BBK 11, Hanumantha: ಟ್ರೋಫಿ ಗೆದ್ದ ಬಳಿಕ ಮೊದಲ ಬಾರಿ ಇನ್ಸ್ಟಾದಲ್ಲಿ ವಿಡಿಯೋ ಹಂಚಿಕೊಂಡ ಹನುಮಂತ: ಏನಂದ್ರು ನೋಡಿ
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಹನುಮಂತ ತಾನು ಗೆಲ್ಲಲು ಕಾರಣೀಕರ್ತರಾದ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನಿಮ್ಮ ಪ್ರೀತಿ, ಹಾಗೂ ಬೆಂಬಲದಿಂದ ಮಾತ್ರ ಇದೆಲ್ಲವೂ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.


ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss kannada 11) ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಈ ಬಾರಿ ಟ್ರೋಫಿಯನ್ನು ಉತ್ತರ ಕರ್ನಾಟಕದ ಹಳ್ಳಿ ಹೈದ ಹನುಮಂತ ಎತ್ತಿಹಿಡಿದಿದ್ದಾರೆ. ರನ್ನರ್ ಅಪ್ ಪಟ್ಟ ತ್ರಿವಿಕ್ರಮ್ಗೆ ಸಿಕ್ಕಿದೆ. ಹನುಮಂತ ಅವರ ಗೆಲುವನ್ನು ಅವರ ಅಭಿಮಾನಿಗಳು ದೊಡ್ಡದಾಗಿ ಸಂಭ್ರಮಿಸುತ್ತಿದ್ದಾರೆ. ಅದರಲ್ಲೂ ಅವರ ಗ್ರಾಮದ ಜನರು ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದಾರೆ. ಗ್ರಾಮದ ಪ್ರಮುಖ ರಸ್ತೆಯಲ್ಲಿ ಡೊಳ್ಳು, ಭಜನೆ ಹಾಗೂ ಜಾಂಜ್ ಮೇಳೆ ಸೇರಿದಂತೆ ವಿವಿಧ ಕಲಾತಂಡಗಳ ಮೂಲಕ ಸ್ವಾಗತ ಮಾಡಲಿದ್ದಾರೆ. ಇದರ ಮಧ್ಯೆ ಬಿಗ್ ಬಾಸ್ ಟ್ರೋಫಿ ತನ್ನದಾಗಿಸಿಕೊಂಡ ಬಳಿಕ ಹನುಮಂತ ಅವರು ಇದೇ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಗೆಲುವಿನ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಹನುಮಂತ ತಾನು ಗೆಲ್ಲಲು ಕಾರಣೀಕರ್ತರಾದ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನಿಮ್ಮ ಪ್ರೀತಿ, ಹಾಗೂ ಬೆಂಬಲದಿಂದ ಮಾತ್ರ ಇದೆಲ್ಲವೂ ಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಎಲ್ಲ ನಮ್ಮ ಪ್ರೀತಿಯ ಕನ್ನಡ ಜನತೆಗೆ ನಮಸ್ಕಾರ ಇದೊಂದು ಮಹತ್ವದ ಕ್ಷಣ. ಮೊದಲು ಈ ವಿಶೇಷ ಟ್ರೋಫಿಯನ್ನು ನನ್ನದಾಗಿಸಿದ ಎಲ್ಲಾ ನನ್ನಾ ಪ್ರೀತಿಯ ಕನ್ನಡ ಜನತೆಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಿಮ್ಮ ಅಣಿಮುಖ ಬೆಂಬಲ ಮತ್ತು ಪ್ರೀತಿಯಿಲ್ಲದೆ ನಾನು ಟ್ರೊಫಿಯನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಈ ಗೆಲುವು ನಿಮ್ಮ ಪ್ರೀತಿ, ಬೆಂಬಲ ಮತ್ತು ವಿಶ್ವಾಸದ ಫಲ. ಈ ಟ್ರೋಫಿ ನನ್ನದಲ್ಲ ನಿಮ್ಮೆಲ್ಲರದ್ದು ಎಂದು ಹೇಳಿದ್ದಾರೆ.
