ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಸನ್ಮಾನ ಕಾರ್ಯಕ್ರಮದಲ್ಲಿ ಭಾಗ್ಯಾಳನ್ನು ಹಾಡಿಹೊಗಳಿದ ಆದೀಶ್ವರ್

Bhagya Lakshmi Serial: ಇಷ್ಟು ಸಹಾಯ ಮಾಡಿದ ಭಾಗ್ಯಾಳಿಗೆ ಸ್ಪೆಷಲ್ ಆಗಿ ಥ್ಯಾಂಕ್ಸ್ ಹೇಳಬೇಕೆಂದು ಆದೀ ಈ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದಾನೆ. ಇದಕ್ಕೆ ಇಡೀ ಆಫೀಸ್ ಮಂದಿ, ಕಾಮತ್ ಫ್ಯಾಮಿಲಿ ಹಾಗೂ ತಾಂಡವ್ ಕೂಡ ಬಂದಿದ್ದಾನೆ.

Bhagya Lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಸದ್ಯ ಭಾಗ್ಯಾಳಿಗೆ ಸನ್ಮಾನ ಮಾಡುವ ಕಾರ್ಯಕ್ರಮದ ಎಪಿಸೋಡ್ ಸಾಗುತ್ತಿದೆ. ಆದೀ ತನಗೆ ಕೊಟ್ಟ 25 ಲಕ್ಷ ಹಣವನ್ನು ಭಾಗ್ಯ ಕಾಮತ್ ಫ್ಯಾಮಿಲಿಯ ಟ್ರಸ್ಟ್​ಗೆ ಕೊಟ್ಟಿದ್ದಾಳೆ. ಇಷ್ಟು ಸಹಾಯ ಮಾಡಿದ ಭಾಗ್ಯಾಳಿಗೆ ಸ್ಪೆಷಲ್ ಆಗಿ ಥ್ಯಾಂಕ್ಸ್ ಹೇಳಬೇಕೆಂದು ಆದೀ ಈ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದಾನೆ. ಇದಕ್ಕೆ ಇಡೀ ಆಫೀಸ್ ಮಂದಿ, ಕಾಮತ್ ಫ್ಯಾಮಿಲಿ ಹಾಗೂ ತಾಂಡವ್ ಕೂಡ ಬಂದಿದ್ದಾನೆ.

ನಾನು ನನ್ನ ಲೈಫ್​ನಲ್ಲಿ ಭಾಗ್ಯಾಳಂತಹ ವ್ಯಕ್ತಿಯನ್ನು ನೋಡೇ ಇಲ್ಲ.. ಛೇ ಭಾಗ್ಯಾಗೆ ಸರಿಯಾಗಿ ಥ್ಯಾಂಕ್ಸ್ ಹೇಳಲೇ ಆಗುತ್ತಿಲ್ಲವಲ್ಲ ಎಂದು ಅಂದುಕೊಳ್ಳುತ್ತಾನೆ. ಭಾಗ್ಯಾಗೋಸ್ಕರ ಬೇರೆ ಏನು ಮಾಡಬಹುದು ಎಂದು ಯೋಚಿಸುತ್ತಿರುವಾಗ ಒಂದು ಪ್ಲ್ಯಾನ್ ಹೊಳೆಯುತ್ತದೆ. ಕಾಮತ್ ಫ್ಯಾಮಿಲಿ ನಡೆಸುತ್ತಿರುವ ಚಾರಿಟಿಯಲ್ಲಿ ಸಾಮಾನ್ಯವಾಗಿ ಯಾರೇ ಡೊನೇಟ್ ಮಾಡಿದ್ರು ಅವರಿಗೆ ಒಂದು ಸಣ್ಣದಾಗಿ ಸನ್ಮಾನ ಮಾಡಲಾಗುತ್ತದೆ. ಭಾಗ್ಯಾಗೂ ಅದೇರೀತಿ ಸನ್ಮಾನ ಮಾಡಿ ಥ್ಯಾಂಕ್ಸ್ ಹೇಳೋಣ ಎಂದು ಅಂದುಕೊಳ್ಳುತ್ತಾನೆ. ರಾಮ್​ದಾಸ್ ಬಳಿ ಈ ವಿಚಾರ ಹೇಳಿದಾಗ ಅದಕ್ಕೆ ಒಪ್ಪಿಗೆ ಸೂಚಿಸುತ್ತಾರೆ.

