ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kannada Serial TRP: ಕರ್ಣ ಧಾರಾವಾಹಿಗೆ ಬಿಗ್ ಶಾಕ್: 9ನೇ ವಾರಕ್ಕೆ ಕುಸಿದ ಟಿಆರ್ಪಿ

ಕರ್ಣನ ಅಬ್ಬರ ತಗ್ಗಿದೆ. 34ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದ್ದು, ಇದರಲ್ಲಿ ಕರ್ಣನಿಗೆ ಹಿನ್ನಡೆಯಾಗಿದೆ. ಕಿರುತೆರೆ ಲೋಕದಲ್ಲಿ ಸತತ ಎಂಟು ವಾರ ನಂಬರ್ ಒನ್ ಧಾರಾವಾಹಿ ಆಗಿ ಇತಿಹಾಸ ನಿರ್ಮಿಸಿದ್ದ ಕರ್ಣ ಈ ಬಾರಿ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾನೆ. ಹಾಗಾದರೆ ನಂಬರ್ ಒನ್ ಸೀರಿಯಲ್ ಯಾವುದು?, ಇಲ್ಲಿದೆ ನೋಡಿ ಮಾಹಿತಿ.

ಕರ್ಣ ಧಾರಾವಾಹಿಗೆ ಬಿಗ್ ಶಾಕ್

Karna Serial TRP Down -

Profile Vinay Bhat Sep 5, 2025 7:33 AM

ಕನ್ನಡ ಕಿರುತೆರೆಯಲ್ಲಿ ಕರ್ಣನ (Karna Serial) ಆಗಮನದ ನಂತರ ಸೀರಿಯಲ್​ಗಳ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದ್ದವು. ಕರ್ಣನ ಮುಂದೆ ಎಲ್ಲ ಧಾರಾವಾಹಿ ತಲೆಬಾಗುತ್ತ ಇದ್ದವು. ಆದರೀಗ ಕರ್ಣನ ಅಬ್ಬರ ತಗ್ಗಿದೆ. 34ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದ್ದು, ಇದರಲ್ಲಿ ಕರ್ಣನಿಗೆ ಹಿನ್ನಡೆಯಾಗಿದೆ. ಕಿರುತೆರೆ ಲೋಕದಲ್ಲಿ ಸತತ ಎಂಟು ವಾರ ನಂಬರ್ ಒನ್ ಧಾರಾವಾಹಿ ಆಗಿ ಇತಿಹಾಸ ನಿರ್ಮಿಸಿದ್ದ ಕರ್ಣ ಈ ಬಾರಿ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾನೆ. ಹಾಗಾದರೆ ನಂಬರ್ ಒನ್ ಸೀರಿಯಲ್ ಯಾವುದು?, ಇಲ್ಲಿದೆ ನೋಡಿ ಮಾಹಿತಿ.

ಕರ್ಣ ಧಾರಾವಾಹಿ ಶುರುವಾದಾಗಿನಿಂದ ಇದರ ಅಬ್ಬರ ಜೋರಾಗಿತ್ತು. ಮೊದಲ ವಾರ ಅರ್ಬನ್‌ + ರೂರಲ್‌ನಲ್ಲಿ 10.2 ಟಿವಿಆರ್‌, ಎರಡನೇ ವಾರ 10.4 ಟಿವಿಆರ್‌, ಮೂರನೇ ವಾರ 10.2 ಟಿವಿಆರ್‌ ಲಭಿಸಿತ್ತು. ನಾಲ್ಕನೇ ವಾರ 9.6 ಟಿವಿಆರ್‌ ಪಡೆದಿತ್ತು. ಐದನೇ ವಾರ ಕರ್ಣ ಸೀರಿಯಲ್‌ಗೆ 10.1 ಟಿವಿಆರ್‌ (ಅರ್ಬನ್ + ರೂರಲ್‌ ಮಾರ್ಕೆಟ್‌) ಲಭಿಸಿದರೆ ಆರನೇ ವಾರ 9.1 ಟಿವಿಆರ್‌ (ಅರ್ಬನ್ + ರೂರಲ್‌ ಮಾರ್ಕೆಟ್‌), ಏಳನೇ ವಾರ 9.2 ಟಿವಿಆರ್‌, ಎಂಟನೇ ವಾರ ಕೂಡ 9.1 ಟಿವಿಆರ್ ದಾಖಲಿಸಿತ್ತು. ಆದರೀಗ ಒಂಬತ್ತನೆ ವಾರ 8.3 ಟಿವಿಆರ್‌ ದಾಖಲಿಸಿ ಎರಡನೇ ಸ್ಥಾನಕ್ಕೆ ಕುಸಿದಿದೆ.

