ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಅತ್ಯಂತ ಕಿರಿಯ ಸ್ಪರ್ಧಿ ಎಂದರೆ ಅದು ರಕ್ಷಿತಾ ಶೆಟ್ಟಿ. ತನಗೆ ಕನ್ನಡ ಸರಿಯಾಗಿ ಮಾತನಾಡೋಕೆ ಬರಲ್ಲ ಅಂದ್ರು ಆದಷ್ಟು ಪ್ರಯತ್ನ ಪಟ್ಟು ಕಲಿಯುತ್ತಿದ್ದಾರೆ. ಇವರ ವಿಶೇಷ ಕನ್ನಡಕ್ಕೇ ಇಂದು ಕರ್ನಾಟಕದಲ್ಲಿ ಅನೇಕ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ಇವರ ಇನೊಸೆಂಟ್ ಅನ್ನು ಜನರು ಮೆಚ್ಚಿಕೊಂಡಿದ್ದಾರೆ. ತಮ್ಮದೇ ಶೈಲಿಯಲ್ಲಿ ಬಿಗ್ ಬಾಸ್ ಮನೆಯಲ್ಲಿ ಜನರನ್ನು ಎಂಟರ್ಟೈನ್ಮೆಂಟ್ ಮಾಡುತ್ತಿರುವ ರಕ್ಷಿತಾ ಮೇಲೆ ಅಶ್ವಿನಿ ಗೌಡ ಹಾಗೂ ಜಾನ್ವಿ ಬೇಕಂತೆ ಟಾರ್ಗೆಟ್ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಅಭಿಮಾನಿಗಳು ಮಾಡುತ್ತಿದ್ದಾರೆ.
ಪ್ರತಿಬಾರಿ ರಕ್ಷಿತಾ ಮೇಲೆ ಜಾನ್ವಿ ಹಾಗೂ ಅಶ್ವಿನಿ ಗೌಡ ಎರಗಿ ಬಂದಾಗಲೂ ಅದಕ್ಕೆ ಶೆಟ್ರು ಖಟಕ್ ಆಗಿ ತಿರುಗೇಟು ಕೊಟ್ಟಿದ್ದಾರೆ. ಆದರೆ, ಇದು ನಿಲ್ಲುವಂತೆ ಕಾಣುತ್ತಿಲ್ಲ.. ಹೀಗಾಗಿ ಇಂದು ವಾರದ ಈ ಸೀಸನ್ನ ಮೊದಲ ಫಿನಾಲೆ ನಡೆಯಲಿದೆ. ಇದಕ್ಕೂ ಮುನ್ನ ಕಿಚ್ಚ ಸುದೀಪ್ ಅವರು ಈ ವಾರದ ವಿಚಾರದ ಕುರಿತು ಎಲ್ಲ ಸ್ಪರ್ಧಿಗಳ ಜೊತೆ ಮಾತನಾಡಲಿದ್ದಾರೆ. ಈ ಸಂದರ್ಭ ಅಶ್ವಿನಿ ಗೌಡ ಹಾಗೂ ಜಾನ್ವಿಗೆ ಕ್ಲಾಸ್ ತೆಗೆದುಕೊಳ್ಳಬೇಕು ಎಂಬುದು ಅಭಿಮಾನಿಗಳ ಒತ್ತಾಯ.
ಅಶ್ವಿನಿ ಹಾಗೂ ಜಾನ್ವಿ ಅವರು ಬಿಗ್ ಬಾಸ್ ಮನೆಯಲ್ಲಿ ಗೆಜ್ಜೆ ಶಬ್ದ ಮಾಡಿ, ಅದನ್ನು ರಕ್ಷಿತಾ ಮೇಲೆ ಹಾಕಿದ್ದರು. ರಕ್ಷಿತಾ ನಾಗವಲ್ಲಿ ರೀತಿ ಆಡ್ತಾರೆ ಎಂದೆಲ್ಲ ಸುಳ್ಳು ಆರೋಪ ಮಾಡಿದ್ದರು. ಇದೇ ವಿಚಾರ ಇಟ್ಟುಕೊಂಡ ವಾರ ಪೂರ್ತಿ ಎಳೆದಾಡಿದ್ದರು. ರಕ್ಷಿತಾಗೆ ಪದೇ ಪದೇ ಕಿರುಕುಳ ಕೊಡುವ ಪ್ರಯತ್ನ ಮಾಡಿದ್ದರು. ಈ ವಿಚಾರದಲ್ಲಿ ಸುದೀಪ್ ಅವರು ರಕ್ಷಿತಾ ಪರ ವಹಿಸಿಕೊಂಡು ಮಾತನಾಡಲೇಬೇಕಿದೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.
