ಕನ್ನಡಿಗರ ನೆಚ್ಚಿನ ವಾಹಿನಿ ಝೀ ಕನ್ನಡ ಜನರನ್ನು ತನ್ನ ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂಲಕ ಮನರಂಜಿಸುತ್ತ ಬಂದಿದೆ. ಈಗ ಇದರಲ್ಲಿ ‘ನಾವು ನಮ್ಮವರು’ (Naavu Nammavaru) ರಿಯಾಲಿಟಿ ಶೋ ಶುರುವಾಗಲಿದೆ. ಸಂಬಂಧಗಳ ಮಹತ್ವ ತಿಳಿಸುವ ಈ ಶೋಗೆ ಇಂದು ಚಾಲನೆ ಸಿಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಪ್ರಸಾರ ಕಾಣಲಿದೆ. ಈ ರಿಯಾಲಿಟಿ ಶೋನಲ್ಲಿ ಸ್ಯಾಂಡಲ್ವುಡ್ ಅಧ್ಯಕ್ಷ ಶರಣ್, ಅಮೂಲ್ಯ ಹಾಗೂ ಹಿರಿಯ ನಟಿ ತಾರಾ ಜಡ್ಜ್ ಆಗಿ ಇದ್ದಾರೆ.
ಈ ಶೋನ ಭಾಗವಾಗಿ ರಜತ್ ಕಿಶನ್ ಕೂಡ ಇದ್ದಾರೆ. ಇಡೀ ಕುಟುಂಬದ ಜೊತೆ ಅವರು ಶೋಗೆ ಬಂದಿದ್ದಾರೆ. ಬಿಗ್ ಬಾಸ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ರಜತ್ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ನಲ್ಲಿ ವೈಲ್ಡ್ ಕಾರ್ಡ್ ಮೂಲಕ ಅವರು ದೊಡ್ಮನೆ ಪ್ರವೇಶ ಮಾಡಿ ಸಾಕಷ್ಟು ಸದ್ದು ಮಾಡಿದರು. ಫಿನಾಲೆವರೆಗೆ ಅವರು ಇದ್ದರು. ಇದೀಗ ಅವರು ನಾನು ನಮ್ಮವರು ಶೋಗೆ ಬಂದಿದ್ದಾರೆ. ಈ ಶೋನಲ್ಲಿ ಪತ್ನಿ ಹಾಗೂ ಮಗನ ಜೊತೆ ಬಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿರುವ ಅಲ್ಲು ರಘು ದಂಪತಿ, ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ದಂಪತಿ ಸೇರಿದಂತೆ ಒಟ್ಟು 9 ಕುಟುಂಬ ಎಂಟ್ರಿ ಕೊಟ್ಟಿದೆ. ಸವಿ ಸವಿ ಮನರಂಜನೆಯ ನೆನಪಿನಂಗಳಕ್ಕೆ 'ನಾವು ನಮ್ಮವರು' ಗೃಹಪ್ರವೇಶ ಮಾಡಿದೆ. ನಾವು ನಮ್ಮವರು ನಾಳೆಯಿಂದ ಶನಿ-ಭಾನು ರಾತ್ರಿ 9ಕ್ಕೆ ಪ್ರಸಾರ ಕಾಣಲಿದೆ. ಎಂದು ಝೀ ಕನ್ನಡ ಪ್ರೊಮೋ ಹಂಚಿಕೊಂಡಿದೆ.
ಕನ್ನಡ ಕಿರುತೆರೆ ಇತಿಹಾಸದಲ್ಲಿಯೇ ಇದು ವಿಭಿನ್ನ ಪ್ರಯತ್ನವಾಗಿದ್ದು ನಿಮ್ಮ ನೆಚ್ಚಿನ ತಾರೆಯರು ಅವರ ಕುಟುಂಬದವರ ಜೊತೆಗೆ ಹೇಗೆ ಇರುತ್ತಾರೆ ಎಂಬುದನ್ನು ನೋಡಬಹುದು. ಸಂಬಂಧ, ಒಗ್ಗಟ್ಟಿಗೆ ಬೆಲೆಕೊಡುವ ಕೊಡುವ ವಿಭಿನ್ನ ಕಾನ್ಸೆಪ್ಟ್ ಇರುವ ಹೊಚ್ಚಹೊಸ ರಿಯಾಲಿಟಿ ಶೋ ಇದಾಗಿದೆ. ಇಲ್ಲಿ ಸ್ಪರ್ಧಿಗಳು ಅನೇಕ ಟ್ವಿಸ್ಟ್ಸ್ ಇರುವ ಬೇರೆ ಬೇರೆ ಟಾಸ್ಕ್ಸ್ ಗಳಲ್ಲಿ ತಮ್ಮ ಕುಟುಂಬದವರ ಜೊತೆ ಸೇರಿ ಭಾಗವಹಿಸಲಿದ್ದಾರೆ. ನಿರಂಜನ್ ದೇಶಪಾಂಡೆ ನಿರೂಪಣಾ ಜವಾಬ್ದಾರಿಯನ್ನು ಹೊತ್ತಿದ್ದಾರೆ.
BBK 19: ಬಿಗ್ ಬಾಸ್ ಶುರುವಾಗುವ ದಿನಾಂಕ ಪ್ರಕಟ: ಕಾದು ಕುಳಿತ ವೀಕ್ಷಕರು