Bhagya Lakshmi Serial: ಭಾಗ್ಯ ಲಕ್ಷ್ಮೀ ಧಾರಾವಾಹಿಗೆ ಹೊಸ ಪಾತ್ರ ಎಂಟ್ರಿ: ಹೀರೋ ಅಥವಾ ವಿಲನ್..?
ವೀಕ್ಷಕರಿಗೆ ಸಾಕಷ್ಟು ಕುತೂಹಲ ಕೆರಳಿಸಿರುವ ಈ ಪಾತ್ರದಾರಿ ವಿಲನ್ ಅಥವಾ ಹೀರೋನ ಎಂಬುದು ನೋಡಬೇಕಿದೆ. ಅಂದಗಾಹೆ ಈ ಹೊಸ ಪಾತ್ರದಾರಿ ಬೇರೆ ಯಾರೂ ಅಲ್ಲ ಅಗ್ನಿಸಾಕ್ಷಿ, ಶ್ರೀಗೌರಿ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿರುವ, ಕನ್ನಡ ಸಿನಿಮಾಗಳಲ್ಲೂ ಮಿಂಚಿರುವ ನಟ ರಾಜೇಶ್ ಧ್ರುವ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯ ಲಕ್ಷ್ಮೀ’ (Bhagya Lakshmi) ಧಾರಾವಾಹಿ ಹೊಸ ಹೊಸ ಟ್ವಿಸ್ಟ್ ಮೂಲಕ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಅದರಲ್ಲೂ ಭಾಗ್ಯ ತನಗೆ ಬಂದ ಎಲ್ಲ ಕಷ್ಟಗಳನ್ನು ಎದುರಿಸಿ ಅದರ ವಿರುದ್ಧ ಹೋರಾಡುವ ಸೀನ್ಗೆ ಜನರಿಂದ ಮನ್ನಣೆ ಸಿಕ್ಕಿದೆ. ತನ್ನ ಹೊಟ್ಟೆ ತುಂಬಿಸುತ್ತಿರುವ ಕೈ ತುತ್ತು ಮೇಲೆಯೇ ಕಲ್ಲು ಹಾಕಲು ಬಂದ ತಾಂಡವ್ ಹಾಗೂ ಶ್ರೇಷ್ಠಾಳ ಮೈಚಳಿ ಬಿಡಿಸಿ ಭಾಗ್ಯ ಎಚ್ಚರಿಕೆ ನೀಡಿದ್ದಾಳೆ. ಇದರ ಮಧ್ಯೆ ಭಾಗ್ಯ ಲಕ್ಷ್ಮೀ ಧಾರಾವಾಹಿಗೆ ಹೊಸ ಪಾತ್ರದಾರಿಯ ಎಂಟ್ರಿ ಆಗಿದೆ. ವೀಕ್ಷಕರಿಗೆ ಸಾಕಷ್ಟು ಕುತೂಹಲ ಕೆರಳಿಸಿರುವ ಈ ಪಾತ್ರದಾರಿ ವಿಲನ್ ಅಥವಾ ಹೀರೋನ ಎಂಬುದು ನೋಡಬೇಕಿದೆ. ಅಂದಗಾಹೆ ಈ ಹೊಸ ಪಾತ್ರದಾರಿ ಬೇರೆ ಯಾರೂ ಅಲ್ಲ ಅಗ್ನಿಸಾಕ್ಷಿ, ಶ್ರೀಗೌರಿ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿರುವ, ಕನ್ನಡ ಸಿನಿಮಾಗಳಲ್ಲೂ ಮಿಂಚಿರುವ ನಟ ರಾಜೇಶ್ ಧ್ರುವ.
ಈ ಹೊಸ ಪಾತ್ರದಾರಿ ಹುಟ್ಟುಕೊಂಡಿರುವುದು ಭಾಗ್ಯಾಳ ತಂಗಿ ಪೂಜಾ ಇಂಟರ್‌ವ್ಯೂ ಹೋಗಿರುವ ಆಫೀಸ್ನಲ್ಲಿ. ಜಿಮ್‌ನಲ್ಲಿ ರಿಸೆಪ್ಟನಿಸ್ಟ್ ಕೆಲಸ ಮಾಡುವ ಯೋಚನೆ ಪೂಜಾದ್ದಾಗಿರುತ್ತದೆ. ಹೀಗಾಗಿ ಕೆಲಸ ಹುಡಕಲು ಮುಂದಾಗಿದ್ದಾಳೆ. ಕೆಲಸವಿಲ್ಲದೆ ಓತ್ಲ ಹೊಡೆದುಕೊಂಡಿದ್ದ ಪೂಜಾ ಅಕ್ಕನ ಸಂಕಷ್ಟಗಳಿಗೆ ಸಹಾಯವಾಗಬೇಕೆಂದು ಆಸೆ ಇದ್ದರೂ ಸಹ ಯಾವುದೇ ಕೆಲಸ ಸಿಕ್ಕಿರಲಿಲ್ಲ. ಆದರೆ ಈಗ ಯಾವುದೇ ಇಂಟರ್ ವ್ಯೂ ಇಲ್ಲದೆ ಕೆಲಸ ಸಿಕ್ಕಿದೆ.
