BBK 11: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯ ಪ್ರೊಮೊ ಔಟ್: ಹೇಗಿದೆ ನೋಡಿ
ಕನ್ನಡ ಕಿರುತೆರೆಯ ಬಿಗ್ಗೆಸ್ಟ್ ಶೋ.. ಬಿಗ್ಗೆಸ್ಟ್ ಸ್ಟೇಜ್.. ಕ್ಯೂರಿಯಾಸಿಟಿ.. 17 ವಾರ.. 20 ಕಂಟೆಸ್ಟೆಂಸ್ಟ್.. 6 ಜನ ಫೈನಲಿಸ್ಟ್.. ಕನ್ನಡಿಗರು ತುದಿಗಾಲಿನಲ್ಲಿ ಕಾದಿರುವ ಮಹಾ ರಿಸಲ್ಟ್.. ಕಿಚ್ಚ ಕೈ ಎತ್ತೊ ಕೈ ಯಾರದ್ದಿರಬಹುದು..? ಎರಡು ದಿನಗಳ ಮಹಾಮನರಂಜನೆ ಎಂದು ಪ್ರೊ ಹಂಚಿಕೊಂಡಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇನ್ನೇನು ಕೆಲವೇ ಎರಡು ದಿನಗಳಲ್ಲಿ ಶೋ ಮುಕ್ತಾಯಗೊಳ್ಳಲಿದ್ದು, ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗುತ್ತಿದೆ. ಸದ್ಯ ಮನೆಯಲ್ಲಿ ಆರು ಮಂದಿ ಇದ್ದಾರಷ್ಟೆ. ತ್ರಿವಿಕ್ರಮ್, ಹನುಮಂತ, ಭವ್ಯಾ ಗೌಡ, ರಜತ್, ಮೋಕ್ಷಿತಾ, ಉಗ್ರಂ ಮಂಜು ಉಳಿದುಕೊಂಡಿದ್ದಾರೆ. ಈ 6 ಸ್ಪರ್ಧಿಗಳಲ್ಲಿ ಯಾರು ವಿನ್ನರ್ ಆಗುತ್ತಾರೆ ಎಂಬುದು ಎರಡು ದಿನಗಳಲ್ಲಿ ಬಹಿರಂಗಗೊಳ್ಳಲಿದೆ. ಗೆದ್ದವರಿಗೆ ಟ್ರೋಫಿ ಜೊತೆಗೆ ದೊಡ್ಡ ಮಟ್ಟದ ಹಣ ಕೂಡ ಸಿಗಲಿದೆ.
ಬಿಗ್ ಬಾಸ್ ಟೀಮ್ ಗ್ರ್ಯಾಂಡ್ ಫಿನಾಲೆಗೆ ತಯಾರು ಮಾಡುತ್ತಿದೆ. ಜನವರಿ 25 ಹಾಗೂ 26ರಂದು ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಜನವರಿ 25ರ ಶನಿವಾರ ಎಲಿಮಿನೇಷನ್‌ಗೆ ಹೊಸ ಟ್ವಿಸ್ಟ್ ಕೊಟ್ಟರೆ ಜನವರಿ 26ರ ಭಾನುವಾರ ಬಿಗ್ ಬಾಸ್ ಸೀಸನ್ 11 ಕಪ್ ಗೆದ್ದವರು ಯಾರು ಅನ್ನೋದು ಗೊತ್ತಾಗಲಿದೆ. ಅಂದು ಭಾನುವಾರ ಹಾಗೂ ಗಣರಾಜ್ಯೋತ್ಸವ ಎರಡೂ ಇದೆ. ಈ ವಿಶೇಷ ದಿನದಂದೇ ಫಿನಾಲೆ ನಡೆಯುವ ಸಾಧ್ಯತೆಯಿದೆ.
ಇದರ ಮಧ್ಯೆ ಕಲರ್ಸ್ ಕನ್ನಡ ಫಿನಾಲೆ ಕುರಿತು ಪ್ರೊಮೊ ಒಂದನ್ನು ಬಿಡುಗಡೆ ಮಾಡಿದೆ. ಇದಕ್ಕೆ ’17 ವಾರಗಳ ಅಬ್ಬರಕ್ಕೆ ಅದ್ಧೂರಿ ತೆರೆ ಬೀಳೋ ಟೈಮ್’ ಎಂದು ಕ್ಯಾಪ್ಶನ್ ನೀಡಿದೆ. ಕನ್ನಡ ಕಿರುತೆರೆಯ ಬಿಗ್ಗೆಸ್ಟ್ ಶೋ.. ಬಿಗ್ಗೆಸ್ಟ್ ಸ್ಟೇಜ್.. ಕ್ಯೂರಿಯಾಸಿಟಿ.. 17 ವಾರ.. 20 ಕಂಟೆಸ್ಟೆಂಸ್ಟ್.. 6 ಜನ ಫೈನಲಿಸ್ಟ್.. ಕನ್ನಡಿಗರು ತುದಿಗಾಲಿನಲ್ಲಿ ಕಾದಿರುವ ಮಹಾ ರಿಸಲ್ಟ್.. ಕಿಚ್ಚ ಕೈ ಎತ್ತೊ ಕೈ ಯಾರದ್ದಿರಬಹುದು..? ಎರಡು ದಿನಗಳ ಮಹಾಮನರಂಜನೆ ಎಂದು ಪ್ರೊ ಹಂಚಿಕೊಂಡಿದೆ.
