ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಆದೀಶ್ವರ್ ತನ್ನ ಮನೆಯಲ್ಲಿ ಕಳೆದ ಏಳು ದಿನಗಳಿಂದ ಮುಚ್ಚಿಟ್ಟಿದ್ದ ಸತ್ಯ ಇದೀಗ ಬಯಲಾಗಿದೆ. ಭಾಗ್ಯ 25 ಲಕ್ಷ ಹಣ ತೆಗೆದುಕೊಳ್ಳಬೇಕೆಂದಯ ಆದೀಶ್ವರ್, ಭಾಗ್ಯಳಂತೆ ತಾನೂ ಮಿಡಲ್ ಕ್ಲಾಸ್ ಜೀವನ ನಡೆಸುತ್ತೇನೆ ಎಂಬ ಚಾಲೆಂಜ್ ಮಾಡಿದ್ದ. ಆದರೆ, ಈ ಚಾಲೆಂಜ್ ವಿಚಾರ ಆದೀ ಮನೆಯಲ್ಲಿ ಹೇಳಿರಲಿಲ್ಲ. ಒಂದು ಪ್ರಾಜೆಕ್ಟ್ ವಿಚಾರವಾಗಿ ಒಂದು ವಾರ ಮನೆಗೆ ಬರೋಕೆ ಆಗಲ್ಲ.. ನಾನು ಹೊರಗಡೆ ರೆಸಾರ್ಟ್ನಲ್ಲಿ ಸ್ಟೇ ಮಾಡುತ್ತೇನೆ ಎಂದು ಹೇಳಿದ್ದ. ಆದರೀಗ ಈ ಎಲ್ಲ ಸತ್ಯ ಗೊತ್ತಾಗಿದೆ. ಇದನ್ನ ಮನೆಯವರಿಗೆ ಹೇಳಿದ್ದು ಮತ್ಯಾರು ಅಲ್ಲ.. ಪೂಜಾ.
ಕಳೆದ ಎಪಿಸೋಡ್ನಲ್ಲಿ, ಭಾಗ್ಯ ಮನೆಯಲ್ಲಿ ಆದೀ ಕೊಟ್ಟ 25 ಲಕ್ಷ ಹಣ ಕಳ್ಳತನವಾಗಿತ್ತು. ಪೊಲೀಸರು ಬಂದು ವಿಚಾರಿಸಿದಾಗ ಕಳ್ಳ ಅರ್ಧ ಕುಡಿದ ಬಿಯರ್ ಬಾಟಲ್ ಸಿಗುತ್ತದೆ. ಆಗ ಈ ಕಳ್ಳ ಯಾರು ಎಂಬುದು ಪೊಲೀಸರಿಗೆ ಗೊತ್ತಾಗುತ್ತದೆ. ನೀವು ಟೆನ್ಶನ್ ಮಾಡಬೇಡಿ ಈರೀತಿ ಅರ್ಧ ಕುಡಿದು ಬಾಟಲ್ ಇಡೋದು ಯಾವ ಕಳ್ಳ ಅಂತ ನಮಗೆ ಗೊತ್ತು.. ನಿಮ್ಮ ಹಣ ಸಿಗುತ್ತೆ ಎಂದು ಹೇಳಿ ಹೋಗುತ್ತಾರೆ. ಇದಾದ ಬಳಿಕ ಆದೀ-ಭಾಗ್ಯ ಮಾತನಾಡುತ್ತಿರುವಾಗ ಅಲ್ಲಿಗೆ ಆದೀ ನೆಕ್ಲೆಸ್ ಕದ್ದಿದ್ದಾನೆ ಎಂದು ಕಂಪ್ಲೆಂಟ್ ಕೊಟ್ಟ ಮಹಿಳೆ ಬರುತ್ತಾಳೆ.
ಆಕೆಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳಲು ಪೊಲೀಸ್ ಸ್ಟೇಷನ್ನಲ್ಲಿ ಆದೀ ಇರುವ ಮನೆಗೆ ಅಡ್ರೆಸ್ ತೆಗೆದುಕೊಂಡು ಬಂದಿರುತ್ತಾಳೆ. ನನ್ನ ಕಡೆಯಿಂದ ತಪ್ಪಾಗಿದೆ ಎಂದು ಸ್ವಾರಿ ಕೇಳುತ್ತಾಳೆ. ಆಗ ಭಾಗ್ಯ ಬಳಿ ನನಗೆ ಕುಡಿಯಲು ಒಂದು ಗ್ಲಾಸ್ ನೀರು ಬೇಕೆಂದು ಆ ಮಹಿಳೆ ಹೇಳಿದ್ದಾಳೆ. ಭಾಗ್ಯ ನೀರು ತೆಗೆದುಕೊಂಡು ಬರಲು ಒಳಗೆ ಬಂದಿದ್ದಾಳೆ. ಇದೇವೇಳೆ ಭಾಗ್ಯಾಗೆ ಪೂಜಾಳ ಕಾಲ್ ಬಂದಿದೆ. ಪೂಜಾ, ಆದೀ ಬಗ್ಗೆ ವಿಚಾರಿಸುತ್ತಾಳೆ.
ಆದೀ ಭಾವ ಏನಾದ್ರು ನಿನ್ಗೆ ಕಾಲ್ ಮಾಡಿದ್ರಾ?, ಅವರು ನಿಮ್ಮ ಮನೆಗೆ ಬಂದಿದ್ರಾ? ಎಂದು ಕೇಳುತ್ತಾಳೆ. ಅದಕ್ಕೆ ಭಾಗ್ಯ, ಇಲ್ಲ ಅವರು ಇಲ್ಲಿಗೆ ಬಂದಿಲ್ಲ.. ಕಾಲ್ ಕೂಡ ಮಾಡಿಲ್ಲ ಎನ್ನುವಾಗ ‘ಭಾಗ್ಯ ಅವರೇ ನೀರು ತೆಗೆದುಕೊಂಡು ಬನ್ನಿ ಎಂದು’ ಆದೀ ಜೋರಾಗಿ ಹೇಳುತ್ತಾನೆ. ಇದು ಪೂಜಾಗೆ ಕೇಳಿಸಿದೆ. ಭಾಗ್ಯ ಕಾಲ್ ಕಟ್ ಮಾಡುತ್ತಾಳೆ. ಬಳಿಕ ಪೂಜಾ ಅಮ್ಮನಿಗೆ ಕಾಲ್ ಮಾಡಿ ಅಲ್ಲಿ ಆದೀ ಭಾವ ಇದ್ದಾರ ಎಂದು ವಿಚಾರಿಸಿದ್ದಾಳೆ. ಆಗ ಪೂಜಾಳ ಅಮ್ಮ, ಆದೀ ಒಂದು ವಾರದಿಂದ ಇಲ್ಲೇ ಇದ್ದಾರೆ ಎಂದು ಎಲ್ಲ ಸತ್ಯ ಬಾಯಿ ಬಿಟ್ಟಿದ್ದಾರೆ.
ಹೀಗೆ ಆದೀಶ್ವರ್ ಇಷ್ಟು ದಿನ ಮುಚ್ಚಿಟ್ಟಿದ್ದ ಸತ್ಯ ಗೊತ್ತಾಗಿದೆ. ಪೂಜಾ, ರಾಮ್ದಾಸ್ ಬಳಿ ಹೋಗಿ ಆದೀ ಏಳು ದಿನಗಳಿಂದ ಭಾಗ್ಯಕ್ಕನ ಮನೆ ಮೇಲೆ ರೂಮ್ ಮಾಡಿ ಅಲ್ಲೇ ಸಾಮಾನ್ಯ ಜನರಂತೆ ಜೀವನ ನಡೆಸುತ್ತಿದ್ದಾರಂತೆ ಎಂದು ಹೇಳಿದ್ದಾಳೆ. ಪೂಜಾ ಹೀಗೆ ಹೇಳುವಾಗ ಅಲ್ಲಿ ಮೀನಾಕ್ಷಿ ಹಾಗೂ ಕನ್ನಿಕಾ ಕೂಡ ಇದ್ದರು. ಇದನ್ನ ಕೇಳಿ ಮನೆಯವರಿಗೆಲ್ಲ ಶಾಕ್ ಆಗಿದೆ. ಸದ್ಯ ಆದೀಶ್ವರ್ ಈ ವಿಚಾರವನ್ನು ಮನೆಯಲ್ಲಿ ಹೇಗೆ ಅರ್ಥ ಮಾಡಿಸುತ್ತಾನೆ ಎಂಬುದು ನೋಡಬೇಕಿದೆ.
