Bhagya Lakshmi Serial: ತಲೆಕೆಳಗಾದ ಪ್ಲ್ಯಾನ್: ಭಾಗ್ಯ ಮಾತು ಕೇಳಿ ಆದೀಶ್ವರ್ ಶಾಕ್
ಭಾಗ್ಯ ಮತ್ತು ಕುಸುಮಾ ಮಾತುಗಳನ್ನ ಕೇಳಿ ಆದೀಶ್ವರ್‌ಗೆ ಶಾಕ್ ಆಗಿದೆ. ಭಾಗ್ಯ ಮುಂದೆ ಆದೀಶ್ವರ್‌ಗೆ ಮುಖಭಂಗವಾಗಿದೆ. ಪ್ರತಿಬಾರಿ ಭಾಗ್ಯ ಮನೆಯವರು ಸರಿಯಿಲ್ಲ ಎಂದು ಪ್ರೂವ್ ಮಾಡಲು ಹೊರಟಾಗ ಆದೀಗೆ ಹಿನ್ನಡೆ ಆಗಿದೆ. ಇಷ್ಟಾದ್ಮೇಲೂ ಆದೀಶ್ವರ್ ಮತ್ತು ಮೀನಾಕ್ಷಿಗೆ ಸತ್ಯದ ಅರಿವಾಗುತ್ತೋ ಅಥವಾ ಇನ್ನೂ ಈ ಮದುವೆ ತಡೆಯಲು ಪ್ರಯತ್ನ ಮಾಡುತ್ತಾರೊ ಎಂಬುದು ನೋಡಬೇಕಿದೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ಭಾಗ್ಯ ತಂಗಿ ಪೂಜಾ ಹಾಗೂ ಕಿಶನ್ ಮದುವೆ ನಡೆಯ ಕೂಡದು ಎಂದು ಆದೀಶ್ವರ್ ಕಾಮತ್- ಮೀನಾಕ್ಷಿ ಹಾಗೂ ಕನ್ನಿಕಾ ಮಾಡುತ್ತಿರುವ ಪ್ಲ್ಯಾನ್ ಯಾವುದೂ ವರ್ಕ್ ಆಗುತ್ತಿಲ್ಲ. ತುಲಾಭಾರದ ಶಾಕ್ ನೀಡಿದ್ದರೂ ಇದನ್ನು ಭಾಗ್ಯ ತನ್ನ ಶಕ್ತಿ ಮೀರಿ ಪ್ರಯತ್ನಿಸಿ ಗೆಲುವು ಕಂಡಳು. ಕಿಶನ್ ಎಷ್ಟೇ ಹೇಳಿದರೂ ಭಾಗ್ಯ ಮನೆಯವರು ಒಳ್ಳೆಯವರು ಎಂಬುದನ್ನು ನಂಬಲು ಆದೀ-ಮೀನಾಕ್ಷಿ ತಯಾರಿಲ್ಲ. ಇವರಿಬ್ಬರ ತಲೆಗೆ ಕನ್ನಿಕಾ ದಿನಕ್ಕೊಂದು ಸುಳ್ಳು ಹೇಳಿ ಭಾಗ್ಯ ಮನೆಯವರನ್ನು ವಿಲನ್ ಆಗಿ ಮಾಡಿದ್ದಾಳೆ.
