ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಗೆ ಲಕ್ಷ್ಮೀ ಎಂಟ್ರಿ: ಮಗು ಹಿಡಿದುಕೊಂಡು ಬಂದ ವೈಷ್ಣವ್ ವೈಫ್

Bhagya Lakshmi Serial Today's Episode: ತನ್ನ ಮುದ್ದಾದ ಮಗುವನ್ನು ಹಿಡಿದುಕೊಂಡು ಲಕ್ಷ್ಮೀ ಮದುವೆಗೆ ಹಾಜರಾಗಿದ್ದಾಳೆ. ಲಕ್ಷ್ಮೀ ಗಂಡ ವೈಷ್ಣವ್ ಒಂದು ದಿನ ಮುಂಚೆಯೇ ಈ ಮದುವೆಗೆ ಬಂದಿದ್ದ. ಈಗ ಲಕ್ಷ್ಮೀಯನ್ನು ನೋಡಿ ಭಾಗ್ಯ ಭಾವುಕಳಾಗಿದ್ದಾಳೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾ ತಂಗಿ ಪೂಜಾ ಕಲ್ಯಾಣೋತ್ಸವ ಭರ್ಜರಿ ಆಗಿ ನಡೆಯುತ್ತಿದೆ. ಆದರೆ, ಮುಂಬರುವ ಎಪಿಸೋಡ್​ನಲ್ಲಿ ಈ ಮದುವೆ ಕ್ಯಾನ್ಸಲ್ ಆಗಲಿದೆ. ಈ ಕುರಿತ ಪ್ರೊಮೋವನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದೆ. ಇದರ ಮಧ್ಯೆ ಮದುವೆ ದಿನ ಮಂಟಪಕ್ಕೆ ಭಾಗ್ಯ ತಂಗಿ ಲಕ್ಷ್ಮೀ ಎಂಟ್ರಿ ಆಗಿದೆ. ತನ್ನ ಮುದ್ದಾದ ಮಗುವನ್ನು ಹಿಡಿದುಕೊಂಡು ಲಕ್ಷ್ಮೀ ಮದುವೆಗೆ ಹಾಜರಾಗಿದ್ದಾಳೆ. ಲಕ್ಷ್ಮೀ ಗಂಡ ವೈಷ್ಣವ್ ಒಂದು ದಿನ ಮುಂಚೆಯೇ ಈ ಮದುವೆಗೆ ಬಂದಿದ್ದ. ಈಗ ಲಕ್ಷ್ಮೀಯನ್ನು ನೋಡಿ ಭಾಗ್ಯ ಭಾವುಕಳಾಗಿದ್ದಾಳೆ.

ಭಾಗ್ಯ ಹಾಗೂ ಲಕ್ಷ್ಮೀ ಇಬ್ಬರೂ ಅಕ್ಕ-ತಂಗಿಯರು. ಲಕ್ಷ್ಮೀ - ವೈಷ್ಣವ್ ಮದುವೆ ನಡೆದಮೇಲೆ ಭಾಗ್ಯಲಕ್ಷ್ಮೀ ಸಂಸಾರ ಎರಡು ಭಾಗವಾಯಿತು. ಲಕ್ಷ್ಮೀ ಸಂಸಾರದ ಕಥೆ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಆಯ್ತು. ಕೆಲ ತಿಂಗಳ ಹಿಂದೆ ಲಕ್ಷ್ಮೀ ಬಾರಮ್ಮ ಎಂಡ್ ಆಯ್ತು. ಈ ಧಾರಾವಾಹಿಯ ಕ್ಲೈಮ್ಯಾಕ್ಸ್‌ನಲ್ಲಿ ಲಕ್ಷ್ಮೀ ಗರ್ಭಿಣಿಯಾಗಿದ್ದಳು. ಇದೀಗ ಲಕ್ಷ್ಮೀ ಮಗುವನ್ನು ಹಿಡಿದುಕೊಂಡು ಭಾಗ್ಯ ಮುಂದೆ ಪ್ರತ್ಯಕ್ಷವಾಗಿದ್ದಾಳೆ. ಪೂಜಾ - ಕಿಶನ್‌ ಮದುವೆಗೆ ಲಕ್ಷ್ಮೀ ಆಗಮಿಸಿದ್ದಾಳೆ.

