ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 11: ಬಿಗ್ ಬಾಸ್ ಮನೆಯಲ್ಲಿ ಭಾವುಕ ಕ್ಷಣ: ಯಾರ ಮನದಾಳದ ಆಸೆ ಈಡೇರಿಸುತ್ತೆ ಟ್ರೋಫಿ?

ರೆಕ್ಕೆಯಂತಿರುವ ಬಿಗ್ ಬಾಸ್ ಟ್ರೋಫಿಯನ್ನು ಆ್ಯಕ್ಟಿವಿಟಿ ರೂಮ್ನೊಳಗೆ ಇಡಲಾಗಿದೆ. ಇದರ ಜೊತೆಗೆ ವಿಶೇಷ ಚಟುವಟಿಕೆ ಕೂಡ ನೀಡಲಾಗಿದೆ. ಕಲರ್ಸ್ ಕನ್ನಡ ಈ ಕುರಿತು ಪ್ರೊಮೊ ಬಿಡುಗಡೆ ಮಾಡಿದೆ. ಯಾರ ಮನದಾಳದ ಆಸೆಗಳನ್ನು ಈಡೇರಿಸುತ್ತೆ ಬಿಗ್ ಬಾಸ್ ಟ್ರೋಫಿ? ಎಂಬ ಟೈಟಲ್ ನೀಡಿದೆ.

BBK 11 Trophy

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅಂತಿಮ ಘಟ್ಟದತ್ತ ಸಾಗುತ್ತಿದೆ. ಫಿನಾಲೆ ವೀಕ್ ಪ್ರಾರಂಭವಾಗಿದ್ದು ಇದೇ ಶನಿವಾರ-ಭಾನುವಾರ ಗ್ರ್ಯಾಂಡ್ ಫೈನಲ್ ನಡೆಯಲಿದೆ. ಯಾರ ಕಪ್ ಗೆಲ್ಲಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಕಳೆದ ವಾರ ನಡೆದ ಡಬಲ್ ಎಲಿಮಿನೇಷನ್​ನಿಂದಾಗಿ ಸದ್ಯ ಮನೆಯೊಳಗೆ ಆರು ಮಂದಿ ಇದ್ದಾರಷ್ಟೆ. ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್​, ಭವ್ಯಾ ಗೌಡ, ರಜತ್ ಹಾಗೂ ಉಗ್ರಂ ಮಂಜು ಗ್ರ್ಯಾಂಡ್​ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಘಟಾನುಘಟಿಗಳೇ ಈ ಲಿಸ್ಟ್​ನಲ್ಲಿರುವ ಕಾರಣ ಯಾರು ಗೆಲ್ಲುತ್ತಾರೆ ಎಂಬುದು ರೋಚಕತೆ ಸೃಷ್ಟಿಸಿದೆ. ಇದರ ಮಧ್ಯೆ ಬಿಗ್ ಬಾಸ್ ಮನೆಯೊಳಗೆ ಟ್ರೋಫಿಯನ್ನು ಕಳುಹಿಸಿ ಕೊಡಲಾಗಿದೆ. ಇದರ ಜೊತೆಗೆ ಒಂದು ಚಟುವಟಿಕೆ ಕೂಡ ನೀಡಲಾಗಿದೆ.

ಹೌದು, ರೆಕ್ಕೆಯಂತಿರುವ ಬಿಗ್ ಬಾಸ್ ಟ್ರೋಫಿಯನ್ನು ಆ್ಯಕ್ಟಿವಿಟಿ ರೂಮ್​ನೊಳಗೆ ಇಡಲಾಗಿದೆ. ಇದರ ಜೊತೆಗೆ ವಿಶೇಷ ಚಟುವಟಿಕೆ ಕೂಡ ನೀಡಲಾಗಿದೆ. ಕಲರ್ಸ್ ಕನ್ನಡ ಈ ಕುರಿತು ಪ್ರೊಮೊ ಬಿಡುಗಡೆ ಮಾಡಿದೆ. ಯಾರ ಮನದಾಳದ ಆಸೆಗಳನ್ನು ಈಡೇರಿಸುತ್ತೆ ಬಿಗ್ ಬಾಸ್ ಟ್ರೋಫಿ? ಎಂಬ ಟೈಟಲ್ ನೀಡಿದೆ. ಜೊತೆಗೆ ನಿಮ್ಮ ಕೈ ಸೇರಬಹುದಾದ ಈ ಟ್ರೋಫಿಯನ್ನು ನೋಡಿ.. ನಿಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಿ ಎಂದು ಬಿಗ್ ಬಾಸ್ ಹೇಳಿದ್ದಾರೆ.

