ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಮನೆ ಈಗ ಬಿಬಿ ಕಾಲೇಜ್: ಭರ್ಜರಿಯಾಗಿ ಸಾಗುತ್ತಿದೆ ರಾಶಿಕಾ-ಸೂರಜ್ ಪ್ರೇಮಗೀತೆ

ಬಿಗ್ ಬಾಸ್ ಮನೆ ಈ ವಾರ ಬಿಗ್ ಬಾಸ್ ಕಾಲೇಜ್ ಆಗಿ ಮಾರ್ಪಾಡಾಗಿದೆ. ಹೌದು, ಹಿಂದಿನ ಸೀಸನ್ಗಳಲ್ಲಿ ಬಿಗ್ ಬಾಸ್ ಸ್ಕೂಲ್ ಎಂಬ ಟಾಸ್ಕ್ ನೀಡಲಾಗಿತ್ತು. ಆದರೆ ಈ ಬಾರಿ ಇದು ಕಾಲೇಜ್ ಆಗಿ ಕನ್ವರ್ಟ್ ಆಗಿದೆ. ‘‘ನಿಮ್ಮ ಜೀವನದ ಒಂದು ಗೋಲ್ಡನ್ ಪಿರೇಡ್ಗೆ ಮತ್ತೆ ನೀವೆಲ್ಲರು ಹಿಂದಿರುಗಲಿದ್ದೀರಿ. ಈ ವಾರ ಇಡೀ ಬಿಗ್ ಬಾಸ್ ಮನೆ ಬಿಬಿ ಕಾಲೇಜ್ ಕ್ಯಾಂಪಸ್ ಆಗಿರಲಿದೆ’’ ಎಂದು ಬಿಗ್ ಬಾಸ್ ಹೇಳಿದ್ದಾರೆ.

Bigg Boss College

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಐದನೇ ವಾರಕ್ಕೆ ಕಾಲಿಟ್ಟಿದ್ದು, ಭಿನ್ನ-ವಿಭಿನ್ನ ಟಾಸ್ಕ್​ಗಳು ಶುರುವಾಗುತ್ತಿವೆ. ಒಂದುರೀತಿಯ ಅಸಲಿ ಆಟ ಈಗ ಶುರುವಾಗುತ್ತಿದೆ ಎನ್ನಬಹುದು. ಕಿಚ್ಚ ಸುದೀಪ್ ನಿನ್ನೆ ವೀಕೆಂಡ್​ನಲ್ಲಿ ಬಂದು ಹೋದ ನಂತರ ಕೆಲ ಸ್ಪರ್ಧಿಗಳು ಎಚ್ಚರಗೊಂಡಂತೆ ಕಾಣುತ್ತಿದೆ. ಕಿಚ್ಚನ ವಾರ್ನಿಂಗ್ ಇಂದ ಕೆಲವರು ಬಿಗ್ ಬಾಸ್ ಮನೆಯೊಳಗಿನ ಸಂಬಂಧಕ್ಕೆ ಎಳ್ಳು-ನೀರು ಬಿಟ್ಟರೆ ಇನ್ನೂ ಕೆಲವರು ಶೋನ ಗಂಭೀರತೆ ಅರಿಯದೆ ಅದೆ ಹಳೇ ಚಾಳಿ ಮುಂದುವರೆಸಿದ್ದಾರೆ.

ಇದರ ಮಧ್ಯೆ ಬಿಗ್ ಬಾಸ್ ಮನೆ ಈ ವಾರ ಬಿಗ್ ಬಾಸ್ ಕಾಲೇಜ್ ಆಗಿ ಮಾರ್ಪಾಡಾಗಿದೆ. ಹೌದು, ಹಿಂದಿನ ಸೀಸನ್​ಗಳಲ್ಲಿ ಬಿಗ್ ಬಾಸ್ ಸ್ಕೂಲ್ ಎಂಬ ಟಾಸ್ಕ್ ನೀಡಲಾಗಿತ್ತು. ಆದರೆ ಈ ಬಾರಿ ಇದು ಕಾಲೇಜ್ ಆಗಿ ಕನ್ವರ್ಟ್ ಆಗಿದೆ. ‘‘ನಿಮ್ಮ ಜೀವನದ ಒಂದು ಗೋಲ್ಡನ್ ಪಿರೇಡ್​ಗೆ ಮತ್ತೆ ನೀವೆಲ್ಲರು ಹಿಂದಿರುಗಲಿದ್ದೀರಿ. ಈ ವಾರ ಇಡೀ ಬಿಗ್ ಬಾಸ್ ಮನೆ ಬಿಬಿ ಕಾಲೇಜ್ ಕ್ಯಾಂಪಸ್ ಆಗಿರಲಿದೆ’’ ಎಂದು ಬಿಗ್ ಬಾಸ್ ಹೇಳಿದ್ದಾರೆ.

