Seetha Rama Serial: ಸಿಹಿಯ ಕೃಪೆಯಿಂದ ಕೊನೆಗೂ ಸೀತಮ್ಮಳಿಗೆ ಸಿಕ್ಕಳು ಸುಬ್ಬಿ
ಸೀತಾ ಅದೇ ಜಾಗದಲ್ಲಿ ಸುಬ್ಬಿಯನ್ನು ಹುಡುಕಿಕೊಂಡು ಬರುತ್ತಾಳೆ. ಆದರೆ, ಯಾರಿಗೂ ಕಾಣದ ಸಿಹಿಗೆ ಸುಬ್ಬಿ ಮಲಗಿರುವುದು ಕಾಣುತ್ತದೆ. ಆದರೆ, ಅಶೋಕ, ರಾಮ್ಗೆ ಸಿಹಿ ಹೇಳಿದರೂ ಅವರಿಗೆ ಕೇಳಿಸುವುದಿಲ್ಲ. ಆದರೆ, ಪವಾಡ ಎಂಬಂತೆ ಸಿಹಿ ಸೀತಾಳ ಕೈಹಿಡಿದುಕೊಂಡು ಸುಬ್ಬಿ ಮಲಗಿರುವ ಕಡೆಗೆ ಕರೆದುಕೊಂಡು ಬರುತ್ತಾಳೆ.

Seetha rama Serial

ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ (Seetha Rama) ಧಾರಾವಾಹಿ ಅಂತಿಮ ಘಟ್ಟದತ್ತ ಸಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಧಾರಾವಾಹಿ ಕೊನೆಗೊಳ್ಳಲಿದೆ. ಇಷ್ಟುದಿನ ಬಚ್ಚಿಟ್ಟಿದ್ದ ಒಂದೊಂದೆ ರಹಸ್ಯ ರಿವೀಲ್ ಆಗುತ್ತಿದೆ. ಈಗಾಗಲೇ ಮನೆಯಲ್ಲಿರುವುದು ಸಿಹಿ ಅಲ್ಲ ಸುಬ್ಬಿ ಎಂಬ ಬಹುಡೊಡ್ಡ ಸತ್ಯ ಸೀತಾಗೆ ತಿಳಿದಾಗಿದೆ. ಇನ್ನು ಸಿಹಿಯನ್ನು ಕೊಂದಿದ್ದು ಭಾರ್ಗವಿ ಎಂಬ ನಿಜಾಂಶ ರಿವೀಲ್ ಆಗಬೇಕಿದೆಯಷ್ಟೆ. ಹಿಂದಿನ ಎಪಿಸೋಡ್ನಲ್ಲಿ ಮನೆಬಿಟ್ಟು ಹೋಗಿದ್ದ ಸೀತಾ ತನ್ನ ಹಳೇಯ ಮನೆಗೆ ತೆರಳಿದ್ದು, ರಾಮ್ ಅಲ್ಲಿಗೆ ಹೋಗಿ ಸೀತಾಳನ್ನು ಸಮಾಧಾನ ಮಾಡಿ ವಾಪಾಸ್ ಕರೆತಂದಿದ್ದಾನೆ. ಇದರ ಮಧ್ಯೆ ಕೂಡ ಸುಬ್ಬಿ ಬೇಜಾರಿನಲ್ಲಿ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಳು. ಈಗ ಈಕೆ ಕೂಡ ಸಿಕ್ಕಿದ್ದು ಸೀತಾ-ಸುಬ್ಬಿ ಖುಷಿಯಾಗಿದ್ದಾರೆ.
ಸುಬ್ಬಿ ಅಶೋಕ ಹಾಗೂ ಪ್ರಿಯ ಜೊತೆ ಮಲಗಿದ್ದಾಗ ಯಾರಿಗೂ ಗೊತ್ತಾಗದಂತೆ ಮನೆಬಿಟ್ಟು ಹೋಗಿದ್ದಾಳೆ. ಸೀತಮ್ಮ ನನ್ನ ಪ್ರೀತಿ ಮಾಡಲ್ಲ ಅಂದ್ರೆ ನಾನಿಲ್ಲಿ ಇರಬಾರದು.. ನಾನು ಈ ಮನೆಗೆ ಸಿಹಿ ಅಂತ ಸುಳ್ಳು ಹೇಳಿಕೊಂಡು ಬಂದಿದ್ದಕ್ಕೆ ಇಷ್ಟೆಲ್ಲ ಆಯ್ತು.. ಇನ್ನು ನಾನಿಲ್ಲಿ ಇರಬಾರದು ಎಂದು ಮನೆಯಿಂದ ಹೊರ ಹೋಗಿದ್ದಾಳೆ. ಮರುದಿನ ಖುಷಿಯಲ್ಲಿ ಸೀತಾ ಮತ್ತು ರಾಮ್ ಮನೆಗೆ ಬಂದಾಗ ಸುಬ್ಬಿ ಕಾಣಿಯಾಗಿರುವ ವಿಷಯ ಗೊತ್ತಾಗಿದೆ. ತಡ ಮಾಡದೆ ಸುಬ್ಬಿಯನ್ನು ಹುಡುಕಲು ಶುರುಮಾಡಿದ್ದಾರೆ.