ಆದರೆ, ಈ ಮದುವೆ ನಿಲ್ಲಿಸಲು ಮೀನಾಕ್ಷಿ ಹಾಗೂ ಕನ್ನಿಕಾ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಭಾಗ್ಯ ಪತಿ ತಾಂಡವ್ ಕೂಡ ಹಾಲ್​ಗೆ ಬಂದು ಮದುವೆ ನಿಲ್ಲಿಸಲು ಮುಂದಾಗಿದ್ದ. ಇದಕ್ಕೆ ರಾಮ್​ದಾಸ್ ಕಾಂತ್ ಸರಿಯಾಗಿ ಏಟುಕೊಟ್ಟು ತಾಂಡವ್​ನ ಹೊರದಬ್ಬಿದ್ದಾರೆ. ಇದಾದ ಬಳಿಕವೂ ಮೀನಾಕ್ಷಿ-ಕನ್ನಿಕಾ ಈ ಮದುವೆ ಹೇಗಾದರು ನಿಲ್ಲಿಸಬೇಕು ಎಂದು ಅಂದುಕೊಳ್ಳುತ್ತಾರೆ. ಇದಕ್ಕಾಗಿ ಮೀನಾಕ್ಷಿ ಭಾಗ್ಯ ಮನೆಯವರನ್ನು ಸಣ್ಣ ಮಾಡಲು ಒಂದು ಪ್ಲ್ಯಾನ್ ಮಾಡಿದ್ದಾಳೆ.

ಮೀನಾಕ್ಷಿ ದುಬಾರಿ ಬೆಲೆಯ ಚಿನ್ನ, ಡೈಮಂಡ್ ತಂದು ಪೂಜಾ ಬಳಿ ಇದನ್ನೆಲ್ಲ ಹಾಕಿಕೊಂಡು ಬಾ ಎಂದು ಹೇಳುತ್ತಾರೆ. ನಿನ್ನ ಕೊರಳಿನಲ್ಲಿ ಈಗ ಇರುವ ಚಿನ್ನವನ್ನು ತೆಗೆದು ಬಿಸಾಕು.. ಕಾಮತ್ ಫ್ಯಾಮಿಲಿಗೆ ಆ ಚಿನ್ನ ಎಲ್ಲ ಸ್ಯೂಟ್ ಆಗಲ್ಲ.. ಈ ಚಿನ್ನವನ್ನೆಲ್ಲ ಹಾಕು ಎನ್ನುತ್ತಾರೆ. ಆದರೆ, ಇದಕ್ಕೆ ಪೂಜಾ ಒಪ್ಪುವುದಿಲ್ಲ. ನನ್ನ ಅಕ್ಕ ಕಷ್ಟಪಟ್ಟು- ಇಷ್ಟದಿಂದ ಮಾಡಿದ ಚಿನ್ನ ಇದು ನಾನು ಇದನ್ನೇ ಹಾಕೋದು.. ನೀವು ಕೊಡುವ ಚಿನ್ನ ಬೇಡ ಎಂದು ಹೇಳಿದ್ದಾಳೆ.



ಇದು ಮೀನಾಕ್ಷಿಗೆ ಕೋಪ ತರಿಸಿದೆ. ತನ್ನ ಪ್ಲ್ಯಾನ್ ಫ್ಲಾಪ್ ಆಯಿತೆಂದು ಸಿಡಿಮಿಡಿಗೊಂಡಿದ್ದಾಳೆ. ಅಲ್ಲದೆ ಹೊರಬಂದು, ಈ ಮದುವೆ ಆಗಲಿ.. ಆ ಪೂಜಾ ನಮ್ಮ ಮನೆಯಲ್ಲಿ ಅದು ಹೇಗೆ ಸಂತೋಷವಾಗಿ ಇರುತ್ತಾಳೆ ಅಂತ ನಾನೂ ನೋಡ್ತೀನಿ.. ಅವಳಿಗೆ ನರಕ.. ನರಲ ತೋರಿಸ್ತೇನೆ.. ಅವಳ ಅಕ್ಕನ ರೀತಿಯೇ ಇವಳು ಕೂಡ ಗಂಡನ ಬಿಟ್ಟು ಹೋಗಬೇಕು ಆರೀತಿ ಮಾಡುತ್ತಾನೆ ಎಂದು ಹೇಳುತ್ತಾಳೆ. ಮೀನಾಕ್ಷಿ ಆಡಿದ ಈ ಮಾತು ಮಹಿತಾ ಕಾಮತ್ ಕೇಳಿಸಿಕೊಳ್ಳುತ್ತಾಳೆ.

