ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಅಶ್ವಿನಿ ಗೌಡಾಗೆ ಶಾಕ್ ಮೇಲೆ ಶಾಕ್: ರಘು ಆಯ್ತು ಈಗ ರಿಷಾ ಗೌಡ ಸರದಿ

Bigg Boss Kannada 12: ದೊಡ್ಮನೆಗೆ ವೈಲ್ಡ್-ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಮನೆಯೊಳಗೆ ಕಾಲಿಟ್ಟ ತಕ್ಷಣವೇ ಇತರೆ ಸ್ಪರ್ಧಿಗಳ ಕುರಿತು ಅಭಿಪ್ರಾಯ ಹೇಳಲು ಬಿಗ್ ಬಾಸ್ ತಿಳಿಸಿದ್ದು, ಇದರಲ್ಲಿ ಇಬ್ಬರು ವೈಲ್ಡ್-ಕಾರ್ಡ್ ಅಶ್ವಿನಿಗೆ ಗೌಡಾಗೆ ಸರಿಯಾಗಿ ಚಾಟಿ ಬೀಸಿದ್ದಾರೆ.

Ashwini Gowda vs Risha Gowda

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಮೊದಲ ಎರಡು ವಾರ ರಾಜಮಾತೆ ಆಗಿ ಅಬ್ಬರಿಸಿದ್ದ ಅಶ್ವಿನಿ ಗೌಡ ಮೂರನೇ ವಾರ ಮಹಾ ಎಡವಟ್ಟು ಮಾಡಿಕೊಂಡರು. ಇವರ ಈ ಒಂದು ವರ್ತನೆ ಇಡೀ ಕರ್ನಾಟಕ ಜನತೆಯೆ ಕೆಂಗಣ್ಣಿಗೆ ಗುರಿಯಾಯಿತು. ಜಾನ್ವಿ ಜೊತೆ ಸೇರಿಕೊಂಡು ಅಶ್ವಿನಿ ಅವರು ದೊಡ್ಮನೆಯಲ್ಲಿ ಗೆಜ್ಜೆ ಸದ್ದು ಮಾಡಿ ದೆವ್ವದ ನಾಟಕ ಆಡಿದರು. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ.. ಇದನ್ನ ಮಾಡಿದ್ದು ರಕ್ಷಿತಾ ಶೆಟ್ಟಿ.. ಅವಳಿ ರಾ..ರಾ.. ಸಾಂಗ್ ಹೇಳಿಕೊಂಡು ಬಾತ್ ರೂಮ್​ನಲ್ಲಿ ಡ್ಯಾನ್ಸ್ ಮಾಡ್ತಾ ಇದ್ದಳು ಎಂದೆಲ್ಲ ಹೇಳಿ ದೊಡ್ಡ ಕತೆ ಕಟ್ಟಿದರು.

ಇದರಿಂದ ರಕ್ಷಿತಾಗೆ ತುಂಬಾ ನೋವಾಯಿತು.. ಈ ನೋವನ್ನು ಕರ್ನಾಟಕ ಜನತೆ ಕೂಡ ಅನುಭವಿಸಿತು. ನಿರೀಕ್ಷೆಯಂತೆ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಹಾಗೂ ಜಾನ್ವಿಯ ಮೈಚಳಿ ಬಿಡಿಸಿದರು. ರಕ್ಷಿತಾ ಬಳಿ ಕ್ಷಮೆ ಕೇಳುವಂತೆ ಮಾಡಿದರು. ಆದರೆ, ಇವರಿಬ್ಬರ ಉದ್ಗಟತನ ಇನ್ನೂ ನಿಂತಿಲ್ಲ. ಇದರ ಮಧ್ಯೆ ದೊಡ್ಮನೆಗೆ ವೈಲ್ಡ್-ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಮನೆಯೊಳಗೆ ಕಾಲಿಟ್ಟ ತಕ್ಷಣವೇ ಇತರೆ ಸ್ಪರ್ಧಿಗಳ ಕುರಿತು ಅಭಿಪ್ರಾಯ ಹೇಳಲು ಬಿಗ್ ಬಾಸ್ ತಿಳಿಸಿದ್ದು, ಇದರಲ್ಲಿ ಇಬ್ಬರು ವೈಲ್ಡ್-ಕಾರ್ಡ್ ಅಶ್ವಿನಿಗೆ ಗೌಡಾಗೆ ಸರಿಯಾಗಿ ಚಾಟಿ ಬೀಸಿದ್ದಾರೆ.

