ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Dhrama Keerthi Raj: ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಸಿನಿಮಾ ಆಫರ್ ಬರುತ್ತೆ ಅನ್ನೋದು ಸುಳ್ಳು: ಸತ್ಯ ಬಿಚ್ಚಿಟ್ಟ ಧರ್ಮ

ಬಿಗ್ ಬಾಸ್ ಮನೆಯಲ್ಲಿ ಧರ್ಮ ಅವರು ಏನೇ ಇದ್ದರೂ ಓಪನ್ ಆಗಿ ಮಾತನಾಡುತ್ತಾ ಇದ್ದರು. ಅವರು ಸದಾ ಕೂಲ್ ಆಗಿಯೇ ಇರುತ್ತಿದ್ದರು. ಇದೇ ಇವರ ಉಳಿವಿಗೆ ಮುಳುವಾಯಿತು. ಸದ್ಯ ಧರ್ಮ ಅವರು ಸಂದರ್ಶನವೊಂದರಲ್ಲಿ ಬಿಗ್ ಬಾಸ್ನಿಂದ ಏನೆಲ್ಲ ಬದಲಾವಣೆ ಆಗಿದೆ? ಎಂಬ ಕುರಿತು ಮಾತನಾಡಿದ್ದಾರೆ.

ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಸಿನಿಮಾ ಆಫರ್ ಬರುತ್ತೆ ಅನ್ನೋದು ಸುಳ್ಳು

Dharma Keerthiraj

Profile Vinay Bhat Mar 4, 2025 7:26 AM

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಧರ್ಮ ಕೀರ್ತಿರಾಜ್ ಎಂಟನೇ ವಾರಕ್ಕೆ ಎಲಿಮಿನೇಟ್ ಆದರು. ಎಲಿಮಿನೇಷನ್​ನಲ್ಲಿ ಕಡಿಮೆ ವೋಟಿನಿಂದಾಗಿ ಧರ್ಮ ಅರ್ಧಕ್ಕೆ ಮನೆ ಬಿಡಬೇಕಾಯಿತು. ಇವರು ದೊಡ್ಮನೆಯಲ್ಲಿ ಒಟ್ಟು 55 ದಿನ ಇದ್ದರು. ದೊಡ್ಮನೆಯಲ್ಲಿ ಇರಬೇಕು ಎಂದರೆ ರಫ್ ಆ್ಯಂಡ್ ಟಫ್ ಆಗಿರಬೇಕು. ಆದರೆ, ಧರ್ಮ ಅವರಲ್ಲಿ ಈ ಅಂಶ ಕೊಂಚ ಕಮ್ಮಿ ಇತ್ತು. ಅವರು ಸದಾ ಕೂಲ್ ಆಗಿಯೇ ಇರುತ್ತಿದ್ದರು. ಇದೇ ಇವರ ಉಳಿವಿಗೆ ಮುಳುವಾಯಿತು.

ಬಿಗ್ ಬಾಸ್ ಮನೆಯಲ್ಲಿ ಧರ್ಮ ಅವರು ಏನೇ ಇದ್ದರೂ ಓಪನ್ ಆಗಿ ಮಾತನಾಡುತ್ತಾ ಇದ್ದರು. ಹೇಳಬೇಕು ಅನಿಸಿದ್ದನ್ನೆಲ್ಲ ಸಾಫ್ಟ್ ಆಗಿ ಕನ್ವೆ ಮಾಡುತ್ತಿದ್ದರು. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕವೂ ಅವರು ಮುಕ್ತವಾಗಿ ಮಾತನಾಡೋದನ್ನು ಮುಂದುವರಿಸಿದ್ದಾರೆ. ಸದ್ಯ ಧರ್ಮ ಅವರು ಸಂದರ್ಶನವೊಂದರಲ್ಲಿ ಬಿಗ್ ಬಾಸ್​​ನಿಂದ ಏನೆಲ್ಲ ಬದಲಾವಣೆ ಆಗಿದೆ? ಎಂಬ ಕುರಿತು ಮಾತನಾಡಿದ್ದಾರೆ.

