BBK 12: ಈ ವಾರವೂ ಅಶ್ವಿನಿಗೆ ಕಿಚ್ಚನಿಂದ ಕ್ಲಾಸ್ ಖಚಿತ, ಕಾಕ್ರೋಚ್ಗೂ ಶುರುವಾಗಿದೆ ನಡುಕ
ಕಳೆದ ವೀಕೆಂಡ್ನಲ್ಲಿ ರಕ್ಷಿತಾ ಶೆಟ್ಟಿ ವಿಚಾರವಾಗಿ ಅಶ್ವಿನಿ ಗೌಡ ಹಾಗೂ ಜಾನ್ವಿಗೆ ಕಿಚ್ಚ ಸುದೀಪ್ ಮೈಚಳಿ ಬಿಡಿಸಿದ್ದರು. ಆದರೆ, ಆ ತಪ್ಪನ್ನು ಅಶ್ವಿನಿ ಗೌಡ ಇನ್ನೂ ಸರಿಪಡಿಸಿಕೊಂಡಿಲ್ಲ. ಈ ವಾರ ಸಾಕಷ್ಟು ತಪ್ಪು ಮಾಡಿದ್ದಾರೆ. ಬೇರೆಯವರ ತಪ್ಪನ್ನು ಬೊಟ್ಟು ಮಾಡಿ ತೋರಿಸುವ ಅಶ್ವಿನಿ, ತಾನೇ ಆ ತಪ್ಪು ಮಾಡಿದಾಗ ಅದನ್ನು ಒಪ್ಪಲು ತಯಾರು ಇರುವುದಿಲ್ಲ. ಈ ವಾರ ಇದು ಅನೇಕ ಬಾರಿ ಸಂಭವಿಸಿದೆ.
Varada Kathe Kichchana Jothe BBK 12 -
ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg boss kannada 12) ಇಂದು ನಾಲ್ಕನೇ ವಾರದ ‘ವಾರದ ಕತೆ ಕಿಚ್ಚನ ಜೊತೆ’ ಎಪಿಸೋಡ್ ನಡೆಯಲಿದೆ. ಇಡೀ ಕರ್ನಾಟಕ ಜನತೆ ಈ ಸಂಚಿಕೆಗೆ ಕಾದು ಕುಳಿತಿದೆ. ಯಾಕೆಂದರೆ, ಈ ವಾರ ದೊಡ್ಮನೆಯಲ್ಲಿ ಅನೇಕ ಮಹತ್ವದ ಘಟನೆಗಳು ನಡೆದವು. ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಕೊಟ್ಟರು, ರೂಲ್ಸ್ ಬ್ರೇಕ್, ಬಿಬಿಕೆ 12ರ ಮೊದಲ ಕ್ಯಾಪ್ಟನ್, ಜೈಲಿನಲ್ಲಿ ಅಶ್ವಿನಿ ಆರ್ಭಟ, ಕಾಕ್ರೋಚ್ ಸುಧಿ ಪದ ಬಳಕೆ ಹೀಗೆ ಅನೇಕ ವಿಷಯಗಳು ಇಂದಿನ ಎಪಿಸೋಡ್ನಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ.
ಕಳೆದ ವೀಕೆಂಡ್ನಲ್ಲಿ ರಕ್ಷಿತಾ ಶೆಟ್ಟಿ ವಿಚಾರವಾಗಿ ಅಶ್ವಿನಿ ಗೌಡ ಹಾಗೂ ಜಾನ್ವಿಗೆ ಕಿಚ್ಚ ಸುದೀಪ್ ಮೈಚಳಿ ಬಿಡಿಸಿದ್ದರು. ಆದರೆ, ಆ ತಪ್ಪನ್ನು ಅಶ್ವಿನಿ ಗೌಡ ಇನ್ನೂ ಸರಿಪಡಿಸಿಕೊಂಡಿಲ್ಲ. ಈ ವಾರ ಸಾಕಷ್ಟು ತಪ್ಪು ಮಾಡಿದ್ದಾರೆ. ಬೇರೆಯವರ ತಪ್ಪನ್ನು ಬೊಟ್ಟು ಮಾಡಿ ತೋರಿಸುವ ಅಶ್ವಿನಿ, ತಾನೇ ಆ ತಪ್ಪು ಮಾಡಿದಾಗ ಅದನ್ನು ಒಪ್ಪಲು ತಯಾರು ಇರುವುದಿಲ್ಲ. ಈ ವಾರ ಇದು ಅನೇಕ ಬಾರಿ ಸಂಭವಿಸಿದೆ. ತನ್ನನ್ನು ಯಾರೂ ಏಕವಚನದಲ್ಲಿ ಮಾತನಾಡಬಾರದು.. ಆದರೆ, ಇವರು ಗಿಲ್ಲಿ, ಕಾವ್ಯ, ರಕ್ಷಿತಾ ಅವರನ್ನು ಹೇಗೆ ಬೇಕಾದರು ಏಕವಚನದಲ್ಲಿ ಕರೆಯಬಹುದು.
