Maja Talkies: ಮಜಾ ಟಾಕೀಸ್ನಿಂದ ಹೊರಬಂದಿದ್ದೇಕೆ ಇಂದ್ರಜಿತ್ ಲಂಕೇಶ್?: ಶಾಕಿಂಗ್ ವಿಚಾರ ಬಹಿರಂಗ
ಇಂದ್ರಜಿತ್ ಲಂಕೇಶ್ ಈ ಬಾರಿಯ ಮಜಾ ಟಾಕೀಸನ್ನಿಂದ ಹೊರ ನಡೆದರು ಎಂಬ ಮಾತು ಕೇಳಿಬಂದಿತ್ತು. ಯಾಕೆಂದರೆ 6 ವರ್ಷಗಳ ಕಾಲ 600ಕ್ಕೂ ಅಧಿಕ ಎಪಿಸೋಡ್ ಪ್ರಸಾರ ಆಗಿದ್ದ ಮಜಾ ಟಾಕೀಸ್ ಶೋನಲ್ಲಿ ಈ ಬಾರಿ ಇಂದ್ರಜಿತ್ ಲಂಕೇಶ್ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಇದೀಗ ಸ್ವತಃ ಇಂದ್ರಜಿತ್ ಅವರೇ ನಾನು ಮಜಾ ಟಾಕೀಸ್ನಲ್ಲಿ ಭಾಗವಹಿಸದಿರಲು ಕಾರಣ ಬಹಿರಂಗ ಪಡಿಸಿದ್ದಾರೆ.

Indrajith Lankesh and Maja talkies

ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಕಲರ್ಸ್ ಕನ್ನಡದಲ್ಲಿ ವೀಕೆಂಡ್ನಲ್ಲಿ ಶುರುವಾಗಿರುವ ಎರಡು ಹೊಸ ಶೋ ಧೂಳೆಬ್ಬಿಸುತ್ತಿದೆ. ಬಾಯ್ಸ್ vs ಗರ್ಲ್ಸ್ಗೆ ಸಖತ್ ರೋಚಕತೆ ಸೃಷ್ಟಿಸಿದರೆ ಮತ್ತೊಂದು ಸೃಜನ್ ಲೋಕೇಶ್ ನೇತೃತ್ವದ ಮಜಾ ಟಾಕೀಸ್ ಹೊಸ ಟೀಮ್ನೊಂದಿಗೆ ಬಂದು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದೆ. ಈಗಾಗಲೇ ಮೂರು ವಾರದ ಎಪಿಸೋಡ್‌ಗಳು ಪ್ರಸಾರಗೊಂಡಿದ್ದು, ಅದ್ಭುತ ಪ್ರತಿಕ್ರಿಯೆ ಕೇಳಿಬರುತ್ತಿದೆ. ಆದರೆ, ಈ ಬಾರಿಯ ಮಜಾ ಟಾಕೀಸ್ನಲ್ಲಿ ಇಂದ್ರಜಿತ್ ಲಂಕೇಶ್ ಅವರು ಕಾಣಿಸಿಕೊಂಡಿಲ್ಲ.
