Bhagya Lakshmi Serial: ಇನ್ನೂ ಸಿಕ್ಕಿಲ್ಲ ಕೆಲಸ: ಬೀದಿಯಲ್ಲೇ ಕೂಗಾಡಿದ ತಾಂಡವ್
ಸದ್ಯ ತಾಂಡವ್ ಮತ್ತೆ ಹೊಸ ಕೆಲಸಕ್ಕಾಗಿ ಅಲೆಯುವಂತಾಗಿದೆ. ಒಬ್ಬರು ಇಂಟರ್ವ್ಯೂಗೆ ಎಂದು ಹೋಟೆಲ್ ಒಂದರಲ್ಲಿ ಭೇಟಿ ಆಗಲು ಕರೆದಿದ್ದಾರೆ. ಆದರೆ, ಇಂಟರ್ವ್ಯೂನಲ್ಲಿ ತಾಂಡವ್ ದುರಂಕರಾದ ಮಾತನ್ನು ಕೇಳಿ ನಿನ್ನಂತವರಿಗೆ ಕೆಲಸ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.

Bhagya Lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ಕುತೂಹಲದತ್ತ ಸಾಗುತ್ತಿದೆ. ತಾಂಡವ್, ಶ್ರೇಷ್ಠ ದುರಹಂಕಾರ, ಸೊಕ್ಕಿಗೆ ತಕ್ಕ ಶಾಸ್ತಿ ಆಗಿದೆ. ಇವರಿಬ್ಬರನ್ನು ಕೆಲಸದಿಂದ ಈಗಾಗಲೇ ತೆಗೆದು ಹಾಕಲಾಗಿದೆ. ತಾಂಡವ್ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕ್ಯಾಂಟೀನ್ ನಡೆಸಲು ಭಾಗ್ಯಗೆ ಅನುಮತಿ ಸಿಕ್ಕಿದೆ. ತಾಂಡವ್, ಶ್ರೇಷ್ಠಾ, ಕನ್ನಿಕಾ ಮಾಡಿರುವ ಕೇಡು ಕೆಲಸ ಈಗ ಅವರಿಗೇ ಉಲ್ಟಾ ಹೊಡೆಯಲು ಶುರುಮಾಡಿದೆ. ಈಗ ತಾಂಡವ್, ಶ್ರೇಷ್ಠಾಗೆ ಒಂದೇ ಒಂದು ಕೆಲಸ ಸಿಗುತ್ತಿಲ್ಲ. ಬಂದ ಒಂದೆರಡು ಆಫರ್ ಅನ್ನು ಇದು ನನ್ನ ಲೆವೆಲ್ಗೆ ಇಲ್ಲ ಎಂದು ರಿಜೆಕ್ಟ್ ಮಾಡಿದ್ದಾನೆ.
ಸದ್ಯ ತಾಂಡವ್ ಮತ್ತೆ ಹೊಸ ಕೆಲಸಕ್ಕಾಗಿ ಅಲೆಯುವಂತಾಗಿದೆ. ಒಬ್ಬರು ಇಂಟರ್ವ್ಯೂಗೆ ಎಂದು ಹೋಟೆಲ್ ಒಂದರಲ್ಲಿ ಭೇಟಿ ಆಗಲು ಕರೆದಿದ್ದಾರೆ. ಆದರೆ, ಇಂಟರ್ವ್ಯೂನಲ್ಲಿ ತಾಂಡವ್ ದುರಂಕರಾದ ಮಾತನ್ನು ಕೇಳಿ ನಿನ್ನಂತವರಿಗೆ ಕೆಲಸ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ತಾನು ದೊಡ್ಡ ಮ್ಯಾನೇಜರ್, ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನ ಹ್ಯಾಂಡಲ್ ಮಾಡಿದ್ದೇನೆ, 60% ಹೈಕ್ ಕೊಟ್ಟರೆ ಮಾತ್ರ ಬರ್ತೀನಿ, ಅದಕ್ಕಿಂತ ಕಮ್ಮಿ ಅಂದ್ರೆ ರಿಜೆಕ್ಟ್ ಮಾಡ್ತೇನೆ ಅಂತೆಲ್ಲಾ ಇಂಟರ್‌ವ್ಯೂಗೆ ಹೋದ ಕಡೆಯಲ್ಲೆಲ್ಲಾ ದರ್ಪದಿಂದ ತಾಂಡವ್ ಮಾತಾಡಿದ್ದಾನೆ.
