ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸದ್ದಿಲ್ಲದೆ ನಡೆಯಿತು ಚಂದನ್ ಶೆಟ್ಟಿ- ಸೀತಾ ವಲ್ಲಭ ಸೀರಿಯಲ್‌ ನಟಿ ಸುಪ್ರೀತಾ ಸತ್ಯನಾರಾಯಣ್‌ ನಿಶ್ಚಿತಾರ್ಥ

supritha sathyanarayan engaged: ಸುಪ್ರೀತಾ ಸತ್ಯನಾರಾಯಣ್‌ ಅವರು ಎಂಗೇಂಜ್‌ಮೆಂಟ್‌ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಮತ್ತು ಮಾಹಿತಿ ಹಂಚಿಕೊಂಡಿದ್ದಾರೆ. ಇವರು ಎಂಗೇಜ್‌ಮೆಂಟ್‌ ಆಗಿರುವುದು ಚಂದನ್‌ ಶೆಟ್ಟಿ ಅವರನ್ನು. ಮಾರ್ಚ್‌ 12ರಂದು ನಿಶ್ಚಿತಾರ್ಥ ನಡೆದಿದೆ. ಆದರೆ, ನಿಶ್ಚಿತಾರ್ಥದ ಫೋಟೋಗಳನ್ನು ನಿನ್ನೆಯಷ್ಟೇ ಹಂಚಿಕೊಂಡಿದ್ದಾರೆ.

ಸದ್ದಿಲ್ಲದೆ ನಡೆಯಿತು ಚಂದನ್ ಶೆಟ್ಟಿ-  ಸುಪ್ರೀತಾ ನಿಶ್ಚಿತಾರ್ಥ

supritha sathyanarayan engagment

Profile Vinay Bhat Apr 15, 2025 4:08 PM

ಕನ್ನಡ ಕಿರುತೆರೆಯಲ್ಲಿ ವಿಭಿನ್ನವಾಗಿ ಮೂಡಿ ಬರುತ್ತಿದ್ದ ಸೀತಾ ವಲ್ಲಭ (Seetha Vallabha Serial) ಧಾರಾವಾಹಿ ಮೂಲಕ ಸಖತ್​ ಫೇಮಸ್​ ಆಗಿದ್ದ ನಟಿ ಸುಪ್ರೀತಾ ಸತ್ಯನಾರಾಯಣ್‌ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಚಂದನ್ ಶೆಟ್ಟಿ ಜೊತೆ ಎಂಗೇಜ್ ಆಗಿರುವ ಕುರಿತು ಸುಪ್ರೀತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಎಂಗೇಂಜ್‌ಮೆಂಟ್‌ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಮತ್ತು ಮಾಹಿತಿ ಹಂಚಿಕೊಂಡಿದ್ದಾರೆ. ಮಾರ್ಚ್‌ 12ರಂದು ನಿಶ್ಚಿತಾರ್ಥ ನಡೆದಿದೆ. ಆದರೆ, ನಿಶ್ಚಿತಾರ್ಥದ ಫೋಟೋಗಳನ್ನು ನಿನ್ನೆಯಷ್ಟೇ ಹಂಚಿಕೊಂಡಿದ್ದಾರೆ.

ಇವರು ಎಂಗೇಜ್‌ಮೆಂಟ್‌ ಆಗಿರುವುದು ಚಂದನ್‌ ಶೆಟ್ಟಿ ಅವರನ್ನು. ಅಂದಹಾಗೆ ಇವರು ರಾಪರ್‌ ಚಂದನ್‌ ಶೆಟ್ಟಿ ಅಲ್ಲ. ನಿವೇದಿತಾ ಗೌಡ ಮಾಜಿ ಪತಿಯಲ್ಲ. ಇವರು ಕೊಡಗು ಜಿಲ್ಲೆಯವರು. ಉದ್ಯಮಿ, ಡಿಜಿಟಲ್‌ ಕ್ರಿಯೆಟರ್‌ ಆಗಿ ಗುರುತಿಸಿಕೊಂಡಿದ್ದಾರೆ. ಸಾಫ್ಟ್‌ವೇರ್‌ ಉದ್ಯೋಗಿ ಎಂದು ಹೇಳಿಕೊಂಡಿದ್ದಾರೆ. ಕೊಡಗಿನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದಾರಂತೆ. ಇನ್​ಸ್ಟಾ ಖಾತೆಯಲ್ಲಿ ದೇಶ ವಿದೇಶ ಸುತ್ತಿರೋ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