ಇಂದ್ರಜಿತ್ ಲಂಕೇಶ್ ಈ ಬಾರಿಯ ಮಜಾ ಟಾಕೀಸನ್ನಿಂದ ಹೊರ ನಡೆದರು ಎಂಬ ಮಾತು ಕೇಳಿಬಂದಿತ್ತು. ಯಾಕೆಂದರೆ 6 ವರ್ಷಗಳ ಕಾಲ 600ಕ್ಕೂ ಅಧಿಕ ಎಪಿಸೋಡ್ ಪ್ರಸಾರ ಆಗಿದ್ದ ಮಜಾ ಟಾಕೀಸ್ ಶೋನಲ್ಲಿ ಈ ಬಾರಿ ಇಂದ್ರಜಿತ್ ಲಂಕೇಶ್ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಯೋಗರಾಜ್ ಭಟ್ ಇವರ ಸ್ಥಾನಕ್ಕೆ ಬಂದಿದ್ದಾರೆಯಾದರೂ, ಸೃಜನ್ ಲೋಕೇಶ್ ಇಜಿಲ ಕಾಂಬೀನೇಷನ್ ಅನ್ನು ಫ್ಯಾನ್ಸ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಇದೀಗ ಸ್ವತಃ ಇಂದ್ರಜಿತ್ ಅವರೇ ನಾನು ಮಜಾ ಟಾಕೀಸ್ನಲ್ಲಿ ಭಾಗವಹಿಸದಿರಲು ಕಾರಣ ಬಹಿರಂಗ ಪಡಿಸಿದ್ದಾರೆ. ‘‘ಮಜಾ ಟಾಕೀಸ್ ಸತತವಾಗಿ 6 ವರ್ಷಗಳ ಕಾಲ ನಡೆಯಿತು. ಸುಮಾರು 600 ಎಪಿಸೋಡ್‌ಗಳು ಪ್ರಸಾರವಾಯಿತು. ಅದ್ಭುತವಾಗಿ ಹಿಟ್ ಆಯ್ತು. ಕರ್ನಾಟಕದ ಮನೆ ಮಾತಾಯಿತು. ಮನೆ ಮನೆಗೂ ತಲುಪಿ ಯಶಸ್ಸಾಯಿತು. ಲಂಕೇಶ್ - ಲೋಕೇಶ್ ಕಾಂಬಿನೇಶನ್‌ನಲ್ಲಿ ಎಪಿಸೋಡ್ಸ್ ಮಾಡಿದ್ವಿ. ಒಳ್ಳೆಯ ಟಿಆರ್‌ಪಿ ಬಂತು. ಟಿಆರ್‌ಪಿಯಲ್ಲಿ ನಂಬರ್ 1 ಬಂತು. ಈ ಯಶಸ್ಸಿನ ನಡುವೆ ನಾನು ಬ್ರೇಕ್ ತಗೊಂಡು ಎರಡು ಸಿನಿಮಾ ಮಾಡಿದೆ. ಆಗಲೇ ತುಂಬ ಕಷ್ಟ ಆಗ್ತಿತ್ತು. ಸಿನಿಮಾ ನಿರ್ದೇಶಕನಾಗಿ ಪ್ರತಿಯೊಂದು ಹಂತದಲ್ಲಿ ನಾನು ಉಪಸ್ಥಿತಿ ಇರಬೇಕಾಗುತ್ತದೆ’’ ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ.
‘‘ಈಗ ಶುರುವಾಗಿರುವ ಹೊಸ ಮಜಾ ಟಾಕೀಸ್ ಸೀಸನ್‌ಗೂ ನನ್ನನ್ನ ಕೇಳಿದರು. ಆದರೆ ನನಗೆ ಆಗುತ್ತಿಲ್ಲ. ನನ್ನ ಮಗ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾನೆ. ನಾನು ಹಿಂದಿ ಸಿನಿಮಾ ಮಾಡುತ್ತಿದ್ದೇನೆ. ಈಗಾಗಲೇ ಯಶಸ್ವಿ ಶೋ ಇದು. ಮತ್ತೆ ಈ ಯಶಸ್ಸು ಸೃಷ್ಟಿ ಆಗತ್ತೋ ಇಲ್ವೋ ಗೊತ್ತಿಲ್ಲ. ರೆಮೋ ಸಂಗೀತದಲ್ಲಿ ಬ್ಯುಸಿ ಇದ್ದಾರೆ, ಶ್ವೇತಾ ಚೆಂಗಪ್ಪ ಇನ್ನೊಂದು ಶೋನಲ್ಲಿ ಬ್ಯುಸಿ ಇದ್ದಾರೆ. ಮಂಡ್ಯ ರಮೇಶ್ ಅವರು ಧಾರಾವಾಹಿ ಜೊತೆಗೆ ರಂಗಭೂಮಿಯಲ್ಲಿ ಆಕ್ಟಿವ್ ಆಗಿದ್ದಾರೆ. ನಾನು ರಿಟೈರ್ ಆಗಿಲ್ಲ, ಆದರೆ ಸಿನಿಮಾ ನಿರ್ದೇಶನ ಮಾಡ್ತಿರೋದಿಕ್ಕೆ ಇದಕ್ಕೆ ಸಮಯ ಕೊಡೋಕೆ ಆಗ್ತಿಲ್ಲ’’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
Chaithra Kundapura: ಬಣ್ಣದ ಲೋಕಕ್ಕೆ ಚೈತ್ರಾ ಕುಂದಾಪುರ: ಬಾಯ್ಸ್ vs ಗರ್ಲ್ಸ್ನಲ್ಲಿ ಮಿಂಚುತ್ತಿರುವ ಭಾಷಣಗಾರ್ತಿ