ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ugramm Manju: ಕಿರುತೆರೆಗೆ ಎಂಟ್ರಿಕೊಟ್ಟ ಉಗ್ರಂ ಮಂಜು: ಯಾವ ಧಾರಾವಾಹಿ ನೋಡಿ

Bhargavi LLB Ugramm Manju: ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಉಗ್ರಂ ಮಂಜು ಕೂಡ ಹೊಸ ಜೀವನ ಶುರುಮಾಡಿ ಸಿನಿಮಾದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ದಿಢೀರ್ ಎಂದು ಕಲರ್ಸ್ ಕನ್ನಡದ ಧಾರಾವಾಹಿಯಲ್ಲಿ ಮಂಜಣ್ಣ ಪ್ರತ್ಯಕ್ಷರಾಗಿದ್ದಾರೆ.

ಕಿರುತೆರೆಗೆ ಎಂಟ್ರಿಕೊಟ್ಟ ಉಗ್ರಂ ಮಂಜು: ಯಾವ ಧಾರಾವಾಹಿ?

Bhargavi LLB and Ugramm Manju

Profile Vinay Bhat Aug 14, 2025 3:48 PM

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಗಿದ ಬಳಿಕ ಬಹುತೇಕ ಹೆಚ್ಚಿನ ಸ್ಪರ್ಧಿಗಳು ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವರು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರೆ ಇನ್ನೂ ಕೆಲವರು ಸಿನಿಮಾ, ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ತ್ರಿವಿಕ್ರಮ್ ಮುದ್ದು ಸೊಸೆ ಧಾರಾವಾಹಿ ಮಾಡುತ್ತಿದ್ದರೆ, ಭವ್ಯಾ ಗೌಡ ಕರ್ಣ ಸೀರಿಯಲ್​ನಲ್ಲಿ ಮಿಂಚುತ್ತಿದ್ದಾರೆ. ಅದರಂತೆ ಉಗ್ರಂ ಮಂಜು ಕೂಡ ಹೊಸ ಜೀವನ ಶುರುಮಾಡಿ ಸಿನಿಮಾದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ದಿಢೀರ್ ಎಂದು ಕಲರ್ಸ್ ಕನ್ನಡದ ಧಾರಾವಾಹಿಯಲ್ಲಿ ಮಂಜಣ್ಣ ಪ್ರತ್ಯಕ್ಷರಾಗಿದ್ದಾರೆ.

ಹೌದು, ಬಿಗ್ ಬಾಸ್​ಗೆ ಹೋಗಿ ಬಂದ ಬಳಿಕ ಅದೆಷ್ಟೊ ಕಲಾವಿದರ ಬದುಕು ಬದಲಾಗಿದೆ. ಹಿಂದೆ ಮೂಲೆಗುಂಪಾಗಿದ್ದ ಕೆಲ ಕಲಾವಿದರು ಈ ರಿಯಾಲಿಟಿ ಶೋಗೆ ಹೋಗಿ ಬಂದ ಬಳಿಕ ಅವರ ಬದಕು ಬಂಗಾರವಾಗಿದೆ. ಈ ಸಾಲಿನಲ್ಲಿ ಇಂದು ನಮಗೆ ಮುಂಚೂಣಿಯಲ್ಲಿ ಕಾಣುತ್ತಿರುವ ವ್ಯಕ್ತಿ ಎಂದರೆ ಅದು ಉಗ್ರಂ ಮಂಜು. ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ಮಂಜು, ತಮ್ಮದೇ ಮ್ಯಾಜರಿಸಂ ಮೂಲಕ ಕರ್ನಾಟಕ ಜನತೆಗೆ ಇಷ್ಟವಾದವರು.

ಬಿಗ್ ಬಾಸ್ ಬರುವುದಕ್ಕೂ ಮುನ್ನ ಲೈಫ್ ಅನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದರೀಗ ಮಂಜು ಸಂಪೂರ್ಣವಾಗಿ ಬದಲಾಗಿದ್ದಾರೆ. ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಮಂಜು ಹೊಸ ಜೀವನ ಶುರುಮಾಡಿದ್ದಾರೆ. ಮಂಜು ಅವರಿಗೆ ಒಂದರ ಹಿಂದೆ ಒಂದರಂತೆ ಸಿನಿಮಾದಲ್ಲಿ ಆಫರ್​ಗಳು ಹುಡುಕಿ ಬರುತ್ತಿವೆ. ಸುದೀಪ್ ಅಳಿಯನ ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೆ ಜೊತೆಗೆ ಇನ್ನೂ ಎರಡು ಮೂರು ಸಿನಿಮಾಗಳಲ್ಲಿ ಮಂಜು ಮುಖ್ಯ ಪಾತ್ರ ಮಾಡುತ್ತಿದ್ದಾರೆಂಬ ಸುದ್ದಿ ಇದೆ.

