ಬಿಗ್ ಬಾಸ್ ಕನ್ನಡ ಸೀಸನ್ 12 (bigg boss kannada 12) ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಹಿಂದಿನ ಸೀಸನ್ಗಳಂತೆ ಈ ಬಾರಿ ಇಲ್ಲ. ಪ್ರತಿ ದಿನ ಒಂದಲ್ಲ ಒಂದು ಟ್ವಿಸ್ಟ್ ಆ್ಯಂಡ್ ಟರ್ನ್ ಮೂಲಕ ಸ್ಪರ್ಧಿಗಳಿಗೆ ಹಾಗೂ ವೀಕ್ಷಕರಿಗೆ ಬಿಗ್ ಬಾಸ್ ಶಾಕ್ ನೀಡುತ್ತಿದ್ದಾರೆ. ಸದ್ಯ ಬಿಗ್ ಬಾಸ್ನ ಹೊಸ ನಿಯಮದ ಪ್ರಕಾರ ಮೂರನೇ ವಾರದಲ್ಲಿ ಒಂದು ಫಿನಾಲೆ ನಡೆಯಲಿದೆ. 18 ಸ್ಪರ್ಧಿಗಳ ಪೈಕಿ ಮೊದಲ ವಾರದಲ್ಲಿ ಯಾರೆಲ್ಲ ಫಿನಾಲೆಗೆ ಹೋಗಿದ್ದಾರೆ ಎಂಬುದನ್ನು ಬಿಗ್ ಬಾಸ್ ಅನೌನ್ಸ್ ಮಾಡಿದ್ದಾರೆ.
ಮೊದಲನೆಯದಾಗಿ ಮೊದಲ ಮೂರು ವಾರ ಅಂದರೆ ಫಸ್ಟ್ ಫೈನಲ್ ನಡೆಯುವವರೆಗೆ ದೊಡ್ಮನೆಯಲ್ಲಿ ಕ್ಯಾಪ್ಟರ್ ಇರುವುದಿಲ್ಲ. ಎಲಿಮಿನೇಷನ್ ಭಯದಿಂದ ಮುಕ್ತರಾಗಿ ಸ್ಪರ್ಧಿಗಳು ಮೊದಲ ಫೈನಲ್ ತಲುಪಬೇಕು ಎಂದರೆ ಸರಣಿ ಟಾಸ್ಕ್ ಗೆಲ್ಲಬೇಕು. ಜಂಟಿ ಮತ್ತು ಒಂಡಿ ತಂಡಗಳ ಮಧ್ಯೆ ಪ್ರತೀ ವಾರ ಟಾಸ್ಕ್ ನಡೆಯುತ್ತಿದೆ. ಈ ಟಾಸ್ಕ್ನಲ್ಲಿ ಗೆದ್ದ ತಂಡ ತಮ್ಮೊಳಗೆ ಚರ್ಚಿಸಿ ಒಬ್ಬರನ್ನು ಆಯ್ಕೆ ಮಾಡಿ ಫೈನಲಿಸ್ಟ್ ಎಂಬ ಘೋಷಿಸಬೇಕು. ಆ ಫೈನಲಿಸ್ಟ್ಗಳ ಪೈಕಿ ಒಬ್ಬರು ಮೂರನೇ ವಾರ ನಡೆಯಲಿರುವ ಮೊದಲ ಫಿನಾಲೆಯನ್ನು ಗೆಲ್ಲುತ್ತಾರೆ.
ಮೊದಲ ವಾರದ ವಿಚಾರ ಮಾತನಾಡುವುದಾದರೆ, ಮೊದಲಿಗೆ ನಡೆದ ಒಂಟಿ ಹಾಗೂ ಜಂಟಿ ನಡುವಣ ಸಿಕ್ಕಿನ ಕಾಳಗದಲ್ಲಿ ಒಂಟಿ ತಂಡ ಗೆದ್ದುಕೊಂಡಿತು. ಹೀಗಾಗಿ ಒಂಟಿ ತಂಡದಿಂದ ಓರ್ವ ಫೈನಲಿಸ್ಟ್ ಆಗಬೇಕಿತ್ತು. ಅದನ್ನ ಒಂಟಿ ಸದಸ್ಯರು ಚರ್ಚೆ ಮಾಡಿ ಬಿಗ್ ಬಾಸ್ಗೆ ಸೂಚಿಸಬೇಕು. ಧ್ರುವಂತ್, ಕಾಕ್ರೋಚ್ ಸುಧಿ, ಧನುಷ್ ಗೌಡ, ಮಲ್ಲಮ್ಮ, ಅಶ್ವಿನಿ ಗೌಡ, ಜಾಹ್ನವಿ ಅವರು ಚರ್ಚೆ ಮಾಡಿ ಓರ್ವ ಫೈನಲಿಸ್ಟ್ ಹೆಸರನ್ನು ಹೇಳಬೇಕಿತ್ತು. ಅದರಂತೆ ಒಂಟಿಗಳು ಚರ್ಚೆ ನಡೆಸಿ ಮಲ್ಲಮ್ಮ ಅವರನ್ನು ಫೈನಲಿಸ್ಟ್ ಆಗಿ ಮಾಡಿದರು.
BBK 12: ಬಿಗ್ ಬಾಸ್ ಮನೆಯಲ್ಲಿ ಡಾಗ್ ಸತೀಶ್ಗೆ ಎಷ್ಟು ಸಂಭಾವನೆ ಸಿಗುತ್ತಿದೆ ಗೊತ್ತೇ?
ಬಳಿಕ ಎರಡನೇ ಟಾಸ್ಕ್ನಲ್ಲಿ ಕೂಡ ಒಂಟಿ ತಂಡ ಗೆದ್ದಿದ್ದು, ಕಾಕ್ರೋಚ್ ಸುಧಿ ಫಿನಾಲೆ ಕಂಟೆಂಡರ್ ಆದರು. ಅಂತಿಮವಾಗಿ ಕೊನೆಯ ಟಾಸ್ಕ್ನಲ್ಲಿ ಕೂಡ ಒಂಟಿ ತಂಡ ಗೆದ್ದ ಪರಿಣಾಮ ಧನುಷ್ ಫಿನಾಲೆ ಕಂಟೆಂಡರ್ ಆಗಿ ಆಯ್ಕೆ ಆದರು. ಆದರೆ, ಬಿಗ್ ಬಾಸ್ ಇಲ್ಲೊಂದು ಟ್ವಿಸ್ಟ್ ಕೊಟ್ಟಿದ್ದರು. ಜಂಟಿ ತಂಡದ ಸದಸ್ಯರಾದ ಡಾಗ್ ಸತೀಶ್ ಹಾಗೂ ಚಂದ್ರಪ್ರಭಾ ಅವರನ್ನು ಬಿಗ್ ಬಾಸ್ ಕನ್ಫೆಷನ್ ರೂಮ್ಗೆ ಕರೆದು ಸೀಕ್ರೆಟ್ ಟಾಸ್ಕ್ ಕೊಟ್ಟಿದ್ದರು. ಇದರಲ್ಲಿ ಅವರು ಅವರ ತಂಡವನ್ನೇ ಸೋಲಿಸಬೇಕಿತ್ತು. ಅದರಲ್ಲಿ ಇವರಿಬ್ಬರು ಯಶಸ್ವಿಯಾದ ಪರಿಣಾಮ ಇದರಲ್ಲಿ ಗೆದ್ದು ಈ ಜೋಡಿ ಕೂಡ ಫಿನಾಲೆ ಕಂಟೆಂಡರ್ ಆಗಿದೆ.