ಎರಡನೇ ವೈಲ್ಡ್-ಕಾರ್ಡ್ ಸ್ಪರ್ಧಿಯಾಗಿ ಮನೆಯೊಳಗೆ ಕಾಲಿಟ್ಟ ರಿಷಾ ಗೌಡ, ಅಶ್ವಿನಿ ಗೌಡ ಹೇಳೋದು ಒಂದು ಮಾಡೋದು ಇನ್ನೊಂದು.. ಆನೆ ನಡೆದಿದ್ದ ದಾರಿ ಯಾವಾಗ್ಲೂ ಕರೆಕ್ಟ್ ಆಗಿ ಇರಲ್ಲ ಅಂತ ತೋರಿಸ್ತೀನಿ ಬಿಗ್ ಬಾಸ್ ಎಂದು ಹೇಳಿದ್ದಾರೆ. ಇನ್ನು ಧ್ರುವಂತ್​ ಸಮಯ ಮುಗಿದಿದೆ.. ಕಪಟ ಮುಖವಾಡ ಹಾಕಿಕೊಂಡು ಬದುಕುತ್ತಿರುವುದು ಸ್ಪಂದನಾ.. ನನ್ನ ಟಾರ್ಗೆಟ್ ಕಾಕ್ರೋಚ್, ತುಂಬಾನೆ ಟಫ್ ಕಂಟೆಸ್ಟೆಂಟ್ ಅಂತ ನಾನು ಅಂದುಕೊಂಡಿದ್ದೆ.. ಆದ್ರೆ ಇವರು ಉತ್ತರ ಕುಮಾರ ಎಂದು ಹೇಳಿದ್ದಾರೆ.



ಇನ್ನೂ ಇವರಿಗಿಂತ ಮುಂಚೆ ಮೊದಲ ವೈಲ್ಡ್-ಕಾರ್ಡ್ ಸ್ಪರ್ಧಿಯಾಗಿ ಮನೆಯೊಳಗೆ ಬಂದ ಮ್ಯುಟೆಂಟ್ ರಘು ಕೂಡ ಅಶ್ವಿನಿ-ಜಾಣ್ವಿ ವಿರುದ್ಧ ಜಗಳ ಆಡಿದ್ದಾರೆ. ಅಶ್ವಿನಿ ಗೌಡ ಹೆಸರನ್ನು ತೆಗೆದುಕೊಂಡ ರಘು, ಔಟ್ ಸೈಡ್​ನಲ್ಲಿ ಹೆಣ್ಣಿಗೆ ಫೈಟ್ ಮಾಡ್ತಾರೆ ಅದೇ ಹೆಣ್ಣಿಗೆ ಅವರ ಪೊಸಿಷನ್ ತೋರಿಸಿಕೊಡೋಕೆ ಟ್ರೈ ಮಾಡ್ತಾರೆ ಎಂದಿದ್ದಾರೆ. ರಘು ಮಾತಿನಿಂದ ರೊಚ್ಚಿಗೆದ್ದ ಅಶ್ವಿನಿ, ನೀವು ಹೇಳಿದ್ದನ್ನ ಕೇಳೋಕೆ ನಾವೇನು ಪಪ್ಪೆಟ್​ಗಳಲ್ಲ ನಾವಿಲ್ಲಿ ಎಂದಿದ್ದಾರೆ. ಇದರಿಂದ ಕೋಪಗೊಂಡ ರಘು, ಏನು ಪಪ್ಪೆಟ್ ನೀನು ಪಪ್ಪೆಟ್ ಮಾಡಿಕೊಂಡಿರುವುದು ಇಲ್ಲಿ ಎಂದು ಹೇಳಿದ್ದಾರೆ. ತನ್ನನ್ನು ‘ನೀನು’ ಎಂದು ಏಕವಚನದಲ್ಲಿ ಮಾತನಾಡಿಸಿದ್ದು ಅಶ್ವಿನಿ ಅವರಿಗೆ ಮತ್ತಷ್ಟು ಸಿಟ್ಟು ತರಿಸಿದೆ.

ಏಕವಚನದಲ್ಲಿ ಮಾತನಾಡಬೇಡಿ ಎಂದಿ ಅಶ್ವಿನಿ ಅವರು ಕೈ ತೋರಿಸಿ ರಘುಗೆ ಹೇಳಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟ ರಘು, ನಾನು ಮಾತಾಡ್ತೀನಿ.. ಕೈಯೆಲ್ಲಿ ತೋರಿಸ್ಕೋ ಬೇಡ ನನ್ನ ಹತ್ರ ಎಂದಿದ್ದಾರೆ. ಈ ಸಂದರ್ಭ ಮಧ್ಯೆ ಬಂದ ಜಾನ್ವಿ, ನಮ್ಮ ಹತ್ರ ಬಂದುಬಿಟ್ಟು ಏಕವಚನದಲ್ಲಿ ಎಲ್ಲ ಮಾತನಾಡಿದ್ರೆ ಹೋಗ್ತಾ ಇರಬಹುದು ಎಂದಿದ್ದಾರೆ. ಏಯ್.. ಏಯ್.. ಎಂದು ಅಶ್ವಿನಿ-ರಘು ನಡುವೆ ದೊಡ್ಡ ಜಗಳವೇ ನಡೆದು ಹೋಗಿದೆ.

BBK 12: ಬಿಗ್ ಬಾಸ್​ಗೆ ಬಂದ ಮೈಸೂರಿನ ಹುಡುಗ: ಸೂರಜ್ ಸಿಂಗ್ ಯಾರು?, ಹಿನ್ನೆಲೆ ಏನು?