ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ಈಹ ಮಹತ್ವದ ಘಟ್ಟಕ್ಕೆ ಬಂದು ನಿಂತಿದೆ. ಭಾಗ್ಯ ವಿರುದ್ಧ ನಿಂತವರೆಲ್ಲ ಈಗ ಪಾತಾಳಕ್ಕೆ ಕುಸಿಯುತ್ತಿದ್ದಾರೆ. ತನಗೆ ಕೆಡುಕು ಬಯಸಲು ಬಂದವರಿಗೆ ಸರಿಯಾಗಿ ಭಾಗ್ಯ ತಿರುಗೇಟು ಕೊಡಲು ಮುಂದಾಗಿದ್ದಾಳೆ. ಇಷ್ಟು ದಿನ ಭಾಗ್ಯಾಳಿಗೆ ಬಿಂಬಿಡದೆ ಕಷ್ಟ ಕೊಡುತ್ತಿದ್ದ ಕನ್ನಿಕಾ, ತಾಂಡವ್ ಹಾಗೂ ಶ್ರೇಷ್ಠಾಳಿಗೆ ಈಗ ಬಹುದೊಡ್ಡ ಸಂಕಷ್ಟ ಬಂದೊದಗಿದೆ. ಶ್ರೇಷ್ಠಾ ಹಾಗೂ ತಾಂಡವ್ರನ್ನು ಆಫೀಸ್ ಕೆಲಸದಿಂದ ಕಿತ್ತೆಸೆಯಲಾಗಿದೆ. ಇದರ ಬೆನ್ನಲ್ಲೇ ತಾಂಡವ್ ಹೊಸ ಕೆಲಸಕ್ಕಾಗಿ ಬೀದಿ ಬೀದಿ ಅಲಿಯುತ್ತಿದ್ದಾನೆ. ಆದರೆ, ಒಂದೇ ಒಂದು ಕೆಲಸ ಸಿಕ್ಕಿಲ್ಲ.
ತಾಂಡವ್ ಇದ್ದ ಆಫೀಸ್ನಲ್ಲೇ ಭಾಗ್ಯ ಕ್ಯಾಂಟೀನ್ ತೆರೆದಿದ್ದಾಳೆ. ಕಂಪನಿಯ ಬಾಸ್ ಮತ್ತು ಅವರ ಹೆಂಡತಿ ಮನಸಾರೆ ಭಾಗ್ಯಳನ್ನು ಹೊಗಳಿ ವೆಲ್ಕಪ್ ಮಾಡಿದ್ದಾರೆ. ಅಲ್ಲದೆ, ಉದ್ಯೋಗಿಗಳು ಕೂಡ ಭಾಗ್ಯ ಕ್ಯಾಂಟೀನ್ ತೆರೆದಿರುವುದನ್ನು ಕಂಡು ಸಂಭ್ರಮಿಸಿದ್ದಾರೆ. ಆದರೆ, ತಾಂಡವ್, ಭಾಗ್ಯಾಳಿಗೆ ಎಲ್ಲರ ಮುಂದೆಯೇ ಬೈದು ಅವಮಾನ ಮಾಡಿದ್ದಾನೆ. ಇದಕ್ಕೆ ಶ್ರೇಷ್ಠಾ ಕೂಡ ಕೈಜೋಡಿಸಿದ್ದಾಳೆ. ನಾನು ಈ ಕಂಪನಿಯ ಮ್ಯಾನೇಜರ್, ನಿನ್ನನ್ನು ಏನು ಮಾಡಬೇಕು ಎಂದು ನನಗೆ ತಿಳಿದಿದೆ ಎಂದು ಧಮ್ಕಿ ಹಾಕುತ್ತಾನೆ. ಇದಾದ ಕೆಲವೇ ನಿಮಿಷದಲ್ಲಿ ತಾಂಡವ್-ಶ್ರೇಷ್ಠಾರನ್ನು ಆಫೀಸ್ನಿಂದ ಹೊರಹಾಕಲಾಗಿದೆ.
ಬಾಸ್ ಹೆಂಡತಿ ತಾಂಡವ್ ಮತ್ತು ಶ್ರೇಷ್ಠಾಳ ಕೈಗೆ ಕವರ್ ಒಂದನ್ನು ನೀಡುತ್ತಾರೆ. ಭಾಗ್ಯಳಿಗೆ ಕಿರುಕುಳ ಕೊಟ್ಟಿರುವುದಕ್ಕೆ ಇದು ನಿಮಗೆ ಉಡುಗೊರೆ ಎಂದು ಹೇಳುತ್ತಾರೆ. ಇಬ್ಬರೂ ಕವರ್ ತೆಗೆದು ನೋಡಿದಾಗ ಅದರಲ್ಲಿ ಕೆಲಸದಿಂದ ತೆಗೆದುಹಾಕಿರುವ ಟರ್ಮಿನೇಶನ್ ಲೆಟರ್ ಇರುತ್ತದೆ. ಇದನ್ನು ನೋಡಿ ಇಬ್ಬರೂ ಬೆಚ್ಚಿಬೀಳುತ್ತಾರೆ. ಆಫೀಸ್ನಿಂದ ಹೊರಬಂದ ಬಳಿಕ ತಾಂಡವ್ ಹೊಸ ಕೆಲಸಕ್ಕೆ ಅಲೆದಾಟ ಶುರುಮಾಡಿದ್ದಾನೆ. ಈಗಿರುವುದಕ್ಕಿಂತ ದೊಡ್ಡ ಕಂಪನಿಯಲ್ಲಿ ನನಗೆ ಕೆಲಸ ಸಿಗುತ್ತೆ ಎಂದು ಅಹಂಕಾರದಿಂದ ಆಫೀಸ್ನಿಂದ ಹೊರಬಂದ ತಾಂಡವ್ಗೆ ಎಲ್ಲೂ ಕೆಲಸ ಸಿಗುವುದಿಲ್ಲ.
