Bhargavi LLB Serial: ಒಂದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದ ಕಲರ್ಸ್ನ ಟಾಪ್ ಧಾರಾವಾಹಿ
ಭಾರ್ಗವಿ ಎಲ್ಎಲ್ಬಿ ಧಾರಾವಾಹಿ ಹಿಂದಿನ ಎರಡು ವಾರ ಕಲರ್ಸ್ನ ನಂಬರ್ ಧಾರಾವಾಹಿಯಾಗಿ ದಾಖಲೆ ಬರೆದಿತ್ತು. ರಾಧಾ ಭಗವತಿ ನಟನೆಯ ಈ ಸೀರಿಯಲ್ ಕಳೆದ ವಾರ 4.7 ರೇಟಿಂಗ್ ಪಡೆದುಕೊಂಡಿತ್ತು. ಆದರೆ ಈ ಬಾರಿ 4.4 ಟಿವಿಆರ್ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದೆ.

Bhargavi LLB

ಕನ್ನಡ ಕಿರುತೆರೆಯಲ್ಲಿ (Kannada Serial) ಸುಮಾರು 30ಕ್ಕೂ ಅಧಿಕ ಧಾರಾವಾಹಿಗಳು ಪ್ರಸಾರ ಕಾಣುತ್ತಿದೆ. ಇವುಗಳಲ್ಲಿ ನಂಬರ್ ಒನ್ ಧಾರಾವಾಹಿ ಯಾವುದು ಮತ್ತು ಯಾವ ಸ್ಥಾನಕ್ಕೆ ಟಿಆರ್ಪಿಯೇ ಇಲ್ಲ ಎಂಬುದು ಪ್ರತಿ ವಾರ ಹೊರಬೀಳುತ್ತದೆ. ಸೀರಿಯಲ್ಗಳ ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಅದರಂತೆ ಇದೀಗ 27ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಈ ವಾರದ ಶಾಕಿಂಗ್ ಎಂದರೆ ಕಲರ್ಸ್ ಕನ್ನಡದಲ್ಲಿ ಕಳೆದ ವಾರ ನಂಬರ್ ಒನ್ ಸ್ಥಾನದಲ್ಲಿದ್ದ ಧಾರಾವಾಹಿ ಒಂದೇ ವಾರದ ಮಧ್ಯೆ ಮೂರನೇ ಸ್ಥಾನಕ್ಕೆ ಕುಸಿದಿದೆ.
ಹೌದು, ಭಾರ್ಗವಿ ಎಲ್ಎಲ್ಬಿ ಧಾರಾವಾಹಿ ಹಿಂದಿನ ಎರಡು ವಾರ ಕಲರ್ಸ್ನ ನಂಬರ್ ಧಾರಾವಾಹಿಯಾಗಿ ದಾಖಲೆ ಬರೆದಿತ್ತು. ರಾಧಾ ಭಗವತಿ ನಟನೆಯ ಈ ಸೀರಿಯಲ್ ಕಳೆದ ವಾರ 4.7 ರೇಟಿಂಗ್ ಪಡೆದುಕೊಂಡಿತ್ತು. ಆದರೆ ಈ ಬಾರಿ 4.4 ಟಿವಿಆರ್ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವಾರ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯಲ್ಲಿ ಯಾವುದೇ ಕೋರ್ಟ್ ರೂಮ್ ದೃಶ್ಯಗಳಿರಲಿಲ್ಲ. ಸೆಂಟಿಮೆಂಟ್ ದೃಶ್ಯಗಳು ಹೆಚ್ಚಿದ್ದವು. ಹೀಗಾಗಿ ಟಿಆರ್‌ಪಿ ಬಿದ್ದಿರಬಹುದು.