ತಾಂಡವ್ ವರ್ತನೆ, ದೌಲತ್ತು ಯಾರಿಗೂ ಇಷ್ಟವಾಗುತ್ತಲೇ ಇಲ್ಲ. ಹೀಗಾಗಿಯೇ, ನಿಮ್ಮಂಥ ಆಟಿಟ್ಯೂಡ್ ಇರೋರು ನಮ್ಮ ಕಂಪನಿಗೆ ಬೇಡ ಅಂತ ಎಲ್ಲರೂ ತಾಂಡವ್ ಮುಖಕ್ಕೆ ಮಂಗಳಾರತಿ ಎತ್ತಿ ಕಳುಹಿಸುತ್ತಿದ್ದಾರೆ. ಅವಮಾನವಾದರೂ ತಾಂಡವ್ ಸೊಕ್ಕು ಮಾತ್ರ ಇಳಿಯುತ್ತಿಲ್ಲ. ಬೀದಿಯಲ್ಲಿ ತನ್ನ ಕೋಪ ಹೊರಹಾಕಿದ್ದಾನೆ. ಎಲ್ಲ ಆ ಎಮ್ಮೆಯಿಂದಲೇ ಆಗಿದ್ದು.. ಎಲ್ಲೂ ಕೆಲಸ ಸಿಗುತ್ತಿಲ್ಲ.. ಎಲ್ಲ ಕಡೆ ನನ್ನ ರಿಜೆಕ್ಟ್ ಮಾಡ್ತಾರೆ ನನ್ನ ಎಂದು ಶ್ರೇಷ್ಠಾ ಕೈ ಹಿಡಿದುಕೊಂಡು ಕಣ್ಣೀರಿಟ್ಟಿದ್ದಾನೆ.
ಮತ್ತೊಂದೆಡೆ ಅತ್ತ ಭಾಗ್ಯ ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಿದೆ. ಭಾಗ್ಯ ಮಗಳು ತನ್ವಿ ಪಿಯುಸಿ ಪರೀಕ್ಷೆಯಲ್ಲಿ 90ಕ್ಕೂ ಅಧಿಕ ಫಲಿತಾಂಶದೊಂದಿಗೆ ಪಾಸ್ ಆಗಿದ್ದಾಳೆ. ತನ್ವಿಗೆ ಬಂದಿರುವ ಮಾರ್ಕ್ಸ್ ನೋಡಿ ಮನೆಯಲ್ಲಿ ಎಲ್ಲರಿಗೂ ಖುಷಿ ಆಗಿದೆ. ಅದೇ ಖುಷಿಯಲ್ಲಿ ಎಲ್ಲರೂ ಹೋಟೆಲ್‌ಗೆ ಹೋಗಿ ಪಾರ್ಟಿ ಮಾಡಿದ್ದಾರೆ. ಸದ್ಯ ತಾಂಡವ್ ಹೊಸ ಕೆಲಸಕ್ಕಾಗಿ ಏನೆಲ್ಲ ಮಾಡ್ತಾನೆ ಅಥತಾ ತಾಂಡವ್ಗೆ ಹೊಸ ಕೆಲಸ ಸಿಗಲು ಭಾಗ್ಯಾಳೆ ಸಹಾಯ ಮಾಡುತ್ತಾಳ ಎಂಬುದು ನೋಡಬೇಕಿದೆ.
Dharma Keerthiraj: ರಾಗಿಣಿ ಜೊತೆ ಹೊಸ ಸಿನಿಮಾ ಒಪ್ಪಿಕೊಂಡ ಧರ್ಮ ಕೀರ್ತಿರಾಜ್: ಯಾವುದು?