ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಕಾಲೇಜ್ ಬಂಕ್ ಮಾಡಿ ಸಸ್ಪೆಂಡ್ ಆದ ತನ್ವಿ: ಭಾಗ್ಯಾಗೆ ಮತ್ತೊಂದು ಸಂಕಷ್ಟ

ತನ್ವಿ ಕ್ಲೋಸ್ ಫ್ರೆಂಡ್ ಒಬ್ಬಳು ಇವತ್ತು ನಾವು ಕಾಲೇಜ್ ಬಂಕ್ ಮಾಡಿ ಹೊರಗಡೆ ಸುತ್ತಾಡೋಕೆ ಹೋಗ್ತಾ ಇದ್ದೀವಿ ಬಾ ಎಂದು ಕರೆದಿದ್ದಾಳೆ. ಆದರೆ, ಮೊದಲಿಗೆ ಇದಕ್ಕೆ ತನ್ವಿ ಒಪ್ಪಲಿಲ್ಲ.. ಇಲ್ಲ ನಾನು ಬರಲ್ಲ.. ನಮ್ಮ ಮನೆಯಲ್ಲಿ ಇದಕ್ಕೆ ಬಿಡಲ್ಲ.. ಗೊತ್ತಾದ್ರೆ ಅಷ್ಟೇ ಕತೆ ಎಂದು ಹೇಳಿದ್ದಾಳೆ.

Bhagya lakshmi serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯ ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಒಂದುಕಡೆ ಆದೀಶ್ವರ್ ಕಾಮತ್, ಭಾಗ್ಯಾಗೆ ಚಾಲೆಂಜ್ ಮಾಡಿ ಒಂದು ವಾರ ನಾನು ಮಿಡಲ್ ಕ್ಲಾಸ್ ಜೀವನ ನಡೆಸುತ್ತೇನೆ ಎಂದು ಹೇಳಿದ್ದು, ಈ ಚಾಲೆಂಜ್ ಈಗ ಕೊನೆಯ ಹಂತಕ್ಕೆ ತಲುಪಿದೆ. ಇದರ ಮಧ್ಯೆ ಇಬ್ಬರೂ ಪೊಲೀಸ್ ಸ್ಟೇಷನ್​ಗೆ ಹೋಗಿ ಹೇಗೋ ಬಚಾವ್ ಆಗಿ ಬಂದಿದ್ದಾರೆ. ಈ ಟೆನ್ಶನ್ ನಡುವೆ ಇದೀಗ ಭಾಗ್ಯ ಮಗಳು ತನ್ವಿ ಮತ್ತೊಂದು ಎಡವಟ್ಟು ಮಾಡಿ ಬಂದಿದ್ದಾಳೆ.

ತನ್ವಿ ಕ್ಲೋಸ್ ಫ್ರೆಂಡ್ ಒಬ್ಬಳು ಇವತ್ತು ನಾವು ಕಾಲೇಜ್ ಬಂಕ್ ಮಾಡಿ ಹೊರಗಡೆ ಸುತ್ತಾಡೋಕೆ ಹೋಗ್ತಾ ಇದ್ದೀವಿ ಬಾ ಎಂದು ಕರೆದಿದ್ದಾಳೆ. ಆದರೆ, ಮೊದಲಿಗೆ ಇದಕ್ಕೆ ತನ್ವಿ ಒಪ್ಪಲಿಲ್ಲ.. ಇಲ್ಲ ನಾನು ಬರಲ್ಲ.. ನಮ್ಮ ಮನೆಯಲ್ಲಿ ಇದಕ್ಕೆ ಬಿಡಲ್ಲ.. ಗೊತ್ತಾದ್ರೆ ಅಷ್ಟೇ ಕತೆ ಎಂದು ಹೇಳಿದ್ದಾಳೆ. ಅದಕ್ಕೆ ಆಕೆಯ ಫ್ರೆಂಡ್ ನಂಗೂ ಮನೆಯಲ್ಲಿ ಹೇಳಿದ್ರೆ ಬಿಡಲ್ಲ.. ಮನೆಯಲ್ಲಿ ಹೇಳದೆ ಹೋಗೋಣ ಅದೇ ಮಜಾ ಇರೋದು.. ನೀನು ಬಂದಿಲ್ಲ ಅಂದ್ರೆ ನಾವು ಯಾರೂ ನಿನ್ ಜೊತೆ ಮಾತಾಡಲ್ಲ ಎಂದು ಹೇಳಿದ್ದಾಳೆ.