ಬಿಗ್‌ ಬಾಸ್‌ನಲ್ಲಿ ತನ್ನ ವ್ಯಕ್ತಿತ್ವದ ಮೂಲಕ ವೀಕ್ಷಕರ ಮನಗೆದ್ದಿದ್ದ ಧರ್ಮ ಕೀರ್ತಿರಾಜ್​ ಸಂದರ್ಶನವೊಂದರಲ್ಲಿ ಬಿಗ್‌ ಬಾಸ್‌ ಬಳಿಕದ ಅವಕಾಶಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಬಿಗ್‌ ಬಾಸ್‌ನಲ್ಲಿ ಭಾಗಿಯಾದ ಬಳಿಕ ಸ್ಪರ್ಧಿಗಳು ಜನರ ಮನಸ್ಸನ್ನು ಗೆಲ್ಲುತ್ತಾರೆ. ಜನರಿಗೆ ಇನ್ನಷ್ಟು ಹತ್ತಿರವಾಗುತ್ತಾರೆ. ಇದೇ ಕಾರಣದಿಂದ ಸ್ಪರ್ಧಿಗಳು ಹೊರಬಂದ ಬಳಿಕ ಅವರಿಗೆ ಒಳ್ಳೊಳ್ಳೆಯ ಆಫರ್‌ಗಳು ಸಿಗುತ್ತವೆ ಎನ್ನುವ ಮಾತಿದೆ. ಅನೇಕರು ಇದನ್ನು ನಿಜ ಎಂದು ಹೇಳಿಕೊಂಡಿದ್ದಾರೆ ಕೂಡ.



ಆದರೆ, ಧರ್ಮ ಅವರು, ಬಿಗ್ ಬಾಸ್​ನಿಂದ ಸಿನಿಮಾ ಆಫರ್​ಗಳು ಬರುತ್ತವೆ ಅನ್ನೋದು ತಪ್ಪು. ಸಿನಿಮಾನೇ ಬೇರೆ, ಇದೇ ಬೇರೆ ಎಂದು ಹೇಳಿಕೊಂಡಿದ್ದಾರೆ. ನನಗೆ ಬಿಗ್ ಬಾಸ್​​ನಿಂದ ಏನೂ ಲಾಭ ಆಗಲೇ ಇಲ್ಲ ಅಂತ ಹೇಳಲ್ಲ. ಇದರಿಂದ ಸಾಕಷ್ಟು ಒಳಿತೂ ಆಗಿದೆ. ಅವನು ಕೀರ್ತಿರಾಜ್ ಮಗ, ಅವನಿಗೆ ಧಿಮಾಕು ಎಂದೆಲ್ಲ ಜನರು ನನ್ನ ಬಗ್ಗೆ ಅಂದುಕೊಂಡಿದ್ದಿರಬಹುದು. ಆದರೆ, ಬಿಗ್ ಬಾಸ್​ಗೆ ಹೋಗಿ ನಾನು ಯಾರು ಅನ್ನೋದು ಗೊತ್ತಾಗಿದೆ. ನನಗೆ ಬಿಗ್‌ ಬಾಸ್‌ ಜನರೊಂದಿಗೆ ಬೆರೆಯಲು ಮತ್ತೆ ಅವಕಾಶ ಕೊಟ್ಟಿತು. ಬಿಗ್‌ ಬಾಸ್‌ ಅಲ್ಲಿ ನಟನೆ ಮಾಡಿಕೊಂಡು ಇರೋಕೆ ಆಗಲ್ಲ. ಒಂದೆರೆಡು ದಿನ ನಟನೆ ಮಾಡಬಹುದು. ಬಿಗ್‌ ಬಾಸ್‌ನಿಂದ ಜವಬ್ದಾರಿಗಳು ಹೆಚ್ಚಾಗಿದೆ. ಒಂದೊಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಂಡರೆ 100% ಜನ ನನ್ನನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಧರ್ಮ ಹೇಳಿದ್ದಾರೆ.