Bhavya Gowda: ಅಕ್ಕನ ಜೊತೆ ಮುದ್ದು ಮುದ್ದಾಗ ಫೋಟೋ ತೆಗೆಸಿಕೊಂಡ ಭವ್ಯಾ ಗೌಡ
ಭವ್ಯಾ ಅವರು ತನ್ನ ಅಕ್ಕ ದಿವ್ಯಾ ಗೌಡ ಜೊತೆ ಫೋಟೋ ತೆಗೆಸಿಕೊಂಡಿದ್ದು, ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇಬ್ಬರೂ ಆರೆಂಜ್ ಕಲರ್ನ ಸಲ್ವಾರ್ ಸ್ಯೂಟ್ ಧರಿಸಿ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಭವ್ಯಾ-ದಿವ್ಯಾ ಈ ಫೋಟೋದಲ್ಲಿ ಮುದ್ದು-ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

Bhavya Gowda and Divya Gowda -

ಭವ್ಯಾ ಗೌಡ (Bhavya Gowda) ಬಿಗ್ ಬಾಸ್ ಮುಗಿದ ಬಳಿಕ ಝೀ ಕನ್ನಡ ವಾಹಿನಿಯಲ್ಲಿ ಕರ್ಣ ಎಂಬ ಹೊಸ ಧಾರಾವಾಹಿಗೆ ನಾಯಕಿ ನಟಿಯಾಗಿ ಎಂಟ್ರಿ ಆದರು. ಇದು ಅವರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿತು. ಕರ್ಣ ಧಾರಾವಾಹಿಯಲ್ಲಿ ಭವ್ಯಾ ಗೌಡ ಮುದ್ದ-ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಭವ್ಯಾ ಅವರನ್ನು ನಿಧಿ ಪಾತ್ರದಲ್ಲಿ ಇಷ್ಟಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟಿವ್ ಆಗಿರುವ ಭವ್ಯಾ ಎಲ್ಲೇ ಹೋದರು ಅಂದದ ಫೋಟೋ ತೆಗೆಸಿಕೊಂಡು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತ ಇರುತ್ತಾರೆ.
ಇದೀಗ ಭವ್ಯಾ ಅವರು ತನ್ನ ಅಕ್ಕ ದಿವ್ಯಾ ಗೌಡ ಜೊತೆ ಫೋಟೋ ತೆಗೆಸಿಕೊಂಡಿದ್ದು, ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇಬ್ಬರೂ ಆರೆಂಜ್ ಕಲರ್ನ ಸಲ್ವಾರ್ ಸ್ಯೂಟ್ ಧರಿಸಿ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಭವ್ಯಾ-ದಿವ್ಯಾ ಈ ಫೋಟೋದಲ್ಲಿ ಮುದ್ದು-ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಕಳೆದ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಭವ್ಯಾ ಡೊಡ್ಮನೆಯಲ್ಲಿರುವಾಗ ಭವ್ಯಾ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು.. ಅಲ್ಲಿಂದ ದಿವ್ಯಾ ಫೇಮಸ್ ಆಗಿದ್ದಾರೆ.
ವೃತ್ತಿಯಲ್ಲಿ ದಿವ್ಯಾ ಗೌಡ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಪ್ರೊಫೆಶನಲ್ ಮೇಕಪ್ ಆರ್ಟಿಸ್ಟ್ ಆಗಿರುವ ಇವರು ಪ್ರತ್ಯೇಕ ಕೋರ್ಸ್ ಮಾಡಿ ಸರ್ಟಿಫೈಡ್ ಮೇಕಪ್ ಆರ್ಟಿಸ್ಟ್ ಎಂದೆನಿಸಿಕೊಂಡಿದ್ದಾರೆ. ಬ್ರೈಡಲ್ ಮೇಕಪ್‌ನಲ್ಲಿ ದಿವ್ಯಾ ಗೌಡ ಪರಿಣಿತಿ ಪಡೆದಿದ್ದಾರೆ. ಸೆಲೆಬ್ರಿಟಿಗಳಿಗೂ ಮೇಕಪ್ ಆರ್ಟಿಸ್ಟ್ ಆಗಿ ದಿವ್ಯಾ ಕೆಲಸ ಮಾಡಿದ್ದಾರೆ. ನಟಿ ಶರ್ಮಿಳಾ ಮಾಂಡ್ರೆ, ನಟಿ ಅಮೂಲ್ಯ, ನಟಿ ಕಾವ್ಯಾ ಶೆಟ್ಟಿ, ನಟಿ ಶಾನ್ವಿ ಶ್ರೀವಾಸ್ತವ ಮುಂತಾದ ತಾರೆಯರಿಗೆ ಬಣ್ಣ ಹಚ್ಚಿದ್ದಾರೆ ದಿವ್ಯಾ ಗೌಡ.
ಬಿಗ್ ಬಾಸ್ ಸೀಸನ್ 11ರ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಭವ್ಯಾ ಗೌಡ ಟಾಪ್ ನಾಲ್ಕನೇ ಸ್ಥಾನ ಗಳಿಸಿದ್ದರು. ಈ ಶೋನಿಂದ ಭವ್ಯಾ ಫ್ಯಾನ್ ಪೇಜ್‌ಗಳ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಗೀತಾ ಸೀರಿಯಲ್‌ನಲ್ಲಿ ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ಭವ್ಯಾ ಗೌಡ ಅಭಿನಯಿಸಿ ಕರ್ನಾಟಕ ಜನತೆಗೆ ಹತ್ತಿರವಾದವರು.
Karna Serial: ಕರ್ಣ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಬಂಪರ್ ಆಫರ್ ಪಡೆದ ನಮ್ರತಾ ಗೌಡ