ದು, ಈ ಮೂಲಕ ಇಂದಿನ ಮೊದಲ ಎಲಿಮಿನೇಷನ್ ನಡೆಯಿತು. ಆರಂಭದಲ್ಲೇ ಬಲಿಷ್ಠ ಸ್ಪರ್ದಿಯಾಗಿದ್ದ ಉಗ್ರಂ ಮಂಜು ಕಪ್ ಗೆಲ್ಲುತ್ತಾರೆ ಎಂದೇ ಊಹಿಸಲಾಗಿತ್ತು. ಆದರೆ ಅವರ ಅಭಿಮಾನಿಗಳ ಕನಸು ಭಗ್ನವಾಗಿದೆ. ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದ ಉಗ್ರಂ ಮಂಜು ಕಿಚ್ಚನ ಚಪ್ಪಾಳೆ ಕೂಡ ಪಡೆದಿದ್ದರು.
ಈ ಸೀಸನ್‌ನ ಶೋ ಸ್ಟಾಪರ್ ಆಗಿದ್ದೀರಿ ಎಂದು ಸುದೀಪ್ ಮೆಚ್ಚುಗೆ ಸೂಚಿಸಿದರು. ಕಪ್ ಗೆಲ್ಲದಿದ್ದರೂ ಸುದೀಪ್ ಅವರ ಚಿತ್ರದಲ್ಲಿ ನಟಿಸಿ ಗೆದ್ದಿದ್ದೇನೆ ಎಂದು ಮಂಜು ತಾಯಿಗೆ ತಿಳಿಸಿದ್ದು ಭಾವುಕ ಕ್ಷಣವಾಗಿತ್ತು. 5ನೇ ಸ್ಥಾನ ಪಡೆದ ಮಂಜು ಅವರಿಗೆ ಮೊದಲಿಗೆ 2 ಲಕ್ಷ ರೂ. ನಗದು ನೀಡಲಾಯಿತು. ಅದನ್ನು ಅವರು ವೃದ್ಧಾಶ್ರಮಕ್ಕೆ ದಾನ ಮಾಡುವುದಾಗಿ ತಿಳಿಸಿದರು. ಆ ವೇಳೆ ಸುದೀಪ್ ಅವರು 2 ಲಕ್ಷ ರೂ. ತಮ್ಮ ಕಡೆಯಿಂದ ನೀಡುವುದಾಗಿಯೂ ಮಂಜು ಗೆದ್ದ 2 ಲಕ್ಷ ರೂ. ತಂದೆ-ತಾಯಿಗೆ ನೀಡುವಂತೆ ಸೂಚಿಸಿದರು. ಬಳಿಕ ಮಂಜು ಅವರಿಗೆ 1 ಲಕ್ಷ ರೂ. ನಗದು, 50 ಸಾವಿರ ರೂ. ಗಿಫ್ಟ್ ಹ್ಯಾಂಪರ್ ನೀಡಲಾಯಿತು.
ಈ ಸುದ್ದಿಯನ್ನ ಓದಿ: Bigg Boss 11, winner Prize Money: ಈ ಬಾರಿ ಬಿಗ್ ಬಾಸ್ ಗೆಲ್ಲುವ ಸ್ಪರ್ಧಿಗೆ ಸಿಗುವ ಹಣ ಎಷ್ಟು ಗೊತ್ತೇ?
ಉಗ್ರಂ ಮಂಜು ಹಿನ್ನೆಲೆ
ಉಗ್ರಂ ಮಂಜು ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ಜತೆಗೆ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಉಗ್ರಂ’ ಸಿನಿಮಾ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ಆ ಮೂಲಕ ಉಗ್ರಂ ಮಂಜು ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆಕಂಡ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.