ಈ ಮದುವೆ ನಡೆದರೆ ಇಷ್ಟುದೊಡ್ಡ ಅನುಹುತ ಆಗುತ್ತಾ.. ಪಾಪಾ ಪೂಜಾ ಕಷ್ಟ ಅನುಭವಿಸುತ್ತಾಳಾ? ಎಂದು ಅಂದುಕೊಂಡು ನೇರವಾಗಿ ಭಾಗ್ಯ ರೂಮ್​​ಗೆ ತೆರಳಿ.. ನಿಮ್ಮ ಹತ್ರ ಅರ್ಜೆಂಟ್ ಆಗಿ ತುಂಬಾ ಇಂಪಾರ್ಟೆಂಟ್ ವಿಷಯ ಮಾತನಾಡಬೇಕು.. ಪರ್ಸನಲ್ ಆಗಿ ಎಂದು ಹೇಳಿದ್ದಾರೆ.. ಇದನ್ನ ಕೇಳಿ ಭಾಗ್ಯಾಗೆ ಶಾಕ್ ಆಗಿದೆ. ಮಹಿತಾ ಏನು ವಿಷಯ ಹೇಳುತ್ತಾಳೆ?, ಇದನ್ನ ಕೇಳಿಯೇ ಭಾಗ್ಯ ಮದುವೆ ನಿಲ್ಲಿಸಲು ಮುಂದಾಗುತ್ತಾಳ ಎಂಬುದು ನೋಡಬೇಕಿದೆ.



ಮತ್ತೊಂದೆಡೆ ಆದೀಶ್ವರ್ ಕಾಮತ್​ ಭಾಗ್ಯ ಮನೆಯವರ ಒಳ್ಳೆಯತನ ಅರಿತು ಬದಲಾಗುತ್ತಿದ್ದಾನೆ. ಭಾಗ್ಯ ಮನೆಯವರಿಗೆ ದುಡ್ಡು ಮುಖ್ಯ ಅಲ್ಲ ಎಂಬ ಅರಿವು ಆದೀಗೆ ಬಮದಿದೆ. ಭಾಗ್ಯಾನ ಮೇಲೆ ಅನುಮಾನ ಪಟ್ಟು ನಾನು ತಪ್ಪು ಮಾಡಿದೆ.. ನನ್ನ ಜೀವನದಲ್ಲಿ ಆಗಿರುವ ಕಹಿ ಅನುಭವದಿಂದ ಇಂತಹ ಸಂಸ್ಕಾರವಂತ ಕುಟುಬಂದ ಮೇಲೆ ಅನುಮಾನ ಪಟ್ಟೆ ಎಂದು ಅಂದುಕೊಂಡಿದ್ದಾನೆ. ಅಷ್ಟೇ ಅಲ್ಲದೆ ಆದೀಗೆ ತಮ್ಮದೇ ಹೋಟೆಲ್‌ನಲ್ಲಿ ಭಾಗ್ಯ ಶೆಫ್‌ ಆಗಿ ಕೆಲಸ ಮಾಡುತ್ತಿದ್ದದ್ದು, ಕನ್ನಿಕಾ ಕುತಂತ್ರ ಮಾಡಿದ್ದು, ತನ್ನ ತಂಡವನ್ನ ಉಳಿಸಲು ಭಾಗ್ಯ ಕೆಲಸ ಬಿಟ್ಟ ಸತ್ಯ ಕೂಡ ಗೊತ್ತಾಗಿದೆ. ಒಟ್ಟಾರೆ ಕಾಮತ್ ಮನೆಯೆ ಮೀನಾಕ್ಷಿ-ಕನ್ನಿಕಾ ಕುತಂತ್ರ ಭಾಗ್ಯಾಗೆ ಗೊತ್ತಾಗುವ ಹೊತ್ತಿಗೆ ಅತ್ತ ಆದೀಶ್ವರ್​ಗೆ ಭಾಗ್ಯ ಮನೆಯ ಒಳ್ಳೆಯತನ ಗೊತ್ತಾಗಿದೆ. ಮುಂದೆ ಏನೆಲ್ಲ ನಡೆಯುತ್ತೆ ಎಂಬುದು ರೋಚಕತೆ ಸೃಷ್ಟಿಸಿದೆ.

Bhargavi LLB Serial: ಒಂದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದ ಕಲರ್ಸ್​ನ ಟಾಪ್ ಧಾರಾವಾಹಿ