ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Bhagya Lakshmi Serial: ತನ್ವಿಗೆ ಐಫೋನ್ ಗಿಫ್ಟ್ ಕೊಟ್ಟ ತಾಂಡವ್, ಭಾಗ್ಯಾಳ ಗಿಫ್ಟ್​ಗೆ ಬೆಲೆಯೇ ಇಲ್ಲ

ರೆಸಾರ್ಟ್ನಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದ ಬಳಿಕ ತಾಂಡವ್ ಮಗಳು ತನ್ವಿಗೆ ಇನ್ನೊಂದು ಸರ್ಪ್ರೈಸ್ ಗಿಫ್ಟ್ ಇದೆ ಎಂದು ಹೇಳಿದ್ದಾರೆ. ನಿನ್ಗೆ ಎಷ್ಟು ಸರ್ಪ್ರೈಸ್ ಕೊಟ್ಟರು ಕಡಿಮೆನೇ ಎಂದು ಹೇಳಿ ಹೊಸ ಐಫೋನ್ ಗಿಫ್ಟ್ ಕೊಡುತ್ತಾನೆ. ಇದನ್ನ ನೋಡಿ ತನ್ವಿ ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಾಳೆ.

ತನ್ವಿಗೆ ಐಫೋನ್ ಗಿಫ್ಟ್ ಕೊಟ್ಟ ತಾಂಡವ್, ಭಾಗ್ಯಾಳ ಗಿಫ್ಟ್​ಗೆ ಬೆಲೆಯೇ ಇಲ್ಲ

Bhagya Lakshmi serial

Profile Vinay Bhat Feb 20, 2025 12:14 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಸದ್ಯ ಭಾಗ್ಯಾ ಮಗಳ ತನ್ವಿ ಬರ್ತ್ ಡೇ ಎಪಿಸೋಡ್ ಭರ್ಜರಿ ಆಗಿ ಮೂಡಿಬರುತ್ತಿದೆ. ರೆಸಾರ್ಟ್​ನಲ್ಲಿ ತಂದೆ ತಾಂಡವ್ ಹಾಗೂ ಶ್ರೇಷ್ಠಾ ಜೊತೆ ತನ್ವಿ ಅದ್ಧೂರಿಯಾಗಿ ಹುಟ್ಟುಹಬ್ಬ ಸೆಲೆಬ್ರೆಟ್ ಮಾಡಿ ಮನೆಗೆ ಬಂದಿದ್ದಾರೆ. ಇಲ್ಲಿ ಭಾಗ್ಯಾ ಪ್ರೀತಿಯಿಂದ ಪುಟ್ಟದಾಗಿ ಮಗಳ ಹುಟ್ಟುಹಬ್ಬ ಆಚರಣೆಗೆ ತಯಾರು ಮಾಡಿದ್ದಾಳೆ. ಮಗಳಿಗಾಗಿ ಗಿಫ್ಟ್ ಕೂಡ ತಂದಿದ್ದಾಳೆ ಭಾಗ್ಯಾ. ಆದರೆ, ತಾಂಡವ್ ನೀಡಿದ ಗಿಫ್ಟ್​ನ ಮುಂದೆ ಭಾಗ್ಯಾಳ ಉಡುಗೊರೆ ಲೆಕ್ಕಕೇ ಇಲ್ಲದಂತಾಗಿದೆ. ಕೆಲಸ ಕಳೆದುಕೊಂಡಿದ್ದರೂ ಭಾಗ್ಯಾ ಕಷ್ಟಪಟ್ಟು ಜೋಕರ್ ವೇಷ ತೊಟ್ಟು ನೃತ್ಯ ಮಾಡಿ ಮಗಳಿಗೆ ಗಿಫ್ಟ್ ತಂದೆ ಅದು ತನ್ವಿಗೆ ಇಷ್ಟವಾಗಲಿಲ್ಲ.

ರೆಸಾರ್ಟ್​ನಲ್ಲಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿದ ಬಳಿಕ ತಾಂಡವ್ ಮಗಳು ತನ್ವಿಗೆ ಇನ್ನೊಂದು ಸರ್​ಪ್ರೈಸ್ ಗಿಫ್ಟ್ ಇದೆ ಎಂದು ಹೇಳಿದ್ದಾರೆ. ಇದನ್ನ ಕೇಳಿ ಮತ್ತಷ್ಟು ಖುಷಿಯಾದ ತನ್ವಿ, ನನ್ನ ಬರ್ತ್ ಡೇ ಆಗೋವರೆಗು ಸರ್​ಪ್ರೈಸ್ ಕೊಡ್ತನೇ ಇರ್ತೀರ ನಾವು ಎಂದು ಕೇಳುತ್ತಾಳೆ. ಆಗ ತಾಂಡವ್, ನೀನು ನನ್ಗೆ ತುಂಬಾ ಸ್ಪೆಷನ್.. ನಿನ್ಗೆ ಎಷ್ಟು ಸರ್​ಪ್ರೈಸ್ ಕೊಟ್ಟರು ಕಡಿಮೆನೇ ಎಂದು ಹೇಳಿ ಹೊಸ ಐಫೋನ್ ಗಿಫ್ಟ್ ಕೊಡುತ್ತಾನೆ. ಇದನ್ನ ನೋಡಿ ತನ್ವಿ ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಾಳೆ.



