ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಎಲ್ಲರ ಮನೆ ಮಾತಾಗಿರುವ ಯುವನಟ ಎಂದರೆ ಅದು ರಾಘವೇಂದ್ರ (Raghavendra). ರಾಗಿಣಿಯಾಗಿ ಹುಡುಗಿ ವೇಷದಲ್ಲಿ ಎಲ್ಲರನ್ನೂ ಎಂಟರ್‌ಟೈನ್ ಮಾಡುತ್ತಿರುವ ರಾಘು ಈಗ ಹೊಸ ಮನೆಯ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶಿರವಾಳ ಗ್ರಾಮದವರಾದ ಇವರು, ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ವಿಭಿನ್ನ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿದ್ದಾರೆ. ಇವರು ಎಲ್ಲರಿಗೂ ಹೆಣ್ಣುಮಗಳ ಅವತಾರದಲ್ಲಿಯೇ ಕಂಡಿದ್ದೇ ಹೆಚ್ಚು. ಸದ್ಯ ಮಜಾ ಟಾಕೀಸ್‌ನಲ್ಲಿಯೂ ಹೆಣ್ಣು ವೇಷದಿಂದಲೇ ಮೋಡಿ ಮಾಡುತ್ತಿದ್ದಾರೆ.
ಹೀಗಿರುವಾಗ ತಮ್ಮ ಗ್ರಾಮದಲ್ಲಿ ರಾಘವೇಂದ್ರ ಅವರು ಹೊಸ ಅರಮನೆಯನ್ನು ಕಟ್ಟಿಸಿದ್ದಾರೆ. ಅದಕ್ಕೆ ರಾಯರ ನೆರಳು ಅಂತ ಹೆಸರನ್ನು ಇಟ್ಟಿದ್ದಾರೆ. ಈ ಖುಷಿ ವಿಚಾರನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಂದಹಾಗೆ ತಮ್ಮ ಕನಸಿನ ಮನೆಯ ಗೃಹಪ್ರವೇಶವನ್ನು ರಾಘು 2023ರಲ್ಲಿಯೇ ನೆರವೇರಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಇದೀಗ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
‘‘ನಮಸ್ಕಾರ ನನ್ನ ಹುಟ್ಟೂರು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು. ಎಲ್ಲರಿಗೂ ಒಂದು ಸೂರು ಇರಬೇಕು ಆ ಸೂರಿನಲ್ಲಿ ನಗು ನಗುತ್ತಾ ಇರಬೇಕು ಅಂತ ತುಂಬಾ ಆಸೆ ಇರುತ್ತದೆ. ಹೈಫೈ ಆಗಿಲ್ಲವಾದ್ರೂ ಒಂದೊಳ್ಳೆ ಚಿಕ್ಕ ಮನೆ ಇರಬೇಕು ಅನ್ನೋದೇ ಎಲ್ಲರ ಕನಸು. ನನಗೆ ಯಾವತ್ತೂ ಹೀಗೆ ಅನಿಸಿರಲಿಲ್ಲ ಯಾಕಂದ್ರೆ ನಾವು ಹುಟ್ಟಿದಾಗಿನಿಂದಲೂ ನಮ್ಮದೊಂದು ಒಳ್ಳೆಯ ಮನೆಯಲ್ಲಿ ಇದ್ದೆವು’’ ಎಂದಿದ್ದಾರೆ ರಾಘವೇಂದ್ರ.
ಹೆಚ್ಚಾಗಿ ಹೆಣ್ಣು ಮಕ್ಕಳ ವೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು ರಾಗಿಣಿ ಅಂತಲೇ ಫೇಮಸ್ ಆಗಿದ್ದಾರೆ. ಕೇವಲ 23 ವರ್ಷದ ಯುವಕ ಅಷ್ಟು ದೊಡ್ಡದಾಗಿ ಮನೆ ಕಟ್ಟಿದ್ದೇ ಬಲು ವಿಶೇಷ. ಗೃಹಪ್ರವೇಶ ದಿನ ಸ್ಯಾಂಡಲ್ವುಡ್ ನಟಿ ಶುಭ ಪೂಂಜಾ ದಂಪತಿ, ಮಂಜು ಪಾವಗಡ ಸೇರಿದಂತೆ ಹಲವರು ಆಗಮಿಸಿ ರಾಘುಗೆ ಶುಭ ಕೋರಿದ್ದಾರೆ. ಕೆಲ ವರ್ಷಗಳ ಹಿಂದೆ ತಮ್ಮ ಹಳೇ ಮನೆಯಲ್ಲಿ ಮಲಗಿದ್ದಾಗ, ಭವ್ಯ ಮನೆಯ ಕನಸೊಂದು ರಾಘವೇಂದ್ರ ಅವರಿಗೆ ಬಿದ್ದಿತ್ತಂತೆ. ಮರುದಿನವೇ ಕನಸಿನಲ್ಲಿ ಕಂಡ ಮನೆಯನ್ನು ಥರ್ಮಾಕೋಲ್ ಬಳಸಿ ಸ್ಕೆಚ್ ಮಾಡಿಟ್ಟಿದ್ದರಂತೆ. ಈಗ ಆ ಕನಸಿನಲ್ಲಿ ಕಂಡ ಮನೆಯನ್ನೇ ಹೋಲುವ ಭವ್ಯ ಬಂಗಲೆಯನ್ನೇ ನಿರ್ಮಿಸಿದ್ದಾರೆ ರಾಘವೇಂದ್ರ. ರಾಘವೇಂದ್ರ ಅವರ ಈ ಸಾಧನೆಗೆ ಅವರ ಆಪ್ತ ಕಲಾವಿದ ಬಳಗದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
Bhagya Lakshmi Serial: ಸೋತು ಸುಣ್ಣವಾದ ತಾಂಡವ್: ಹೊಸ ಕೆಲಸಕ್ಕಾಗಿ ಅಲೆದಾಟ