ಅದರಂತೆ ಮರುದಿನ ಸನ್ಮಾನ ಕಾರ್ಯಕ್ರಮಕ್ಕೆ ಎಲ್ಲ ತಯಾರಿ ಆಗುತ್ತಿರುತ್ತದೆ. ಆದರೆ, ಅತ್ತ ಮನೆಯಲ್ಲಿ ಭಾಗ್ಯ ಅತ್ತೆ ಬಳಿ ನಾನು ಆ ಕಾರ್ಯಕ್ರಮಕ್ಕೆ ಹೋಗಲ್ಲ.. ನಂಗೆ ಇದು ಸರಿ ಕಾಣುತ್ತಿಲ್ಲ.. ಅಷ್ಟಕ್ಕೂ ನಾನು ಹಣವನ್ನು ಡೊನೆಟ್ ಮಾಡಿಲ್ಲ.. ಆದೀ ಅವರು ಕೊಟ್ಟ ಹಣವನ್ನು ಕೊಟ್ಟಿದ್ದೇನೆ ಅಷ್ಟೆ.. ಅದು ನಾನೇ ಸಂಪಾದನೆ ಮಾಡಿರುವ ಹಣ ಅಲ್ಲ.. ಹೀಗಾಗಿ ಆ ಕಾರ್ಯಕ್ರಮಕ್ಕೆ ಹೋಗೋದು ಯಾಕೋ ಸರಿ ಅನಿಸುತ್ತಿಲ್ಲ ಎಂದಿದ್ದಾಳೆ.

ತಕ್ಷಣವೇ ಕುಸುಮಾ ಆದೀಗೆ ಕಾಲ್ ಮಾಡಿ ಭಾಗ್ಯ ಹೇಳಿದ ವಿಚಾರವನ್ನು ತಿಳಿಸಿದ್ದಾಳೆ. ಆಗ ಆದೀ ನೀವೇನಾದರು ಈ ಕಾರ್ಯಕ್ರಮಕ್ಕೆ ಬಂದಿಲ್ಲ ಅಂದ್ರೆ ಎಲ್ಲ ಸ್ಟಾಫ್ ಅವರನ್ನು ಕರೆದುಕೊಂಡು ಮನೆಗೆ ಬಂದು ಅಲ್ಲೇ ಸನ್ಮಾನ ಮಾಡುತ್ತೇವೆ ಎಂದಿದ್ದಾನೆ. ಬಳಿಕ ಭಾಗ್ಯ ಇಲ್ಲ.. ಇಲ್ಲ ಅದೆಲ್ಲ ಬೇಡ ನಾನು ಬರುತ್ತೇನೆ ಎಂದು ಒಪ್ಪಿಕೊಂಡಿದ್ದಾಳೆ.

ಈ ಕಾರ್ಯಕ್ರಮಕ್ಕೆ ತಾಂಡವ್ ಕೂಡ ಬಂದಿದ್ದಾನೆ. ಆದರೆ, ಇಲ್ಲಿ ಸನ್ಮಾನ ಮಾಡಲಾಗುತ್ತಿರುವು ಭಾಗ್ಯಾಗೆ ಎಂದು ತಾಂಡವ್​ಗೆ ಗೊತ್ತಿರುವುದಿಲ್ಲ.. ಆದೀ ಬಳಿಕ, ಏನು ಬ್ರೋ ಇಷ್ಟೆಲ್ಲ ಗ್ರ್ಯಾಂಡ್ ಆಗಿ ಮಾಡಿದ್ದೀರಾ?, ದೊಡ್ಡ- ದೊಡ್ಡ ವ್ಯಕ್ತಿಗಳು ಕೂಡ ಬಂದಿದ್ದಾರೆ.. ಯಾರು ಗೆಸ್ಟ್ ವಿಐಪಿನ ಅಥವಾ ವಿವಿಐಪಿನ ಎಂದು ಕೇಳಿದ್ದಾನೆ. ಆಗ ಭಾಗ್ಯ ಎಂಟ್ರಿ ಆಗುತ್ತದೆ.. ಅವರೇ ಎಂದು ತೋರಿಸುತ್ತಾನೆ ಆದೀ. ಭಾಗ್ಯಾಳನ್ನು ಕಂಡು ತಾಂಡವ್​ಗೆ ಶಾಕ್ ಆಗುತ್ತದೆ.. ಇವಳಾ ಎಂದು ಹೊಟ್ಟೆ ಉರಿಯುತ್ತದೆ. ಒಂದು ಮೂಲಗೆ ಹೋಗಿ ಕುಳಿತುಕೊಳ್ಳುತ್ತಾನೆ.