ಕನ್ನಡದ ನಂಬರ್ ಒನ್ ಧಾರಾವಾಹಿ ಲಕ್ಷ್ಮೀ ನಿವಾಸ ಆಗಿದೆ. ಕರ್ಣ ಧಾರಾವಾಹಿ ಆರಂಭವಾದ ಬಳಿಕ ಲಕ್ಷ್ಮೀ ನಿವಾಸ ಸೀರಿಯಲ್‌ ಎರಡನೇ ಅಥವಾ ಮೂರನೇ ಸ್ಥಾನ ಪಡೆದುಕೊಳ್ಳುತ್ತಿತ್ತು. ಆದರೆ, ಈ ಬಾರಿ ಪುಟಿದೆದ್ದಿದೆ. 8.5 ಟಿವಿಆರ್‌ ದಾಖಲಿಸುವ ಮೂಲಕ ಲಕ್ಷ್ಮೀ ನಿವಾಸ ಸೀರಿಯಲ್‌ ನಂಬರ್ 1 ಎಂದೆನಿಸಿಕೊಂಡಿದೆ. 8.3 ಟಿವಿಆರ್ ದಾಖಲಿಸಿ ಕರ್ಣ ಜೊತೆಗೆ ಅಣ್ಣಯ್ಯ ಎರಡನೇ ಸ್ಥಾನದಲ್ಲಿದೆ. ನಾ ನಿನ್ನ ಬಿಡಲಾರೆ ಸೀರಿಯಲ್‌ ಮೂರನೇ ಸ್ಥಾನ ಮತ್ತು 7.9 ಟಿವಿಆರ್​ನೊಂದಿಗೆ ಶ್ರಾವಣಿ ಸುಬ್ರಮಹ್ಮಣ್ಯ ನಾಳ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ 7.6 ಟಿವಿಆರ್​ನೊಂದಿಗೆ ಆಮೃತಧಾರೆ ಧಾರಾವಾಹಿ ಇದೆ.

Anushree Marriage: ಮದುವೆಯಲ್ಲಿ ಅನುಶ್ರೀ ಉಟ್ಟ ಸೀರೆಯ ಬೆಲೆ 2.7 ಲಕ್ಷ ಅಲ್ವಂತೆ: ಕೇವಲ..

ಇನ್ನು ಕಲರ್ಸ್ ಕನ್ನಡದ ವಿಚಾರಕ್ಕೆ ಬಂದರೆ, ಭಾಗ್ಯ ಲಕ್ಷ್ಮೀ ಧಾರಾವಾಹಿ ಟಾಪ್​ನಲ್ಲಿದೆ. ಸದ್ಯ ಆದೀಶ್ವರ್-ಭಾಗ್ಯ ನಡುವಣ ಜುಗಲ್​ಬಂದಿ ರೋಚಕತೆ ಸೃಷ್ಟಿಸಿರುವ ಕಾರಣ ಈ ಧಾರಾವಾಹಿಗೆ 5.2 ಟಿವಿಆರ್ ಲಭಿಸಿದೆ. ಮುದ್ದು ಸೊಸೆ ಧಾರಾವಾಹಿ ಅರ್ಬಲ್‌ + ರೂರಲ್‌ ಮಾರ್ಕೆಟ್‌ನಲ್ಲಿ 5.1 ಟಿವಿಆರ್‌ ಪಡೆದು ಕಲರ್ಸ್​ನ ಎರಡನೇ ಧಾರಾವಾಹಿ ಆಗಿದೆ. ನಂದಗೋಕುಲ ಅರ್ಬನ್‌ + ರೂರಲ್‌ ಮಾರ್ಕೆಟ್‌ನಲ್ಲಿ 4.9 ಟಿವಿಆರ್‌ ಪಡೆದುಕೊಂಡು ಮೂರನೇ ಸ್ಥಾನದಲ್ಲಿದೆ.