ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಕಥಾನಾಯಕಿ ಭಾಗ್ಯ ಹೊಸ ಉದ್ಯಮಕ್ಕೂ ತೊಂದರೆ ತಪ್ಪಿಲ್ಲ. ತಾಂಡವ್-ಶ್ರೇಷ್ಠಾ-ಕನ್ನಿಕಾ ಭಾಗ್ಯಾಗೆ ತೊಂದರೆ ಕೊಡಲು ಒಂದಲ್ಲ ಒಂದು ದಾರಿ ಹುಡುಕುತ್ತಲೇ ಇದ್ದಾರೆ. ಮೊದಲಿಗೆ ದೊಡ್ಡ ಐವ್ ಸ್ಟಾರ್ ಹೋಟೆಲ್ನಲ್ಲಿ ಆರಾಮವಾಗಿ ಚೆಫ್ ಕೆಲಸ ಮಾಡುತ್ತಿದ್ದಳು, ಅಲ್ಲಿ ತಾಂಡವ್-ಶ್ರೇಷ್ಠಾ ಅವರು ಕನ್ನಿಕಾಳ ಸಹಾಯ ಪಡೆದು ಕೆಲಸದಿಂದ ಕಿತ್ತೆಸೆದರು. ಬಳಿಕ ಎಷ್ಟೇ ಕೆಲಸ ಹುಡುಕಿದರೂ ಯಾವುದೂ ಸಿಗಲಿಲ್ಲ. ಕೊನೆಯದಲ್ಲಿ ಯಾವುದೂ ಕೆಲಸವಿಲ್ಲದೆ ರೆಸಾರ್ಟ್ ಒಂದರಲ್ಲಿ ಜೋಕರ್ ವೇಷ ತೊಟ್ಟು ನೃತ್ಯ ಮಾಡುವ ಕೆಲಸ ಕೂಡ ಮಾಡಿದಳು. ಆದರೆ, ಇದರ ಮೇಲೂ ಶ್ರೇಷ್ಠಾ-ತಾಂಡವ್ ವಕ್ರದೃಷ್ಠಿಯಿಟ್ಟು ಕೆಲಸ ಕಳೆದುಕೊಳ್ಳುವಂತೆ ಮಾಡಿದರು.
ಇದರಿಂದ ರೋಸಿಹೋದ ಭಾಗ್ಯ ಯಾರ ಹಂಗು ಬೇಡವೆಂದು ತಾನೇ ಸ್ವತಃ ಹೊಸ ಉದ್ಯಮ ಆರಂಭಿಸಲಿದ್ದಾಳೆ. ಆದರೆ, ಇದಕ್ಕೂ ಕನ್ನಿಕಾಳ ಕಣ್ಣು ಬಿದ್ದಿದೆ. ಭಾಗ್ಯ ಆಫೀಸ್ನಲ್ಲಿ ಕೆಲಸ ಮಾಡುವವರಿಗೆ ಊಟದ ಡಬ್ಬ ತಲುಪಿಸಿ, ಮನೆಯಿಂದಲೇ ಅವಳು ಅಡುಗೆ ಮಾಡಿ ಹಾಸ್ಟೆಲ್ ಹುಡುಗರಿಗೆ, ಆಫೀಸ್‌ನಲ್ಲಿದ್ದವರಿಗೆ ಬಾಕ್ಸ್ ಕಳಿಸಿಕೊಡುವ ಪ್ಲಾನ್ ಮಾಡಿದ್ದಾಳೆ. ಅದಕ್ಕೆ ಮನೆಯವರೆಲ್ಲರೂ ಸಹಕಾರ ನೀಡಿದ್ದಾರೆ. ಇದಕ್ಕೆ ಕೈ ರುಚಿ ಎಂಬ ಹೆಸರು ಕೂಡ ಇಡಲಾಗಿದೆ. ಆದರೆ, ಭಾಗ್ಯಾಗೆ ಮೊದಲ ದಿನ ಯಾವುದೇ ಆರ್ಡರ್ ಬರಲಿಲ್ಲ.