ಭಾಗ್ಯಗೆ ನಮ್ಮ ಆಸ್ತಿ ಮೇಲೆ ಕಣ್ಣು ಇದೆ. ಆಸ್ತಿಯನ್ನ ಕಬಳಿಸೋದಕ್ಕೆ ಭಾಗ್ಯ ಪ್ಲಾನ್ ಮಾಡ್ತಿದ್ದಾಳೆ ಅಂತ ಕನ್ನಿಕಾ ಹೇಳಿದ್ದನ್ನು ಆದೀಶ್ವರ್ ನಿಜವೆಂದು ಪರಿಗಣಿಸಿ ಮತ್ತೊಂದು ಪ್ಲ್ಯಾನ್ ಮಾಡಿದ್ದಾರೆ. ಆದರೆ, ಇದರಲ್ಲೂ ಆದೀಗೆ ಹಿನ್ನಡೆ ಆಗಿದೆ. ಆದೀ, ರಾಮ್ದಾಸ್ ಬಳಿ ಹೋಗಿ ಮದುವೆಯಾದ್ಮೇಲೆ ಕಿಶನ್‌ಗೆ ಆಸ್ತಿಯಲ್ಲಿ ಬಿಡಿಗಾಸೂ ಸಿಗುವುದಿಲ್ಲ ಎಂದು ವಿಲ್ ಬರೆಸಿ, ಆಗ ಭಾಗ್ಯ ಮನೆಯವರೇ ಈ ಮದುವೆಯನ್ನು ಕ್ಯಾನ್ಸಲ್ ಮಾಡುತ್ತಾರೆ.. ಅವರು ಆಸ್ತಿಗೋಸ್ಕರನೇ ಈ ಮದುವೆ ಮಾಡುತ್ತಿರುವುದು ಎಂದು ನಿಮಗೆ ಅರ್ಥ ಆಗುತ್ತದೆ ಎಂದು ಆದೀ ಹೇಳಿದ್ದಾನೆ.
ರಾಮ್ದಾಸ್ಗೆ ಭಾಗ್ಯ ಮೇಲೆ ಬೆಟ್ಟದಷ್ಟು ನಂಬಿಕೆ ಇದೆ. ಆಕೆಯ ಫ್ಯಾಮಿಲಿ ಅವರು ಆಸ್ತಿಗೋಸ್ಕರ ಸಂಬಂಧ ಬೆಳೆಸಿರುವುದಲ್ಲ ಎಂಬುದು ಗೊತ್ತಿದೆ. ಆದರೆ, ಕೊನೆಯ ಬಾರಿ ಆದೀಶ್ವರ್ ಮಾತಿಗೋಸ್ಕರ ವಿಲ್ನ ನಾಟಕ ಆಡಲು ಒಪ್ಪಿಕೊಳ್ಳುತ್ತಾರೆ. ಇಲ್ಲಾದರು ನಿಜಾಂಶ ತಿಳಿದು ಬದಲಾಗಲಿ ಎಂಬುದು ರಾಮ್ದಾಸ್ ಆಸೆ. ಮರುದಿನ ಭಾಗ್ಯ ಮನೆಯವರ ಸಮ್ಮುಖದಲ್ಲೇ ವಿಲ್ ಓದಲಾಗುತ್ತದೆ.
ರಾಮ್ದಾಸ್ ತನ್ನ ಎಲ್ಲ ಆಸ್ತಿಯನ್ನು ಸಮನಾಗಿ ಆದೀಶ್ವರ್, ಕನ್ನಿಕಾ, ಮಹಿತಾ ಹಾಗೂ ಮೀನಾಕ್ಷಿಗೆ ಹಂಚಿದ್ದಾರೆ. ಜೊತೆಗೆ ನನ್ನ ಆಸ್ತಿಯಲ್ಲಿ ನನ್ನ ಮಗ ಕಿಶನ್‌ಗೆ ಮದುವೆಯ ಬಳಿಕ ಕಿಂಚಿತ್ತೂ ಪಾಲು ನೀಡಲಾಗುವುದಿಲ್ಲ ಎಂದು ಬರೆದಿದ್ದಾರೆ. ಇದು ಭಾಗ್ಯ ಮನೆಯವರಿಗೆ ಸೇರಿದಂತೆ ಕಿಶನ್‌ಗೆ ಆಘಾತ ಉಂಟಾಗಿದೆ. ಸ್ವಂತ ಮಗನಿಗೆ ಯಾಕೆ ಹೀಗೆ ಮಾಡಿದಿರಿ ಎಂದು ಭಾಗ್ಯ ಕೇಳುತ್ತಾಳೆ. ಇದಕ್ಕೆ ರಾಮ್ದಾಸ್, ಕಿಶನ್‌ಗೆ ಸ್ವಲ್ಪವೂ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ. ಈಗ ಈ ಸಂಬಂಧ ನಿಮಗೆ ಒಕೆ ಇದ್ರೆ ಹೇಳಿ.. ಇಲ್ಲಾಂದ್ರೆ ಈ ಮದಿವೆಯನ್ನು ಕ್ಯಾನ್ಸಲ್ ಮಾಡೋಣ ಎಂದು ಹೇಳುತ್ತಾರೆ. ಈ ವಿಲ್ಗೆ ಕಿಶನ್ ಸಹ ಸಹಿ ಮಾಡುತ್ತಾನೆ.