ಈ ಅವಕಾಶವನ್ನು ಸ್ಪರ್ಧಿಗಳು ಮೊದಲ ಸಖತ್ ಆಗಿ ಉಪಯೋಗಿಸಿಕೊಂಡಂತೆ ಕಂಡುಬರುತ್ತಿದೆ. ಈ ವಾರದ ಕ್ಯಾಪ್ಟನ್ ಆಗಿರುವ ಮ್ಯುಟೆಂಟ್ ರಘು ಪ್ರಿನ್ಸಿಪಲ್ ಜವಾಬ್ದಾರಿ ಹೊತ್ತಿದ್ದಾರೆ. ಅಶ್ವಿನಿ ಗೌಡ ಬಹುಶಃ ಟೀಚರ್ ಆಗಿರುವ ಸಾಧ್ಯತೆ ಇದೆ. ಚಂದ್ರಪ್ರಭ ಅವರು, ನಮಸ್ತೆ ಸರ್ ನನ್ನ ಹೆಸರು ಚಂದ್ರಪ್ರಭ ಅಂತ ವಯಸ್ಸು 21 ಎಂದು ಹೇಳಿರುವುದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಇತರೆ ಪುರುಷ ಸ್ಪರ್ಧಿಗಳು ಮಹಿಳಾ ಸ್ಪರ್ಧಿಗಳಿಗೆ ತುಂಬಾ ಕೀಟಲೆ ಕೊಟ್ಟಿದ್ದಾರೆ. ಅಭಿ ಅವರು ಸ್ಪಂದನಾ ಕೆನ್ನೆ ಸವರಿ ರೇಗಿಸಲು ಮುಂದಾಗಿದ್ದಾರೆ.



ಇವೆಲ್ಲ ಒಂದುಕಡೆ ಆದರೆ, ಮತ್ತೊಂದು ಕಡೆ ಸೂರಜ್ ಹಾಗೂ ರಾಶಿಕಾ ಪ್ರೇಮಗೀತೆ ಕೂಡ ಬಿಬಿ ಕ್ಯಾಂಪಸ್​ನಲ್ಲಿ ಸದ್ದು ಮಾಡುತ್ತಿದೆ. ಇಬ್ಬರೂ ಜೊತೆಯಾಗಿ ಪ್ರೇಮಪಕ್ಷಿಯಂತೆ ಇಲ್ಲೂ ಕಾಣಿಸಿಕೊಂಡಿದ್ದಾರೆ. ಲೈನ್‌ ಹೊಡೆಯಬಹುದು ಎಂದು ಸೂರಜ್‌ ಫುಲ್‌ ರಾಶಿಕಾ ಹಿಂದೆ ಬಿದ್ದಿದ್ದಾರೆ. ರಾಶಿಕಾ ಹಾಗೂ ಸೂರಜ್‌ ಬಿಹೇವಿಯರ್‌ ನೋಡಿದವರು, ಅಯ್ಯಯ್ಯೋ ಇದೆಲ್ಲ ಟಾಸ್ಕ್‌ನಲ್ಲಿ ಇಲ್ವೇ ಇಲ್ಲ ಎಂದು ಹೇಳಿದ್ದಾರೆ.

ಬರೀ ಸೂರಜ್‌ ಜೊತೆಗೆ ಇದ್ದರೆ ರಾಶಿಕಾ ಶೆಟ್ಟಿ ಆದಷ್ಟು ಬೇಗ ಹೊರಗಡೆ ಬರ್ತಾರೆ ಎಂದು ಕಿಚ್ಚ ಸುದೀಪ್‌ ಅವರು ಕಿಚ್ಚನ ಪಂಚಾಯಿತಿಯಲ್ಲಿ ಹೇಳಿಕೊಂಡಿದ್ದರು. ಹೀಗಾಗಿ ಈ ವಾರ ಇವರಿಬ್ಬರು ಸಪರೇಟ್ ಆಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಕಳೆದ ವಾರಕ್ಕಿಂತ ಈ ವಾರವೇ ಇವರಿಬ್ಬರ ಕ್ಲೋಸ್​ನೆಸ್ ಜಾಸ್ತಿ ಆದಂತೆ ಕಾಣುತ್ತಿದೆ.

BBK 12: ನಿನ್ನೆ ಕಿಚ್ಚನ ಚಪ್ಪಾಳೆ ಯಾರಿಗೂ ಸಿಕ್ಕಿಲ್ಲ ಏಕೆ?: ಸುದೀಪ್ ನೀಡಿದ ಕಾರಣ ಏನು?