ಭರ್ಜರಿ ಪ್ರಚಾರ ಮಾಡಿದ್ದು ಬಿಟ್ಟರೆ ಒಂದೇ ಒಂದು ಫೋನ್ ಕಾಲ್ ಬಂದಿಲ್ಲ. ಭಾಗ್ಯ ಜೊತೆಗೆ ಸುಂದರಿ ಮತ್ತು ಪೂಜಾ ಸೇರಿಕೊಂಡು ಊರಿನ ತುಂಬೆಲ್ಲಾ ಕೈತುತ್ತಿನ ಊಟದ ಮೆನು ಇರುವ ಪೋಸ್ಟರ್ ಹಂಚಿದ್ದರು. ಮನೆಗೆ ಬಂದು ಒಂದಾದರು ಫೋನ್ ಕಾಲ್ ಬರುತ್ತ ಎಂದು ಕಾದು ಕುಳಿತಿದ್ದಾಳೆ. ಆದರೆ ಒಂದೇ ಒಂದು ಊಟದ ಕರೆ ಬಂದಿಲ್ಲ. ಯಾವುದೇ ಕಾಲ್ ಬರುವುದಿಲ್ಲ ಎಂಬುದನ್ನು ಅರಿತ ಭಾಗ್ಯ ಮತ್ತೊಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ.
ಭಾಗ್ಯ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಾ ಇರುತ್ತಾಳೆ. ಆಗ ಪೂಜಾ ಬಂದು ಇನ್ನು ಆರ್ಡರ್ ಬಂದಿಲ್ಲ, ನೀನು ಯಾಕೆ ಅಡುಗೆ ಮಾಡ್ತಾ ಇದ್ದೀಯಾ ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಭಾಗ್ಯ, ಅವಕಾಶ ಆಗಲು.. ಅದೃಷ್ಟ ಆಗಲಿ.. ಅದಾಗೆ ಅದು ನಮ್ಮನ್ನ ಹುಡ್ಕೊಂಡು ಬರಲ್ಲ.. ಕೆಲವೊಂದು ಸಲ ನಾವೇ ಅದನ್ನು ಹುಡ್ಕೊಂಡು ಹೋಗಬೇಕು.. ನಾನು ಆ ಕೆಲಸ ಮಾಡ್ತೀನಿ. ಅವಕಾಶಗಳು ತಾನಾಗಿ ತಾನೇ ಬಂದು ಬಾಗಿಲು ತಟ್ಟುಂತೆ ಅಂತ ಕಾಯ್ತಾ ಕೂರೋದು ಮೂರ್ಖತನ.. ಅವಕಾಶಗಳನ್ನು ನಾವಾಗಿ ನಾವೇ ಹುಡ್ಕೊಂಡು ಹೋಗಬೇಕು ಎಂದು ಹೇಳಿದ್ದಾಳೆ.
ಹೀಗಾಗಿ ಭಾಗ್ಯ ಊಟದ ಡಬ್ಬ ಹಿಡಿದುಕೊಂಡು ಆಫಿಸ್ಗಳ ಮುಂದೆ ಹೋಗಿ ರುಚಿ-ರುಚಿಯಾದ ಮನೆ ಊಟ ತಯಾರಿದೆ ಎಂದು ಕೂಗಿ ಹೇಳಿದ್ದಾಳೆ. ಆಗ ಇಲ್ಲಿ ಭಾಗ್ಯಾಳಿಗೆ ಕನ್ನಿಕಾ ಎದುರಾಗಿದ್ದಾಳೆ. ಭಾಗ್ಯಾಳನ್ನು ಕಂಡು ಕಾರಿನಿಂದ ಕೆಳಗಿಳಿದ ಕನ್ನಿಕಾ , ನೀನು ಈ ಸ್ಥಿತಿಗೆ ಬಂದಿರೋದೆ ನನ್ನ ಎದುರು ಹಾಕಿಕೊಂಡಿರೋದಕ್ಕೆ ಎಂದು ಹೇಳಿದ್ದಾಳೆ. ಇದಕ್ಕೆ ಭಾಗ್ಯ, ನನ್ನ ಕಾಲು ಎಳೆದು ಕೆಳಗೆ ಹಾಕಬಹುದು ಅಂದುಕೊಂಡವರನ್ನೆಲ್ಲ ತುಳಿದು ಮೇಲೆ ಬರ್ತೀನಿ ನಾನು ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾಳೆ.
Bhavya Gowda: ಬಿಗ್ ಬಾಸ್ ಬಳಿಕ ಮೊದಲ ಬಾರಿ ಹನುಮಂತನ ಜೊತೆ ಫೋಟೋ ಹಂಚಿಕೊಂಡ ಭವ್ಯ