ಸಂದರ್ಶನಕ್ಕೆಂದು ಅಲ್ಲಿ ಅವಳಂತೆಯೇ ನಾಲ್ಕೈದು ಮಂದಿ ಬಂದಿದ್ದಾರೆ. ಅವರೆಲ್ಲರ ಬಳಿ ರೆಸ್ಯೂಮ್ ತೆಗೆದುಕೊಂಡಿದ್ದಾರೆ. ನಂತರ ಹತ್ತು ನಿಮಿಷದಲ್ಲಿ ವಾಪಸ್ ಬಂದು, ಇವತ್ತು ಇಂಟರ್‌ವ್ಯೂ ಇಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಬಂದಿದ್ದವರು ಎಲ್ಲರೂ ಬೈದುಕೊಂಡು ವಾಪಸ್ ಹೋಗಿದ್ದಾರೆ. ಪೂಜಾ ಕೂಡ ವಾಪಸ್ ಹೊರಡಲು ಅನುವಾಗಿದ್ದಾಳೆ. ಅಷ್ಟರಲ್ಲಿ ಅಲ್ಲಿದ್ದವರು ಅವಳನ್ನ ಕರೆದು ನಿಲ್ಲಿಸಿ, ಆಫರ್ ಲೆಟರ್ ಕೊಟ್ಟಿದ್ದಾರೆ, ಇವತ್ತೇ ಕೆಲಸ ಶುರುಮಾಡಿ ಎಂದು ಹೇಳಿದ್ದಾರೆ.
ಅಂದ ಹಾಗೆ ಪೂಜಾಳಿಗೆ ಇಲ್ಲಿ ಕೆಲಸ ಕೊಟ್ಟಿರುವುದು ಅವಳ ಕ್ಲಾಸ್ಮೇಟ್ ಕಿಶನ್. ಆದರೆ ಈ ಕಿಶನ್ ಇಲ್ಲಿಯವರೆಗೆ ಪರಿಚಯವಾಗಿರಲಿಲ್ಲ. ಈಗ ಭಾಗ್ಯಲಕ್ಷ್ಮಿ ತಂಡ ತಮ್ಮ ಹೊಸ ಸದಸ್ಯ ಕಿಶನ್‌ನ ಪರಿಚಯ ಮಾಡಿಸಿದೆ. ಈ ಮೂಲಕ ಕಿಶನ್ ಎನ್ನುವ ಹೊಸದೊಂದು ಪಾತ್ರದ ಎಂಟ್ರಿ ಆಗಿದೆ. ಈ ಪಾತ್ರಕ್ಕೆ ನಟ ರಾಜೇಶ್ ಧ್ರುವ ಬಣ್ಣ ಹಚ್ಚಿದ್ದಾರೆ. ಪೂಜಾಗೆ ಬಾಸ್ ಆಗಿ, ಜಿಮ್ ಓನರ್ ಕಿಶನ್ ಆಗಿ ರಾಜೇಶ್ ಧ್ರುವ ಕಾಣಿಸಿಕೊಂಡಿದ್ದಾರೆ. ಪೂಜಾ ಹಾಗೂ ಕಿಶನ್ ಓದಿದ್ದು ಒಂದೇ ಕಾಲೇಜ್‌ನಲ್ಲಿ. ವರ್ಷಗಳ ಹಿಂದೆ ಕಂಪ್ಯೂಟರ್ ಸೈನ್ಸ್ ಎಕ್ಸಾಂ ಬರೆಯಲು ಕಿಶನ್ ತಡಕಾಡುತ್ತಿದ್ದಾಗ, ಆತನಿಗೆ ಚಿಟ್ಸ್ ಕೊಟ್ಟು ಕಾಪಿ ಮಾಡುವಂತೆ ಐಡಿಯಾ ಕೊಟ್ಟಿದ್ದು ಇದೇ ಪೂಜಾ.
ಅದೇನೆ ಇದ್ದರು ಸದ್ಯ ಪೂಜಾಳಿಗೆ ಕೆಲಸ ಸಿಕ್ಕಿರುವುದು, ಬಹಳ ಸಂಕಷ್ಟದಲ್ಲಿರುವ ಭಾಗ್ಯಾಳಿಗೆ ಸಹಾಯವಾಗುತ್ತದೆ. ಪೂಜಾ ಈ ಕೆಲಸವನ್ನು ಒಪ್ಪಿಕೊಂಡು ಚೆನ್ನಾಗಿ ನಿಭಾಯಿಸುತ್ತಾಳ? ಅಥವಾ ಮತ್ತೊಂದಿಷ್ಟು ಸಂಕಷ್ಟಗಳಲ್ಲಿ ಸಿಲುಕುತ್ತಾಳ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಜೊತೆಗೆ ಪೂಜಾ ಈಗಾಗಲೇ ಪರಿಚಯ ಇರುವ ಕಾರಣ, ತನ್ನ ಜಿಮ್‌ನಲ್ಲಿ ಆಕೆಗೆ ಇಂಟರ್‌ವ್ಯೂ ಇಲ್ಲದೆ ಕಿಶನ್ ಕೆಲಸ ಕೊಟ್ಟಿದ್ದಾರೆ. ಹಾಗಾದ್ರೆ, ಕಿಶನ್‌ಗೂ ಪೂಜಾಗೂ ಲವ್ ಆಗುತ್ತಾ?, ಕಿಶನ್ ಒಳ್ಳೆಯವರ ಅಥವಾ ದುರುದ್ದೇಶದ ವ್ಯಕ್ತಿಯಾ? ಎಂಬಿತ್ಯಾದಿ ಹಲವು ಕುತೂಹಲಗಳು ಪ್ರೇಕ್ಷಕರಲ್ಲಿ ಮೂಡಿದೆ. ಇದಕ್ಕೆಲ್ಲ ಮುಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.
Deepika Das: ಸದ್ದಿಲ್ಲದೆ ಓಟಿಟಿಗೆ ಬಂತು ದೀಪಿಕಾ ದಾಸ್ ನಟನೆಯ ಪಾರು ಪಾರ್ವತಿ ಸಿನಿಮಾ