17 ವಾರಗಳ ಅಬ್ಬರಕ್ಕೆ ಅದ್ದೂರಿ ತೆರೆ ಬೀಳೋ ಟೈಮ್!
— Colors Kannada (@ColorsKannada) January 24, 2025
ಬಿಗ್ ಬಾಸ್ 11 ಗ್ರಾಂಡ್ ಫಿನಾಲೆ | ನಾಳೆ ಮತ್ತು ಭಾನುವಾರ ಸಂಜೆ 6#BiggBossKannada11 #BBK11 #GrandFinale #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/rk8lu3CEz1
ಗೆಲ್ಲುವ ಸ್ಪರ್ಧಿಗೆ ಸಿಗುವ ಹಣ ಎಷ್ಟು?:
ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ವಾರದಲ್ಲಿ ಮೋಕ್ಷಿತಾ ಪೈ, ತ್ರಿವಿಕ್ರಮ್, ಹನುಮಂತ, ಉಗ್ರಂ ಮಂಜು, ಭವ್ಯಾ ಗೌಡ, ರಜತ್ ಉಳಿದುಕೊಂಡಿದ್ದಾರೆ. ಇವರಲ್ಲಿ ಒಬ್ಬರಷ್ಟೆ ವಿಜೇತರಾಗಿ ಹೊರಹೊಮ್ಮಲಿದ್ದಾರೆ. ಆ ವಿಜೇತ ಯಾರಾಗಲಿದ್ದಾರೆ ಎಂಬುದನ್ನು ಜನರ ಮತಗಳು ನಿರ್ಧಾರ ಮಾಡುತ್ತವೆ. ಬಿಗ್ ಬಾಸ್ ಮನೆಯಲ್ಲಿ ಉಳಿದ 6 ಸ್ಪರ್ಧಿಗಳಲ್ಲಿ ಒಬ್ಬರಿಗೆ ಸೀಸನ್ 11ರ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.
ಎಲ್ಲಾ ಸೀಸನ್‌ನಂತೆಯೇ ಯಾವುದೇ ಬದಲಾವಣೆ ಇಲ್ಲದೆ, ಗೆದ್ದ ಸ್ಪರ್ಧಿಗಳಿಗೆ ಈ ಬಾರಿ ಕೂಡ ಟ್ರೋಫಿಯೊಂದಿಗೆ 50 ಲಕ್ಷ ರೂಪಾಯಿ ನಗದು ಬಹುಮಾನವಾಗಿ ಸಿಗಲಿದೆ. ಇದರ ಜೊತೆಗೆ ಸ್ಪಾನ್ಸರ್ಸ್ ಕಡೆಯಿಂದ ಒಂದಿಷ್ಟು ಗಿಫ್ಟ್ ಹ್ಯಾಂಪರ್ಸ್ ಮತ್ತು ಸಣ್ಣ ಮೊತ್ತ ಪಡೆಯಲಿದ್ದಾರೆ. ಇನ್ನು ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಲು ನೀವು ಅಮೂಲ್ಯ ಮತದಾನ ಮಾಡಬೇಕು. ಮೊಬೈಲ್‌ನಲ್ಲಿ ಅಥವಾ ಕಂಪ್ಯೂಟರ್‌ನಲ್ಲಿ ಜಿಯೋ ಸಿನಿಮಾ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ವೋಟ್ ಮಾಡಬೇಕು. ನೆನಪಿರಲಿ ವೋಟ್ ಮಾಡುವ ಅವಕಾಶ ಶನಿವಾರ ಮಧ್ಯಾಹ್ನದ ವರೆಗೆ ಮಾತ್ರವೇ ಇರಲಿದೆ.
Bigg Boss 11, winner Prize Money: ಈ ಬಾರಿ ಬಿಗ್ ಬಾಸ್ ಗೆಲ್ಲುವ ಸ್ಪರ್ಧಿಗೆ ಸಿಗುವ ಹಣ ಎಷ್ಟು ಗೊತ್ತೇ?