BBK 12: ‘ಈವಮ್ಮನಿಗೆ’: ಅಶ್ವಿನಿ-ಜಾನ್ವಿ ವಿರುದ್ಧ ಸಿಡಿದೆದ್ದ ಬಿಗ್ ಬಾಸ್ ಪ್ರಿಯರು
ಅಶ್ವಿನಿ ಹಾಗೂ ಜಾನ್ವಿ ಅವರು ಒಟ್ಟೊಟ್ಟಿಗೆ ಇದ್ದಾರೆ. ಸದಾ ಕೆಟ್ಟ ವಿಚಾರಗಳನ್ನೇ ಇವರು ಪ್ರಮೋಟ್ ಮಾಡುತ್ತಿದ್ದಾರೆ. ನಿನ್ನೆ ನಡೆದ ಜಗಳದಲ್ಲೂ ಅಶ್ವಿನಿ ಗೌಡ ಅವರು ರಕ್ಷಿತಾಗೆ, ಈಡಿಯೆಟ್, ಮುಚ್ಕೊಂಡು ಮಲಗು.. ಎಂಬ ಪದವನ್ನೆಲ್ಲ ಬಳಸಿದ್ದರು. ಇದರಿಂದ ನೋವು ಅನುಭವಿಸಿದ ರಕ್ಷಿತಾ ನಿನ್ನೆ ರಾತ್ರಿ ಹೊರಗಡೆ ಒಬ್ಬರೇ ಮಲಗಿಕೊಂಡಿದ್ದರು. ರಕ್ಷಿತಾ ಶೆಟ್ಟಿ ಏಕಾಂಗಿಯಾಗಿ ಮಲಗಿದ್ದು ನೋಡಿ ಗಿಲ್ಲಿ ನಟ, ಚಂದ್ರಪ್ರಭ, ಮಲ್ಲಮ್ಮ ಅವರು ಒಬ್ಬಳೇ ಮಲಗಬಾರದು, ನಮ್ಮ ಜೊತೆ ಬಾ ಎಂದು ಹೇಳಿದರು. ನನಗೆ ಪ್ರೈವೆಸಿ ಬೇಕು, ನನಗೆ ಒಬ್ಬಳೇ ಮಲಗಿ ರೂಢಿ ಇದೆ ಎಂದು ಬೇಸರದಲ್ಲೇ ನುಡಿದರು.
ಒಟ್ಟಾರೆ, ಈ ವಾರ ರಕ್ಷಿತಾಗೆ ಅಶ್ವಿನಿ ಗೌಡ ಹಾಗೂ ಜಾನ್ವಿ ಕಡೆಯಿಂದ ತುಂಬಾ ನೋವಾಗಿದೆ. ಹಾಗಂತ ಅವರು ಇದರಿಂದ ಕುಗ್ಗಿಲ್ಲ.. ಇಬ್ಬರಿಗೂ ತಮ್ಮ ಮಾತಿನ ಮೂಲಕವೇ ತಿರುಗೇಟು ಕೊಟ್ಟಿದ್ದಾರೆ. ಜನರಿಗೆ ಅವರ ಈ ಗುಣವೇ ಇಷ್ಟವಾಗಿದೆ. ಆದರೆಎ, ಕಿಚ್ಚ ಸುದೀಪ್ ಅವರು ವೀಕೆಂಡ್ನಲ್ಲಿ ಈ ಕುರಿತು ಮಾತನಾಡಲೇ ಬೇಕು ಎಂಬುದು ವೀಕ್ಷಕರ ಅಭಿಪ್ರಾಯ.