ಇದಿಷ್ಟೇ ಅಲ್ಲದೆ ಕಳಪೆ ಕೊಟ್ಟಾಗ ಅಶ್ವಿನಿ ಅವರು ರೂಲ್ಸ್ ಫಾಲೋ ಮಾಡಿಲ್ಲ. ಅವರು ನಿಯಮ ಮುರಿದ ಆ್ಯಪಲ್ ತಿಂದಿದ್ದಾರೆ. ಇದನ್ನು ಅವರು ಬೇಕಂತಲೇ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಬಳಿಕ ಅವರು ಕಜ್ಜಾಯ ತಿಂದಿದ್ದಾರೆ. ಈ ಎಲ್ಲ ನಿಯಮ ಮುರಿದಿದ್ದಕ್ಕೆ ಇಡೀ ಮನೆಗೆ ಬಿಗ್ ಬಾಸ್ ಶಿಕ್ಷೆ ನೀಡಬಹುದು. ಆ ವಿಷಯ ಗೊತ್ತಿದ್ದರೂ ಕೂಡ ಅಶ್ವಿನಿ ಗೌಡ ಅವರು ಈ ರೀತಿ ನಡೆದುಕೊಂಡಿದ್ದಾರೆ. ಇನ್ನು ಕಳಪೆ ಆಗಿ ಜೈಲು ಸೇರಿದ ಸ್ಪರ್ಧಿಗಳು ತರಕಾರಿ ಹೆಚ್ಚಿ ಕೊಡಬೇಕು. ಆದರೆ ಅಶ್ವಿನಿ ಗೌಡ ಅವರು ಈ ವಿಚಾರದಲ್ಲಿ ಅತಿ ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ. ತರಕಾರಿ ಕಟ್ ಮಾಡಿ ಕೊಡಲು ವಿಳಂಬ ಮಾಡಿದ್ದಾರೆ. ಈ ವಿಚಾರವಾಗಿ ಸುದೀಪ್ ಕ್ಲಾಸ್ ತೆಗೆದುಕೊಳ್ಳುವುದು ಖಚಿತ.
ಇನ್ನು ಕಾಕ್ರೋಚ್ ಸುಧಿ ಅವರು ರಕ್ಷಿತಾ ಶೆಟ್ಟಿಗೆ ಅವಹೇಳನ ಆಗುವ ರೀತಿಯಲ್ಲಿ ಮಾತನಾಡಿದ್ದಾರೆ. ರಕ್ಷಿತಾ ಅವರನ್ನು ಸೆಡೆ ಎಂದು ಕರೆದಿದ್ದರು. ಕೇಳಿದ್ದಕ್ಕೆ ಇದು ನಮ್ಮ ಏರಿಯಾದಲ್ಲಿ ಕಾಮನ್ ಆಗಿ ಮಾತಾಡೋ ವರ್ಸ್, ಸೆಡೆ ಎಂದರೆ ಚೈಲ್ಡ್, ಚಿಕ್ಕ ಹುಡುಗಿ ಅಂತ ಅರ್ಥ ಎಂದೆಲ್ಲ ಹೇಳಿದ್ದರು. ನಿನ್ನೆಯ ಎಪಿಸೋಡ್ನಲ್ಲಿ ಹಂಗಿಸುವ ರೀತಿಯಲ್ಲಿ ಸುಧಿ ಅವರು ರಕ್ಷಿತಾ ಬಳಿ ಕ್ಷಮೆ ಕೇಳಿದ್ದು ಕೂಡ ವಿಚಿತ್ರವಾಗಿತ್ತು. ಇದು ಇಂದಿನ ಎಪಿಸೋಡ್ನಲ್ಲಿ ಸದ್ದು ಮಾಡುವುದು ಖಚಿತ.
ಅದರಂತೆ ವೈಲ್ಡ್ ಕಾರ್ಡ್ ಸ್ಪರ್ಧಿ ಸೂರಜ್ ಸಿಂಗ್ ತಮ್ಮ ತಂಡಕ್ಕೋಸ್ಕರ ಕ್ಯಾಪ್ಟನ್ಸಿ ಟಾಸ್ಕ್ನ ವಿಶೇಷ ಅಧಿಕಾರ ಕೈಬಿಟ್ಟರು. ಇದಕ್ಕೆ ಸುದೀಪ್ ಪ್ರತಿಕ್ರಿಯೆ ಏನು ಎಂಬುದು ನೋಡಬೇಕಿದೆ. ಜನರು ಸೂರಜ್ ಅವರ ನಡತೆಗೆ ಮೆಚ್ಚುಗೆ ಸೂಚಿಸಿದ್ದು ಕಿಚ್ಚನ ಚಪ್ಪಾಳೆ ಸಿಗಬೇಕು ಎಂದಿದ್ದಾರೆ. ಮತ್ತೊಂದೆಡೆ ಕಳೆದ ಮೂರು ವಾರಗಳಿಂದ ಡಲ್ ಆಗಿದ್ದ ಧ್ರುವಂತ್ ಈ ವಾರ ಎದ್ದು ಬಂದಿದ್ದಾರೆ. ಇದರಿಂದ ಅವರಿಗೆ ‘ಉತ್ತಮ’ ಕೂಡ ಸಿಕ್ಕಿದೆ. ಹೀಗಾಗಿ ಕಿಚ್ಚನ ಚಪ್ಪಾಳೆ ಇವರಿಗೆ ಸಿಕ್ಕರೂ ಅಚ್ಚರಿ ಪಡಬೇಕಿಲ್ಲ.