ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಕಲರ್ಸ್​ನಿಂದ ಬಿಗ್ ಬಾಸ್ ಕನ್ನಡ ಸೀಸನ್ 12 ಬಗ್ಗೆ ಬಿಗ್ ಅಪ್ಡೇಟ್: ಇಂದು ಸುದ್ದಿಗೋಷ್ಠಿ

ಬಾಸ್ ಕನ್ನಡ ಸೀಸನ್ 12ರ ಬಗ್ಗೆ ಅನೇಕ ಗೊಂದಲಗಳಿವೆ. ಈ ಎಲ್ಲ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ. ಯಾಕೆಂದರೆ ಇಂದು ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 12ರ ಕುರಿತು ಪತ್ರಿಕಾಗೋಷ್ಠಿ ಕರೆದಿದೆ. ಜೂನ್‌ 30, ಸಂಜೆ 4 ಗಂಟೆಗೆ ಬಿಗ್‌ ಬಾಸ್‌ ಪ್ರೆಸ್‌ ಮೀಟ್‌ ನಡೆಯಲಿದೆ ಎಂಬ ಮಾಹಿತಿ ವಾಹಿನಿ ಮೂಲಗಳಿಂದ ಲಭಿಸಿದೆ.

bigg boss kannada 12

ಬಿಗ್ ಬಾಸ್ ಕನ್ನಡ ಸೀಸನ್ 11ರ ಫೀವರ್ ಮುಗಿಯುವ ಹೊತ್ತಿಗೆ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಕುರಿತು ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ಸದ್ಯದಲ್ಲೇ ಬಿಬಿಕೆ 12 ಸೀಸನ್ ಶುರುವಾಗಲಿದೆಯಂತೆ. ಈಗಾಗಲೇ ಈ ಬಾರಿ ದೊಡ್ಮನೆಯೊಳಗೆ ಯಾರು ಹೋಗುತ್ತಾರೆ ಎಂಬ ಚರ್ಚೆ ಜೋರಾಗಿದೆ. ಇದಕ್ಕಿಂತ ಮುಖ್ಯವಾಗಿ ಈ ಬಾರಿ ಬಿಗ್ ಬಾಸ್ ಅನ್ನು ಯಾರು ಹೋಸ್ಟ್ ಮಾಡುತ್ತಾರೆ ಎಂಬುದು ರೋಚಕತೆ ಸೃಷ್ಟಿಸಿದೆ. ಯಾಕೆಂದರೆ ಕಳೆದ ಸೀಸನ್​ನ ಅಂತ್ಯದ ವೇಳೆಗ ಕಿಚ್ಚ ಸುದೀಪ್ ಅವರು ಇದು ನನ್ನ ಕೊನೆಯ ಆವೃತ್ತಿ ಎಂದು ಹೇಳಿದ್ದರು. ಇದರ ಮಧ್ಯೆ ಕಳೆದ ಕೆಲವು ವಾರಗಳಿಂದ ಸುದೀಪ್ ಅವರೇ ಈ ಬಾರಿ ಕೂಡ ನಿರೂಪಕರಾಗಿ ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಹೀಗೆ ಬಿಗ್ ಬಾಸ್ ಕನ್ನಡ ಸೀಸನ್ 12ರ ಬಗ್ಗೆ ಅನೇಕ ಗೊಂದಲಗಳಿವೆ. ಈ ಎಲ್ಲ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ. ಯಾಕೆಂದರೆ ಇಂದು ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 12ರ ಕುರಿತು ಪತ್ರಿಕಾಗೋಷ್ಠಿ ಕರೆದಿದೆ. ಜೂನ್‌ 30, ಸಂಜೆ 4 ಗಂಟೆಗೆ ಬಿಗ್‌ ಬಾಸ್‌ ಪ್ರೆಸ್‌ ಮೀಟ್‌ ನಡೆಯಲಿದೆ ಎಂಬ ಮಾಹಿತಿ ವಾಹಿನಿ ಮೂಲಗಳಿಂದ ಲಭಿಸಿದೆ. ಆದರೆ ಇದು ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಪ್ರೆಸ್‌ ಮೀಟ್‌ ಆಗಿರುತ್ತಾ? ಅಥವಾ ಒಟಿಟಿನಾ? ಅನ್ನೋದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಜೊತೆಗೆ ಈ ಬಾರಿಯ ಹೋಸ್ಟ್‌ ಯಾರು? ಸುದೀಪ್‌ ಅವರೇ ನಿರೂಪಕರಾಗಿ ಮುಂದುವರೆಯಲಿದ್ದಾರಾ? ಅನ್ನೋದು ರಿವೀಲ್‌ ಆದರೂ ಆಗಬಹುದು.