ಹುಟ್ಟುಹಬ್ಬ ಭರ್ಜರಿ ಆಚರಿಸಿದ್ದಕ್ಕೆ ಮತ್ತು ಗಿಫ್ಟ್ ಕೊಟ್ಟಿದ್ದರೆ ತಾಂಡವ್‌ಗೆ ತನ್ವಿ ಥ್ಯಾಂಕ್ಸ್ ಪಪ್ಪಾ ಎಂದು ಹೇಳುತ್ತಾಳೆ. ಅದಕ್ಕೆ ತಾಂಡವ್, ಅಪ್ಪನಾಗಿ ಇದು ನನ್ನ ಕರ್ತವ್ಯ, ಮಗಳಿಗಾಗಿ ಇಷ್ಟೂ ಮಾಡದಿದ್ದರೆ ಹೇಗೆ ಎಂದು ಹೇಳುತ್ತಾನೆ. ನಿನ್ನ ಜತೆ ಪಪ್ಪಾ ಯಾವತ್ತೂ ಇರುತ್ತಾನೆ ಎಂದು ಹೇಳಿ ಮಗಳನ್ನು ಖುಷಿಪಡಿಸುತ್ತಾನೆ. ಅತ್ತ ಭಾಗ್ಯಾ ರೆಸಾರ್ಟ್​ನಲ್ಲಿ ಜೋಕರ್ ವೇಷ ತೊಟ್ಟಿದ್ದಕ್ಕೆ ಸಿಕ್ಕ ಹಣ ಪಡೆದುಕೊಂಡು ಮಗಳಿಗೆ ಬರ್ತ್ ಡೇ ಗಿಫ್ಟ್ ಕೊಡಿಸಲು ಮೊಬೈಲ್ ಶಾಪ್​ಗೆ ಹೋಗುತ್ತಾಳೆ. ಅಲ್ಲಿ ಚೆನ್ನಾಗಿರುವ ಮೊಬೈಲ್ ಒಂದನ್ನು ಖರೀದಿಸಿದ್ದಾಳೆ, ಆದರೆ ಅದಕ್ಕೆ ಒಂದು ಸಾವಿರ ಹೆಚ್ಚಿಗೆ ಆದರೂ ಸರಿ, ಎಂದು ಅದನ್ನೇ ತೆಗೆದುಕೊಂಡಿದ್ದಾಳೆ.

ಭಾಗ್ಯ ಮನೆಯಲ್ಲಿ, ಎಲ್ಲರೂ ಸೇರಿಕೊಂಡು ತನ್ವಿ ಹುಟ್ಟುಹಬ್ಬ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ, ಇವರು ಎಷ್ಟೊತ್ತಾದರು ಬರುವುದಿಲ್ಲ. ಬಳಿಕ ತಡವಾಗಿ ತನ್ವಿ, ತಾಂಡವ್ ಶ್ರೇಷ್ಠಾ ಜೊತೆ ಕಾರಿನಲ್ಲಿ ಬರುತ್ತಾಳೆ. ಕಾರಿನಿಂದ ಇಳಿದ ಕೂಡಲೆ ತನ್ವಿ ಭಯ ಶುರುವಾಗುತ್ತದೆ.. ಅಪ್ಪ ತುಂಬಾ ಲೇಟ್ ಆಗಿದೆ.. ಅಜ್ಜಿ ಬೈತಾರೆ.. ಭಯ ಆಗ್ತಿದೆ ಎಂದು ಹೇಳುತ್ತಾಳೆ. ಇಷ್ಟಕ್ಕೆಲ್ಲ ತಲೆಕೆಡಿಸ್ಕೊಬೇಡ.. ನಾನು ನಿನ್ ಜೊತೆ ಬಂದ್ರೆ ಅಜ್ಜಿ ಏನೂ ಹೇಳಲ್ಲ .. ನಾನು ಅಜ್ಜಿ ಹತ್ರ ಹೇಳ್ತೀನಿ ಅಂತ ಹೇಳುತ್ತಾನೆ.