‘‘ಹೊಸ ಚಾಪ್ಟರ್‌ ಇಲ್ಲಿಂದ ಶುರು. ಹಲೋ ಎನ್ನುವ ನಿನ್ನ ಧ್ವನಿಯಿಂದಲೇ ಪ್ರೀತಿ ಶುರುವಾದ ಬಗ್ಗೆ ಹೇಳಲಾ? ಅಥವಾ ನಿನ್ನ ನಗು ನೋಡಿದಾಗ ನನ್ನ ಹೊಟ್ಟೆಯೊಳಗಡೆ ಚಿಟ್ಟೆ ಹಾರಾಟ ಮಾಡೋ ಬಗ್ಗೆ ಹೇಳಲಾ? ನಿನ್ನ ನಗು ಅಂದ್ರೆ ತುಂಬ ಇಷ್ಟ. ಆ ನಗುವಿಗೋಸ್ಕರ ನಾನು ಏನು ಬೇಕಿದ್ರೂ ಮಾಡುವೆ. ಖುಷಿಗೋಸ್ಕರ ನಾನು ದೇವರ ಬಳಿ ಪ್ರಾರ್ಥಿಸಿದೆ. ಅವನು ನನಗೆ ನಿಮ್ಮನ್ನು ಕೊಟ್ಟ. ನನ್ನ ಜೀವನಕ್ಕೆ ಬಂದಿದ್ದಕ್ಕೆ, ನಿಜವಾದ ಲವ್‌ ಏನು ಎಂದು ಅರ್ಥ ಮಾಡಿಸಿದ್ದಕ್ಕೆ, ನನ್ನ ಜೀವನವನ್ನು ಸುಂದರ ಮಾಡಿದ್ದಕ್ಕೆ ಥ್ಯಾಂಕ್ಯೂ. ನಿನ್ನ ನಗು, ಶಾಂತಿ, ಖುಷಿಗೋಸ್ಕರ ನಾನು ಪ್ರಾಮೀಸ್‌ ಮಾಡುವೆ. ನಿನ್ನ ಜೀವನದುದ್ದಕ್ಕೂ ಇರುವೆ ಎಂದು ಮಾತುಕೊಡ್ತೀನಿ. ಇಬ್ಬರೂ ಒಟ್ಟಿಗೆ ಜೀವನ ಕಳೆಯೋಣ. ಐ ಲವ್‌ ಯು ಕಂದ. ನನ್ನ ಹೃದಯ ನಿನ್ನದು’’ ಎಂದು ಸುಪ್ರೀತಾ ಸತ್ಯನಾರಾಯಣ್‌ ಇನ್​ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಕನ್ನಡದ ಜನಪ್ರಿಯ ಧಾರಾವಾಹಿ ಸೀತಾ ವಲ್ಲಭದಲ್ಲಿ ಈಕೆ ಮೈಥಲಿ ಪಾತ್ರದಲ್ಲಿ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದ್ದರು. ರಹದಾರಿ ಎಂಬ ಕನ್ನಡ ಸಿನಿಮಾದಲ್ಲಿಯೂ ನಟಿಸಿದ್ದರು. ಈ ಸಿನಿಮಾಕ್ಕೆ ಗಿರೀಶ್‌ ವೈರಮುಡಿ ಆಕ್ಷನ್‌ ಕಟ್‌ ಹೇಳಿದ್ದರು. ಸದ್ಯ ಎಂಗೇಜ್ಮೆಂಟ್ ಆಯ್ತು.. ಮದುವೆ ಯಾವಾಗ? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.

Bhagya Lakshmi Serial: ಫುಡ್ ಬ್ಯುಸಿನೆಸ್ ಮಾಡಲು ಭಾಗ್ಯಾಗೆ ಸಿಗುತ್ತ ಲೈಸೆನ್ಸ್?: ರೋಚಕ ಘಟ್ಟದತ್ತ ಧಾರಾವಾಹಿ