ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾದ ಮೊದಲ ದಿನದಿಂದಲೇ ಸ್ಪರ್ಧಿಗಳಿಗೆ ಶಾಕ್ ಮೇಲೆ ಶಾಕ್ ನೀಡಲಾಗುತ್ತಿದೆ. ಸ್ಪರ್ಧಿಗಳಿಗೆ ಒಂದರ ಹಿಂದೆ ಒಂದರಂತೆ ಟ್ವಿಸ್ಟ್ ನೀಡಲಾಗುತ್ತಿದೆ. ಮನೆಯೊಳಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿ ಆಚೆ ಹೋದರು. ಬಳಿಕ ವೀಕೆಂಡ್ನಲ್ಲಿ ಒಳ ಹೋದರು. ಎರಡನೇ ದಿನ ಬಿಗ್ ಬಾಸ್ ಮೂರನೇ ವಾರದಲ್ಲೇ ಒಂದು ಫಿನಾಲೆ ನಡೆಯಲಿದೆ ಎಂದು ಹೇಳಿದರು. ಬಳಿಕ ಮೊದಲ ವೀಕೆಂಡ್ನಲ್ಲಿ ಡಬಲ್ ಎಲಿಮಿನೇಷನ್ ಕೂಡ ನಡೆಯಿತು.
ಇವೆಲ್ಲದರ ಜೊತೆಗೆ ಸ್ಪರ್ಧಿಗಳು ಒಮ್ಮೆ ಮನೆಯಿಂದ ಹೊರ ಹೋಗಿ ಒಳ ಬರಬೇಕಾಯಿತು. ಇದೀಗ ಬಿಗ್ ಬಾಸ್ ಕಡೆಯಿಂದ ಮತ್ತೊಂದು ದೊಡ್ಡ ಟ್ವಿಸ್ಟ್ ನೀಡಲಾಗಿದೆ. ಹೌದು, ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಮೂರನೇ ವಾರ ನಡೆಯುತ್ತಿದೆ. ಈ ವಾರವೇ ಮಿಡ್ ಸೀಸನ್ ಮೊದಲ ಫೈನಲ್ ನಡೆಯಲಿದೆ. ಈ ವೀಕೆಂಡ್ನಲ್ಲಿ ಮನೆ ಅರ್ಧಕರ್ಧ ಖಾಲಿ ಆಗಲಿದೆ. ಎಷ್ಟು ಮಂದಿ ಸ್ಪರ್ಧಿಗಳು ಹೊರಹೋಗುತ್ತಾರೋ ಅಷ್ಟೇ ಮಂದಿ ಸ್ಪರ್ಧಿಗಳು ಪುನಃ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ.
ಈ ಮಾಸ್ ಎವಿಕ್ಷನ್ನ ಮೊದಲ ಭಾಗವಾಗಿ ಇದೀಗ ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆಯಂತೆ. ಇದರಲ್ಲಿ ಒಬ್ಬರಲ್ಲ ಇಬ್ಬರು ಸ್ಪರ್ಧಿಗಳು ದೊಡ್ಮನೆಯಿಂದ ಔಟ್ ಆಗಿದ್ದಾರೆ ಎಂಬ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಡಾಗ್ ಸತೀಶ್ ಹಾಗೂ ಮಂಜು ಭಾಷಿಣಿ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಮನೆಯಿಂದ ಹೊರಬಂದಿದ್ದಾರೆ. ಈ ಎಲಿಮಿನೇಷನ್ ಇಂದು ನಡೆದಿದೆ. ಹೀಗಾಗಿ ಈ ಮಿಡ್ ವೀಕ್ ಎಲಿಮಿನೇಷನ್ನ ನಾಳೆ ಗುರುವಾರ ಪ್ರಸಾರ ಕಾಣಲಿದೆ.
ಡಾಗ್ ಸತೀಶ್ ಎಲಿಮಿನೇಟ್ ಆಗಲು ಮುಖ್ಯ ಕಾರಣ ಅವರಿಗೆ ದೊಡ್ಡ ಅಭಿಮಾನಿ ಬಳಗವಿಲ್ಲ. ಅವರು ಮನೋರಂಜನೆ ಕ್ಷೇತ್ರದಿಂದ ಬಂದವರಲ್ಲ. ಅಷ್ಟೇ ಅಲ್ಲದೆ ಸತೀಶ್ ಅವರು ಬಿಗ್ ಬಾಸ್ ಕೊಟ್ಟಿದ್ದ ಸೀಕ್ರೆಟ್ ಟಾಸ್ಕ್ ಅನ್ನು ಅಚ್ಚುಕಟ್ಟಾಗಿ ಮಾಡಿದ್ದು ಬಿಟ್ಟರೆ, ಉಳಿದ ಟಾಸ್ಕ್‌ಗಳಲ್ಲಿ ಹಿಂದೆ ಬಿದ್ದಿದ್ದಾರೆ. ಎಪಿಸೋಡ್‌ಗಳಲ್ಲೂ ಡಾಗ್ ಸತೀಶ್ ಹೆಚ್ಚು ಫೋಕಸ್ ಆಗುತ್ತಿಲ್ಲ. ಹೀಗಾಗಿ ಇವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.
BBK 12: ಟಾಸ್ಕ್ನಲ್ಲಿ ಕಾವ್ಯಾಗೆ ಬಿಗ್ ಸಪೋರ್ಟ್: ಆದ್ರೆ ಗೆದ್ದಿದ್ದು ಮಾತ್ರ..
ಅತ್ತ ಮಂಜು ಭಾಷಿಣಿ ಅವರು ಮೊದಲೆರಡು ವಾರ ಅಡುಗೆ ಮನೆಯಲ್ಲೇ ಫಿಕ್ಸ್ ಆಗಿದ್ದರು. ಕಿಚ್ಚ ಸುದೀಪ್ ಈ ಕುರಿತು ಪರೋಕ್ಷವಾಗಿ ಹೇಳಿದರೂ ಅದನ್ನು ಇವರು ಸೀರಿಯೆಸ್ ಆಗಿ ತೆಗೆದುಕೊಂಡಿಲ್ಲ. ಫಿಸಿಕಲ್ ಟಾಸ್ಕ್‌ಗಳಲ್ಲಿ ಮಂಜು ಹೆಚ್ಚೇನು ಮೋಡಿ ಮಾಡಿಲ್ಲ. ಸ್ಟ್ರಾಟೆಜಿ ಮಾಡೋದ್ರಲ್ಲಿ ಮತ್ತು ಮಾತಲ್ಲೇ ಟಕ್ಕರ್ ಕೊಡೋದ್ರಲ್ಲಿ ಮಂಜುಭಾಷಿಣಿ ಮುಂದಿದ್ದರು. ಆದರೆ, ಬಿಗ್ ಬಾಸ್ನಲ್ಲಿ ಉಳಿಯಲು ಇದಿಷ್ಟೆ ಇದ್ದರೆ ಸಾಲದು. ಹೀಗಾಗಿ ಇವರಿಗೆ ಕಡಿಮೆ ವೋಟ್ ಬಂದು ಮನೆಯಿಂದ ಎಲಿಮಿನೇಟ್ ಆಗಿರಬಹುದು. ಉಳಿದಂತೆ ಬಿಗ್ ಬಾಸ್ ಇನ್ನು ಏನೆಲ್ಲ ಟ್ವಿಸ್ಟ್ ನೀಡುತ್ತಾರೆ ನೋಡಬೇಕಿದೆ.