ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada season 12) ಮೂರು ವಾರ ಕಳಿದ ನಂತರ ಕಾವೇರಿದೆ. ಮೂವರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಬಳಿಕ ಇಡೀ ಮನೆಯ ಚಿತ್ರಣವೇ ಬದಲಾಗಿದೆ. ಮೊದಲ ಮೂರು ವಾರ ದೊಡ್ಮನೆಯೊಳಗೆ ಹೆಣ್ಣು ಮಕ್ಕಳೇ ಪಾರುಪತ್ಯ ಮೆರೆದಿದ್ದರು. ಮುಖ್ಯವಾಗಿ ಅಶ್ವಿನಿ ಗೌಡ ಹಾಗೂ ಜಾನ್ವಿ ಬಿಗ್ ಬಾಸ್ನಲ್ಲಿ ತಮ್ಮದೇ ಅಧಿಕಾರ ಎಂಬಂತೆ ನಡೆದುಕೊಳ್ಳುತ್ತಿದ್ದರು. ಇದೀಗ ಇಷ್ಟುದಿನ ಆರ್ಭಟಿಸುತ್ತಿದ್ದ ಸ್ಪರ್ಧಿಗಳನ್ನು ಮಟ್ಟಹಾಕಲು ವೈಲ್ಡ್-ಕಾರ್ಡ್ ಸ್ಪರ್ಧಿಗಳು ಕಾಲಿಟ್ಟಿದ್ದಾರೆ.
ಮೊದಲ ಸ್ಪರ್ಧಿಯಾಗಿ ಬಂದ ಮ್ಯೂಟೆಂಟ್ ರಘು ಹೋದ ಕೂಡಲೇ ಮನೆಯವರ ಚಳಿ ಬಿಡಿಸಿದ್ದಾರೆ. ಬೆಳ್ಳಂಬೆಳಗ್ಗೆ ಅಶ್ವಿನಿ ಹಾಗೂ ಜಾನ್ವಿ ಜೊತೆ ಜಗಳಕ್ಕಿಳಿದಿದ್ದಾರೆ. ಇವರ ಜೊತೆಗೆ ರಿಷಾ ಗೌಡ ಹಾಗೂ ಸೂರಜ್ ಸಿಂಗ್ ಕೂಡ ದೊಡ್ಮನೆಯೊಳಗೆ ವೈಲ್ಡ್-ಕಾರ್ಡ್ ಸ್ಪರ್ಧಿಗಳಾಗಿ ಪ್ರವೇಶಿಸಿದ್ದಾರೆ. ರಿಷಾ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ. ಇವರು ಕ್ರೀಡಾಪಟು ಕೂಡ ಹೌಡು. ದೊಡ್ಡ ಕ್ರೀಡಾಪಟು ಆಗಬೇಕೆಂಬ ಕನಸು ಅವರಿಗೆ ಇತ್ತಂತೆ. ಆದರೆ ವಿಧಿ ಅವರನ್ನು ಮನೊರಂಜನಾ ಲೋಕಕ್ಕೆ ಕರೆದುಕೊಂಡು ಬಂದಿದೆ.
ಇನ್ನು ಸೂರಜ್ ಸಿಂಗ್ ಮೈಸೂರಿನ ಹುಡುಗ. ಐಟಿ ಉದ್ಯೋಗಿ ಆಗಿರುವ ಸೂರಜ್, ಫಿಟ್‌ನೆಸ್ ಫ್ರೀಕ್, ಮಾಡೆಲ್ ಕೂಡ ಆಗಿದ್ದಾರೆ. ಇವರು ಉನ್ನತ ಶಿಕ್ಷಣಕ್ಕಾಗಿ ಕೆನಡಾಗೆ ಹೋಗಿ ಬಂದಿದ್ದರು. ನಾನು ವಿದೇಶದಿಂದ ವಾಪಸ್ ಬರಲು ಕಾರಣ, ನನ್ನ ಅಕ್ಕನಿಗೆ ಮದುವೆ ಆಯ್ತು, ನನ್ನ ತಾಯಿ ಒಬ್ರೇ ಇರ್ತಾರೆ. ಹಾಗಾಗಿ ಬಂದೆ. ಈ ಸಮಯದಲ್ಲಿ ನಾನು ಅವರ ಜೊತೆಗೆ ಇರಬೇಕು. ನನ್ನನ್ನು ತುಂಬಾ ಕಷ್ಟಪಟ್ಟು ಸಾಕಿದ್ದಾರೆ ನಮ್ಮಮ್ಮ ಎಂದು ಹೇಳಿದ್ದಾರೆ. ಇವರು ಸೋಶಿಯಲ್ ಮೀಡಿಯಾದಲ್ಲೂ ಫೇಮಸ್ ಆಗಿದ್ದಾರೆ.
ಇವರು ಕೆನಾಡದಲ್ಲಿ ಶಿಕ್ಷಣಕ್ಕೆಂದು ಹೋದಾಗ ಅಲ್ಲಿ ಶೆಫ್ ಆಗಿ ಕೂಡ ಕೆಲಸ ಮಾಡಿದ್ದರಂತೆ. ನಾನು ನೋಡೋಕೆ ಸಾಫ್ಟ್ ಅನ್ನಿಸಬಹುದು. ಆದರೆ ನಾನು ಮಿರರ್ ಥರ. ಚೆನ್ನಾಗಿ ಇರುವವರ ಜೊತೆ ಚೆನ್ನಾಗಿ ಇರ್ತಿನಿ ಎಂದು ಹೇಳಿದ್ದಾರೆ. ಮಾಡೆಲ್ ಕೂಡ ಆಗಿರುವ ಇವರು ಇನ್ನೂ ಸಿಂಗಲ್. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸ್ಟೈಲಿಶ್ ಆಗಾಗ ಅನೇಕ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಮಲ್ಲಮ್ಮ, ರಕ್ಷಿತಾ ಶೆಟ್ಟಿ ಹೊರತುಪಡಿಸಿ ಈಗ ಬಿಗ್ಬಾಸ್ ಮನೆಯಲ್ಲಿ ಇರುವವರೆಲ್ಲರೂ ಟಿವಿ ಅಥವಾ ಸಿನಿಮಾ ರಂಗದವರೇ ಆಗಿದ್ದಾರೆ. ಇಂದು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಆದ ಮೂವರಲ್ಲಿ ಇಬ್ಬರು ಸಿನಿಮಾ ಕ್ಷೇತ್ರಕ್ಕೆ ಸೇರಿದವರೇ ಆಗಿದ್ದಾರೆ. ಸಿನಿಮಾ-ಟಿವಿ ರಂಗದ ಹೊರತಾಗಿರುವ ಅಲ್ಪಸಂಖ್ಯಾತರ ಸಾಲಿಗೆ ಸೂರಜ್ ಸಹ ಸೇರಿಕೊಂಡಿದ್ದಾರೆ. ಇವರು ಹೇಗೆ ಆಡುತ್ತಾರೆ?, ಯಾವರೀತಿ ಮನೆಯಲ್ಲಿ ಇರುತ್ತಾರೆ ಎಂಬುದು ನೋಡಬೇಕಿದೆ.
BBK 12: ಮ್ಯೂಟಂಟ್ ರಘು ಜೊತೆ ಕಿತ್ತಾಡಲು ಬಂದ ಅಶ್ವಿನಿ-ಜಾನ್ವಿ: ಮೈಚಳಿ ಬಿಡಿಸಿದ ವೈಲ್ಡ್-ಕಾರ್ಡ್ ಸ್ಪರ್ಧಿ