ಎಷ್ಟೇ ಹುಡುಕಿದರೂ ಎಲ್ಲು ಸುಬ್ಬಿ ಕಾಣಿಸುವುದಿಲ್ಲ. ಅತ್ತ ಸುಬ್ಬಿ ಹಸಿವಿನಿಂದ ನರಳುತ್ತಿದ್ದಾಳೆ. ಕೈಯಲ್ಲಿ ಕಾಸು ಕೂಡ ಇರದೆ ಅಂಗಡಿಯ ಮುಂದೆ ಇದ್ದ ನೀರನ್ನು ಕುಡಿದು ಹೊಟ್ಟೆ ತುಂಬಿಸಿದ್ದಾಳೆ. ಒಂದು ಬಾರಿ ಪುನಃ ಮನೆಗೆ ಹೋಗುವ ಯೋಚನೆ ಮಾಡುತ್ತಾಳೆ. ಆದರೆ, ಸೀತಾ ಆಡಿದ ಮಾತು ಆಕೆಗೆ ಮತ್ತೆ ಬೇಜಾರು ಮೂಡಿಸುತ್ತದೆ. ಯಾವುದೇ ಕಾರಣಕ್ಕು ಮನೆಗೆ ಹೋಗಲ್ಲ ಎಂದು ಅಲ್ಲೇ ಬೀದಿಯಲ್ಲಿ ಮನೆಯೊಂದರ ಪಕ್ಕ ಮಲಗುತ್ತಾಳೆ.
ಆಗ ಸೀತಾ ಅದೇ ಜಾಗದಲ್ಲಿ ಸುಬ್ಬಿಯನ್ನು ಹುಡುಕಿಕೊಂಡು ಬರುತ್ತಾಳೆ. ಆದರೆ, ಯಾರಿಗೂ ಕಾಣದ ಸಿಹಿಗೆ ಸುಬ್ಬಿ ಮಲಗಿರುವುದು ಕಾಣುತ್ತದೆ. ಆದರೆ, ಅಶೋಕ, ರಾಮ್ಗೆ ಸಿಹಿ ಹೇಳಿದರೂ ಅವರಿಗೆ ಕೇಳಿಸುವುದಿಲ್ಲ. ಆದರೆ, ಪವಾಡ ಎಂಬಂತೆ ಸಿಹಿ ಸೀತಾಳ ಕೈಹಿಡಿದುಕೊಂಡು ಸುಬ್ಬಿ ಮಲಗಿರುವ ಕಡೆಗೆ ಕರೆದುಕೊಂಡು ಬರುತ್ತಾಳೆ. ಸುಬ್ಬಿಯನ್ನು ಕಂಡು ತಬ್ಬಿ ಮನೆಗೆ ಕರೆದುಕೊಂಡು ಬರುತ್ತಾರೆ. ಮನೆಯವರು ಸುಬ್ಬಿಯನ್ನು ಕಂಡು ಖುಷಿಯಾಗುತ್ತಾರೆ. ಇನ್ಮುಂದೆ ಈ ರೀತಿ ಮನೆಬಿಟ್ಟು ಹೋಗಬಾರದು ಎಂದು ಬುದ್ದಿವಾದ ಹೇಳಿದ್ದಾರೆ. ಸದ್ಯ ಸೀತಾ ರಾಮ ಸಿಹಿಯ ಕಥೆ ಖುಷಿಯಲ್ಲಿ ಕೊನೆಗೊಂಡಿದೆ. ಆದರೆ, ಭಾರ್ಗವಿಯ ಕೊಲೆ ರಹಸ್ಯ ಇನ್ನಷ್ಟೆ ರಿವೀಲ್ ಆಗಬೇಕಿದೆ.
Chaithra Kundapura: ‘ಸುಪಾರಿ ನೀಡಿದ್ದಾಳೆ’ ಎಂಬ ತಂದೆಯ ಆರೋಪಕ್ಕೆ ಚೈತ್ರಾ ಕುಂದಾಪುರ ತಿರುಗೇಟು