ಈ ಸಂದರ್ಭ ಆದೀಶ್ವರ್ ಹಾಗೂ ಮೀನಾಕ್ಷಿ ಖುಷಿಯಾಗುತ್ತಾರೆ. ಭಾಗ್ಯ ಮನೆಯವರು ಖಂಡಿತವಾಗಿಯೂ ಈ ಮದುವೆ ಬೇಡ ಎಂದು ಹೇಳುತ್ತಾರೆ ಎಂದು ಅಂದುಕೊಳ್ಳುತ್ತಾನೆ. ಆದರೆ, ಇಲ್ಲಿ ಆಗಿದ್ದೇ ಬೇರೆ. ಆಸ್ತಿಯಲ್ಲಿ ಕಿಶನ್‌ಗೆ ಪಾಲು ಸಿಗುವುದಿಲ್ಲ ಅಂತ ಗೊತ್ತಾದ್ಮೇಲೂ.. ಮದುವೆ ಮಾತುಕತೆಯನ್ನ ಭಾಗ್ಯ ಮುಂದುವರೆಸುತ್ತಾಳೆ. ನಿಮ್ಮ ಆಸ್ತಿಯನ್ನ ನೋಡಿ ನಾವು ಮದುವೆಗೆ ಒಪ್ಪಿಕೊಳ್ಳಲಿಲ್ಲ. ಅಸಲಿಗೆ, ನಿಮ್ಮ ಮಗ ಅಂತ ಗೊತ್ತಾಗೋಕೆ ಮುನ್ನವೇ ನಾವು ಮದುವೆಗೆ ಒಪ್ಪಿಕೊಂಡಿದ್ವಿ. ಕಿಶನ್ ಗುಣ ಮಾತ್ರ ನಮಗೆ ಮೆಚ್ಚುಗೆಯಾಗಿದ್ದು ಎಂದು ಭಾಗ್ಯ ಹೇಳುತ್ತಾಳೆ. ಕುಸುಮಾ ಸಹ ಆಸ್ತಿ ವಿಚಾರಕ್ಕೆ ಮಹತ್ವ ಕೊಡುವುದಿಲ್ಲ.
ಭಾಗ್ಯ ಮತ್ತು ಕುಸುಮಾ ಮಾತುಗಳನ್ನ ಕೇಳಿ ಆದೀಶ್ವರ್‌ಗೆ ಶಾಕ್ ಆಗಿದೆ. ಭಾಗ್ಯ ಮುಂದೆ ಆದೀಶ್ವರ್‌ಗೆ ಮುಖಭಂಗವಾಗಿದೆ. ಪ್ರತಿಬಾರಿ ಭಾಗ್ಯ ಮನೆಯವರು ಸರಿಯಿಲ್ಲ ಎಂದು ಪ್ರೂವ್ ಮಾಡಲು ಹೊರಟಾಗ ಆದೀಗೆ ಹಿನ್ನಡೆ ಆಗಿದೆ. ಇಷ್ಟಾದ್ಮೇಲೂ ಆದೀಶ್ವರ್ ಮತ್ತು ಮೀನಾಕ್ಷಿಗೆ ಸತ್ಯದ ಅರಿವಾಗುತ್ತೋ ಅಥವಾ ಇನ್ನೂ ಈ ಮದುವೆ ತಡೆಯಲು ಪ್ರಯತ್ನ ಮಾಡುತ್ತಾರೊ ಎಂಬುದು ನೋಡಬೇಕಿದೆ.
Bhavya Gowda: ಕಿರುಚಾಡಿಕೊಂಡು ಕಿವಿ ಚುಚ್ಚಿಸಿಕೊಂಡ ಕರ್ಣನ ನಾಯಕಿ ಭವ್ಯಾ ಗೌಡ: ವಿಡಿಯೋ ನೋಡಿ