ಮನೆಯೊಳಗೆ ತಾಂಡವ್-ತನ್ವಿ ಕಂಡು ಎಲ್ಲರೂ ಖುಷಿ ಆಗುತ್ತಾರೆ. ಹಾಗೇ ಭಾಗ್ಯಾ ಮೇಡಂ ಏನೋ ನನ್ನ ಮಗಳ ಬರ್ತ್ ಡೇನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡ್ತಾರಂತೆ.. ಅದನ್ನು ನೋಡ್ಕೊಂಡು ಹೋಗೋಣ ಅಂತ ಬಂದೆ ಎಂದು ಹೇಳುತ್ತಾನೆ. ಭಾಗ್ಯಾ ತನ್ವಿ ಬರ್ತ್ ಡೇಗೆ ಅವಳು ಮಗುವಾಗಿದ್ದಾಗ ಹಾಕಿಕೊಂಡಿದ್ದ ಡ್ರೆಸ್, ಬಳೆ, ಮಗುವಾಗಿದ್ದಾಗ ತೆಗೆದ ಫೋಟೋ, ಅವಳ ಇಷ್ಟದ ವಸ್ತುಗಳನ್ನೆಲ್ಲ ಜೋಡಿಸಿ ಡೆಕೊರೆಟ್ ಮಾಡಿರುತ್ತಾಳೆ. ಇದು ತಾಂಡವ್​ಗೆ ನಗು ತರಿಸುತ್ತದೆ. ಇದೆಲ್ಲ ನಿಮ್ಮಂತವರಿಗೆ ಇಷ್ಟ ಆಗಬೇಕಷ್ಟೆ ಎಂದು ಹೇಳುತ್ತಾನೆ.



ಬಳಿಕ ತನ್ವಿ ಕೇಕ್ ಕಟ್ ಮಾಡುತ್ತಾಳೆ. ಕೇಕ್ ತಿಂದ ಬಳಿಕ ಭಾಗ್ಯಾ, ಬಂಗಾರಿ ಇಷ್ಟೇ ಅಲ್ಲ.. ನಿನ್ಗೆ ತುಂಬಾ ಇಷ್ಟ ಆಗುವ ವಸ್ತುವೊಂದು ನಿನಗೋಸ್ಕರ ಕಾಯ್ತಾ ಇದೆ.. ಅದನ್ನ ನೋಡಿದ್ರೆ ನೀವು ತುಂಬಾ ಖುಷಿ ಪಡ್ತೀಯ ಎಂದು ಹೇಳಿ ತಾನು ಕಷ್ಟಪಟ್ಟು ತಂದ ಮೊಬೈಲ್ ಗಿಫ್ಟ್ ಕೊಡುತ್ತಾಳೆ. ಆದರೆ, ಇದನ್ನು ನೋಡಿ ತನ್ವಿ ಮುಖ ಸಪ್ಪೆ ಮಾಡುತ್ತಾಳೆ.. ಅಮ್ಮ ನೀನು ಯಾಕೆ ಫೋನ್ ಗಿಫ್ಟ್ ತೆಗೊಂಡು ಬಂದೆ.. ನನ್ಗೆ ಪಪ್ಪಾ ಆಲ್ರೆಡಿ ಫೋನ್ ಗಿಫ್ಟ್ ಮಾಡಿದ್ದಾರೆ.. ಸಖತ್ ಆಗಿದೆ ಆ ಫೋನ್ ಎಂದು ಹೇಳಿ ಹೊಸ ಐಫೋನ್ ಅನ್ನು ತೋರಿಸುತ್ತಾಳೆ. ಇದನ್ನ ಕೇಳಿ ಭಾಗ್ಯಾಗೆ ಅಳು ಬರುತ್ತದೆ.. ಇಲ್ಲಿದೆ ಸಂಚಿಕೆ ಮುಕ್ತಾಯಗೊಂಡಿದ್ದು, ತನ್ವಿ ಭಾಗ್ಯಾಳ ಗಿಫ್ಟ್ ತೆಗೆದುಕೊಳ್ಳುತ್ತಾಳಾ?.. ಅಥವಾ ಬೇಡ ಎಂದು ಹೇಳುತ್ತಾಳಾ?.. ಭಾಗ್ಯಾ ಮುಂದೆ ಏನು ಮಾಡುತ್ತಾಳೆ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Maja Talkies: ಮಜಾ ಟಾಕೀಸ್​ನಿಂದ ಹೊರಬಂದಿದ್ದೇಕೆ ಇಂದ್ರಜಿತ್ ಲಂಕೇಶ್?: ಶಾಕಿಂಗ್ ವಿಚಾರ ಬಹಿರಂಗ