ಈ ಸಿನಿಮಾ ಮಧ್ಯೆ ಮಂಜು ಅವರು ಕಲರ್ಸ್ ಕನ್ನಡದ ಭಾರ್ಗವಿ ಎಲ್​.ಎಲ್​.ಬಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಭಾರ್ಗವಿ LLB ಧಾರಾವಾಹಿ ಈಗ ರೋಚಕತೆ ಸೃಷ್ಟಿಸಿದೆ. ಒಂದು ಕಡೆ ಅರ್ಜುನ್​​ಗೆ ಅವನ ತಂದೆ ಜೆಪಿ ಪಾಟೀಲ್ ಆತನಿಗೆ ಗೊತ್ತಾಗದಂತೆ ಮದುವೆ ಮಾಡಿಸುತ್ತಿದ್ದರೆ, ಇತ್ತ ಇನ್ನೊಂದು ಕಡೆ ಭಾರ್ಗವಿಯನ್ನು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದಾರೆ. ಮದುವೆ ಮನೆಯಿಂದ ತಪ್ಪಿಸಿಕೊಂಡು ಬರುವ ಅರ್ಜುನ್, ಭಾರ್ಗವಿಯನ್ನು ರೌಡಿಗಳಿಂದ ಕಾಪಾಡಿದ್ದು ಬಳಿಕ ಅವರಿಂದ ತಪ್ಪಿಸಿಕೊಂಡು ಬಂದು ಒಂದು ಸಾಮೂಹಿಕ ವಿವಾಹವಾಗುವಲ್ಲಿ ತಲುಪಿದ್ದಾರೆ.

ಇಲ್ಲಿ ಟ್ವಿಸ್ಟ್ ಏನೆಂದರೆ ಈ ಸಾಮೂಹಿಕ ಮದುವೆಯನ್ನು ಮಾಡಿಸುತ್ತಿರುವುದೇ ಉಗ್ರಂ ಮಂಜು. ಈ ಮೂಲಕ ಮಂಜಣ್ಣ ಸ್ಪೆಷಲ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಪ್ರೀತಿಸಿದವರನ್ನು, ಮನೆಯಲ್ಲಿ ಮದುವೆಗೆ ಒಪ್ಪಿಗೆ ನೀಡವರನ್ನು, ಅಂತರ್ಜಾತಿ ಯುವಕ-ಯುವತಿಯರ ಪ್ರೀತಿಯನ್ನು ಒಂದು ಮಾಡುವುದು ನನ್ನ ಕರ್ತವ್ಯ. ಇವರಿಗೆಲ್ಲಾ ಯಾರಿದ್ದಾರೆ, ಹಾಗಾಗಿ ನಾನೇ ಮುಂದೆ ನಿಂತು ಮದುವೆ ಮಾಡಿಸುತ್ತಿದ್ದೇನೆ ಎಂದು ಮಂಜಣ್ಣ ಹೇಳುತ್ತಾರೆ. ಒಂದುರೀತಿಯ ಕಾಮಿಡಿ ಪಾತ್ರದಲ್ಲಿ ಇಲ್ಲಿ ಮಂಜಣ್ಣ ಮಿಂಚಿದ್ದಾರೆ. ಅಂದಹಾಗೆ ಕೆಲವು ತಿಂಗಳ ಹಿಂದೆ ಭಾರ್ಗವಿ LLB ಧಾರಾವಾಹಿಯಲ್ಲಿ ಗೌತಮಿ ಜಾಧವ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

Bhagya Lakshmi Serial: ಮತ್ತೆ ಭಾಗ್ಯ ಮನೆಗೆ ಬಂದ ತಾಂಡವ್-ಶ್ರೇಷ್ಠಾ: ಬರಹೇಳಿದ್ದು ಆದೀಶ್ವರ್