ಜೊತೆಗೆ ನನಗೆ ಸದಾ ಪ್ರೇರಣೆ ನೀಡಿದ ಪ್ರತಿ ಹೃದಯಕ್ಕೂ ಹೃತ್ತೂರ್ವಕ ಧನ್ಯವಾದಗಳು. ನನ್ನ ಮೇಲೆ ಇಟ್ಟ ಪ್ರೀತಿ, ಬೆಂಬಲ ಮತ್ತು ನಂಬಿಕೆಗೆ ಸದಾ ಕೃತಜ್ಞನಾಗಿರುತ್ತೇನೆ. ಎಲ್ಲ ನನ್ನಾ ಪ್ರೀತಿಯ ಕನ್ನಡ ಜನತೆಗೆ ತುಂಬು ಹೃದಯದ ಧನ್ಯವಾದಗಳು. ನನ್ನ ಮೇಲೆ ಇಟ್ಟ ಪ್ರೀತಿ, ಬೆಂಬಲ ಮತ್ತು ನಂಬಿಕೆಗೆ ಸದಾ ಕೃತಜ್ಞನಾಗಿರುತ್ತೇನೆ. ಈ ಗೆಲುವು ನಮ್ಮೆಲ್ಲರದು ಎಂದು ಹೇಳಬಯಸುತ್ತೇನೆ ತುಂಬು ಹೃದಯದ ಧನ್ಯವಾದಗಳು. ಬಿಗ್ ಬಾಸ್ ನ ಅಸಾಧಾರಣ ಪ್ರಯಾಣದಲ್ಲಿ ನನ್ನೊಂದಿಗೆ ಇದ್ದ ಪ್ರತಿ ಹೃದಯಕ್ಕೂ ಹೃತ್ತೂರ್ವಕ ವಾದ ಧನ್ಯವಾದಗಳು!’’ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
ಇನ್ನು ವಿಡಿಯೋದಲ್ಲಿ ಹನುಮಂತ ಕ್ಷಮೆ ಕೇಳಿದ್ದಾರೆ. ಬಿಗ್ ಬಾಸ್ ಸೀಸನ್ 11 ವಿನ್ನರ್ ಆಗಿ ಮಾಡಿದ್ದಕ್ಕೆ ಎಲ್ಲ ಕರ್ನಾಟಕ ಜನತೆಗೆ ತುಂಬು ಹೃದಯದ ಧನ್ಯವಾದಗಳು. ಬೇಗನೇ ವಿಡಿಯೋ ಮಾಡಬೇಕಿತ್ತು. ಆದ್ರೆ ರಾತ್ರಿ ಬಂದು ಮಲಗಿಕೊಂಡಿದ್ದೇ, ತಡ ಮಾಡಿ ಎದ್ದೇ. ಅದಕ್ಕೆ ಯಾರೂ ಬೇಜಾರ್ ಮಾಡಿಕೊಳ್ಳಬೇಡಿ. ನಿಮ್ಮ ಪ್ರೀತಿ ಆರ್ಶೀವಾದ ನನ್ನ ಮೇಲೆ ಹಾಗೇ ಇರಲಿ. ಏನಾದರೂ ಅಪ್ಪಿತಪ್ಪಿ ತಪ್ಪು ಆದಲ್ಲಿ ಹೊಟ್ಟೆಯಲ್ಲಿ ಹಾಕೊಂಡು ಬಿಡಿ ಎಂದಿದ್ದಾರೆ.
Hanumantha BBK 11: ಈ ಹಿಂದೆಯೇ ನನಗೆ ಬಿಗ್ ಬಾಸ್ ಆಫರ್ ಬಂದಿತ್ತು: ಗೆಲುವಿನ ಬಳಿಕ ರಹಸ್ಯ ಬಿಚ್ಚಿಟ್ಟ ಹನುಮಂತ