ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ರೋಚಕ ಘಟ್ಟದತ್ತ ಸಾಗುತ್ತಿದೆ. ಆದೀಶ್ವರ್ ಕಾಮತ್ ಪಾತ್ರದಲ್ಲಿ ಮಿಂಚುತ್ತಿರುವ ಹರೀಶ್ ರಾಜ್ ಧಾರಾವಾಹಿಗೆ ಹೊಸ ಕಳೆ ತಂದುಕೊಟ್ಟಿದ್ದಾರೆ. ಭಾಗ್ಯ ಹಾಗೂ ಆದೀಶ್ವರ್ನ ಜಗಳ ಸಖತ್ ಕುತೂಹಲ ಕೆರಳಿಸುತ್ತಿದೆ. ಭಾಗ್ಯ ರಾಮ್ದಾಸ್ ಮನೆಗೆ ಬಂದು ಆದೀ ಕಿಶನ್ನ ಅಣ್ಣ ಎಂಬ ಸತ್ಯ ಗೊತ್ತಾಗಿದೆ. ಬಳಿಕ ನಡೆದ ಘಟನೆಗೆಲ್ಲ ಕ್ಷಮೆ ಕೇಳಿದ್ದಾಳೆ. ಆದರೆ, ಆದೀ ಸಿಟ್ಟು ಇಲ್ಲಿಂದ ದುಪ್ಪಟ್ಟಾಗಿದೆ. ಕಿಶನ್ ಹಾಗೂ ಪೂಜಾ ಮದುವೆ ಯಾವುದೇ ಕಾರಣಕ್ಕೂ ಆಗಲು ಬಿಡುವುದಿಲ್ಲ ಎಂದಿದ್ದಾರೆ. ಅಲ್ಲದೆ ಭಾಗ್ಯ ಕೆಟ್ಟವಳೆಂದು ಪ್ರೂವ್ ಮಾಡುತ್ತೇನೆ ಎಂದು ರಾಮ್ದಾಸ್ ಎದುರು ಚಾಲೆಂಜ್ ಮಾಡಿದ್ದಾನೆ.
ಮೊನ್ನೆ ಕಿಶನ್ ಅಣ್ಣ ಎಂದು ತಿಳಿಯದೆ ಭಾಗ್ಯ-ಕುಸುಮಾ ಆದೀ ಜೊತೆ ಆಡಿದ ಜಗಳ ಆಡಿದ್ದರು. ಯಾವ ಮಟ್ಟಿಗೆ ಎಂದರೆ ಆದೀಶ್ವರ್ನ ಕಾರು ಭಾಗ್ಯ ಕಾರಿಗೆ ಒರೆಸಿಕೊಂಡು ಹೋಯಿತೆಂದು ಕುಸುಮಾ ಆದೀ ಜೊತೆ ಜಗಳವಾಡಿ ಹಣ ವಸೂಲಿ ಮಾಡಿದ್ದಲ್ಲದೆ ಕೋಪದಲ್ಲಿ ಆದೀ ಕಾರಿನ ಗಾಜಿಗೆ ಕಲ್ಲು ಬಿಸಾಡಿ ಗಾಜು ಪುಡಿಪುಡಿ ಮಾಡಿದ್ದರು. ಆದರೆ, ಆ ಸಂದರ್ಭ ಆದೀ ಕಿಶನ್ನ ಅಣ್ಣ ಎಂದು ಯಾರಿಗೂ ತಿಳಿದಿರಲಿಲ್ಲ.
ಇದರ ಮಧ್ಯೆ ನೀನು ಒಮ್ಮೆ ಭಾಗ್ಯಾಳನ್ನು ಮೀಟ್ ಮಾಡು ಅವರು ಎಷ್ಟು ಒಳ್ಳೆಯವರು ಎಂಬುದು ನಿನಗೆ ಗೊತ್ತಾಗುತ್ತೆ ಎಂದು ಕಿಶನ್ ಆದೀ ಬಳಿ ಹೇಳಿದ್ದ. ಆದರೆ, ಅದಕ್ಕೆ ಮುಹೂರ್ತ ಕೂಡಿ ಬರಲಿಲ್ಲ. ಬಳಿಕ ಭಾಗ್ಯ ಹಾಗೂ ಕುಸುಮಾ ಅವರೇ ರಾಮ್ದಾಸ್ ಮನೆಗೆ ಬಂದಿದ್ದಾರೆ. ಅಲ್ಲಿ ಆದೀ ಹಾಗೂ ಭಾಗ್ಯ ಮುಖಾಮುಖಿ ಆಗಿದ್ದಾರೆ. ಭಾಗ್ಯ-ಕುಸುಮಾಗೆ ಆದೀಯನ್ನು ಕಂಡು ಶಾಕ್ ಆಗಿದೆ. ಅಯ್ಯೋ ಇವನೇನಾ ಕಿಶನ್ ಅಣ್ಣ.. ಎಂಥ ಎಡವಟ್ಟು ಆಗೋಯ್ತು ಎಂದು ಕುಸುಮಾ ಭಾಗ್ಯ ಬಳಿ ಹೇಳಿದ್ದಾಳೆ.