Bhavya Gowda: ಕರ್ಣನ ನಾಯಕಿ ಭವ್ಯಾ ಗೌಡ ಹೊಸ ಫೋಟೋ ಶೂಟ್: ನಿಟ್ಟುಸಿರು ಬಿಟ್ಟ ಫ್ಯಾನ್ಸ್

ಒಂದು ಮೂಲಗಳ ಪ್ರಕಾರ, ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶುರುವಾಗುವ ಮುಂಚೆ ಒಟಿಟಿ ಸೀಸನ್‌ ಬರಲಿದೆಯಂತೆ. ಇವುಗಳಿಗೆ ಸ್ಪಷ್ಟನೆ ನೀಡಲು ಇಂದು ಪತ್ರಿಕಾಗೋಷ್ಠಿ ಆಯೋಜಿಸಲಾಗಿದೆ ಎನ್ನಲಾಗಿದೆ. ಅಂದಹಾಗೆ ಈಗಾಗಲೇ ಒಂದು ಸೀಸನ್‌ ಒಟಿಟಿ ಪ್ರಸಾರ ಕಂಡಿದೆ. 2022 ರಲ್ಲಿ ನಡೆದ ಒಟಿಟಿಯಲ್ಲಿ ಟಾಪ್ ನಾಲ್ಕು ಪರ್ಫಾರ್ಮ್ಸ್ ನೇರವಾಗಿ ಕಿರುತೆರೆ ಬಿಗ್ ಬಾಸ್​ಗೆ ಎಂಟ್ರಿ ಪಡೆದಿದ್ದರು. ಸಾಮಾನ್ಯವಾಗಿ ಸೆಪ್ಟೆಂಬರ್‌ ಅಂತ್ಯದಲ್ಲಿ ಬಿಗ್‌ ಬಾಸ್‌ ಶುರುವಾಗಿ ಜನವರಿ, ಫೆಬ್ರವರಿ ಒಳಗಡೆ ಬಿಗ್‌ ಬಾಸ್‌ ಅಂತ್ಯ ಆಗಿರುತ್ತದೆ. ಒಟಿಟಿ ಸೀಸನ್‌ ಈಗ ಶುರುವಾದರೆ, ಸೆಪ್ಟೆಂಬರ್‌ನಲ್ಲಿ ಟಿವಿ ಸೀಸನ್‌ ಕೂಡ ಆರಂಭ ಆಗಬಹುದು.

ಇನ್ನು ಬಿಗ್ ​ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳನ್ನು ಗುರುತಿಸುವುದು ಅವರನ್ನು ಅಂತಿಮಗೊಳಿಸುವುದು, ಪ್ರೋಮೋ ಕಂಟೆಂಟ್ ಅಂತಿಮಗೊಳಿಸುವುದು, ಬಿಗ್​ ಬಾಸ್ ಸೆಟ್ ನಿರ್ಮಾಣ ಇತ್ಯಾದಿ ಕಾರ್ಯಗಳನ್ನು ಈಗಾಗಲೇ ಆಯೋಜಕರು ಆರಂಭ ಮಾಡಿದ್ದಾರಂತೆ. ಕೆಲ ವರದಿಗಳ ಪ್ರಕಾರ, ಈ ಬಾರಿ ಬಿಗ್ ​ಬಾಸ್ ಮನೆ ಸೇರಲಿರುವ ಸಂಭಾವ್ಯ ಪಟ್ಟಿ ಈಗಾಗಲೇ ತಯಾರಾಗಿದೆಯಂತೆ. ಆದರೆ ಅಂತಿಮ ಹಂತದ ಜರಡಿ ಹಿಡಿಯುವ ಕಾರ್ಯಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.