ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rakshak Bullet: ನಮೃತಾ ಗೌಡ ಹುಟ್ಟುಹಬ್ಬಕ್ಕೆ ಸ್ಪೆಷಲ್ ಸರ್ಪ್ರೈಸ್ ಕೊಟ್ಟ ರಕ್ಷಕ್ ಬುಲೆಟ್: ಕಣ್ಣೀರಿಟ್ಟ ನಟಿ

ರಕ್ಷಕ್‌ ತನ್ನ ನೆಚ್ಚಿನ ಅಕ್ಕ ನಮ್ರತಾ ಗೌಡ ಅವರ ಹುಟ್ಟುಹಬ್ಬವನ್ನು ಗ್ರ್ಯಾಂಡ್‌ ಆಗಿ ಆಚರಿಸಿ ನಮ್ರತಾಗೆ ಸರ್ಪ್ರೈಸ್‌ ನೀಡಿದ್ದಾರೆ. ಇದನ್ನು ನೋಡಿ ನಮ್ರತಾ ಗೌಡ ಭಾವುಕರಾಗಿ ಕಣ್ಣೀರಾಗಿದ್ದಾರೆ. ಹೌದು, ನಾಗಿಣಿ ಸೀರಿಯಲ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ನಮ್ರತಾ ಗೌಡ ಅವರ ಹುಟ್ಟು ಹಬ್ಬ ಅದ್ಧೂರಿಯಾಗಿ ಸೆಲೆಬ್ರೆಟ್ ಮಾಡಲಾಗಿದೆ.

ನಮೃತಾ ಗೌಡ ಹುಟ್ಟುಹಬ್ಬಕ್ಕೆ ಸ್ಪೆಷಲ್ ಸರ್ಪ್ರೈಸ್ ಕೊಟ್ಟ ರಕ್ಷಕ್ ಬುಲೆಟ್

Namrutha Gowda Birthday

Profile Vinay Bhat Apr 16, 2025 7:30 AM

ಬಿಗ್ ಬಾಸ್ ಶೋನಲ್ಲಿ (Bigg Boss Kannada) ಸಂಬಂಧಗಳು ಹುಟ್ಟುಕೊಳ್ಳುವುದು ಮಾಮೂಲಿ. ಅನೇಕ ಸೀಸನ್​ಗಳಿಂದ ನಾವು ಅದನ್ನು ನೋಡಿಕೊಂಡು ಬಂದಿದ್ದೇವೆ. ಆದರೆ, ಆ ಸಂಬಂಧವನ್ನು ಶೋ ಮುಗಿದ ಬಳಿಕ ಉಳಿಸಿಕೊಳ್ಳುವುದು ಕೆಲವೇ ಕೆಲವು ಮಂದಿ ಮಾತ್ರ. ಈರೀತಿ ಅಕ್ಕ-ತಮ್ಮ ಸಂಬಂಧವನ್ನು ಜೋಪಾನವಾಗಿ ಕಾಪಾಡಿಕೊಂಡು ಇಂದು ಕೂಡ ಸಖತ್ ಕ್ಲೋಸ್ ಆಗಿರುವ ಸ್ಪರ್ಧಿಗಳು ಎಂದರೆ ಅದು ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿಗಳಾದ ನಮ್ರತಾ ಗೌಡ ಮತ್ತು ರಕ್ಷಕ್‌ ಬುಲೆಟ್‌. ಇವರಿಬ್ಬರು ಬಿಗ್ ಬಾಸ್​ನಲ್ಲಿ ಅಕ್ಕ - ತಮ್ಮನಂತಿದ್ದರು. ಇವರಿಬ್ಬರ ಅಕ್ಕ - ತಮ್ಮ ಬಾಂಧವ್ಯ ಇಂದೂ ಮುಂದುವರೆದಿದೆ.