ಭಾಗ್ಯ ಆದೀ ಬಳಿ ಕ್ಷಮೆ ಕೂಡ ಕೇಳಿದ್ದಾಳೆ. ನಮ್ಮಿಂದ ನಿಮಗೆ ಬೇಜಾರಾಗಿದ್ದರೆ ದಯವಿಟ್ಟು ಕ್ಷಮಿಸಿಬಿಡಿ.. ಎಲ್ಲ ಮರೆತುಬಿಡಿ ಎಂದು ಹೇಳಿದ್ದಾಳೆ. ಆದರೆ, ಆದೀ ಇದನ್ನ ಇಲ್ಲಿಗೆ ಬಿಡುವಂತೆ ಕಾಣುತ್ತಿಲ್ಲ. ಈ ಮದುವೆ ಸಂಬಂಧ ವರ್ಕ್ ಆಗುತ್ತೆ ಅಂತ ನನ್ಗೆ ಅನಿಸುತ್ತಿಲ್ಲ ಎಂದು ಹೇಳಿದ್ದಾನೆ. ಬಳಿಕ ಭಾಗ್ಯ-ಕುಸುಮಾ ಅಲ್ಲಿಂದು ಹೋಗಿದ್ದಾರೆ. ಇವರಿಬ್ಬರ ನಿರ್ಗಮನದ ಬಳಿಕ ರಾಮ್ದಾಸ್ ಹಾಗೂ ಆದೀ ನಡುವೆ ಮಾತಿನ ಜಟಾಪಟಿ ನಡೆದಿದೆ.
ನೀವು ಹೇಳೋ ತರ ಆ ಭಾಗ್ಯ ಒಳ್ಳೆ ಗುಣ-ನಡತೆ-ಸಂಸ್ಕಾರ ಇರೋಳು ಅಲ್ಲ.. ಅದನ್ನು ನಾನು ಒಪ್ಪೋದೆ ಇಲ್ಲ.. ಆ ಭಾಗ್ಯ ಎಂತವಳು, ಅವರ ಮನೆಯವರು ಎಂತವರು ಅಂತ ನಾನು ಪ್ರೂವ್ ಮಾಡ್ತೇನೆ.. ಅವರ ನಿಜವಾದ ಬಣ್ಣ ಬಯಲು ಮಾಡುತ್ತೇನೆ ಎಂದು ರಾಮ್ದಾಸ್ ಬಳಿ ಆದೀ ಹೇಳಿದ್ದಾರೆ. ಭಾಗ್ಯಾಳ ಬಗ್ಗೆ ಚೆನ್ನಾಗಿ ಅರಿತಿರುವ ರಾಮ್ದಾಸ್ ಕೋಪಗೊಂಡು, ಸರಿ.. ಪ್ರೂವ್ ಮಾಡು, ಭಾಗ್ಯ ನೀನು ಅಂದುಕೊಂಡಿರುವ ತರ ಅಲ್ಲ ಅಂತ ನಿನ್ಗೆ ಗೊತ್ತಾಗುತ್ತೆ.. ಅವಳ ಮೇಲೆ ನಂಬಿಕೆ ನನಗೆ ಇದೆ, ಭಾಗ್ಯ ಮತ್ತು ಅವರ ಮನೆಯವರು ತುಂಬಾ ಒಳ್ಳೆಯವರು.. ಎಲ್ಲಿಯಾದರೂ ನೀನು ಹೇಳಿದ್ದು ನಿಜ ಆಗಿದ್ದರೆ ಈ ರಾಮ್ದಾಸ್ ಕಾಮತ್ ನೀನು ಹೇಳಿದ್ದನ್ನ ಚಾಚೂ ತಪ್ಪದೆ ಪಾಲಿಸ್ತಾನೆ ಎಂದು ಹೇಳಿದ್ದಾರೆ.
ಸದ್ಯ ಭಾಗ್ಯ ಲಕ್ಷ್ಮೀ ಧಾರಾವಾಹಿ ಸಾಕಷ್ಟು ರೋಚಕತೆ ಸೃಷ್ಟಿಸುತ್ತದೆ. ಭಾಗ್ಯ ಒಳ್ಳೆಯವಳು ಎಂಬ ವಿಚಾರ ಆದೀಗೆ ಹೇಗೆ ಗೊತ್ತಾಗುತ್ತದೆ? ಅಥವಾ ಭಾಗ್ಯಾಳನ್ನು ಆದೀಯ ಎದುರು ಕೆಟ್ಟವಳೆಂದು ಬಿಂಬಿಸಲು ಕನ್ನಿಕಾ ಏನು ಪ್ಲ್ಯಾನ್ ಮಾಡುತ್ತಾಳೆ ಎಂಬುದು ನೋಡಬೇಕಿದೆ. ಮತ್ತೊಂದೆಡೆ ಆದೀ ಜೊತೆ ನಡೆದ ಘಟನೆಯನ್ನು ಭಾಗ್ಯ ಹಾಗೂ ಕುಸುಮಾ ಹೇಗೆ ಪ್ಯಾಚಪ್ ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
Shivarajkumar: 40 ವರ್ಷದ ಸಂಭ್ರಮ: ಕಲರ್ಸ್ನ ದಶಕದ ಮಹೋತ್ಸವದಲ್ಲಿ ಶಿವಣ್ಣ-ಗೀತಕ್ಕ