ಮತ್ತೊಂದೆಡೆ ಅತ್ತ ಭಾಗ್ಯ ಮಗಳು ತನ್ವಿ ಕ್ಲಾಸ್ಗೆ ಬಂಕ್ ಹಾಕಿದ ಕಾರಣ ಕಾಲೇಜ್ನಿಂದ ಸಸ್ಪೆಂಡ್ ಆಗಿದ್ದು, ಪೇರೆಂಟ್ಸ್ ಬರೋ ತನಕ ಕಾಲೇಜಿಗೆ ಬರಬಾರದು ಎಂದು ಪ್ರಿನ್ಸಿಪಾಲ್ ಹೇಳಿದ್ದಾರೆ. ಹೀಗಾಗಿ ತನ್ವಿಗೆ ಏನು ಮಾಡಬೇಕೆಂದು ದೋಚುತ್ತಿಲ್ಲ. ಭಾಗ್ಯ ಬಳಿ ಹೇಳುವಷ್ಟು ಧೈರ್ಯ ಆಕೆಗೆ ಇಲ್ಲ.. ಹೀಗೆ ಯೋಚನೆ ಮಾಡುತ್ತಿರುವಾಗ ತಾಂಡವ್ ಮನೆಗೆ ಬಂದಿದ್ದಾನೆ. ಕಳ್ಳತನವಾದ ಜಾಗವನ್ನು ಪೊಲೀಸರು ನೋಡಲು ಬಂದಾಗ ಅವರ ಜೊತೆ ತಾಂಡವ್ ಕೂಡ ಬಂದಿರುತ್ತಾನೆ.
ಅಪ್ಪನ ಬಳಿ ಹೇಳಿ ಹೇಗಾದ್ರು ಮ್ಯಾನೇಜ್ ಮಾಡೋಣ ಎಂದು ತನ್ವಿ ತಾಂಡವ್ಗೆ ಮೆಸೇಜ್ ಮಾಡಿದ್ದಾಳೆ. ನಿಮ್ಮ ಬಳಿ ಇಂಪಾರ್ಟೆಂಟ್ ವಿಷಯ ಮಾತನಾಡಬೇಕು.. ಸ್ವಲ್ಪ ಹೊರಗೆ ಬನ್ನಿ ಎಂದು ಮೆಸೇಜ್ ಕಳುಹಿಸಿದ್ದಾಳೆ. ಆದರೆ, ಅದನ್ನು ತಾಂಡವ್ ಗಮನಿಸುವುದಿಲ್ಲ.. ಆಗ ತನ್ವಿ ಮಿಸ್ ಕಾಲ್ ಕೊಟ್ಟಿದ್ದಾಳೆ. ಈ ಸಂದರ್ಭ ಯಾರದ್ದು ಕಾಲ್ ಎಂದು ನೋಡುವಾಗ ತನ್ವಿ ಮೆಸೇಜ್ ಕಾಣುತ್ತಿದೆ. ಏನು ಅಂತ ಕೇಳಲು ತಾಂಡವ್ ಮನೆಯ ಹಿಂಬದಿ ಬಂದಿದ್ದಾನೆ. ಸದ್ಯ ತನ್ವಿ ಎಲ್ಲ ವಿಚಾರ ಹೇಳಿದಾಗ ತಾಂಡವ್ ಏನು ಕ್ರಮ ಕೈಗೊಳ್ಳುತ್ತಾನೆ ಎಂಬುದು ನೋಡಬೇಕಿದೆ.
BBK 12 Contestant: ಬಿಗ್ ಬಾಸ್ 12ಕ್ಕೆ 4 ಮಂದಿ ಕಂಟೆಸ್ಟೆಂಟ್ ಫೈನಲ್: ಇವರೇ ನೋಡಿ