ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bhagya Lakshmi Serial: ದಿಢೀರ್ ಭಾಗ್ಯ ಮನೆಗೆ ಬಂದು ವಾರ್ನ್ ಮಾಡಿ ಹೋದ ಆದೀಶ್ವರ್ ಕಾಮತ್

ಕನ್ನಿಕಾ ಇಲ್ಲಸಲ್ಲದ ಸುಳ್ಳಿನ ಕಥೆ ಕಟ್ಟಿ ಈ ಮದುವೆ ಆಗಲು ಬಿಡಬಾರದು ಎಂದು ಆದೀ ಬಳಿ ಹೇಳಿದ್ದಾಳೆ. ಇದನ್ನೇ ಸತ್ಯ ಎಂದು ನಂಬಿ ಆದೀ ಭಾಗ್ಯ ಮನೆಗೆ ತೆರಳಿದ್ದಾನೆ. ಈ ಸಂದರ್ಭ ಸುನಂದ ಒಡೆವೆಯ ಬಗ್ಗೆ ಮಾತನಾಡುತ್ತಾ ಇರುತ್ತಾಳೆ. ರಾಮ್ದಾಸ್ ಅವರು ಭಾಗ್ಯ ಮನೆಯವರ ಬಳಿ ನಿಮಗೆ ಎಷ್ಟು ಬೇಕೊ ಅಷ್ಟು ಒಡವೆ ಮಾಡಿಸಿಕೊಳ್ಳಿ ಎಂದು ಹೇಳಿರುತ್ತಾರೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತಂಗಿ ಪೂಜಾಳ ಮದುವೆ ಕಾರ್ಯದ ಎಪಿಸೋಡ್​ಗಳು ಸಖತ್ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿವೆ. ಆದೀಶ್ವರ್ ಕಾಮತ್ ಎಂಬ ಹೊಸ ಪಾತ್ರ ಧಾರಾವಾಹಿಯ ದಿಕ್ಕನ್ನೇ ಬದಲಾಯಿಸಿದ್ದು, ಭರ್ಜರಿ ಟಿಆರ್​ಪಿ ಬರುವುದು ಖಚಿತ ಎನ್ನಲಾಗುತ್ತಿದೆ. ಆದೀಶ್ವರ್ ಕಾಮತ್ ಹಾಗೂ ಭಾಗ್ಯ ಕುಟುಂಬದ ಜುಗಲ್​ಬಂದಿ ನೋಡಲು ಸಖತ್ ಮಜಾ ನೀಡುತ್ತಿದೆ. ಅಂದಹಾಗೆ ಇಲ್ಲಿ ಆದೀ ವಿದೇಶದಿಂದ ಬಂದಿರುವುದು ಪೂಜಾ-ಕಿಶನ್ ಮದುವೆ ನಿಲ್ಲಿಸಲು. ಇದರ ಮೊದಲ ಭಾಗವಾಗಿ ಆದೀ ಭಾಗ್ಯ ಮನೆಗೆ ಬಂದು ಭಾಗ್ಯ ಅಮ್ಮ ಹಾಗೂ ಪೂಜಾಗೆ ವಾರ್ನ್ ಮಾಡಿ ಹೋಗಿದ್ದಾನೆ.

ಕನ್ನಿಕಾ ಇಲ್ಲಸಲ್ಲದ ಸುಳ್ಳಿನ ಕಥೆ ಕಟ್ಟಿ ಈ ಮದುವೆ ಆಗಲು ಬಿಡಬಾರದು ಎಂದು ಆದೀ ಬಳಿ ಹೇಳಿದ್ದಾಳೆ. ಇದನ್ನೇ ಸತ್ಯ ಎಂದು ನಂಬಿ ಆದೀ ಭಾಗ್ಯ ಮನೆಗೆ ತೆರಳಿದ್ದಾನೆ. ಈ ಸಂದರ್ಭ ಸುನಂದ ಒಡೆವೆಯ ಬಗ್ಗೆ ಮಾತನಾಡುತ್ತಾ ಇರುತ್ತಾಳೆ. ರಾಮ್​ದಾಸ್ ಅವರು ಭಾಗ್ಯ ಮನೆಯವರ ಬಳಿ ನಿಮಗೆ ಎಷ್ಟು ಬೇಕೊ ಅಷ್ಟು ಒಡವೆ ಮಾಡಿಸಿಕೊಳ್ಳಿ ಎಂದು ಹೇಳಿರುತ್ತಾರೆ. ಇದನ್ನೇ ಗಟ್ಟಿಯಾಗಿ ತೆಗೆದುಕೊಂಡ ಸುನಂದ ಮನೆಗೆ ಚಿನ್ನದ ಅಂಗಡಿಯವರನ್ನ ಕರೆಸಿ ಪೂಜಾ ಮೈತುಂಬಾ ಒಡವೆ ಹಾಕಿಸಿ ಹೇಗೆ ಕಾಣುತ್ತದೆ ಎಂದು ನೋಡು ಎಂದು ಹೇಳುತ್ತಾಳೆ.

