ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಆದೀಶ್ವರ್ ಕಾರಿಗೆ ಕಲ್ಲು ಬಿಸಾಕಿ ಗಾಜು ಪುಡಿಪುಡಿ ಮಾಡಿದ ಕುಸುಮಾ

ಇಲ್ಲಿಗೇ ಸುಮ್ಮನಾಗದ ಕುಸುಮಾ ಈತನಿಗೆ ಸರಿಯಾಗಿ ಬುದ್ದಿ ಕಲಿಸಬೇಕು ಎಂದು ಪಕ್ಕದಲ್ಲೇ ಇದ್ದ ಕಲ್ಲನ್ನು ಎತ್ತು ಆದೀ ಕಾರಿನ ಗಾಜಿಗೆ ಬಿಸಾಡಿದ್ದಾರೆ, ಗಾಜು ಪುಡಿಪುಡಿ ಆಗಿದೆ. ಇದರಿಂದ ಭಾಗ್ಯ ಕೂಡ ಶಾಕ್ ಆಗಿದ್ದಾಳೆ. ಅತ್ತ ಆದೀಗೆ ಕೋಪಬಂದಿದೆ.

Bhagya Lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಇಂಟ್ರೆಸ್ಟಿಂಗ್ ಎಪಿಸೋಡ್​ಗಳು ಸಾಗುತ್ತಿವೆ. ನಿರ್ದೇಶಕರು ಆದೀಶ್ವರ್ ಕಾಮತ್ ಎಂಬ ಪಾತ್ರವನ್ನು ಸೃಷ್ಟಿ ಮಾಡಿದ್ದು, ಈ ಪಾತ್ರದಲ್ಲಿ ಹರೀಶ್ ರಾಜ್ ಮಿಂಚುತ್ತಿದ್ದಾರೆ. ಆದೀಶ್ವರ್ ಕಾಮತ್ ಹಾಗೂ ಭಾಗ್ಯ ಕುಟುಂಬದ ಜುಗಲ್​ಬಂದಿ ನೋಡಲು ಸಖತ್ ಮಜಾ ನೀಡುತ್ತಿದೆ. ಪೂಜಾ-ಕಿಶನ್ ಮದುವೆ ನಿಲ್ಲಿಸಲು ವಿದೇಶದಿಂದ ಆದೀ ಬಂದಿದ್ದ. ಆದರೆ, ಬಂದ ಎರಡನೇ ದಿನಕ್ಕೆ ಭಾಗ್ಯ ಮನೆಯವರ ಕಾಟಕ್ಕೆ ಈತ ಸುಸ್ತಾಗಿ ಹೋಗಿದ್ದಾನೆ.

ಕನ್ನಿಕಾ ಇಲ್ಲಸಲ್ಲದ ಸುಳ್ಳಿನ ಕಥೆ ಕಟ್ಟಿ ಈ ಮದುವೆ ಆಗಲು ಬಿಡಬಾರದು.. ಅಪ್ಪನ ಬಳಿ ಮಾತಾಡು ಎಂದು ಹೇಳಿದ್ದಳು. ಅದರಂತೆ ಆದೀ ರಾಮ್‌ದಾಸ್ ಕಾಮತ್ ಬಳಿಕ ಈ ಮದುವೆಯಿಂದ ನಮ್ಮ ಮನೆಗೆ ಒಳ್ಳೆಯದಾಗಲ್ಲ ಎಂದು ಹೇಳಿದ್ದಾನೆ. ಆದರೆ, ರಾಮ್​ದಾಸ್ ಇದಕ್ಕೆ ಸೊಪ್ಪು ಹಾಕಲಿಲ್ಲ. ನಂಗೆ ಹಾಗೆ ಅನಿಸ್ತಿಲ್ಲ.. ಈ ಮದುವೆಯಿಂದ ನಮ್ಮ ಮನೆಗೆ ಒಳ್ಳೆಯದೇ ಆಗುತ್ತೆ ಎಂದು ಹೇಳಿ ಬಾಯಿಮುಚ್ಚಿಸಿದ್ದಾರೆ.