ಬಳಿಕ ತನ್ವಿ ಸರಿ ಬರುತ್ತೇನೆ ಎಂದು ಹೇಳಿದ್ದಾಳೆ. ಮನೆಯಲ್ಲಿ ಕಾಲೇಜ್ ಹೋಗುತ್ತೇನೆ ಎಂದು ಹೇಳಿ ಫ್ರೆಂಡ್ಸ್ ಜೊತೆ ಸುತ್ತಾಡಲು ತೆರಳಿದ್ದಾಳೆ. ಆಗ ತನ್ವಿಗೆ ಮತ್ತೋರ್ವ ಫ್ರೆಂಡ್​ನ ಕಾಲ್ ಬಂದಿದೆ. ನೀವು ಕ್ಲಾಸ್ ಬಂಕ್ ಮಾಡಿ ಸುತ್ತಾಡುತ್ತಿರುವುದನ್ನು ನಮ್ಮ ಡಿಸಿಪ್ಲಿನ್ ಸ್ಕಾಡ್ ಹೆಡ್ ನೋಡಿದ್ದಾರೆ.. ಅವ್ರು ಬಂದು ಪ್ರಿನ್ಸಿಪಾಲ್​ಗೆ ಕಂಪ್ಲೆಂಟ್ ಮಾಡಿದ್ದಾರೆ.. ನಿನ್ನ ಹಾಗೂ ನಿನ್ನ ಜೊತೆ ಇರೋ ಗ್ಯಾಂಗ್​ನ ಸಸ್ಪೆಂಡ್ ಮಾಡಿದ್ದಾರೆ.. ಪೇರೆಂಟ್ಸ್​ನ ಕರ್ಕೊಂಡು ಬರೋ ತನಕ ಕ್ಲಾಸ್​ಗೆ ಬಿಡಲ್ಲ ಅಂತೆ ಎಂದು ಹೇಳಿದ್ದಾಳೆ.

ಇದನ್ನ ಕೇಳಿ ತನ್ವಿಗೆ ಶಾಕ್ ಆಗಿದೆ. ಏನು ಮಾಡಬೇಕೆಂದು ತಿಳಿಯದೆ ಅಳಲು ಶುರುಮಾಡಿದ್ದಾಳೆ. ನಮ್ಮ ಮನೇಲಿ ಈ ವಿಷಯ ಗೊತ್ತಾದ್ರೆ ಅಷ್ಟೆ.. ನಿಮ್ಮ ಮನೆ ತರ ಅಲ್ಲ ನಮ್ಮ ಮನೆಯಲ್ಲಿ ಎಂದಿದ್ದಾಳೆ. ಇದಕ್ಕೆ ಆಕೆಯ ಫ್ರೆಂಡ್, ನೀನು ಟೆನ್ಶನ್ ಮಾಡಬೇಡ ನಾವು ಪ್ರಿನ್ಸಿಪಾಲ್ ಬಳಿ ಹೋಗಿ ಸ್ವಾರಿ ಕೇಳೋಣ ಅವರು ಒಕೆ ಹೇಳುತ್ತಾರೆ ಎಂದಿದ್ದಾಳೆ. ಅದರಂತೆ ಇವರೆಲ್ಲ ಪ್ರಿನ್ಸಿಪಾಲ್ ಚೇಂಬರ್​ಗೆ ಹೋಗಿದ್ದಾರೆ. ಇವರನ್ನು ನೋಡಿದ ತಕ್ಷಣ, ಎಲ್ಲಿ ನಿಮ್ಮ ತಂದೆ-ತಾಯಿ ನೀವು ಮಾತ್ರ ಬಂದಿದ್ದೀರಾ ಎಂದು ಪ್ರಿನ್ಸಿ ಕೇಳಿದ್ದಾರೆ.