ಸದ್ಯ ರಕ್ಷಕ್‌ ತನ್ನ ನೆಚ್ಚಿನ ಅಕ್ಕ ನಮ್ರತಾ ಗೌಡ ಅವರ ಹುಟ್ಟುಹಬ್ಬವನ್ನು ಗ್ರ್ಯಾಂಡ್‌ ಆಗಿ ಆಚರಿಸಿ ನಮ್ರತಾಗೆ ಸರ್ಪ್ರೈಸ್‌ ನೀಡಿದ್ದಾರೆ. ಇದನ್ನು ನೋಡಿ ನಮ್ರತಾ ಗೌಡ ಭಾವುಕರಾಗಿ ಕಣ್ಣೀರಾಗಿದ್ದಾರೆ. ಹೌದು, ನಾಗಿಣಿ ಸೀರಿಯಲ್​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ನಮ್ರತಾ ಗೌಡ ಅವರ ಹುಟ್ಟು ಹಬ್ಬ ಅದ್ಧೂರಿಯಾಗಿ ಸೆಲೆಬ್ರೆಟ್ ಮಾಡಲಾಗಿದೆ.

ನಮ್ರತಾ ಗೌಡ ಅವರ ಹುಟ್ಟುಹಬ್ಬದ ಖುಷಿಯನ್ನು ದುಪ್ಪಟು ಮಾಡಿದ್ದಾರೆ ರಕ್ಷಕ್​ ಬುಲೆಟ್​​. ಹುಟ್ಟು ಹಬ್ಬದ ಖುಷಿಯಲ್ಲಿದ್ದ ನಮ್ರತಾ ಗೌಡ ಅವರಿಗೆ ರಕ್ಷಕ್​ ಬುಲೆಟ್​​ ಮಸ್ತ್​ ಸರ್​ಪ್ರೈಸ್​ವೊಂದನ್ನು ಕೊಟ್ಟಿದ್ದಾರೆ. ಅವರು ಕೊಟ್ಟಿರುವ ಬರ್ತ್‌ಡೇ ಸರ್ಪ್ರೈಸ್‌ಗೆ ನಮ್ರತಾ ಭಾವುಕರಾಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ನಮ್ರತಾ‌ ಗೌಡ ಹುಟ್ಟುಹಬ್ಬದ ಹಿನ್ನೆಲೆ ಸರ್ಪ್ರೈಸ್ ಆಗಿ ರಕ್ಷಕ್ ಮನೆಗೆ ಕರೆದುಕೊಂಡು ಹೋಗಿ ನಟಿಯ ಕೈಯಲ್ಲಿ ಕೇಕ್ ಕಟ್ ಮಾಡಿಸಿದ್ದಾರೆ. ಬರ್ತ್‌ಡೇಗೆ ಅಲಂಕರಿಸಿರುವ ರೀತಿ ಹಾಗೂ ಸಹೋದರ ರಕ್ಷಕ್ ಪ್ರೀತಿ ನೋಡಿ ನಮ್ರತಾ ಕಣ್ಣೀರಿಟ್ಟಿದ್ದಾರೆ. ಇದು ನಟ ಹಂಚಿಕೊಂಡಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಯೋಗೆ ಹುಟ್ಟುಹಬ್ಬದ ಶುಭಾಶಯಗಳು ಪಾಪು. ನಿಮ್ಮೊಂದಿಗೆ ಎಂದೆಂದಿಗೂ ಎಂದು ರಕ್ಷಕ್‌ ಕ್ಯಾಪ್ಷನ್‌ ನೀಡಿದ್ದಾರೆ.

ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್-2 ದಲ್ಲಿ ರಕ್ಷಕ್ ಬುಲೆಟ್ ಮಿಂಚುತ್ತಿದ್ದಾರೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ರಚಿತಾ ರಾಮ್ ಅವರಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಅತ್ತ ನಮ್ರತಾ ಗೌಡ ಝೀ ಕನ್ನಡದಲ್ಲಿ ಇನ್ನೇನು ಆರಂಭವಾಗಲಿರುವ ಕರ್ಣ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಸದ್ದಿಲ್ಲದೆ ನಡೆಯಿತು ಚಂದನ್ ಶೆಟ್ಟಿ- ಸೀತಾ ವಲ್ಲಭ ಸೀರಿಯಲ್‌ ನಟಿ ಸುಪ್ರೀತಾ ಸತ್ಯನಾರಾಯಣ್‌ ನಿಶ್ಚಿತಾರ್ಥ