ಕೊನೆಯಲ್ಲಿ ಒಬ್ಬರು ಇಂಟರ್ವ್ಯೂಗೆ ಎಂದು ಹೋಟೆಲ್ ಒಂದರಲ್ಲಿ ಭೇಟಿ ಆಗಲು ಕರೆದಿದ್ದಾರೆ. ಅದೇ ಹೋಟೆಲ್ನಲ್ಲಿ ಆಕಸ್ಮಿಕವಾಗಿ ಭಾಗ್ಯಾ ಸೇರಿದಂತೆ ಅವರ ಮನೆಯವರು ಕೂಡ ಊಟಕ್ಕೆಂದು ಬಂದಿರುತ್ತಾರೆ. ಆದರೆ, ಈ ವಿಚಾರ ತಾಂಡವ್ಗೆ ತಿಳಿದಿರುವುದಿಲ್ಲ. ಇಂಟರ್ವ್ಯೂನಲ್ಲಿ ತಾಂಡವ್ ದುರಂಕರಾದ ಮಾತನ್ನಾಡುತ್ತಾನೆ. ಇದರಿಂದ ಆ ಕೆಲಸ ಕೂಡ ಕಳೆದುಕೊಳ್ಳುತ್ತಾನೆ. ಇಂಟರ್ವ್ಯೂ ಮಾಡಲು ಬಂದವರು, ನಮ್ಮ ಕಂಪನಿಗೆ ನೀವು ಬೇಡ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ತಾಂಡವ್, ಇದನ್ನೆಲ್ಲ ಇಂಟರ್ವ್ಯೂ ಕರಿಯೋಕೆ ಮುಂಚೆ ಯೋಚನೆ ಮಾಡಬೇಕು ಎಂದು ಜೋರಾಗಿ ಹೇಳುತ್ತಾನೆ. ಈ ರೀತಿ ಅ್ಯರೊಗೆಂಟ್ ಇರೋರನ್ನ ನಮ್ಮ ಕಂಪನಿಲಿ ಹೈಯರ್ ಮಾಡಲ್ಲ ಎಂದು ಹೇಳಿ ಅವರು ಎದ್ದು ಹೋಗಿದ್ದಾರೆ.
ಇತ್ತ ತಾಂಡವ್ ಕೋಪದಲ್ಲಿ ಎದ್ದು ನಿಂತಾಗ ಅಲ್ಲಿ ಭಾಗ್ಯ ಮನೆಯವರು ಇರುವುದು ಕಾಣುತ್ತದೆ. ತಾಂಡವ್ ಸ್ಥಿತಿ ಕಂಡು ಭಾಗ್ಯ ತಂಗಿ ಸರಿಯಾಗೆ ತಿರುಗೇಟು ಕೊಡುತ್ತಾಳೆ. ನೋಡಮ್ಮ ಭಾವ ಅಕ್ಕನ ತರ ಅಲ್ಲ.. ಅವರಿಗೆ ಇಲ್ಲಿಲ್ಲಂದ್ರೆ ಬೇರೆಕಡೆ ಪಟ್ ಅಂತ ಕೆಲಸ ಸಿಗುತ್ತೆ ಅಂತ ಹೇಳಿದ್ದೆ.. ಆದ್ರೆ ಇಲ್ಲಿ ನೋಡು ಉಗಿಸಿಕೊಳ್ಳುತ್ತಾ ಇದ್ದಾರೆ ಭಾವ ಎಂದು ಕಾಲೆಳೆದಿದ್ದಾರೆ. ತಾಂಡವ್ ಇಲ್ಲಿ ಏನೂ ಮಾತನಾಡದೆ ಸೀದಾ ಎದ್ದು ಹೋಗಿದ್ದಾರೆ. ಆದರೆ, ಇಲ್ಲಿ ಭಾಗ್ಯ ಮುಖದಲ್ಲಿ ಕಳವಳ ಉಂಟಾಗಿದೆ. ಎಷ್ಟಾದರು ಜೊತೆಗಿಲ್ಲದಿದ್ದರೂ ಗಂಡನೇ ಅಲ್ವಾ.. ಮುಂದೆ ಭಾಗ್ಯನೇ ತಾಂಡವ್ಗೆ ಕೆಲಸ ಹುಡುಕಿ ಕೊಡುತ್ತಾಳಾ? ಅಥವಾ ಹಳೆ ಕಂಪನಿಯಲ್ಲೇ ಬಾಸ್ ಬಳಿ ಮಾತನಾಡಿ ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಮಾಡುತ್ತಾಳ ಎಂಬುದು ನೋಡಬೇಕಿದೆ.
Kiran Raj: ಕರ್ಣ ಸೀರಿಯಲ್ ಶೂಟಿಂಗ್ ಶುರುವಾಗೇ ಇಲ್ವಾ?: ಸಿನಿಮಾದಲ್ಲಿ ಬ್ಯುಸಿಯಾದ ಕಿರಣ್ ರಾಜ್