ಇದನ್ನು ಕಂಡು ಹನುಮಂತ ಅವರು ಮೂಕವಿಸ್ಮಿತರಾಗಿದ್ದು, ಯವ್ವ ತಾಯಿ.. ಗರುಡವ್ವ ಎಂದು ಕೈ ಮುಗಿದಿದ್ದಾರೆ. ನಿನ್ನ ಹತ್ರ ಇರೋ ಆ ಎರಡು ರೆಕ್ಕೆಯನ್ನು ನನಗೆ ಕೊಡು.. ದೊಡ್ಡ ಸ್ಟಾರ್ ಆಗಿ ಬೆಳೆಯಬೇಕು ಎಂಬ ಆಸೆ ಇದೆ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ಇನ್ನು ಇದನ್ನು ಕಂಡು ಭವ್ಯಾ ಗೌಡ ಭಾವುಕರಾಗಿದ್ದು, ಟ್ರೋಫಿ ಜೊತೆಗೆ ನನಗೆ ಬರುವ ದುಡ್ಡಿಂದ ಕೂಡ ಉಪಯೋಗ ಇದೆ. ನನ್ ಡ್ಯಾಡಿ ವಾಷ್​ರೂಮ್​ನಲ್ಲಿ ಬಿದ್ದು ವೋಕಲ್ ಬಾಕ್ಸ್​ಗೆ ಪೆಟ್ಟು ಬಿದ್ದಿರುತ್ತೆ. ನನ್ನ ಕೈಯಲ್ಲಿ ಅವರ ವಾಯ್ಸ್​ನ ಸರಿ ಮಾಡೋಕೆ ಆಗಿಲ್ಲ ಅಲ್ವಾ ಎಂಬ ಕೊರಗು ಈಗಲೂ ಕಾಡ್ತಿದೆ.. ಅವತ್ತು ನನ್ನ ಹತ್ರ ದುಡ್ಡು ಏನಾದ್ರು ಇದ್ದಿದ್ರೆ ಅಪ್ಪ ನೀಟ್ ಆಗಿ ಚೆನ್ನಾಗಿ ಮಾತಾಡಬಹುದಿತ್ತೆನೊ ಎಂದು ಕಣ್ಣೀರು ಹಾಕಿದ್ದಾರೆ.



ಒಟ್ಟಾರೆ ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ವೀಕ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಯಾಕೆಂದರೆ ನಿನ್ನೆ ಮನೆ ಸಂಪೂರ್ಣವಾಗಿ ರಣರಂಗವಾಗಿತ್ತು. ಮನದಲ್ಲಿ ಉದಿಗಿರುವ ಕೋಪ-ಬೇಸರ-ಹತಾಶೆಯನ್ನು ಮಡಿಕೆ ಒಡೆಯುತ್ತ ಮನದೊಳಗಿನ ಭಾರವನ್ನು ಇಳಿಸಬೇಕು ಎಂದು ಬಿಗ್ ಬಾಸ್ ಒಂದು ಚಟುವಟಿಕೆ ನೀಡಿದ್ದರು. ಇದರಲ್ಲಿ ಉಗ್ರಂ ಮಂಜು-ರಜತ್ ಕಿಶನ್-ಭವ್ಯಾ ಗೌಡ ಮಾತಿನ ಫೈಟ್ ನಡೆಸಿ ಕೆರಳಿದ್ದರು. ಕೊನೆ ಹಂತದಲ್ಲೂ ಈ ರೀತಿಯ ಜಗಳ ಬೇಕೇ ಎಂದು ವೀಕ್ಷಕರು ಪ್ರಶ್ನಿಸಿದ್ದರು. ಇದೀಗ ಎರಡನೇ ದಿನ ಸ್ಪರ್ಧಿಗಳ ಮನದಲ್ಲಿರವ ಭಾವುಕತೆಯನ್ನು ಹೊರಹಾಕಲು ಬಿಗ್ ಬಾಸ್ ಮುಂದಾಗಿರುವಂತೆ ಕಾಣುತ್ತಿದೆ.

BBK 11: ಬಿಗ್ ಬಾಸ್​ನಿಂದ ಹೊರಬಂದ ಧನರಾಜ್​ಗೆ ಅಭಿನಂದನೆಗಳ ಮಹಾಪೂರ: ನೀನು ಗೆದ್ದಿದ್ದೀಯಾ ದೋಸ್ತ ಎಂದ ಫ್ಯಾನ್ಸ್