ಭಾಗ್ಯ ಹಾಗೂ ಕುಸುಮಾ ಅವರನ್ನು ಆದೀ ವೆಲ್ಕಂ ಮಾಡಿ ಕುಳಿತುಕೊಳ್ಳಲು ಹೇಳುತ್ತಾನೆ. ಬಳಿಕ ಸ್ಟೇಜ್​ಗೆ ಹೋಗಿ ಭಾಗ್ಯಾಳನ್ನು ಹಾಡಿಹೊಗಳಿದ್ದಾನೆ. ನಮ್ಮೆಲ್ಲರನ್ನು ಇವತ್ತು ಈರೀತಿ ಸೇರಿಸಿರುವುದು ನಮ್ಮ ಸ್ಪೆಷಲ್ ಗೆಸ್ಟ್.. ನಮಗೆ ಹೊಟ್ಟೆ ತುಂಬಿದಾಗ ಉಳಿದ ಅನ್ನವನ್ನು ಬೇರೆಯವರಿಗೆ ದಾನ ಮಾಡೋದು ದೊಡ್ಡ ವಿಷಯ ಅಲ್ಲ.. ಆದರೆ ನಾವೇ ಹಸಿವಿನಲ್ಲಿ ಇರುವಾಗ ನಮ್ಮ ತಟ್ಟೆಯಲ್ಲಿರುವ ಅನ್ನವನ್ನು ಇನ್ನೊಬ್ಬರಿಗೆ ದಾನ ಮಾಡೋದು ನಿಜವಾದ ತ್ಯಾಗ.. ಇಂತಹ ಕಥೆಯನ್ನೆಲ್ಲ ನಾವು ಪುರಾಣಗಳಲ್ಲಿ ಕೇಳಿದ್ದೇವೆ.. ಈ ಕಾಲದಲ್ಲಿ ಆರೀತಿಯ ವ್ಯಕ್ತಿಗಳು ಇರಲ್ಲ ಅಂತ ನಮಗೆ ನಾವೇ ಅಂದುಕೊಂಡಿದ್ದೇವೆ.. ಆದರೆ, ಅದು ಸುಳ್ಳು ಇವತ್ತಿಗೂ ಒಳ್ಳೆಯತನ ಇದೆ.. ಒಳ್ಳೆಯವರು ನಮ್ಮ ಮಧ್ಯೆಯೇ ಇದ್ದಾರೆ ಅದಕ್ಕೆ ಉದಾಹರಣೆ ಇವತ್ತಿನ ನಮ್ಮ ಸ್ಪೆಷಲ್ ಗೆಸ್ಟ್ ಭಾಗ್ಯ ಅವರು ಎಂದು ಹೇಳಿದ್ದಾನೆ.



ನಮ್ಮ ಟ್ರಸ್ಟ್​ಗೆ ದೇಶ-ವಿದೇಶದಿಂದ ಡೊನೆಟ್ ಮಾಡಿದ್ದಾರೆ. ಆದರೆ ಇತ್ತೀಚೆಗೆ ಒಬ್ಬ ಸ್ಪೆಷಲ್ ಡೋನರ್ 25 ಲಕ್ಷ ಡೊನೆಟ್ ಮಾಡಿದ್ದಾರೆ. ಅದು ನಮಗೆ ಇಲ್ಲಿಯವರೆಗೆ ಬಂದಿರುವಂತಹ ಅತ್ಯಧಿಕ ಡೊನೆಟ್.. ಆಸ್ಪೆಷಲ್ ಗೆಸ್ಟ್ ಬೇರೆ ಯಾರೂ ಅಲ್ಲ ನಮ್ಮ ಭಾಗ್ಯ ಎಂದು ಆದೀಶ್ವರ್ ಹೇಳಿದ್ದಾನೆ. ತನ್ನನ್ನು ಇಷ್ಟೆಲ್ಲ ಹೊಗಳುವುದನ್ನು ಕೇಳಿ ಭಾಗ್ಯಾಗೆ ಮುಜುಗರವಾಗಿದೆ. ಸದ್ಯ ಭಾಗ್ಯ ಈ ಸನ್ಮಾನವನ್ನು ಸ್ವೀಕರಿಸುವುದು ಪ್ರೋಮೋದಲ್ಲಿ ತೋರಿಸಲಾಗಿದೆ. ಜೊತೆಗೆ ಚಾರಿಟಿಯ ಸದಸ್ಯರೊಬ್ಬರು, ನಮ್ಮ ಟ್ರಸ್ಟ್ ಅನ್ನು ಮುಂದೆ ನಿಂತು ಮುನ್ನಡೆಸುವವರು ಒಬ್ಬರು ಬೇಕು ಎಂದು ಆದೀ ಬಳಿ ಹೇಳಿದ್ದಾರೆ. ಆಗ ಆದೀ ಭಾಗ್ಯಾಳನ್ನು ನೋಡಿದ್ದಾನೆ. ಬಹುಶಃ ಆಕೆಗೇ ಈ ಆಫರ್ ಕೊಡುವ ಸಾಧ್ಯತೆ ಇದೆ. ಇದೆಲ್ಲ ಮುಂದಿನ ಎಪಿಸೋಡ್​ನಲ್ಲಿ ನೋಡಬೇಕಿದೆ.

Kiran Raj: ಸೀರಿಯಲ್ ಜೊತೆಗೆ ಸಿನಿಮಾದಲ್ಲೂ ಕಿರಣ್ ರಾಜ್ ಬ್ಯುಸಿ: ಫೋಟೋ ಹಂಚಿಕೊಂಡ ಕರ್ಣ