ಆದರೆ, ಪೂಜಾಗೆ ಇದು ಸರಿ ಕಾಣುವುದಿಲ್ಲ.. ಅವರು ಹೇಳಿದ್ರು ಅಂತ ಇಷ್ಟೆಲ್ಲ ಒಡವೆ ಹಾಕುವುದು ಸರಿಯಲ್ಲ ಎನಿಸುತ್ತದೆ. ಆದರೆ, ಸುನಂದ ಅವರಾಗೆ ಎಷ್ಟು ಬೇಕೊ ಅಷ್ಟು ಒಡವೆ ತೆಗೋಳಿ ಎಂದಾಗ ಸಿಕ್ಕಿರೊ ಅವಕಾಶವನ್ನು ಬಿಡೋಕೆ ಆಗುತ್ತ.. ನಮ್ಮ ಜೀವಮಾನದಲ್ಲಿ ಇಷ್ಟೊಂದು ಒಡವೆ ಸಿಗೋದೆ ಇಲ್ಲ ಎಂದು ಹೇಳುತ್ತಾಳೆ. ಆಗ ಅಲ್ಲಿಗೆ ಆದೀ ಬರುತ್ತಾನೆ. ಸುನಂದ ಮಾತನಾಡಿರುವ ಎಲ್ಲ ವಿಚಾರವನ್ನು ಆದೀ ಕೇಳಿರುತ್ತಾನೆ.

ಮನೆಗೆ ಬಂದ ಕೂಡಲೇ ತನ್ನ ಪರಿಚಯ ಮಾಡಿ ಬಳಿಕ ಸುನಂದ ಹಾಗೂ ಪೂಜಾಗೆ ವಾರ್ನ್ ಮಾಡಿದ್ದಾನೆ. ಎಲ್ಲದಕ್ಕೂ ಒಂದು ಇತಿ-ಮಿತಿ ಅಂತ ಇರುತ್ತೆ.. ಅದನ್ನು ಮೀರಿ ಯಾರೂ ಯಾವತ್ತೂ ಹೋಗಬಾರದು. ನಿಮ್ಗೆ ನೀವೇ ಒಂದು ಗೆರೆ ಎಳೆದುಕೊಂಡ್ರೆ ಅದಿ ನಿಮಗೂ ಒಳ್ಳೆಯದು ನಿಮ್ ಜೊತೆ ಇರೋರಿಗೂ ಒಳ್ಳೆಯದು ಎಂದು ಹೇಳಿ ಹೋಗಿದ್ದಾನೆ.



ಮತ್ತೊಂದೆಡೆ ಭಾಗ್ಯ ಹಾಗೂ ಕುಸುಮಾ ಅವರ ಕಡೆಯಿಂದ ಒಡವೆ ತೆಗೆದುಕೊಳ್ಳುವುದು ಬೇಡ ಎಂದು ತಮ್ಮಲ್ಲಿರುವ ಹಣವನ್ನೆಲ್ಲ ಒಟ್ಟುಗೂಡಿಸಿ ಚಿನ್ನದ ಅಂಗಡಿಗೆ ತೆರಳಿದ್ದಾರೆ. ಹಣವಿಲ್ಲದೆ ಮೂರು ಒಡವೆ ಕೂಡ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಪೂಜಾನ ಮದುವೆಗೆ ಇನ್ನೂ ತುಂಬಾ ಒಡವೆ ತೆಗೆದುಕೊಳ್ಳಬೇಕು.. ಅದ್ರ ಜೊತೆಗೆ ಇನ್ನೂ ತುಂಬಾ ಖರ್ಚು ಇದೆ ಎಂದು ಕುಸುಮಾ ಹೇಳಿದಾಗ ಹಣಕ್ಕೆ ಏನು ಮಾಡುವುದು ಎಂದು ಭಾಗ್ಯಾಗೆ ಟೆನ್ಶನ್ ಆಗುತ್ತದೆ.

ಸದ್ಯ ಭಾಗ್ಯ ಹಣಕ್ಕಾಗಿ ಏನು ಮಾಡುತ್ತಾಳೆ ಎಂಬುದು ನೋಡಬೇಕಿದೆ.. ಮತ್ತೊಂದೆಡೆ ಆದೀಶ್ವರನಿಗೆ ಭಾಗ್ಯ ಮನೆಯಿಂದ ಒಳ್ಳೆಯ ಅಭಿಪ್ರಾಯ ಸಿಕ್ಕಿಲ್ಲ, ಆತ ಈ ಮದುವೆ ನಿಲ್ಲಿಸಲು ಕನ್ನಿಕಾ ಜೊತೆ ಸೇರಿ ಏನು ಪ್ಲ್ಯಾನ್ ಮಾಡುತ್ತಾನೆ ಎಂಬುದು ಕುತೂಹಲ ಕೆರಳಿಸಿದೆ.

Seetha Rama: ಸೀತಾ ರಾಮ ಧಾರಾವಾಹಿ ದಿಢೀರ್ ಮುಗಿಸಿದ್ದು ಏಕೆ?: ಸತ್ಯ ಬಿಚ್ಚಿಟ್ಟ ಪೂಜಾ ಲೋಕೇಶ್