ಇನ್ನು ಇತ್ತೀಚೆಗಷ್ಟೆ ಪ್ರಸಾರ ಶುರುವಾಗಿ 50 ಸಂಚಿಕೆ ಗಡಿ ದಾಟಿರುವ ಬಿಗ್ ಬಾಸ್ ರನ್ನರ್-ಅಪ್ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಜಿಗಿದಿದೆ. ಈ ಧಾರಾವಾಹಿಗೆ 4.5 ಟಿವಿಆರ್ ಲಭಿಸಿದೆ. ಮುದ್ದು ಸೊಸೆ ಧಾರಾವಾಹಿ ಬಾಲ್ಯವಿವಾಹದ ಕಥೆ ಆಗಿದೆ. ಕಿರುತೆರೆಯಲ್ಲಿ ದಾಖಲೆ ಬರೆದ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಈ ಹೊಸ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾಯಕಿಯಾಗಿ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಟಿಸುತ್ತಿದ್ದಾರೆ.
ಕಲರ್ಸ್ನ ನಂಬರ್ ಒನ್ ಧಾರಾವಾಹಿ ಬಗ್ಗೆ ನೋಡುವುದಾದರೆ, ಇದು ನಂದಗೋಕುಲ ಆಗಿದೆ. ಕಳೆದ ವಾರ ಅಪ್ಪನ ಮಾತನ್ನ ಮೀರಿದ ಮಗ ತಾನು ಪ್ರೀತಿಸಿದ ಹುಡುಗಿಗೆ ತಾಳಿ ಕಟ್ಟೇಬಿಟ್ಟ. ಇದಕ್ಕೆ ತಂದೆ ಹೇಗೆ ರಿಯಾಕ್ಟ್ ಮಾಡ್ತಾನೆ? ಮಗ - ಸೊಸೆಯ ಭವಿಷ್ಯವೇನು ಎಂಬ ಕುತೂಹಲ ವೀಕ್ಷಕರಿಗೆ ಇತ್ತು. ಈ ಕುತೂಹಲಭರಿತ ಸಂಚಿಕೆಗಳಿಗೆ 4.9 ಟಿವಿಆರ್ ಲಭಿಸಿದೆ.
Kannada Serial TRP: ಟಿಆರ್ಪಿಯಲ್ಲಿ ಮತ್ತೆ ಕಿಂಗ್ ಆದ ಕರ್ಣ: ಈ ಬಾರಿಯೂ ಬಂತು ಡಬಲ್ ಡಿಜಿಟ್
ಇನ್ನು ಒಟ್ಟಾರೆಯಾಗಿ ನೋಡುವುದಾದರೆ, 27ನೇ ವಾರದ ನಂಬರ್ ಧಾರಾವಾಹಿ ಕರ್ಣ ಆಗಿದೆ. ಇದು ಅರ್ಬನ್ + ರೂರಲ್‌ನಲ್ಲಿ 10.4 ಟಿವಿಆರ್, ರೂರಲ್ ಮಾರ್ಕೆಟ್‌ನಲ್ಲಿ 11.9 ಟಿವಿಆರ್ ಹಾಗೂ ಅರ್ಬನ್‌ನಲ್ಲಿ 8.9 ಟಿವಿಆರ್ ದಾಖಲಿಸಿದೆ. ಅರ್ಬನ್ + ರೂರಲ್ ಮಾರ್ಕೆಟ್‌ನಲ್ಲಿ 9.3 ಟಿವಿಆರ್ ದಾಖಲಿಸುವ ಮೂಲಕ ಅಣ್ಣಯ್ಯ ಸೀರಿಯಲ್ ಎರಡನೇ ಸ್ಥಾನಕ್ಕೇರಿದೆ. ಲಕ್ಷ್ಮೀ ನಿವಾಸ ಧಾರಾವಾಹಿ 9.0 ಟಿವಿಆರ್ ಪಡೆದು ಮೂರನೇ ಸ್ಥಾನ, 8.9 ಟಿವಿಆರ್ ಪಡೆಯುವ ಮೂಲಕ ನಾ ನಿನ್ನ ಬಿಡಲಾರೆ ಧಾರಾವಾಹಿ ನಾಲ್ಕನೇ ಸ್ಥಾನ ಮತ್ತು ಅಮೃತಧಾರೆ ಸೀರಿಯಲ್ 8.8 ಟಿವಿಆರ್ ದಾಖಲಿಸಿ ಐದನೇ ಸ್ಥಾನದಲ್ಲಿದೆ.