ಇದಾದ ಬಳಿಕ ಕುಸುಮಾ ಹಾಗೂ ಭಾಗ್ಯ ಕಾರಿನಲ್ಲಿ ಹೋಗುತ್ತಿರುವಾಗ ಸಿಗ್ನಲ್​ನಲ್ಲಿ ಆದೀಶ್ವರ್​ನ ಕಾರು ಭಾಗ್ಯ ಕಾರಿಗೆ ಒರೆಸಿಕೊಂಡು ಹೋಗಿದೆ. ಆದರೆ, ಈ ಸಂದರ್ಭ ಆದೀಶ್ವರ್​ನ ಕಾರಿನಲ್ಲಿ ಆತ ಇರಲಿಲ್ಲ ಬದಲಾಗಿ ಆತನ ಡ್ರೈವರ್ ಚಲಾಯಿಸುತ್ತಿದ್ದ. ಭಾಗ್ಯ-ಕುಸುಮಾಳಿಂದ ಡ್ರೈವರ್ ತಪ್ಪಿಸಿಕೊಂಡು ಕಾರನ್ನು ಆದೀಶ್ವರ್​ಗೆ ನೀಡಿದ್ದಾನೆ. ಬಳಿಕ ಕಾರನ್ನು ಆದೀ ಡ್ರೈವ್ ಮಾಡಿಕೊಂಡು ಹೋಗುವಾಗ ಭಾಗ್ಯ-ಕುಸುಮಾಗೆ ಮತ್ತೆ ಅದೇ ಕಾರು ಕಾಣಿಸಿದೆ.

ಭಾಗ್ಯ-ಕುಸುಮಾ ಅಡ್ಡಗಟ್ಟಿ ಕಾರನ್ನು ನಿಲ್ಲಿಸಿ ಆದೀ ಜೊತೆ ಜಗಳವಾಡುತ್ತಾರೆ. ಇಲ್ಲಿ ಭಾಗ್ಯ-ಕುಸುಮಾಗೆ ತಾವು ಜಗಳ ಆಡುತ್ತಿರುವುದು ಕಿಶನ್​ನ ಅಣ್ಣನ ಜೊತೆ ಎಂಬುದು ತಿಳಿದಿಲ್ಲ.. ಅತ್ತ ಆದೀಗೂ ಗೊತ್ತಿಲ್ಲ. ಆದರೆ, ಆದೀಗೆ ಎಮರ್ಜೆನ್ಸಿ ಮೀಟಿಂಗ್ ಇರುವುದರಿಂದ ನಂಗೆ ಜಗಳ ಆಡೋಕೆ ಟೈಮ್ ಇಲ್ಲ ನಾನು ಹೋಗಬೇಕು ಎಂದು ಹೇಳುತ್ತಾನೆ. ಆದರೆ, ಇದಕ್ಕೆ ಕುಸುಮಾ ಬಿಡುವುದಿಲ್ಲ. ಮಾತಿನ ಜಗಳ ಜೋರಾಗುತ್ತದೆ. ಕೊನೆಯಲ್ಲಿ ಆದೀ ಹಣ ಕೊಟ್ಟು ಸೆಟಲ್​ಮೆಂಟ್ ಮಾಡೋಕೆ ಮುಂದಾಗುತ್ತಾನೆ. ಹಣ ಕೂಡ ಕೊಡುತ್ತಾನೆ.



ಆದರೆ, ಇಲ್ಲಿಗೇ ಸುಮ್ಮನಾಗದ ಕುಸುಮಾ ಈತನಿಗೆ ಸರಿಯಾಗಿ ಬುದ್ದಿ ಕಲಿಸಬೇಕು ಎಂದು ಪಕ್ಕದಲ್ಲೇ ಇದ್ದ ಕಲ್ಲನ್ನು ಎತ್ತು ಆದೀ ಕಾರಿನ ಗಾಜಿಗೆ ಬಿಸಾಡಿದ್ದಾರೆ, ಗಾಜು ಪುಡಿಪುಡಿ ಆಗಿದೆ. ಇದರಿಂದ ಭಾಗ್ಯ ಕೂಡ ಶಾಕ್ ಆಗಿದ್ದಾಳೆ. ಅತ್ತ ಆದೀಗೆ ಕೋಪಬಂದಿದೆ. ಸದ್ಯ ಈ ಜಗಳ ಯಾವ ಹಂತಕ್ಕೆ ಹೋಗುತ್ತೆ ಎಂಬುದು ನೋಡಬೇಕಿದೆ. ಅಲ್ಲದೆ ಭಾಗ್ಯಾಳ ತಂಗಿಯೇ ಕಿಶನ್ ಮದುವೆ ಆಗುವ ಹುಡುಗ ಎಂದು ಆದೀಗೆ ತಿಳಿದರೆ ಇನ್ನೇನೆಲ್ಲ ಆಗುತ್ತೆ ಎಂಬುದು ಕುತೂಹಲ ಕೆರಳಿಸಿದೆ.

Gauthami Jadav: ಗೌತಮಿ ಜಾಧವ್ ಬಿಗ್ ಬಾಸ್​​ನಲ್ಲಿ ಸಿಕ್ಕ ಹಣವನ್ನು ಏನು ಮಾಡಿದ್ದಾರೆ ಗೊತ್ತೇ?