ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suvarna Gruhamantri: ಸ್ಟಾರ್ ಸುವರ್ಣ ವಾಹಿನಿಯಲ್ಲಿ "ಸುವರ್ಣ ಗೃಹಮಂತ್ರಿ''ಕಾರ್ಯಕ್ರಮದ ಸಂಭ್ರಮ..

Suvarna Gruhamantri: "ಸುವರ್ಣ ಗೃಹಮಂತ್ರಿ"ಯು ಯಶಸ್ವಿ 500 ಸಂಚಿಕೆ ಗಳನ್ನು ಪೂರೈಸುವ ಸಂಭ್ರಮದಲ್ಲಿದೆ. ಈ ಸಂಭ್ರಮವನ್ನು ಮತ್ತಷ್ಟು ಸಂಭ್ರಮಿಸಲು ಮೊಟ್ಟ ಮೊದಲ ಬಾರಿಗೆ ಜೊತೆ ಯಾಗಲಿದೆ ನಟ ರವಿ ಶಂಕರ್ ಗೌಡ ಅವರ ಕುಟುಂಬ... ಈ ಸ್ಪೆಷಲ್ ಎಪಿಸೋಡ್ ಅಲ್ಲಿ ನಟ ರವಿ ಶಂಕರ್ ತಮ್ಮದೇ ಮನೆಗೆ ಹೋಗಿ ತನ್ನ ಕುಟುಂಬದ ಜೊತೆ ಮಾತುಕತೆ ನಡೆಸಲಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸುವರ್ಣ ಗೃಹಮಂತ್ರಿ ಕಾರ್ಯಕ್ರಮ!

-

Profile Pushpa Kumari Oct 24, 2025 5:33 PM

ಬೆಂಗಳೂರು: ಕರ್ನಾಟಕದ ಗೃಹಿಣಿಯರ ಮನಗೆದ್ದು ಮನೆಮಾತಾಗಿರೋ ಜನಪ್ರಿಯ ಕಾರ್ಯ ಕ್ರಮ "ಸುವರ್ಣ ಗೃಹಮಂತ್ರಿ" (Suvarna Gruhamantri) ಖ್ಯಾತ ನಟ ರವಿಶಂಕರ್ ಗೌಡ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮ ಕನ್ನಡ ಕಿರುತೆರೆಯಲ್ಲಿ ಪ್ರತಿದಿನ ಪ್ರಸಾರವಾಗುವ ಸಾಮಾನ್ಯ ಜನರ ರಿಯಾಲಿಟಿ ಶೋ ಆಗಿದೆ. ತನಗಾಗಿ ಏನನ್ನೂ ಬಯಸದೇ ತನ್ನವರ ಖುಷಿಗಾಗಿ ನಿರಂತರವಾಗಿ ಹಂಬಲಿಸುವ ಗೃಹಿಣಿಯರನ್ನು ಗೌರವಿಸುವ ನಿಟ್ಟಿನಲ್ಲಿ ಕರ್ನಾಟಕದ ಮನೆ ಮನೆಗೆ ಹೋಗಿ ದಿನಕ್ಕೊಂದು ಕುಟುಂಬವನ್ನು ಭೇಟಿ ಮಾಡಿ, ಗಂಡ ಹೆಂಡತಿ ಅವರನ್ನು ಆಟ ಆಡಿಸಿ , ಮಾತ ನಾಡಿಸಿ, ಆಕೆಯ ಕುಟುಂಬದವರ ಪರಿಚಯ ಮಾಡಿಕೊಂಡು, ಅವರಿ ಗಾಗಿ ಆ ದಿನವನ್ನು ಮೀಸಲಿಟ್ಟು ರಾಣಿ ಸೀಟ್ ನಲ್ಲಿ ಅವರನ್ನ ಕೂರಿಸಿ ಗೌರವಿಸುತ್ತಾ ಥ್ಯಾಂಕ್ಸ್ ಹೇಳುವ ಕಾರ್ಯಕ್ರಮವೇ ಈ "ಸುವರ್ಣ ಗೃಹಮಂತ್ರಿ". ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ನಟ ರವಿ ಶಂಕರ್ ಗೌಡ ರವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆಯ ಉಡುಗೊರೆ ಯಾಗಿ ಬಾಗಿನ ನೀಡಿ ಗೌರವಿಸಿ ಇಡೀ ಕುಟುಂಬವನ್ನು ಒಗ್ಗೂಡಿಸಿ ಸಂಭ್ರಮಿ ಸುವುದೇ 'ಸುವರ್ಣ ಗೃಹಮಂತ್ರಿ' ಕಾರ್ಯಕ್ರಮದ ಸಾರ್ಥಕತೆ ಆಗಿದೆ.

ಇದನ್ನೂ ಓದಿ:Green Movie: ರಾಜ್ ವಿಜಯ್ ನಿರ್ದೇಶನದ ‘ಗ್ರೀನ್’ ಚಿತ್ರ ಈ ವಾರ ತೆರೆಗೆ

ಇದೀಗ "ಸುವರ್ಣ ಗೃಹಮಂತ್ರಿ"ಯು ಯಶಸ್ವಿ 500 ಸಂಚಿಕೆ ಗಳನ್ನು ಪೂರೈಸುವ ಸಂಭ್ರಮದಲ್ಲಿದೆ. ಈ ಸಂಭ್ರಮವನ್ನು ಮತ್ತಷ್ಟು ಸಂಭ್ರಮಿಸಲು ಮೊಟ್ಟ ಮೊದಲ ಬಾರಿಗೆ ಜೊತೆಲ ಯಾಗಲಿದೆ ನಟ ರವಿ ಶಂಕರ್ ಗೌಡ ಅವರ ಕುಟುಂಬ. ಈ ಸ್ಪೆಷಲ್ ಎಪಿಸೋಡ್ ಅಲ್ಲಿ ನಟ ರವಿ ಶಂಕರ್ ತಮ್ಮದೇ ಮನೆಗೆ ಹೋಗಿ ತನ್ನ ಕುಟುಂಬದ ಜೊತೆ ಮಾತುಕತೆ ನಡೆಸಲಿದ್ದಾರೆ.

ಆಟ, ತುಂಟಾಟದ ಜೊತೆ ಮಸ್ತ್ ಮನರಂಜನೆ ಯನ್ನೊಳಗೊಂಡಿರುವ "ಸುವರ್ಣ ಗೃಹಮಂತ್ರಿ"ಯ 500ನೇ ಸಂಚಿಕೆ ಇದೇ ಅಕ್ಟೋಬರ್ 27 ರಂದು ಸಂಜೆ 5 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ನೀವು ವೀಕ್ಷಣೆ ಮಾಡಬಹುದು.