Karna Serial: ಕರ್ಣ ಧಾರಾವಾಹಿಯಲ್ಲಿ ಸದ್ಯದಲ್ಲೇ ಇರಲಿದೆ ಬಹುದೊಡ್ಡ ಟ್ವಿಸ್ಟ್: ಏನದು?

ಇದೊಂದು ಸಲ ನಮ್ಮನ್ನು ಕ್ಷಮಿಸಿ, ಇನ್ಮೇಲೆ ಹೀಗೆ ಮಾಡಲ್ಲ ಎಂದು ತನ್ವಿ ಹೇಳಿದ್ದಾಳೆ. ಆದರೆ, ಇದಕ್ಕೆ ಒಪ್ಪದ ಪ್ರಿನ್ಸಿಪಾಲ್ ಪೇರೆಂಟ್ಸ್ ಬಂದಿಲ್ಲ ಅಂದ್ರೆ ನಿಮ್ಮ ಸಸ್ಪೆನ್ಶನ್ ಕ್ಯಾನ್ಸಲ್ ಆಗಲ್ಲ.. ಅವರು ಬರಲೇಬೇಕು ಎಂದು ಖಡಕ್ ಆಗಿ ಹೇಳಿದ್ದಾರೆ. ಚೇಂಬರ್​ನಿಂದ ಹೊರಬಂದು ಉಳಿದ ಸ್ಟೂಡೆಂಟ್ಸ್ ನಾವು ನಾಳೆ ಪೇರೆಂಟ್ಸ್ ಕರ್ಕೊಂಡು ಬರೋಣ ಎಂದಿದ್ದಾರೆ. ಆದರೆ, ತನ್ವಿ ಮನೆಯಲ್ಲಿ ಹೇಳಲು ಹೆದರಿದ್ದಾಳೆ. ನಮ್ಮ ಅಮ್ಮನಿಗೆ ಗೊತ್ತಾದ್ರೆ ಹೋಡಿತಾರೆ ಅಷ್ಟೆ ಎಂದು ಹೇಳಿದ್ದಾಳೆ.

ಮನೆಕಡೆ ದಾರಿಯಲ್ಲಿ ನಡೆದುಕೊಂಡು ಬರುತ್ತ ಏನು ಮಾಡೋದು ಎಂದು ಯೋಚಿಸುತ್ತಾಳೆ. ಅಪ್ಪನ ಹತ್ರ ಹೇಳಿದ್ರೆ ಅವರೂ ಬೈತಾರೆ.. ಅಮ್ಮನಂತ್ರ ಅಂತೂ ಹೇಳೋಕೆ ಆಗಲ್ಲ.. ತಾತಾನ ಬಳಿ ಹೇಳಿದ್ರೆ ಹೇಗೆ ಎಂದು ಯೋಚನೆ ಮಾಡುತ್ತಾಳೆ. ಇದೇ ಒಳ್ಳೆ ಐಡಿಯಾ ತಾತಾನ ಬಳಿ ಕನ್ವೆನ್ಸ್ ಮಾಡಿ ಹೇಳೋಣ ಅವರನ್ನ ನಾಳೆ ಕರ್ಕೊಂಡು ಹೋಗೋಣ ಎಂದು ಮನೆ ಕಡೆ ಹೋಗಿದ್ದಾಳೆ. ಸದ್ಯ ಈ ವಿಚಾರ ಭಾಗ್ಯಾಗೆ ತಿಳಿಯದೆ ಇರುವುದಿಲ್ಲ.. ಗೊತ್ತಾದ ನಂತರ ಭಾಗ್ಯ ಏನು ಮಾಡುತ್ತಾಳೆ ಎಂಬುದು ನೋಡಬೇಕಿದೆ.